»   » ಈ ಬಾರಿ ಬಿಗ್ ಮನೆಯ ಕ್ಯಾಪ್ಟನ್ ಯಾರು ಗೊತ್ತಾ?

ಈ ಬಾರಿ ಬಿಗ್ ಮನೆಯ ಕ್ಯಾಪ್ಟನ್ ಯಾರು ಗೊತ್ತಾ?

Posted By:
Subscribe to Filmibeat Kannada

ಮಾಸ್ಟರ್ ಆನಂದ್ ಅವರ ಕ್ಯಾಪ್ಟನ್ ಶಿಪ್ ಮುಗಿದ ನಂತರ ಇದಿಗ ಬಿಗ್ ಬಾಸ್ ಮನೆಗೆ ಹೊಸ ಕ್ಯಾಪ್ಟನ್ ಅನ್ನು ಸೆಲೆಕ್ಟ್ ಮಾಡಲು ಮನೆಯ ಎಲ್ಲಾ ಸದಸ್ಯರನ್ನು ಕನ್ ಫೆಶನ್ ರೂಮ್ ಗೆ ಆಹ್ವಾನಿಸಿದರು.

ಮೊದಲಿಗೆ ರೂಮ್ ಹೊಕ್ಕ ಹುಚ್ಚ ವೆಂಕಟ್ ಮನೆಯವರ ಬಗ್ಗೆ ದೂರು ಹೇಳಲು ಶುರುಹಚ್ಚಿಕೊಂಡರು. ಮನೆಯವರು ಯಾರು ಸರಿ ಇಲ್ಲ, ಒಬ್ಬರಿಗಿಂತ ಒಬ್ಬರು ಛೀಪ್ ಇದ್ದಾರೆ, ಹೆಣ್ಣುಮಕ್ಕಳಿಗೆ ಬೈಯ್ಯೊಕ್ಕಾಗಲ್ಲ, ನಾನು ತುಂಬಾ ಗೌರವ ಕೊಡ್ತೀನಿ ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದೀನಿ. ನಾನು ಯಾರನ್ನು ಕ್ಯಾಪ್ಟನ್ ಆಗಿ ಸೆಲೆಕ್ಟ್ ಮಾಡಲ್ಲ ಎಂದಾಗ. ನೀವು ಆ ರೀತಿ ಹೇಳುವಂತಿಲ್ಲ ಎರಡು ಹೆಸರನ್ನು ಆಯ್ಕೆ ಮಾಡಲೇ ಬೇಕು ಎಂದು ಬಿಗ್ ಬಾಸ್ ಆರ್ಡರ್ ಮಾಡಿದರು.

Bigg Boss Kannada 3 Day 19: Who is the Captain

ಆವಾಗ ಒಪ್ಪಿಕೊಂಡ ಹುಚ್ಚ ವೆಂಕಟ್ ಅವರು ಕೊನೆಗೆ ಎನ್ ಸಿ ಅಯ್ಯಪ್ಪ ಹಾಗು ನಟಿ ಶ್ರುತಿ ಅವರ ಹೆಸರನ್ನು ಮನೆಯ ಕ್ಯಾಪ್ಟನ್ ಗೆ ಸೂಚಿಸಿದರು.

ಮಾಸ್ಟರ್ ಆನಂದ್ ಅವರು ರೆಹಮಾನ್ ಆಗಬಹುದು ಅವರು ಆದ್ರೆ ಮನೆಯಲ್ಲಿ ಶಾಂತಿ ಇರುತ್ತೆ ಅವರು ಎಲ್ಲವನ್ನು ಮ್ಯಾನೇಜ್ ಮಾಡ್ತಾರೆ ಅಂದರು ಮತ್ತು ಅಯ್ಯಪ್ಪ ಅವರ ಹೆಸರನ್ನು ಸೂಚಿಸಿದರು.[19ನೇ ದಿನ ಬಿಗ್ ಬಾಸ್ ಮನೆಯಲ್ಲಿ ಏನೇಲ್ಲಾ ನಡೀತು ಗೊತ್ತಾ?]

ಆರ್ ಜೆ ನೇತ್ರಾ ಅವರು ನಟಿ ಪೂಜಾ ಗಾಂಧಿ ಮತ್ತು ರೆಹಮಾನ್ ಅವರನ್ನು ಆಯ್ಕೆ ಮಾಡಿದರು. ಇನ್ನು ಭಾವನಾ ಬೆಳಗೆರೆ ಮತ್ತೆ ರೆಹಮಾನ್ ಮತ್ತು ನಟಿ ಶ್ರುತಿ ಅವರ ಹೆಸರನ್ನು ಸೂಚಿಸಿದರು.

ಕ್ರಿಕೆಟಿಗ ಎನ್ ಸಿ ಅಯ್ಯಪ್ಪ ಅವರು ರೆಹಮಾನ್ ಮತ್ತು ನಟಿ ಪೂಜಾ ಗಾಂಧಿ ಅವರ ಹೆಸರನ್ನು ಸೂಚಿಸಿದರೆ, ರವಿ ಮುರೂರು ಅವರು ನಟಿ ಶ್ರುತಿ ಮತ್ತು ರೆಹಮಾನ್ ಅವರ ಹೆಸರು ಹೇಳಿದರು.

ಇನ್ನು ಗಗನಸಖಿ ನೇಹಾ ಗೌಡ ಅವರು ರೆಹಮಾನ್ ಮತ್ತು ಆರ್ ಜೆ ನೇತ್ರಾ ಅವರ ಹೆಸರನ್ನು ಸೂಚಿಸಿದರು. ನಟಿ ಪೂಜಾ ಗಾಂಧಿ ಅವರು ರೆಹಮಾನ್ ಮತ್ತು ಭಾವನಾ ಅವರ ಹೆಸರು ಹೇಳಿದರು.[ಬಿಗ್ ಬಾಸ್ ಮನೆಯಲ್ಲಿ ವೆಂಕಟ್ ದಬ್ಬಾಳಿಕೆ, ಕಣ್ಣೀರಿಟ್ಟ ರೆಹಮಾನ್!]

Bigg Boss Kannada 3 Day 19: Who is the Captain

ಸುನಾಮಿ ಕಿಟ್ಟಿ ಅವರು ನಟ ಚಂದನ್ ಮತ್ತು ರೆಹಮಾನ್ ಅವರ ಹೆಸರು ಹೇಳಿದರೆ, ಚಂದನ್ ಅವರು ರೆಹಮಾನ್ ಮತ್ತು ಅಯ್ಯಪ್ಪ ಅವರ ಹೆಸರು ಹೇಳಿದರು

ನಟಿ ಕೃತಿಕಾ ಅವರು ಶ್ರುತಿ ಮಾ ಆಗಬಹುದು ಮತ್ತು ಎರಡನೆಯದಾಗಿ ರೆಹಮಾನ್ ಆಗಬಹುದು, ಅವರು ಚೆನ್ನಾಗಿ ಮ್ಯಾನೇಜ್ ಮಾಡ್ತಾರೆ ಎಂದರು.

ನಟಿ ಶ್ರುತಿ ಅವರು ಭಾವನಾ ಹಾಗೂ ರೆಹಮಾನ್ ಹೆಸರು ಹೇಳಿದರೆ, ರೆಹಮಾನ್ ಅವರು ನಟಿ ಶ್ರುತಿ ಮತ್ತು ಅಯ್ಯಪ್ಪ ಅವರ ಹೆಸರು ಹೇಳಿದರು.

ಒಟ್ನಲ್ಲಿ ಇವರೆಲ್ಲರ ಅಭಿಪ್ರಾಯಗಳನ್ನು ಕಲೆ ಹಾಕಿದ ಬಿಗ್ ಬಾಸ್ ಅತೀ ಹೆಚ್ಚು ಓಟ್ ಪಡೆದುಕೊಂಡ ಟಿವಿ9 ರೆಹಮಾನ್ ಅವರನ್ನು ಮನೆಯ ಕ್ಯಾಪ್ಟನ್ ಆಗಿ ಸೆಲೆಕ್ಟ್ ಮಾಡಿ ಅಭಿನಂದಿಸಿದರು. ಇನ್ನು ರೆಹಮಾನ್ ಅವರ ಲೀಡರ್ ಶಿಪ್ ನಲ್ಲಿ ಮನೆ ಹೇಗೆ ನಡೆಯುತ್ತದೆ ಎಂದು ಕಾದು ನೋಡಬೇಕಿದೆ.

English summary
Bigg Boss Kannada 3 Day 19: Kannada Actor Chandan, Small Screen Actress Kruthika are voted as the most eligible for Captain in Bigg Boss house. Read to know more details about what all happened in Day 19th in Bigg Boss Kannada 3.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada