»   » ನಟಿ ಶ್ರುತಿಗೆ 'ಮಂಡ್ಯದ ಗಂಡು' ಅಂಬರೀಶ್ ಗೊತ್ತಿಲ್ವಾ?

ನಟಿ ಶ್ರುತಿಗೆ 'ಮಂಡ್ಯದ ಗಂಡು' ಅಂಬರೀಶ್ ಗೊತ್ತಿಲ್ವಾ?

Posted By:
Subscribe to Filmibeat Kannada

'ಮಂಡ್ಯ' ಅಂದಕೂಡಲೆ ಕನ್ನಡ ಸಿನಿ ಪ್ರಿಯರಿಗೆ ಥಟ್ ಅಂತ ನೆನಪಾಗುವುದು 'ಮಂಡ್ಯದ ಗಂಡು' ರೆಬೆಲ್ ಸ್ಟಾರ್ ಅಂಬರೀಶ್.

1994 ರಲ್ಲಿ ತೆರೆಕಂಡ 'ಮಂಡ್ಯದ ಗಂಡು' ಸಿನಿಮಾ ಮತ್ತು ಮಂಡ್ಯ ಜಿಲ್ಲೆಯಿಂದಲೇ ಚುನಾವಣೆಗೆ ಸ್ಪರ್ಧಿಸಿದ ಅಂಬರೀಶ್, ನಿಜಜೀವನದಲ್ಲೂ 'ಮಂಡ್ಯದ ಗಂಡು' ಅಂತಲೇ ಜನಪ್ರಿಯ.

ಹೀಗಿರುವಾಗ, ಅಂಬರೀಶ್ ಜೊತೆ ನಟಿಸಿರುವ ನಟಿ ಶ್ರುತಿಗೆ 'ಮಂಡ್ಯದ ಗಂಡು' ಸಿನಿಮಾ ಗೊತ್ತಿಲ್ವಾ?

shruthi

ಈ ಡೌಟ್ 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರಿಗೂ ಮೂಡುವುದಕ್ಕೆ ಕಾರಣ ನಿನ್ನೆಯ 'ಸಿನಿಮಾ ಸಿನಿಮಾ' ಟಾಸ್ಕ್ ನಲ್ಲಿನ ನಟಿ ಶ್ರುತಿ ಪರ್ಫಾಮೆನ್ಸ್.

'ಸಿನಿಮಾ ಸಿನಿಮಾ' ಟಾಸ್ಕ್ ನಲ್ಲಿ ಪ್ರತಿಸ್ಪರ್ಧಿ ತಂಡದ ಸದಸ್ಯರು ನೀಡುವ ಸಿನಿಮಾ ಹೆಸರನ್ನ ಮಾತನಾಡದೆ ಆಂಗಿಕ ಅಭಿನಯದ ಮೂಲಕ 'dumb charades' ಮಾದರಿಯಲ್ಲಿ ತೋರಿಸಬೇಕಿತ್ತು. ತಂಡದ ಉಳಿದ ಸದಸ್ಯರು ಸಿನಿಮಾ ಹೆಸರನ್ನ ಗುರುತಿಸಬೇಕಿತ್ತು. ಜೊತೆಗೆ ಚಲನಚಿತ್ರಕ್ಕೆ ಸಂಬಂಧಪಟ್ಟ ವಸ್ತುಗಳನ್ನ ನೀಡಲಾಗಿತ್ತು. [ಇದ್ದದ್ದು ಇಲ್ಲದ್ಹಂಗೆ, ಇಲ್ದದ್ದು ಕಂಡ್ಹಂಗೆ ಅಯ್ಯಪ್ಪಗೆ ಟಾಂಗ್ ಕೊಟ್ಟ ಶ್ರುತಿ]

ನಟಿ ಶ್ರುತಿ ತಂಡದಲ್ಲಿ ಚಂದನ್ ಮತ್ತು ಅಯ್ಯಪ್ಪ ಇದ್ದರು. ಆಂಗಿಕ ಅಭಿನಯ ಮಾಡಿ ತೋರಿಸುವುದಕ್ಕೆ ಚಂದನ್ ಗೆ ಅವಕಾಶ ಲಭಿಸಿದಾಗ, ಅವರಿಗೆ 'ಮಂಡ್ಯದ ಗಂಡು' ಸಿನಿಮಾ ಹೆಸರು ಸಿಕ್ತು. ಜೊತೆಗೆ ಸೈಕಲ್ ವಸ್ತು ಕೂಡ ನೀಡಲಾಗಿತ್ತು.

chandan

'ಗಂಡು' ಅಂತ ಮೀಸೆ ತಿರುವಿ, ಅಂಬರೀಶ್ ''ಮಂಡ್ಯದ ಗಂಡು...'' ಅಂತ ಹಾಡುವ ಶೈಲಿಯನ್ನ ಚಂದನ್ ಅನುಕರಣೆ ಮಾಡಿ ತೋರಿಸಿದರೂ ನಟಿ ಶ್ರುತಿ ''ಬುಲ್ ಬುಲ್ ಮಾತಾಡಕ್ಕಿಲ್ವಾ..'', ''ಬಹದ್ದೂರ್ ಗಂಡು'' ಅಂತ ಹೇಳಿದ್ರೆ ಹೊರತು 'ಮಂಡ್ಯದ ಗಂಡು' ಅಂತ ಹೇಳಲೇ ಇಲ್ಲ. [ನಟಿ ಶ್ರುತಿ ಕಾವಿ ತೊಡುತ್ತಾರಾ? ಅವರ ಮನದಾಳ ಏನು?]

ಸಮಯಾವಕಾಶ ಮುಗಿದರೂ ಶ್ರುತಿಗೆ ಜನಪ್ರಿಯ ಸಿನಿಮಾ 'ಮಂಡ್ಯದ ಗಂಡು' ನೆನಪಾಗಲೇ ಇಲ್ಲ.

shruthi-aiyappa

ಅಂಬರೀಶ್ ರವರ ಫೇಮಸ್ ಚಿತ್ರ ಶ್ರುತಿಗೆ ನೆನಪಿಲ್ಲ ಅಂತ ನಂತರ 'ಬಿಗ್ ಬಾಸ್' ಮನೆ ಸದಸ್ಯರು ಗುಸು ಗುಸು-ಪಿಸು ಪಿಸು ಆರಂಭಿಸಿದರು.!!

English summary
Kannada Actress Shruthi couldn't recall 'Mandyada Gandu' Ambareesh in 'Cinema Cinema' task. Read the article to know what all happened on Day 84 in Bigg Boss Kannada 3.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada