»   » ಜೂನಿಯರ್ ವಿಷ್ಣುವರ್ಧನ್ ಬಗ್ಗೆ ನಟಿ ಶ್ರುತಿ ಹೇಳಿದ್ದೇನು?

ಜೂನಿಯರ್ ವಿಷ್ಣುವರ್ಧನ್ ಬಗ್ಗೆ ನಟಿ ಶ್ರುತಿ ಹೇಳಿದ್ದೇನು?

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಮೊದಮೊದಲು ಸೈಲೆಂಟ್ ಆಗಿ ಇರುತ್ತಿದ್ದ ನಟಿ ಶ್ರುತಿ ಈಗೀಗ ಹೆಚ್ಚು ಮಾತನಾಡುತ್ತಿದ್ದಾರೆ. ತಮ್ಮ ವೃತ್ತಿ ಜೀವನದ ಅನೇಕ ಘಟನೆಗಳನ್ನ ಬಿಚ್ಚಿಡುತ್ತಿದ್ದಾರೆ.

ಪತ್ರಕರ್ತೆ ಭಾವನಾ ಬೆಳಗೆರೆ, ಆರ್.ಜೆ ನೇತ್ರ, ಪೂಜಾ ಗಾಂಧಿ ಜೊತೆ ಮಾತನಾಡುತ್ತಿರುವಾಗ ಕನ್ನಡ ಚಿತ್ರರಂಗದ ಓರ್ವ ಹೀರೋ ಬಗ್ಗೆ ಶ್ರುತಿ ಮಾತನಾಡಲು ಪ್ರಾರಂಭಿಸಿದರು.

shruthi

''ಅಮಿತಾಬ್ ಬಚ್ಚನ್ ಮಗನ ಹೆಸರಿನ ಎರಡು ಅಕ್ಷರ ಆ ಹೀರೋದ ಹೆಸರು. ಅವರಿಗೆ ಏನೂ ಬರಲ್ಲ. ಆದ್ರೂ ಅದನ್ನ ತೋರಿಸಿಕೊಳ್ಳುತ್ತಿರಲಿಲ್ಲ. ವಿಷ್ಣುವರ್ಧನ್ ನ ಮಾತ್ರ ಜಾಸ್ತಿ ಇಮಿಟೇಟ್ ಮಾಡೋರು''

''ಕಟ್ ಅಂದಾಗ ನಾವು ಫ್ರೀಜ್ ಆಗಿ ನಿಲ್ಲಬೇಕಿತ್ತು. ಇಲ್ಲಾಂದ್ರೆ ಕನ್ಟಿನ್ಯುಟಿ ಸಿಕ್ತಿರ್ಲಿಲ್ಲ. ಬಟ್ ಅವರು ಫ್ರೀಜ್ ಆಗ್ತಿರ್ಲಿಲ್ಲ. ಮೂವ್ಮೆಂಟ್ ಮಾಡೋರು. ಅವರಿಂದ ನಾನು ತುಂಬಾ ಸಲಿ ಒದೆ ತಿಂದಿದೀನಿ.'' [ಹುಚ್ಚ ವೆಂಕಟ್ ಗೆ 'ನನ್ ಮಗಂದ್' ಅಂದ ನಟಿ ಶ್ರುತಿ.!]

''ನಂದಿ ಬೆಟ್ಟದಲ್ಲಿ ಶೂಟಿಂಗ್ ಇತ್ತು. ಸಾಂಗ್ ಶೂಟಿಂಗ್ ಗೆ ಕುದುರೆ ಓಡಿಸೋಕೆ ಬರುತ್ತಾ ಅಂತ ಮಾಸ್ಟರ್ ಕೇಳಿದ್ರು. ಅವರಿಗೆ ಬರಲ್ಲ. ಆದ್ರೂ ಬರುತ್ತೆ ಅಂತ ಹೇಳಿದ್ರು.''

''ಅದಕ್ಕೆ ನಾನು ಹುಷಾರಾಗಿ ಅಸಿಸ್ಟೆಂಟ್ ಗಳಿಗೆ ಹೇಳಿದ್ದೆ. ಯಾವಾಗ ಬೇಕಾದ್ರೂ ಹೆಗರುತ್ತೀನಿ. ಬಂದು ಹಿಡ್ಕೊಳ್ಳಿ ಅಂತ. ಹಾಡಿಗಾಗಿ ಕಲರ್ ಬಾಂಬ್ ಇಟ್ಟಿದ್ದಾರೆ ಅಂತ ನಮಗೆ ಗೊತ್ತಿರ್ಲಿಲ್ಲ.''

''ಹಾಡು ಶುರುವಾಗ್ತಿದ್ದಂತೆ ಕಲರ್ ಬಾಂಬ್ ಬ್ಲಾಸ್ಟ್ ಆಗೋಯ್ತು. ಕುದುರೆ ಓಡೋಕೆ ಶುರುಮಾಡ್ತು. 3 ಗಂಟೆ ಹೀರೋನ ಹಿಡ್ಕೊಂಡು ಓಡಿಹೋಗಿದೆ ಕಾಡಿನ ಒಳಗೆ. ಅವರಿಗೆ ಕುದುರೆ ಓಡಿಸೋಕೂ ಬರಲ್ಲ'' ಅಂತ ನಟಿ ಶ್ರುತಿ ಹೇಳ್ತಿದ್ದರು. [ಅಳುಮುಂಜಿ ಶ್ರುತಿಗೂ ಕೋಪ; ಜಗಳಕ್ಕೂ ರೆಡಿಯಾದ ಆನಂದ]

ಹಾಗಾದ್ರೆ, ಆ ಹೀರೋ ಯಾರು.? ಶ್ರುತಿ ಕೊಟ್ಟ ಹಿಂಟ್ ಪ್ರಕಾರ ಅಮಿತಾಬ್ ಬಚ್ಚನ್ ಮಗನ ಹೆಸರಿನ ಎರಡು ಅಕ್ಷರ.! ನೇತ್ರ ಕೊಟ್ಟ ಕ್ಲೂ ಪ್ರಕಾರ ಜೂನಿಯರ್ ವಿಷ್ಣುವರ್ಧನ್.! ಇಷ್ಟು ಹೇಳಿದ್ಮೇಲೆ, ನಿಮಗೆ ಹೀರೋ ಯಾರು ಅಂತ ಕನ್ಫರ್ಮ್ ಆಗಿರುತ್ತೆ. ನಾವು ಬಿಡಿಸಿ ಹೇಳ್ಬೇಕಾಗಿಲ್ಲ ಅಲ್ವಾ?

    English summary
    Kannada Actress Shruthi spoke about Jr.Vishnuvardhan. But Who is Jr.Vishnuvardhan? Read the article to know more.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada