»   » 'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರಿಟ್ಟ ಅಯ್ಯಪ್ಪ-ಆನಂದ್

'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರಿಟ್ಟ ಅಯ್ಯಪ್ಪ-ಆನಂದ್

Posted By:
Subscribe to Filmibeat Kannada

ಇದುವರೆಗೂ ಹೆಚ್ಚು ಮಾತನಾಡದೆ, ಭಾವನೆಗಳನ್ನ ಹೊರಹಾಕದೆ ಎಲ್ಲಾ ಟಾಸ್ಕ್ ಗಳನ್ನು ಕೂಲ್ ಆಗಿ ಹ್ಯಾಂಡಲ್ ಮಾಡುತ್ತಿದ್ದ ಕ್ರಿಕೆಟರ್ ಅಯ್ಯಪ್ಪ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರಿಟ್ಟರು.

'ಅತಿಥಿ ದೇವೋ ಭವ' ಟಾಸ್ಕ್ ನಲ್ಲಿ ತಮ್ಮ ತಂಡದ ಸದಸ್ಯರು ಸರಿಯಾಗಿ ಪರ್ಫಾಮ್ ಮಾಡುತ್ತಿಲ್ಲ ಅಂತ ಬೇಸರಗೊಂಡ ಅಯ್ಯಪ್ಪ ಕಣ್ಣೀರು ಹಾಕಿದರು.

Bigg Boss Kannada 3 Day 39 - Master Anand and Aiyappa becomes emotional

ಇನ್ನೂ ಬಾಲ್ಯದ ಕೆಲ ನೆನಪುಗಳನ್ನ 'ಅತಿಥಿ' ಮಿತ್ರರವರೊಂದಿಗೆ ಹಂಚಿಕೊಳ್ಳುತ್ತಾ ಮಾಸ್ಟರ್ ಆನಂದ್ ಕೂಡ ಭಾವುಕರಾದರು. ['ಬಿಗ್ ಬಾಸ್ ಸ್ಪರ್ಧೆ'ಯಲ್ಲಿ ಪಾಲ್ಗೊಳ್ಳಿ; ಆಕರ್ಷಕ ಬಹುಮಾನ ಗೆಲ್ಲಿ.!]

ಸತತ ಎರಡನೇ ದಿನ 'ಅತಿಥಿ ದೇವೋ ಭವ' ಟಾಸ್ಕ್ ಮುಂದುವರಿದ ಕಾರಣ ಹೆಚ್ಚು ಟಿಪ್ಸ್ ಪಡೆಯುವುದಕ್ಕೆ ನಟಿ ಶ್ರುತಿ ಮತ್ತು ಅಯ್ಯಪ್ಪ ಪೈಪೋಟಿ ನಡೆಸಿದರು. [ಶ್ರುತಿ-ಅಯ್ಯಪ್ಪಗೆ ಬಿಸಿ ಮುಟ್ಟಿಸಿದ 'ಅತಿಥಿ' ಮಿತ್ರ-ಗೌತಮಿ]

ಕಡಿಮೆ ಟಿಪ್ಸ್ ಪಡೆದು ಕಂಗಾಲಾಗಿರುವ ಅಯ್ಯಪ್ಪ ಮತ್ತು ತಂಡಕ್ಕೆ ನಾಮಿನೇಷನ್ ಟೆನ್ಷನ್ ಎದುರಾಗಿದೆ. ಸದ್ಯಕ್ಕೆ 'ಅತಿಥಿ'ಗಳಾಗಿ ಮನೆಗೆ ಆಗಮಿಸಿರುವ ಮಿತ್ರ ಮತ್ತು ಗೌತಮಿ ಗೌಡ 'ಬಿಗ್ ಬಾಸ್' ಮನೆಯಲ್ಲೇ ಠಿಕಾಣಿ ಹೂಡುತ್ತಾರಾ ಅನ್ನುವ ಡೌಟ್ ಕೂಡ ಎಲ್ಲರಿಗೂ ಕಾಡುತ್ತಿದೆ. ಅದಕ್ಕೆ ಉತ್ತರ ಇಂದಿನ ಸಂಚಿಕೆ.

English summary
Kannada Actor Master Anand and Cricketer Aiyappa became emotional in Bigg Boss house. Read the article to know what all happened on Day 39 in Bigg Boss Kannada 3.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada