»   » ಶ್ರುತಿ-ಅಯ್ಯಪ್ಪಗೆ ಬಿಸಿ ಮುಟ್ಟಿಸಿದ 'ಅತಿಥಿ' ಮಿತ್ರ-ಗೌತಮಿ

ಶ್ರುತಿ-ಅಯ್ಯಪ್ಪಗೆ ಬಿಸಿ ಮುಟ್ಟಿಸಿದ 'ಅತಿಥಿ' ಮಿತ್ರ-ಗೌತಮಿ

Posted By:
Subscribe to Filmibeat Kannada

ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿದಂತೆ ಕಾಮಿಡಿ ಕಿಲಾಡಿ ಮಿತ್ರ ಮತ್ತು 'ಚಿ.ಸೌ.ಸಾವಿತ್ರಿ' ಧಾರಾವಾಹಿ ನಟಿ ಗೌತಮಿ ಗೌಡ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ. ಆದ್ರೆ, ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಲ್ಲ. ಬದಲಾಗಿ 'ಅತಿಥಿ'ಗಳಾಗಿ.

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಈ ವಾರ ನೀಡಲಾಗಿರುವ 'ಅತಿಥಿ ದೇವೋ ಭವ' ಟಾಸ್ಕ್ ನಲ್ಲಿ ಅತಿಥಿಗಳಾಗಿ ಮಿತ್ರ ಮತ್ತು ಗೌತಮಿ ಗೌಡ ಭಾಗವಹಿಸಿದ್ದಾರೆ.

ವಿಶೇಷ ಅತಿಥಿಗಳಾಗಿ ಬಂದಿರುವ ಮಿತ್ರ ಮತ್ತು ಗೌತಮಿ ಗೌಡ ರವರನ್ನ ಸತ್ಕರಿಸುವ ಜವಾಬ್ದಾರಿ ನಟಿ ಶ್ರುತಿ ನೇತೃತ್ವದ 'ಶ್ರುತಿ ಹೋಟೆಲ್' ಮತ್ತು ಅಯ್ಯಪ್ಪ ನೇತೃತ್ವದ 'ಅಯ್ಯಪ್ಪ ಹೋಟೆಲ್'ದು.['ಬಿಗ್ ಬಾಸ್-3' ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ?]

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 38ನೇ ದಿನ ಏನೇನೆಲ್ಲಾ ಆಯ್ತು ಅಂತ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಮನೆ ಸದಸ್ಯರ ನಿರೀಕ್ಷೆ ಬೇರೆ!

'ಅತಿಥಿ'ಗಳು ಅಂದಾಗ ''ಯಾರೋ ವಿಶೇಷ ಅತಿಥಿಗಳು ಬರಬಹುದು'' ಅಂತ 'ಬಿಗ್ ಬಾಸ್' ಮನೆ ಸದಸ್ಯರು ಊಹಿಸಿದ್ದರು. ಆದ್ರೆ, ಕಾಮಿಡಿಯನ್ ಮಿತ್ರ ಮತ್ತು ಗೌತಮಿ ಗೌಡ ಎಂಟ್ರಿಕೊಟ್ಟಿದ್ದನ್ನ ನೋಡಿ 'ಬಿಗ್ ಬಾಸ್' ಮನೆ ಸದಸ್ಯರ ಲೆಕ್ಕಾಚಾರ ತಲೆಕೆಳಗಾಯ್ತು.! ['ಬಿಗ್ ಬಾಸ್' ಮನೆಯಿಂದ ಈ ವಾರ ಗೇಟ್ ಪಾಸ್ ಯಾರಿಗೆ?]

ನಾವೇನು ಕಾಂಜಿಪೀಂಜಿಗಳಾ?

''ನಾವು ಎಂಟ್ರಿಕೊಟ್ಟಾಗ ನಮಗೆ ಸ್ವಾಗತ ಸರಿಯಾಗಿ ಸಿಗಲಿಲ್ಲ. ನಮ್ಮನ್ನ ನೋಡಿ ಎಲ್ಲರೂ ಮುಖ ಒಂಥರಾ ಮಾಡುತ್ತಿದ್ದಾರೆ. ನಮ್ಮನ್ನ ನೋಡಿ ಶ್ರುತಿ ನಕ್ಕರು. ನಾವೇನು ಕಾಂಜಿಪೀಂಜಿಗಳಾ..'' ಅಂತ ಮಿತ್ರ ಮತ್ತು ಗೌತಮಿ ಮಾತನಾಡಿಕೊಳ್ಳುತ್ತಿದ್ದರು. [ಮೊದ್ಲು 'ಅಣ್ಣ-ತಂಗಿ' ರೆಹಮಾನ್-ನೇಹ ರನ್ನ ಔಟ್ ಮಾಡ್ರಪ್ಪ!!]

ಶ್ರುತಿ ಮೇಲೆ ಮಿತ್ರ ಗರಂ

ಊಟ ಆರ್ಡರ್ ಮಾಡುವ ಸಂದರ್ಭದಲ್ಲಿ ಹಿಂದೆ ನಿಂತು ಶ್ರುತಿ ನಕ್ಕಿದ್ದಕ್ಕೆ ಮಿತ್ರ ಬೇಸರಗೊಂಡರು.

ನಾಟಕ ಮಾಡ್ತಿದ್ದಾರಂತೆ ಶ್ರುತಿ

'ನೀವು ತುಂಬಾ ಚೆನ್ನಾಗಿ ನಾಟಕ ಮಾಡ್ತೀರಾ' ಅಂತ ಮಿತ್ರ ಹೇಳಿದ್ದಕ್ಕೆ ನಟಿ ಶ್ರುತಿ, ''ನಮ್ಮ ತಂದೆ ನಾಟಕದಲ್ಲಿ ಪಾರ್ಟ್ ಮಾಡುತ್ತಿದ್ದರು. ಹೀಗಾಗಿ ಅವರು ಹೇಳಿದ್ದು ನನಗೆ ಬೇಸರವಾಗಿಲ್ಲ'' ಅಂತ ಸಮಜಾಯಿಶಿ ಕೊಟ್ಟರು.

ನೇತ್ರಗೆ ಸಿಡುಕಿದ ಮಿತ್ರ

'ಶ್ರುತಿ ಹೋಟೆಲ್' ಶೆಫ್ ಆಗಿ ಮೀನಿನ ಹೆಸರು ತಿಳಿದುಕೊಳ್ಳದೇ ವಾದ ಮಾಡಿದ್ದಕ್ಕೆ ನೇತ್ರ ಮೇಲೆ ಮಿತ್ರ ಸಿಡುಕಿದರು.

ಸಾರಿ ಕೇಳಿದ ಅಯ್ಯಪ್ಪ

ಟೀಗೆ ಉಪ್ಪು ಹಾಕಿದ್ದಕ್ಕೆ, ಮಿತ್ರ ಕೂಗಾಡಿದ ಪರಿಣಾಮ 'ಅಯ್ಯಪ್ಪ ಹೋಟೆಲ್' ಮ್ಯಾನೇಜರ್ ಅಯ್ಯಪ್ಪ, ಮಿತ್ರ ರವರಿಗೆ ಕ್ಷಮೆ ಕೇಳಿದರು.

'ಬಿಗ್ ಬಾಸ್' ಮನೆ ಗಬ್ಬು

''ಮನೆಯನ್ನ ನೀಟಾಗಿ ಇಟ್ಟಿಲ್ಲ. ನನಗೂ ಹೇಳಿ ಹೇಳಿ ಸಾಕಾಯ್ತು. ಬಾತ್ ರೂಮ್ ಗೆ ಹೋದರೆ ನನಗೆ ಅಸಹ್ಯ ಆಗುತ್ತೆ. ಬೆಡ್ ರೂಮ್ ಅಂತೂ ಕ್ಲೀನ್ ಆಗಿ ಇಲ್ಲವೇ ಇಲ್ಲ. ಗೆಸ್ಟ್ ಗಳು ನೋಡಿದ್ರೆ ಏನಂದುಕೊಳ್ಳಲ್ಲ. ಎಲ್ಲೆಲ್ಲೂ ಕ್ಯಾಮರಾಗಳಿವೆ. ನೋಡೋ ಜನ ಏನಂದ್ಕೊಳ್ತಾರೆ'' ಅಂತ ಅಯ್ಯಪ್ಪ ಸಿಟ್ಟಾಗಿದ್ದರು.

ಮುಜುಗರ ತಂದ ಮನರಂಜನೆ

'ಶ್ರುತಿ ಹೋಟೆಲ್' ಕಡೆಯಿಂದ ರೆಹಮಾನ್ ಮತ್ತು ಕಿಟ್ಟಿ ನೀಡಿದ ಮನರಂಜನೆ ಕೀಳುಮಟ್ಟದ್ದು. ಇದರಿಂದ ಮುಜುಗರ ಆಯ್ತು ಅನ್ನೋದು ಗೌತಮಿ ಮತ್ತು ಮಿತ್ರ ಅಭಿಪ್ರಾಯ.

ಮನೆಯಲ್ಲೇ ಉಳಿತಾರಾ ಗೌತಮಿ-ಮಿತ್ರ?

ಸದ್ಯಕ್ಕೆ 'ಅತಿಥಿ'ಗಳಾಗಿ ಎಂಟ್ರಿಕೊಟ್ಟಿರುವ ಗೌತಮಿ ಗೌಡ ಮತ್ತು ಮಿತ್ರ, 'ಬಿಗ್ ಬಾಸ್' ಮನೆಯಲ್ಲೇ ಉಳೀತಾರಾ? ಅಥವಾ 'ಅತಿಥಿ'ಗಳಷ್ಟೆ ಆಗಿ ವಾಪಸ್ ಆಗುತ್ತಾರಾ ಅನ್ನೋದನ್ನ ತಿಳಿಯಲು ಇಂದಿನ ಸಂಚಿಕೆ ನೋಡ್ಬೇಕು.

English summary
Kannada Actor Mithra and Actress Gowthami Gowda entered Bigg Boss house as guests. Read the article to know what all happened on Day 38 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada