»   » 'ಬಿಗ್ ಬಾಸ್' ಮನೆಯಲ್ಲಿ ಆರ್.ಜೆ.ನೇತ್ರ ಡಬಲ್ ಗೇಮ್.!

'ಬಿಗ್ ಬಾಸ್' ಮನೆಯಲ್ಲಿ ಆರ್.ಜೆ.ನೇತ್ರ ಡಬಲ್ ಗೇಮ್.!

Posted By:
Subscribe to Filmibeat Kannada

ಒಂದ್ಕಡೆ ದಿನನಿತ್ಯ ಬದುಕಿಗೆ ಬೇಕಾಗಿರುವ ಅವಶ್ಯಕ ವಸ್ತುಗಳು. ಇನ್ನೊಂದ್ಕಡೆ ನಾಮಿನೇಷನ್ ನಿಂದ ಸೇಫ್ ಆಗುವುದು. ಇವೆರಡರಲ್ಲಿ ಯಾವುದು ಬೇಕು.? ಬಹುಶಃ ಎಫ್.ಎಂ ನಲ್ಲಿ ಪಟ ಪಟ ಅಂತ ಮಾತನಾಡುವ ಆರ್.ಜೆ. ನೇತ್ರಗೆ ನಾಮಿನೇಷನ್ ನಿಂದ ಸೇಫ್ ಆಗಿ ಆಟದಲ್ಲಿ ಮುಂದುವರಿಯುವುದೇ ಮುಖ್ಯವಾಗಿತ್ತು.

ಆದ ಕಾರಣ, 'ಬದುಕು ಜಟಕಾ ಬಂಡಿ' ಎರಡನೇ ಹಂತದ ಟಾಸ್ಕ್ ಗೆ ಫುಲ್ ಸ್ಟಾಪ್ ಹಾಕಿ ಮುಂದಿನ ವಾರದ ನಾಮಿನೇಷನ್ ನಿಂದ ಬಚಾವ್ ಆಗ್ಬಿಟ್ಟರು.

'ಬಿಗ್ ಬಾಸ್' ನೀಡಿದ ಸೀಕ್ರೆಟ್ ಟಾಸ್ಕ್ ನ ತುಂಬಾ ಚಾಲಾಕಿತನದಿಂದ ನಿಭಾಯಿಸಿದ ನೇತ್ರ 'ಬಿಗ್ ಬಾಸ್' ಮನೆ ಸದಸ್ಯರ ಕೆಂಗಣ್ಣಿಗೆ ಗುರಿಯಾದರು. ['ಬಿಗ್ ಬಾಸ್-3' ಕುರಿತಾದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 10ನೇ ದಿನ ಏನೇನೆಲ್ಲಾ ಆಯ್ತು ಅನ್ನೋದರ ಬಗ್ಗೆ ಸಂಪೂರ್ಣ ವಿವರ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

'ಬದುಕು ಜಟಕಾ ಬಂಡಿ' ಎರಡನೇ ಹಂತದ ಟಾಸ್ಕ್

'ಬದುಕು ಜಟಕಾ ಬಂಡಿ'ಯ ಎರಡನೇ ಹಂತದ ಟಾಸ್ಕ್ ಗೆ ಚಾಲನೆ ನೀಡುವ ಮುನ್ನ 'ಬಿಗ್ ಬಾಸ್' ಮನೆಯ ಎಲ್ಲಾ ಅಡುಗೆ ಸಾಮಾಗ್ರಿ, ದವಸ, ಧಾನ್ಯಗಳನ್ನ ಹಿಂಪಡೆದರು. ಅಕ್ಕಿ, ಬೇಳೆ ಬೆಳೆಯುವುದಕ್ಕೆ ರೈತರು ವರ್ಷ ಪೂರ್ತಿ ಕಷ್ಟ ಪಟ್ಟಿರುತ್ತಾರೆ. ಅದನ್ನ ಸಂಪಾದನೆ ಮಾಡುವುದಕ್ಕೆ 'ಬಿಗ್ ಬಾಸ್' ಮನೆ ಸದಸ್ಯರು ಕೂಡ ಬೆವರು ಹರಿಸಬೇಕು ಅನ್ನುವ ಉದ್ದೇಶದಿಂದ 'ಬಿಗ್ ಬಾಸ್' 'ಬದುಕು ಜಟಕಾ ಬಂಡಿ' ಎರಡನೇ ಹಂತದ ಟಾಸ್ಕ್ ನೀಡಿದರು.

ಹೊಸಬರು ಭಾಗವಹಿಸಬೇಕು.!

ಮೊದಲನೇ ಹಂತದ 'ಬದುಕು ಜಟಕಾ ಬಂಡಿ' ಟಾಸ್ಕ್ ನಲ್ಲಿ ಭಾಗವಹಿಸಿದವರು ಈ ಬಾರಿ ಭಾಗವಹಿಸುವಂತಿರಲಿಲ್ಲ. ಹೀಗಾಗಿ ಎರಡನೇ ಹಂತ ಸಂಪೂರ್ಣವಾಗಿ ಹೆಂಗಳೆಯರ ಮೇಲೆ ಡಿಪೆಂಡ್ ಆಗಿತ್ತು.

ಪೂಜಾ ಪವರ್ ಸೂಪರ್.!

ಅಕ್ಕಿ ಮೂಟೆಗಳಿರುವ ಬಂಡಿಯನ್ನು ಎಳೆಯುವ ಟಾಸ್ಕ್ ನಲ್ಲಿ ನಟಿ ಪೂಜಾ ಗಾಂಧಿ ಹಾಕಿದ ಶ್ರಮ ಅಷ್ಟಿಷ್ಟಲ್ಲ. ಅವರ ಶ್ರಮಕ್ಕೆ ಮೆಚ್ಚಲೇಬೇಕು.

ಕೈ ಜೋಡಿಸಿದ ನಟಿ ಶ್ರುತಿ.

ಪೂಜಾ ಗಾಂಧಿ ಜೊತೆ ನಟಿ ಶ್ರುತಿ ಕೂಡ ಕೈಜೋಡಿಸಿ 99 ಸುತ್ತುಗಳನ್ನು ಮುಗಿಸಿದರು.

ಎಂಟ್ರಿ ಕೊಟ್ಟ ಹುಚ್ಚ ವೆಂಕಟ್.!

ಪೂಜಾ ಗಾಂಧಿ ಮತ್ತು ನಟಿ ಶ್ರುತಿ ಮೊದಲನೇ ಲೆವೆಲ್ ಮುಗಿಸಿದ ನಂತರ ಎಂಟ್ರಿಕೊಟ್ಟ ಹುಚ್ಚ ವೆಂಕಟ್ ಕೂಡ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರು.

ನೇತ್ರಗೆ ಸೀಕ್ರೆಟ್ ಟಾಸ್ಕ್

ಅಕ್ಕಿ-ಬೇಳೆ-ಕಾಳುಗಳಿಗೆ 200 ರೌಂಡ್, ಮೊಟ್ಟೆ-ಹಾಲುಗೆ 400 ರೌಂಡ್, ಚಿಕನ್-ಮಟನ್ ಗೆ 700 ರೌಂಡ್, ಎಲಿಮಿನೇಷನ್ ನಿಂದ ಎಲ್ಲರೂ ಬಚಾವ್ ಆಗುವ ಹಾಗೆ 1500 ರೌಂಡ್....ಹೀಗೆ ದಿನ ನಿತ್ಯದ ಆಹಾರ ಪದಾರ್ಥಗಳನ್ನ ಪಡೆಯುವುದಕ್ಕೆ ಇಷ್ಟು ಸುತ್ತು ಹಾಕಲೇಬೇಕು ಅಂತ 'ಬಿಗ್ ಬಾಸ್' ನಿಗದಿ ಪಡಿಸಿದ್ದರು. ಅದರ ಜೊತೆಗೆ ಟಾಸ್ಕ್ ಪೂರ್ಣಗೊಳ್ಳದಂತೆ ನೇತ್ರ ನೋಡಿಕೊಂಡರೆ, ಮುಂದಿನ ವಾರದ ನಾಮಿನೇಷನ್ ನಲ್ಲಿ ಅವರು ಬಚಾವ್ ಆಗಬಹುದು. ಇಲ್ಲವಾದರೆ ನೇರವಾಗಿ ನಾಮಿನೇಟ್ ಆಗುತ್ತಾರೆ ಅನ್ನುವ ಎಚ್ಚರಿಕೆ ಮೇರೆಗೆ ನೇತ್ರಗೆ ಸೀಕ್ರೆಟ್ ಟಾಸ್ಕ್ ನೀಡಿದರು.

ಹೊರೆ ಹೊತ್ತ ನೇತ್ರ

ಬಂಡಿ ಎಳೆಯುವ ಟಾಸ್ಕ್ ಜೊತೆ ಇಬ್ಬರು ತರಕಾರಿ ಮತ್ತು ಹೊರೆ ಹೊತ್ತು ನಿಲ್ಲಬೇಕಿತ್ತು. ಇಬ್ಬರಲ್ಲಿ ಯಾರಾದರೂ, ಏನನ್ನಾದರು ಬೀಳಿಸಿದರೆ ಟಾಸ್ಕ್ ಅಲ್ಲಿಗೆ ಸಮಾಪ್ತಿ. ಅದರಂತೆ 200 ರೌಂಡ್ ಆಗುವವರೆಗೆ ಸುಮ್ಮನಿದ್ದ ನೇತ್ರ ನಂತರ ಕುಡುಗೋಲನ್ನು ಬೀಳಿಸಿದರು. ಇದರಿಂದ ಟಾಸ್ಕ್ ಮುಗಿಯಿತು. ನೇತ್ರ ಇಮ್ಯೂನಿಟಿ ಪಡೆದರು.

ಮನೆಯಲ್ಲಿ ಗದ್ದಲ

ನೇತ್ರ ಸೀಕ್ರೆಟ್ ಟಾಸ್ಕ್ ಪ್ರಕಾರ ನಡೆದುಕೊಳ್ಳದೇ ಇದ್ದಿದ್ದರೆ, ಎಲ್ಲರ ಹೃದಯ ಗೆಲ್ಲುತ್ತಿದ್ದರು. ಡಬಲ್ ಗೇಮ್ ಆಡಿ ಆಟನೇ ಮುಖ್ಯ ಅಂತ ತೋರಿಸಿಕೊಟ್ಟಿದ್ದಾರೆ. ಇದು ಕಟ್ಟಡ. ಮನೆಯಲ್ಲ ಅಂತ ಪ್ರೂವ್ ಮಾಡಿದ್ದಾರೆ ಅಂತ ನೇತ್ರ ಮೇಲೆ 'ಬಿಗ್ ಬಾಸ್' ಮನೆ ಸದಸ್ಯರು ಕಿಡಿಕಾರಲು ಶುರುಮಾಡಿದರು.

ನೇತ್ರ ಕೊಟ್ಟ ಸಮರ್ಥನೆ

''ಇದು 'ಬಿಗ್ ಬಾಸ್' ನೀಡಿದ ಟಾಸ್ಕ್. ನಾನು ಮಾಡಲೇಬೇಕಿತ್ತು. ಎಲ್ಲಾ ಯೋಚನೆ ಮಾಡಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದು. ನಾನು ಹೇಡಿ ಆಗಲು ಇಷ್ಟವಿರಲಿಲ್ಲ. ಎಲ್ಲರೂ ಇಲ್ಲಿ ಗೆಲ್ಲುವುದಕ್ಕೆ ಬಂದಿರುವುದು'' ಅಂತ ನೇತ್ರ ಸಮರ್ಥಿಸಿಕೊಂಡರು.

1500 ಸುತ್ತು ಹಾಕುತ್ತಿದ್ದರಂತೆ ಹುಚ್ಚ ವೆಂಕಟ್

ಎಲ್ಲರನ್ನ ಎಲಿಮಿನೇಷನ್ ನಿಂದ ಬಚಾವ್ ಮಾಡ್ಬೇಕು ಅಂತ ಹುಚ್ಚ ವೆಂಕಟ್ 1500 ರೌಂಡ್ ಹಾಕಲು ರೆಡಿಯಿದ್ದರಂತೆ.

ಹುಚ್ಚ ವೆಂಕಟ್-ಪೂಜಾ ಗಾಂಧಿ-ಶ್ರುತಿಗೆ ಬಿರಿಯಾನಿ ಭೋಜನ

ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಲುವಾಗಿ ನಟಿ ಶ್ರುತಿ, ನಟಿ ಪೂಜಾ ಗಾಂಧಿ ಮತ್ತು ಹುಚ್ಚ ವೆಂಕಟ್ ಗೆ ಚಿಕನ್ ಬಿರಿಯಾನಿ, ಪೇಸ್ಟ್ರಿಯನ್ನ ನೀಡಲಾಯ್ತು.

English summary
Bigg Boss housemates were annoyed with RJ Netra, as she was responsible to end the task, Since it was the secret challenge given to her by Bigg Boss. Read the article to know what all happened on Day 10 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada