»   » ನಟಿ ಶ್ರುತಿಗೆ ಭಾವನಾ ಬೆಳಗೆರೆ ಕೊಟ್ಟ ವರದಾನ

ನಟಿ ಶ್ರುತಿಗೆ ಭಾವನಾ ಬೆಳಗೆರೆ ಕೊಟ್ಟ ವರದಾನ

Posted By:
Subscribe to Filmibeat Kannada

'ಬಿಗ್ ಬಾಸ್' ನೀಡುವ ಆದೇಶದ ಪ್ರಕಾರ, ಮನೆಯಿಂದ ಹೊರ ಹೋಗುವ ಸದಸ್ಯರು, ಸ್ಪರ್ಧಿಗಳಿಗೆ ಒಂದೊಂದು ವಿಚಿತ್ರ ಶಿಕ್ಷೆ ವಿಧಿಸಿ ಹೋಗುತ್ತಾರೆ. ಇದುವರೆಗೂ ಅಯ್ಯಪ್ಪ, ರೆಹಮಾನ್, ಚಂದನ್ ಅಂತಹ ಶಿಕ್ಷೆ ಅನುಭವಿಸಿದ್ದಾರೆ.

ಆದರೆ, ಈ ಬಾರಿ 'ಬಿಗ್ ಬಾಸ್' ಶಿಕ್ಷೆ ನೀಡುವ ಬದಲು ಭಾವನಾ ಬೆಳಗೆರೆಗೆ ವರದಾನ ಮಾಡುವ ಅಧಿಕಾರ ನೀಡಿದರು. ಅದರ ಪ್ರಕಾರ, ಮುಂದಿನ ವಾರದ ಎಲಿಮಿನೇಷನ್ ನಿಂದ ಓರ್ವ ಸದಸ್ಯರನ್ನ ಭಾವನಾ ಬೆಳಗೆರೆ ಬಚಾವ್ ಮಾಡ್ಬೇಕಿತ್ತು.

Bigg Boss Kannada 3 ; Bhavana Belagere gives immunity to Shruthi

ಕೂಡಲೇ ಭಾವನಾ ಬೆಳಗೆರೆ ನಟಿ ಶ್ರುತಿ ಹೆಸರು ಆಯ್ಕೆ ಮಾಡಿದರು. ಪರಿಣಾಮ, ಮುಂದಿನ ವಾರದ ಎಲಿಮಿನೇಷನ್ ನಿಂದ ನಟಿ ಶ್ರುತಿ ಸೇಫ್ ಆಗಿದ್ದಾರೆ. ['ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಭಾವನಾ ಬೆಳಗೆರೆ]

ಈಗಾಗಲೇ ಫೋನ್ ಬೂತ್ ಟಾಸ್ಕ್ ನಲ್ಲಿ ಸೋತ ಕಾರಣ ನಟಿ ಪೂಜಾ ಗಾಂಧಿ ಮತ್ತು ಅಯ್ಯಪ್ಪ ನೇರವಾಗಿ ನಾಮಿನೇಟ್ ಆಗಿದ್ದಾರೆ. ಇವರ ಪಟ್ಟಿಗೆ ಶ್ರುತಿ ಬಿಟ್ಟು ಇನ್ಯಾರು ಸೇರುತ್ತಾರೋ, ಕಾದು ನೋಡೋಣ.

    English summary
    Before leaving Bigg Boss house, Journalist Bhavana Belagere gave immunity to Kannada Actress Shruthi from next week's elimination.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada