For Quick Alerts
  ALLOW NOTIFICATIONS  
  For Daily Alerts

  ಧ್ಯಾನದಲ್ಲೂ ನಿಮ್ 'ಎಕ್ಕಡ' ಮಾತ್ ಬೇಕಿತ್ತಾ ಹುಚ್ಚ ವೆಂಕಟ್?

  By Harshitha
  |

  ''ನನ್ ಎಕ್ಕಡ...ನನ್ ಮಗಂದ್...'' ಹೀಗೆ ಒಂದ್ಸಾಲಿ ಏನೋ ಆವೇಷದಲ್ಲಿ ಆಡಿದ ಮಾತನ್ನ ಕೇಳಿ ಸುಮ್ಮನಾಗಬಹುದು. ಎರಡನೇ ಬಾರಿ ಅದೇ ಸ್ಟೈಲ್ ನೋಡಿ, ನಗಬಹುದು. ಮೂರನೇ ಬಾರಿ ಕಾಮಿಡಿ ಮಾಡಿ, ಮಜಾ ತಗೋಬಹುದು. ಆದ್ರೆ, ಪ್ರತಿ ಬಾರಿ ಅದೇ 'ಎಕ್ಕಡ'ದ ಮಾತು ಕೇಳ್ತಿದ್ರೆ ಕಿರಿಕಿರಿ ಆಗಲ್ವಾ?

  'ಬಿಗ್ ಬಾಸ್' ಮನೆ ಸದಸ್ಯರಿಗೆ ನಿನ್ನೆ ಆದ ಅನುಭವ ಇದೇ. ಹೆಣ್ಮಕ್ಕಳು ತುಂಡು ಬಟ್ಟೆ ಹಾಕಿದಾಗ, 'ಹಾಕ್ಬೇಡಿ' ಅಂತ ಹುಚ್ಚ ವೆಂಕಟ್ ಸಲಹೆ ನೀಡಿದ್ದು ಓಕೆ. ಪೂಜಾ ಗಾಂಧಿ ಜೊತೆ ಮಾತಿನ ಸಮರ ನಡೆಸಿ, ಅದಕ್ಕೂ ಅವರ 'ಎಕ್ಕಡ'ಗೆ ಹೋಲಿಸಿ ಮಾತನಾಡಿದ್ದನ್ನೂ ಬಿಟ್ಟುಬಿಡೋಣ.

  ಆದ್ರೆ, ಮನೆಯಲ್ಲಿ ಶಾಂತಿ-ಸಮಾಧಾನ ಸಾರುವ ಸಲುವಾಗಿ ಧ್ಯಾನದ ಟಾಸ್ಕ್ ನಡೆಯುವ ಸಂದರ್ಭದಲ್ಲಿ, ಮನೆಯ ಇತರೆ ಸದಸ್ಯರು ದೇವರ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳುತ್ತಿರುವಾಗಲೂ 'ನನ್ ಎಕ್ಕಡ' ಅಂದು ವಿವಾದ ಸೃಷ್ಟಿಸಿದ್ದಾರೆ ಹುಚ್ಚ ವೆಂಕಟ್. [ಸುದೀಪ್ ಗೆ ಏಕವಚನ; ಹುಚ್ಚ ವೆಂಕಟ್ v/s ಕಿಚ್ಚ ಫ್ಯಾನ್ಸ್ ಸಮರ]

  ದೇವರು ಇದ್ಯೋ, ಇಲ್ವೋ. ಅದರ ಚರ್ಚೆ ಬೇರೆ. ಯಾರು ದೇವರನ್ನ ನಂಬಲಿ ಬಿಡಲಿ, 'ಬಿಗ್ ಬಾಸ್' ನೀಡಿರುವ ಟಾಸ್ಕ್ ನ ಮಾಡಲೇಬೇಕಿತ್ತು. ಅದರ ಮಧ್ಯದಲ್ಲೂ ಹುಚ್ಚ ವೆಂಕಟ್ ಆಡಿದ 'ಎಕ್ಕಡ'ದ ಮಾತಿಂದ ರೆಹಮಾನ್ ಸೇರಿದಂತೆ ಮನೆಯ ಎಲ್ಲಾ ಸದಸ್ಯರು ಬೇಸರಗೊಂಡಿದ್ದಾರೆ. ಮುಂದೆ ಓದಿ.....

  'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು?

  'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು?

  ಮನೆಯಲ್ಲಿ ಶಾಂತಿ ಹಾಗು ಸಮಾಧಾನ ಸಂದೇಶ ಸಾರುವ ಸಲುವಾಗಿ 'ಬಿಗ್ ಬಾಸ್' ಟಾಸ್ಕ್ ನೀಡಿದರು. ಅದರಂತೆ ಕ್ಯಾಪ್ಟನ್ ಖಾವಿ ಬಟ್ಟೆ ಮತ್ತು ಇತರೆ ಸದಸ್ಯರು ಬಿಳಿ ಬಟ್ಟೆ ಧರಿಸಬೇಕು. ಬೆಳಗ್ಗೆ ಎದ್ದ ಕೂಡಲೆ ಎಲ್ಲರೂ 15 ನಿಮಿಷ ಧ್ಯಾನ ಮಾಡಬೇಕು. ಮನೆಯ ಮುಂಭಾಗ ರಂಗೋಲಿ ಬಿಟ್ಟು, ಅದಕ್ಕೆ ಹೂವಿನಿಂದ ಅಲಂಕರಿಸಬೇಕು. ಸಂಗೀತ ಕೇಳಿಸಿದ ತಕ್ಷಣ ಎಲ್ಲರೂ ಗಾರ್ಡನ್ ಏರಿಯಾಗೆ ಬಂದು ರಿದಮಿಕ್ ಡ್ಯಾನ್ಸ್ ಮಾಡಬೇಕು. ['ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಹೊಸ ಲವ್ ಸ್ಟೋರಿ.!]

  ದೇವರ ಬಗ್ಗೆ ಅನುಭವ ಹಂಚಿಕೊಳ್ಳಬೇಕು

  ದೇವರ ಬಗ್ಗೆ ಅನುಭವ ಹಂಚಿಕೊಳ್ಳಬೇಕು

  ದೇವರ ಬಗ್ಗೆ ತಮ್ಮ ಜೀವನದಲ್ಲಿ ಆಗಿರುವ ಅನುಭವನ್ನ ಎಲ್ಲರೂ ಹಂಚಿಕೊಳ್ಳುವ ಅವಕಾಶವನ್ನು 'ಬಿಗ್ ಬಾಸ್' ಮಾಡಿಕೊಟ್ಟರು. ಅದರಲ್ಲಿ ಹುಚ್ಚ ವೆಂಕಟ್ ತಮ್ಮ ತಂದೆ-ತಾಯಿ ಬಗ್ಗೆ ಹೇಳೋಕೆ ಶುರು ಮಾಡಿದರು. [ವೆಂಕಟ್ ಹುಚ್ಚನ್ನು ಕೆರಳಿಸಿದ ಪೂಜಾಗಾಂಧಿ ಮಿನಿ ಸ್ಕರ್ಟ್!]

  ಅಪ್ಪ-ಅಮ್ಮನಿಂದ ದುಡ್ಡು ತೆಗೆದುಕೊಳ್ತಿರ್ಲಿಲ್ಲ.!

  ಅಪ್ಪ-ಅಮ್ಮನಿಂದ ದುಡ್ಡು ತೆಗೆದುಕೊಳ್ತಿರ್ಲಿಲ್ಲ.!

  ''ನಾನು 18 ವರ್ಷ ಇರುವಾಗಲೇ, ನನ್ನ ಅಪ್ಪ-ಅಮ್ಮನಿಂದ ದುಡ್ಡು ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ. ಪಿಯುಸಿ ಓದುವಾಗ ಪಾರ್ಟ್ ಟೈಮ್ ಕೆಲಸ ಶುರು ಮಾಡಿದೆ. ಅಪ್ಪ ನನ್ನ ಹತ್ತಿರ ದುಡ್ಡು ತೆಗೆದುಕೊಳ್ತಿರ್ಲಿಲ್ಲ, ಹೀಗಾಗಿ ಪ್ಯಾಂಟ್-ಶರ್ಟ್ ಪೀಸ್ ತೆಗೆದುಕೊಟ್ಟಿದ್ದೆ.'' [ಎಡಗಾಲಿಟ್ಟು 'ಬಿಗ್ ಬಾಸ್' ಮನೆಗೆ ಅಂದರ್ ಆದ ಹುಚ್ಚ ವೆಂಕಟ್]

  ಚಪ್ಪಲಿ ಕೊಡಿಸಬೇಕು

  ಚಪ್ಪಲಿ ಕೊಡಿಸಬೇಕು

  ''ನಿಮ್ಮ ತಂದೆಗೂ ಚಪ್ಪಲಿ ಕೊಡಿಸಿ. ನೀವು ನಿಮ್ಮ ತಂದೆಯ ಚಪ್ಪಲಿ ಸೈಜ್ ತಿಳಿದುಕೊಂಡಿದ್ರೆ, ಮಕ್ಕಳಾಗಿ ಹುಟ್ಟಿದಕ್ಕೆ ಸಾರ್ಥಕ.'' ಅಂತ ಹುಚ್ಚ ವೆಂಕಟ್ ಹೇಳ್ತಿದ್ರು.

  ಸಮಯ ಇರ್ಲಿಲ್ಲ.!

  ಸಮಯ ಇರ್ಲಿಲ್ಲ.!

  ಎಲ್ಲಾ 15 ಸದಸ್ಯರು ದೇವರ ಬಗ್ಗೆ ತಮ್ಮ ಅನುಭವ/ಅಭಿಪ್ರಾಯ ಹಂಚಿಕೊಳ್ಳಬೇಕಾದ ಕಾರಣ ಕಾಲಾವಕಾಶ ಕಮ್ಮಿ ಇತ್ತು. ಹುಚ್ಚ ವೆಂಕಟ್ ಫ್ಲ್ಯಾಶ್ ಬ್ಯಾಕ್ ಗೆ ತೆರಳಿದ ಕಾರಣ ಬೇಗ ಮುಗಿಸುವಂತೆ ಮನೆಯ ಇತರೆ ಸದಸ್ಯರು ಕೇಳಿಕೊಂಡರು.

  ಮಾಸ್ಟರ್ ಆನಂದ್ ಬಂದ್ರು.!

  ಮಾಸ್ಟರ್ ಆನಂದ್ ಬಂದ್ರು.!

  ನಂತ್ರ ಬಂದ ಮಾಸ್ಟರ್ ಆನಂದ್ ತಮ್ಮ ಅನುಭವ/ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಶುರುಮಾಡಿದರು. ''ಅಪ್ಪ-ಅಮ್ಮನ ಬಗ್ಗೆ ಹೇಳುತ್ತಿಲ್ಲ. ದೇವರು ಇಲ್ಲ ಅಂತ ಹುಚ್ಚ ವೆಂಕಟ್ ಏಕ್ದಂ, 'ನನ್ ಎಕ್ಕಡ'' ಅಂತ ಜೋರು ಮಾಡಿದರು.

  ಗರಂ ಆದ ರೆಹಮಾನ್

  ಗರಂ ಆದ ರೆಹಮಾನ್

  ''ಎಲ್ಲರಿಗೂ ಅವರವರ ಅಭಿಪ್ರಾಯ ಇರುತ್ತೆ. ಅದನ್ನ ಎಲ್ಲರೂ ಗೌರವಿಸಬೇಕು. ಅದು ಬಿಟ್ಟು 'ನನ್ ಎಕ್ಕಡ' ಅಂತ ಎಲ್ಲದಕ್ಕೂ ಹೇಳುವುದು ಸರಿಯಲ್ಲ.'' ಅಂತ ರೆಹಮಾನ್ ವಾದಕ್ಕೆ ಇಳಿದರು. [ಹುಚ್ಚನ ಕಂಡು ಕಿಚ್ಚ ಕೂಡಾ ಸೈಲಂಟ್, ವೆಂಕಟ್ ಟ್ರೆಂಡಿಂಗ್]

  ಕೆಲಕಾಲ ರಣರಂಗ.!

  ಕೆಲಕಾಲ ರಣರಂಗ.!

  ''ನಾನು ದೇವರನ್ನ ನೋಡಿಲ್ಲ. ನೀವು ನೋಡಿದ್ದೀರಾ. ಎಲ್ಲಾ ದೇವರು ನನ್ ಎಕ್ಕಡ ಸಮಾನ'' ಅಂತ ಬಾಯಿಗೆ ಬಂದಂತೆ ಹುಚ್ಚ ವೆಂಕಟ್ ಹೇಳಿದರು.

  ಮಾತು ಮುಗಿಸುವವರೆಗೂ ಎಲ್ಲರೂ ಸುಮ್ನ್ ಇರ್ಬೇಕ್.!

  ಮಾತು ಮುಗಿಸುವವರೆಗೂ ಎಲ್ಲರೂ ಸುಮ್ನ್ ಇರ್ಬೇಕ್.!

  ಹುಚ್ಚ ವೆಂಕಟ್ ಮಾತನಾಡುತ್ತಿರುವಾಗ ಎಲ್ಲರೂ ಸುಮ್ಮನಿರ್ಬೇಕು. ಮಧ್ಯೆದಲ್ಲಿ ಮೂಗು ತೂರಿಸಿದರೆ, 'ಎಕ್ಕಡ' ಬರೋದು ಗ್ಯಾರೆಂಟಿ ಅಂತ ಮನೆಯ ಸದಸ್ಯರು ಅರ್ಥಮಾಡಿಕೊಂಡಿದ್ದಾರೆ. ಮನಸ್ಸಿನಿಂದ ಹುಚ್ಚ ವೆಂಕಟ್ ಒಳ್ಳೆಯವರಾಗಿದ್ದರೂ, ಅವರು ಹೆಚ್ಚು ಅಟೆನ್ಷನ್ ಸೀಕ್ ಮಾಡುತ್ತಾರೆ ಅನ್ನೋದು ಮನೆ ಸದಸ್ಯರ ಅಭಿಪ್ರಾಯ.

  ವೋಟ್ ಮಾಡಿ 7 ರೂಪಾಯಿ ಕಳ್ಕೋಬೇಡಿ.!

  ವೋಟ್ ಮಾಡಿ 7 ರೂಪಾಯಿ ಕಳ್ಕೋಬೇಡಿ.!

  ''ನಾಮಿನೇಟ್ ಆಗಿ ಧ್ಯಾನ ಮಾಡುತ್ತಿರುವವರು ಬೇಜಾನ್ ಓವರ್ ಆಕ್ಟಿಂಗ್ ಮಾಡ್ತಾವ್ರೆ. ಭಯಂಕರ್ ಡವ್ ಮಾಡ್ತಾವ್ರೆ. ಇವರಿಗೆ ವೋಟ್ ಹಾಕಿ 7 ರೂಪಾಯಿ ಕಳ್ಕೋಬೇಡಿ. ಅದೇ 7 ರೂಪಾಯಿಗೆ ಬನ್ ತಗೊಂಡು ನಾಯಿಗೆ ಹಾಕಿ'' ಅಂತ ಧ್ಯಾನ ಮಾಡೋದು ಬಿಟ್ಟು ಗೊಣಗುತ್ತಿದ್ದರು ಹುಚ್ಚ ವೆಂಕಟ್.

  English summary
  YouTube Star Huccha Venkat's mad act continues in Bigg Boss Kannada 3 reality show. Huccha Venkat got into an argument with Rehman and Master Anand over the existence of God. Read the article to know what all happened in Day 2 of Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X