»   » 'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಹೊಸ ಲವ್ ಸ್ಟೋರಿ.!

'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಹೊಸ ಲವ್ ಸ್ಟೋರಿ.!

Posted By:
Subscribe to Filmibeat Kannada

ಸ್ವಲ್ಪ ಫ್ಲ್ಯಾಶ್ ಬ್ಯಾಕ್ ಗೆ ಹೋಗ್ ಬರೋಣ. ''ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ನನ್ನ ಹೆಂಡತಿ'' ಅಂತ್ಹೇಳಿ ಗಾಂಧಿನಗರದಲ್ಲಿ ಬ್ರೇಕಿಂಗ್ ನ್ಯೂಸ್ ಮಾಡಿದವರು ಹುಚ್ಚ ವೆಂಕಟ್.

''ಹುಚ್ಚ ವೆಂಕಟ್' ಚಿತ್ರವನ್ನ ಯಾರೂ ನೋಡ್ತಿಲ್ಲ....ನನ್ ಎಕ್ಕಡ...ನನ್ ಮಗಂದ್...'' ಅಂತ ಖಾಸಗಿ ವಾಹಿನಿಯೊಂದಕ್ಕೆ ಬೈಟ್ ಕೊಟ್ಟು, ಅದು ಯೂಟ್ಯೂಬ್ ನಲ್ಲಿ ಹಿಟ್ ಆಗ್ತಿದ್ದ ಹಾಗೇ, ಹುಚ್ಚ ವೆಂಕಟ್ ಏಕ್ದಂ 'ಯೂಟ್ಯೂಬ್ ಸ್ಟಾರ್' ಆಗ್ಬಿಟ್ಟರು.

ಬರೀ ಕರ್ನಾಟಕದಲ್ಲಿ ಮಾತ್ರ ಅಲ್ಲ, ಅಮೇರಿಕ, ಪಾಕಿಸ್ತಾನದಲ್ಲೂ ಹುಚ್ಚ ವೆಂಕಟ್ ಗೆ ಫ್ಯಾನ್ಸ್ ಇದ್ದಾರೆ. ಹಾಗಂತ ಹುಚ್ಚ ವೆಂಕಟ್ ಅವಾಗವಾಗ ಹೇಳಿಕೊಳ್ತಿರ್ತಾರೆ.

ಈಗ ಇಷ್ಟೆಲ್ಲಾ ಅವರ ಹಿನ್ನೆಲೆ ಬಗ್ಗೆ ನಾವು ಹೇಳಿದಕ್ಕೆ ಕಾರಣ, 'ಬಿಗ್ ಬಾಸ್-3' ಕಾರ್ಯಕ್ರಮದ ಮೊದಲ ದಿನ ಅವರಿಂದ ಆದ ಕೆಲ ಹುಚ್ಚಾಟಗಳು. ಹುಚ್ಚ ವೆಂಕಟ್ ಪ್ರೇಮ ಎಂಥದ್ದು ಅನ್ನೋದಕ್ಕೆ ರಮ್ಯಾ ಪ್ರೇಮಕಥೆ ಇನ್ನೂ ನಿಮ್ಮೆಲ್ಲರ ಕಣ್ಣಮುಂದೆ ಇದೆ. [ವೆಂಕಟ್ ಹುಚ್ಚನ್ನು ಕೆರಳಿಸಿದ ಪೂಜಾಗಾಂಧಿ ಮಿನಿ ಸ್ಕರ್ಟ್!]

ಹೀಗಿರುವಾಗಲೇ, 'ಬಿಗ್ ಬಾಸ್' ಮನೆಯಲ್ಲಿ ಮಾಡೆಲ್ ಕಮ್ ಡ್ಯಾನ್ಸರ್ ಜಯಶ್ರೀ ಯವರಿಗೆ ಹುಚ್ಚ ವೆಂಕಟ್ ಕೆಂಪು ಗುಲಾಬಿಗಳ ಹೂಗುಚ್ಛ ನೀಡಿ ಪ್ರೇಮ ನಿವೇದನೆ ಮಾಡಿಕೊಂಡರು. 'ಬಿಗ್ ಬಾಸ್' ಮನೆಯಲ್ಲಿ ಮೊದಲನೇ ದಿನ ಏನೇನಾಯ್ತು ಅನ್ನೋದರ ಸಂಪೂರ್ಣ ವಿವರ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಹುಚ್ಚ ವೆಂಕಟ್ ದೇವಸ್ಥಾನ ಇದ್ಯಂತೆ.!

ಭಾರತದಲ್ಲಿ 'ಹುಚ್ಚ ವೆಂಕಟ್' ಗಾಗಿ ಅವರ ಅಭಿಮಾನಿಗಳು ದೇವಸ್ಥಾನ ಕಟ್ಟಿಸಿದ್ದಾರಂತೆ.! ಹಾಗಂತ ಹೆಮ್ಮೆಯಿಂದ ಹುಚ್ಚ ವೆಂಕಟ್ ಹೇಳ್ತಿದ್ರೆ, 'ಬಿಗ್ ಬಾಸ್' ಮನೆಯ ಸದಸ್ಯರಿಗೆ ನಗಬೇಕೋ, ಅಳಬೇಕೋ ಅಂತ ಗೊತ್ತಾಗದೆ ಪೇಚಿಗೆ ಸಿಲುಕಿದ್ದರು. ['ಬಿಗ್ ಬಾಸ್-3'; ಈ ವಾರ ಔಟ್ ಆಗುವವರು ಯಾರು?]

ಹೆಣ್ಮಕ್ಕಳಿಗೆ ಬಿಂದಿ ಹಂಚಿದರು.!

ಹೆಣ್ಮಕ್ಕಳು ಹಣೆಗೆ ಬಿಂದಿ ಇಟ್ಟುಕೊಳ್ಳಬೇಕು ಅನ್ನುವ ಕಾರಣಕ್ಕೆ 'ಬಿಗ್ ಬಾಸ್' ಮನೆಯ ಎಲ್ಲಾ ಸ್ತ್ರೀಯರಿಗೆ ಹುಚ್ಚ ವೆಂಕಟ್ ಬಿಂದಿ ಹಂಚಿದರು.! [ಎಡಗಾಲಿಟ್ಟು 'ಬಿಗ್ ಬಾಸ್' ಮನೆಗೆ ಅಂದರ್ ಆದ ಹುಚ್ಚ ವೆಂಕಟ್]

ಮದುವೆ ಆಗ್ತೀಯಾ ನನ್ನ..??

ಬಿಂದಿ ತೆಗೆದುಕೊಳ್ಳುವಾಗ ಜಯಶ್ರೀ, ''ನಂಗಾ ತಂದಿದ್ದು'' ಅಂತ ಹುಚ್ಚ ವೆಂಕಟ್ ಗೆ ಕೇಳ್ತಾರೆ. ಆಗ, ''ಹೌದು'' ಅಂತ ಹುಚ್ಚ ವೆಂಕಟ್ ಹೇಳಿದ್ದಕ್ಕೆ, ಜಯಶ್ರೀ, ''ಜೊತೆಗೆ ಒಂದು ರೇಶ್ಮೆ ಸೀರೆ ತಂದಿದ್ರೆ?'' ಅಂತ ಪ್ರಶ್ನೆ ಮಾಡಿದರು. ಇದಕ್ಕೆ ಹುಚ್ಚ ವೆಂಕಟ್ ನೀಡಿದ ರಿಯಾಕ್ಷನ್ - ''ಯಾಕೆ ಮದುವೆ ಆಗ್ತೀರಾ ನನ್ನ..??''

ಯಾವ ಹುಡುಗಿಗೂ ನಾನು ಪ್ರಪೋಸ್ ಮಾಡಿಲ್ಲ.

ಈ ಡೈಲಾಗ್ ನಂತರ 'ಬಿಗ್ ಬಾಸ್' ಮನೆ ಸದಸ್ಯರು ಹುಚ್ಚ ವೆಂಕಟ್ ಫ್ಲರ್ಟ್ ಮಾಡ್ತಿದ್ದಾರಲ್ಲಾ ಅಂತ ರೇಗಿಸುವುದಕ್ಕೆ ಶುರು ಮಾಡಿದಾಗ, ''ನಾನು ಯಾವ ಹುಡುಗಿ ಜೊತೆಗೂ ಫ್ಲರ್ಟ್ ಮಾಡಿಲ್ಲ. ನಾನು ಯಾರಿಗೂ ಪ್ರಪೋಸ್ ಮಾಡಿಲ್ಲ'' ಅಂತಂದ್ರು. [ಹುಚ್ಚನ ಕಂಡು ಕಿಚ್ಚ ಕೂಡಾ ಸೈಲಂಟ್, ವೆಂಕಟ್ ಟ್ರೆಂಡಿಂಗ್]

ಪ್ರಪೋಸ್ ಮಾಡುವ ಚಾನ್ಸ್ ಸಿಕ್ಕಿಬಿಡ್ತು.!

ಹುಚ್ಚ ವೆಂಕಟ್ ನ ಡೈಲಾಗ್ ಕೇಳಿದ ಮನೆ ಸದಸ್ಯರು ಕೂಡಲೇ ಜಯಶ್ರೀಗೆ ಪ್ರಪೋಸ್ ಮಾಡುವಂತೆ ಬಲವಂತ ಮಾಡಿದರು. ಸನ್ನಿವೇಶಕ್ಕೆ ತಕ್ಕ ಹಾಗೆ, ''ಮಿಂಚಾಗಿ ನೀನು ಬರಲು...'' ಹಾಡು ಕೂಡ ಪ್ಲೇ ಆಯ್ತು. ರೋಮ್ಯಾಂಟಿಕ್ ಮೂಡ್ ಗೆ ಜಾರಿದ ಹುಚ್ಚ ವೆಂಕಟ್, ಕೆಂಪು ಹೂಗಳಿದ್ದ ಹೂ ಗುಚ್ಛ ನೀಡಿ ಜಯಶ್ರೀಗೆ ಪ್ರಪೋಸ್ ಮಾಡೇಬಿಟ್ಟರು.!

ಹೊರಗಡೆ ಕಂಪ್ಲೇಂಟ್ ಮಾಡುವ ಹಾಗಿಲ್ಲ.!

ಈ ಹುಡುಗಾಟದ ಬಳಿಕ ''ಇದು ತಮಾಷೆಗೆ ಮಾತ್ರ. ಮನೆ ಹೊರಗಡೆ ಹೋಗಿ, ಇವಳೇ ನನ್ನ ಹೆಂಡತಿ ಅಂತ ಕಂಪ್ಲೇಂಟ್ ಮಾಡುವ ಹಾಗಿಲ್ಲ'' ಅಂತ 'ಬಿಗ್ ಬಾಸ್' ಮನೆ ಸದಸ್ಯರು ಹುಚ್ಚ ವೆಂಕಟ್ ಗೆ ವಾರ್ನಿಂಗ್ ಕೊಟ್ರು.

ಹುಚ್ಚ ವೆಂಕಟ್ ಸ್ಟೈಲ್ ನಲ್ಲೇ ಡೈಲಾಗ್ ಹೊಡೆದ ಜಯಶ್ರೀ

''ನನ್ ಮಗಂದ್...ನನ್ ಎಕ್ಕಡ...'' ಅಂತ ಥೇಟ್ ಹುಚ್ಚ ವೆಂಕಟ್ ಸ್ಟೈಲ್ ನಲ್ಲೇ ಮಾಡೆಲ್ ಕಮ್ ಡ್ಯಾನ್ಸರ್ ಜಯಶ್ರೀ ಡೈಲಾಗ್ ಹೊಡೆದರು.

ಭಾವನಾ ಬೆಳಗೆರೆಗೆ ಬುದ್ಧಿ ಮಾತು.!

ಧೂಮಪಾನ ಮಾಡಬೇಕು ಅಂತ ಭಾವನಾ ಬೆಳಗೆರೆ ಹೇಳುತ್ತಿದ್ದಾಗ, ಶಾಕ್ ಆದ ಹುಚ್ಚ ವೆಂಕಟ್, ''ಹೆಣ್ಮಕ್ಕಳು ಸಿಗರೇಟ್ ಸೇದ ಬಾರದು. ನಿಮ್ಮ ಒಳ್ಳೆಯದಕ್ಕೆ ಬಿಟ್ಟು ಬಿಡಿ'' ಅಂತ ಅವರಿಗೆ ಬುದ್ಧಿ ಮಾತು ಹೇಳಿದರು.

ಅಡುಗೆ ಮನೆಯಲ್ಲಿ ಈರುಳಿ ಕಟ್ ಮಾಡ್ತಿದ್ರು.!

ಮನೆ ಕೆಲಸದಲ್ಲೂ ತಲ್ಲೀನರಾಗಿರುವ ಹುಚ್ಚ ವೆಂಕಟ್ ಈರುಳಿ ಕಟ್ ಮಾಡ್ತಿದ್ರು. ಆಗಲೂ, ''ನನ್ನ ಕಣ್ಣಲ್ಲಿ ನೀರು ಬರಲ್ಲ. ಸ್ಟಾಕ್ ಎಲ್ಲಾ ಖಾಲಿ ಆಗಿದೆ.'' ಅಂತ ಡೈಲಾಗ್ ಹೊಡೀತಿದ್ರು.

ಹೆಂಡತಿ ಕೈಲಿ ಅಡುಗೆ ಮಾಡಿಸ್ತಿದ್ರಂತೆ.!

''ನನ್ನ ಹೆಂಡತಿಗೆ ಹುಷಾರಿಲ್ಲ ಅಂದ್ರೆ ನಾನು ಹೆಂಗೆ ಅಡುಗೆ ಮಾಡ್ಲಿ. ಅವಳು ಬಂದಿದ್ರೆ, ಅವಳ ಕೈಯಲ್ಲೇ ಅಡುಗೆ ಮಾಡಿಸ್ತಿದ್ದೆ'' ಅಂತ ಹುಚ್ಚ ವೆಂಕಟ್ ಗೊಣಗುತ್ತಿದ್ರು. ಹಾಗಾದ್ರೆ, ಹುಚ್ಚ ವೆಂಕಟ್ ಗೆ ಮದುವೆ ಆಗಿದ್ಯಾ...???!

English summary
YouTube Star Huccha Venkat has proposed to Model cum Dancer Jayashree in Bigg Boss Kannada 3 reality show. Read to know more details about what happened in Day 1 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada