For Quick Alerts
  ALLOW NOTIFICATIONS  
  For Daily Alerts

  ಮಾಸ್ಟರ್ ಆನಂದ್ ಗೆ ಬಾಯಿಗೆ ಬಂದಂತೆ ಬೈದ ಹುಚ್ಚ ವೆಂಕಟ್!

  By Harshitha
  |

  ಹುಚ್ಚ ವೆಂಕಟ್ ರವರ ಹುಚ್ಚಾಟಗಳು ಒಂದೆರಡಲ್ಲ. 'ಬಿಗ್ ಬಾಸ್' ಮನೆಯಲ್ಲಿ ಒಂದಲ್ಲಾ ಒಂದು ರಗಳೆ ಮಾಡಿಕೊಳ್ಳುತ್ತಾ, ಪ್ರತಿದಿನ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ 'ನಿಮ್ಮೆಲ್ಲರ ಪ್ರೀತಿಯ' ಹುಚ್ಚ ವೆಂಕಟ್.

  'ಬಿಗ್ ಬಾಸ್-3'ಗೆ ಎಂಟ್ರಿಕೊಡುತ್ತಲೇ, ಕಿಚ್ಚ ಸುದೀಪ್ ರನ್ನ ಏಕವಚನದಲ್ಲಿ ಮಾತನಾಡಿಸಿದ್ದ ಹುಚ್ಚ ವೆಂಕಟ್, ಮೊದಲನೇ ದಿನ ಪೂಜಾ ಗಾಂಧಿ ಜೊತೆ ವಾಗ್ವಾದಕ್ಕೆ ಇಳಿದಿದ್ದರು. [ಸುದೀಪ್ ಗೆ ಏಕವಚನ; ಹುಚ್ಚ ವೆಂಕಟ್ v/s ಕಿಚ್ಚ ಫ್ಯಾನ್ಸ್ ಸಮರ]

  ದೇವರು ಇಲ್ಲ...'ನನ್ ಎಕ್ಕಡ' ಅಂತ್ಹೇಳಿ ರೆಹಮಾನ್ ರವರೊಂದಿಗೂ ಮಾತಿನ ಸಮರ ನಡೆಸಿದ್ದ ಹುಚ್ಚ ವೆಂಕಟ್ ನಿನ್ನೆ ಮಾಸ್ಟರ್ ಆನಂದ್ ಗೆ ಬಾಯಿಗೆ ಬಂದಂತೆ ಬೈದರು. [ವೆಂಕಟ್ ಹುಚ್ಚನ್ನು ಕೆರಳಿಸಿದ ಪೂಜಾಗಾಂಧಿ ಮಿನಿ ಸ್ಕರ್ಟ್!]

  ಮನರಂಜನೆ ನೀಡುವ ಸಲುವಾಗಿ ಹುಚ್ಚ ವೆಂಕಟ್ ರನ್ನ ಅನುಕರಣೆ ಮಾಡಿದ ಮಾಸ್ಟರ್ ಆನಂದ್, ಪಾಪ....ಹುಚ್ಚ ವೆಂಕಟ್ ರಿಂದ 'ಮಾತುಗಳನ್ನ' ಕೇಳಿ ತಲೆ ಬಗ್ಗಿಸಿದರು. ಮುಂದೆ ಓದಿ.....

  ಸತತ ಮೂರನೇ ದಿನವೂ ಹುಚ್ಚಾಟ.!

  ಸತತ ಮೂರನೇ ದಿನವೂ ಹುಚ್ಚಾಟ.!

  'ಬಿಗ್ ಬಾಸ್' ಮನೆಯಲ್ಲಿ ಸತತ ಮೂರನೇ ದಿನವೂ ಹುಚ್ಚ ವೆಂಕಟ್ ರವರ ಹುಚ್ಚಾಟ ಮುಂದುವರಿದಿದೆ. ಮೊದಮೊದಲು ನಗುನಗುತ್ತಲೇ ಇದ್ದ ಹುಚ್ಚ ವೆಂಕಟ್, ಸಡನ್ ಆಗಿ ಗರಂ ಆಗ್ಬಿಟ್ಟರು. ಅದಕ್ಕೆ ಕಾರಣ ಏನು ಅನ್ನೋದನ್ನ ಹೇಳ್ತೀವಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.....

  ಅಷ್ಟಕ್ಕೂ ಆಗಿದ್ದೇನು?

  ಅಷ್ಟಕ್ಕೂ ಆಗಿದ್ದೇನು?

  'ಬಿಗ್ ಬಾಸ್' ಮನೆಯ ಸದಸ್ಯರಿಗೆ ಮನರಂಜನೆ ನೀಡುವ ಟೀಮ್ ನಲ್ಲಿ ಮಾಸ್ಟರ್ ಆನಂದ್ ಇದ್ದಾರೆ. ಎಲ್ಲರಿಗೂ ಮನರಂಜನೆ ನೀಡುವ ಸಲುವಾಗಿ ಮಾಸ್ಟರ್ ಆನಂದ್, ಹುಚ್ಚ ವೆಂಕಟ್ ರನ್ನ ಅನುಕರಣೆ ಮಾಡಿದರು. ['ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಹೊಸ ಲವ್ ಸ್ಟೋರಿ.!]

  ಮಾಸ್ಟರ್ ಆನಂದ್ ಹೇಳಿದ್ದೇನು?

  ಮಾಸ್ಟರ್ ಆನಂದ್ ಹೇಳಿದ್ದೇನು?

  ಥೇಟ್ ಹುಚ್ಚ ವೆಂಕಟ್ ಸ್ಟೈಲ್ ನಲ್ಲಿ, ''ಬಿಗ್ ಬಾಸ್' ನನಗೆ ಬಿಯರ್ ಬಾಟಲ್ ಕೊಡ್ಬೇಕ್...ಕೊಡ್ಲಿಲ್ಲ ಅಂದ್ರೆ ಕ್ಯಾಮರಾಗಳು ಒಡೆದು ಹಾಕ್ಬಿಡ್ತೀನಿ...ನನ್ನ ಹೆಸರೇ ಹುಚ್ಚ ವೆಂಕಟ್...ನನ್ನ ಮೇಲೆ ಕೇಸ್ ಹಾಕೋಕೆ ಆಗಲ್ಲ...ನನ್ಮಕ್ಳ ಸಾಯಿಸ್ಬಿಡ್ತೀನಿ...ನಾನ್ ಸಾಯ್ಸಲ್ಲ...ನಮ್ಮ ಹುಡುಗರು ಸಾಯಿಸ್ತಾರೆ...ಲೋಕಲ್ ಹುಡುಗರು ಅಲ್ಲ...ಪಾಕಿಸ್ತಾನದಿಂದ ಹುಡುಗರು ಬರ್ತಾರೆ...ನನ್ ಮಗಂದ್...ನನ್ ಎಕ್ಕಡ...'' ಅಂತ ಮಾಸ್ಟರ್ ಆನಂದ್, ಹುಚ್ಚ ವೆಂಕಟ್ ರನ್ನ ಅನುಕರಣೆ ಮಾಡಿದರು.

  ನಕ್ಕು ಎಂಜಾಯ್ ಮಾಡಿದ ಹುಚ್ಚ ವೆಂಕಟ್.!

  ನಕ್ಕು ಎಂಜಾಯ್ ಮಾಡಿದ ಹುಚ್ಚ ವೆಂಕಟ್.!

  ಮಾಸ್ಟರ್ ಆನಂದ್ ಮಾತುಗಳಿಗೆ, ಅವರ ಅನುಕರಣೆ ನೋಡಿ ಖುಷಿ ಪಟ್ಟ ಹುಚ್ಚ ವೆಂಕಟ್ ಮನಸಾರೆ ನಗುತ್ತಿದ್ದರು. ನಂತರ ಇದ್ದಕ್ಕಿದ್ದ ಹಾಗೆ ಗರಂ ಆಗ್ಬಿಟ್ರು.

  ಮುಂದೆ ಏನಾಯ್ತು?

  ಮುಂದೆ ಏನಾಯ್ತು?

  'ಬಿಗ್ ಬಾಸ್' ಮನೆಯಲ್ಲಿ ಮೊದಲ ದಿನ ಹುಚ್ಚ ವೆಂಕಟ್ ಎಲ್ಲರನ್ನ ಮಲಗಿಕೊಂಡು ಮಾತನಾಡಿಸಿದ್ದರು. ಅದನ್ನೂ ಮಾಸ್ಟರ್ ಆನಂದ್ ಅನುಕರಣೆ ಮಾಡಿದರು. ಇದು ಹುಚ್ಚ ವೆಂಕಟ್ ರಿಗೆ ಇಷ್ಟವಾಗ್ಲಿಲ್ಲ. ಆಮೇಲೆ ಏನಾಯ್ತು, ಅಂತ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ಗರಂ ಆದ ಹುಚ್ಚ ವೆಂಕಟ್.!

  ಗರಂ ಆದ ಹುಚ್ಚ ವೆಂಕಟ್.!

  ''ನನ್ ಎಕ್ಕಡ ನೀನು...ನಿನ್ನ ಯೋಗ್ಯತೆ ಏನು...ನಾನ್ ಯಾರ್ ಗೊತ್ತಾ...ಹೀಗಾ ಮಾಡೋದು. ಆಚೆ ಹೋದರೆ ನನ್ನ ಹುಡುಗರು ನಿನ್ನ ಸುಮ್ನೆ ಬಿಡ್ತಾರಾ. ಪಾಕಿಸ್ತಾನದಲ್ಲಿರುವ ನನ್ನ ಹುಡುಗರ ಬಗ್ಗೆ ಮಾತನಾಡುತ್ತೀಯಾ. You should not speak about my guys. I'm warning you. Comedy should not insult anyone. ಇಡೀ ಪ್ರಪಂಚಕ್ಕೆ ಆಳೋನು ನಾನು. ನನ್ನ ಬಗ್ಗೆನೇ ಹೀಗೇ ಮಾಡ್ತೀಯಾ.'' ಅಂತ ಹೇಳ್ತಾ ಬಾಯಿಗೆ ಬಂದಂತೆ ಮಾಸ್ಟರ್ ಆನಂದ್ ರನ್ನ ಬೈದರು. ಕೆಲ ಪದಗಳನ್ನ ಬೀಪ್ ಮಾಡಲಾಗಿತ್ತು.

  ಶಾಕ್ ಆದ 'ಬಿಗ್ ಬಾಸ್' ಮನೆ ಸದಸ್ಯರು!

  ಶಾಕ್ ಆದ 'ಬಿಗ್ ಬಾಸ್' ಮನೆ ಸದಸ್ಯರು!

  ಹುಚ್ಚ ವೆಂಕಟ್ ರವರ ರಿಯಾಕ್ಷನ್ ಮತ್ತು ಕೆಟ್ಟ ಪದ ಬಳಕೆ ಕಂಡು 'ಬಿಗ್ ಬಾಸ್' ಮನೆ ಸದಸ್ಯರು ಶಾಕ್ ಆದರು. ರೆಹಮಾನ್, ನೇತ್ರ ಮತ್ತು ಅಯ್ಯಪ್ಪ ಹುಚ್ಚ ವೆಂಕಟ್ ರನ್ನ ಸಮಾಧಾನ ಮಾಡುವುದಕ್ಕೆ ನಿಂತರು. ಅತ್ತ ಮಾಸ್ಟರ್ ಆನಂದ್ ಬೇಸರಗೊಂಡರು. [ಎಡಗಾಲಿಟ್ಟು 'ಬಿಗ್ ಬಾಸ್' ಮನೆಗೆ ಅಂದರ್ ಆದ ಹುಚ್ಚ ವೆಂಕಟ್]

  English summary
  Annoyed YouTube Star Huccha Venkat abused Actor cum Director Master Anand in Bigg Boss House, as Master Anand imitated him. Read to know more details about what happened in Day 3 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X