»   » ಅಮ್ಮ ಶ್ರುತಿ-ಮಗಳು ಕೃತಿಕಾ ನಡುವೆ ಮಾತಿನ ಸಮರ

ಅಮ್ಮ ಶ್ರುತಿ-ಮಗಳು ಕೃತಿಕಾ ನಡುವೆ ಮಾತಿನ ಸಮರ

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಯಾರು ವೈರಿಗಳು, ಯಾರು ಸ್ನೇಹಿತರು, ಯಾರ್ಯಾರು ಸಖತ್ ಕ್ಲೋಸ್ ಅಂತ ಊಹಿಸುವುದೇ ಸಿಕ್ಕಾಪಟ್ಟೆ ಕಷ್ಟ.

''ಅಮ್ಮ-ಅಮ್ಮ' ಅಂತ ಸದಾ ಶ್ರುತಿಯವರ ಹಿಂದೆ ಕೃತಿಕಾ ಸುತ್ತುತ್ತಿರುತ್ತಾರೆ'' ಎನ್ನುವ ಆರೋಪ ಕೆಲವೇ ದಿನಗಳ ಹಿಂದೆಯಷ್ಟೇ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಕೇಳಿಬಂದಿತ್ತು. ['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಇದನ್ನ ಕೇಳಿ ''ಶ್ರುತಿ ನನ್ನ ತಾಯಿ ಇದ್ದ ಹಾಗೆ'' ಅಂತ ಕೃತಿಕಾ ಕಣ್ಣೀರಿಟ್ಟಿದ್ದರು. ಇನ್ನೂ ಶ್ರುತಿ ಕೂಡ, ''ತಾಯಿಗೆ ಮಗು ಭಾರವೇ. ಬಳ್ಳಿಗೆ ಹೂ ಭಾರವೇ. ಇಂತಹ ಪ್ರೀತಿಯಿನ್ನ ದಯವಿಟ್ಟು ತಪ್ಪಿಸಬೇಡಿ'' ಅಂತ ಭಾವುಕರಾಗಿದ್ದರು.

ಅಚ್ಚರಿ ಅಂದ್ರೆ, ಇದೇ ಅಮ್ಮ-ಮಗಳು ಶ್ರುತಿ ಮತ್ತು ಕೃತಿಕಾ ನಡುವೆ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಮಾತಿನ ಸಮರ ನಡೆಯಿತು. ಇಬ್ಬರ ಮಧ್ಯೆ ಏನಾಯ್ತು ಅಂತ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಕಳ್ಳ-ಪೊಲೀಸ್ ಟಾಸ್ಕ್ ನಲ್ಲಿ ಮಾತಿನ ಸಮರ

'ಬಿಗ್ ಬಾಸ್' ನೀಡಿದ 'ಕಳ್ಳ-ಪೊಲೀಸ್' ಟಾಸ್ಕ್ ನಲ್ಲಿ ನಟಿ ಶ್ರುತಿ ಕಳ್ಳಿ ಆಗಿದ್ರೆ, ಕೃತಿಕಾ ಜನಸಾಮಾನ್ಯರು. ಅಡುಗೆ ಸಾಮಾಗ್ರಿಗಳನ್ನ ಶ್ರುತಿ ಕದಿಯುವುದನ್ನ ಕೃತಿಕಾ ನೋಡಿದ್ದರು. ಅಡುಗೆ ಪದಾರ್ಥಗಳು ಕಳುವಾಗಿರುವ ಕಾರಣ 'ಬಿಗ್ ಬಾಸ್' ಮನೆಯಲ್ಲಿ ಯಾರಿಗೂ ಊಟ ಇರ್ಲಿಲ್ಲ. ಈ ಬಗ್ಗೆ ಪೊಲೀಸ್ ಸ್ಟೇಷನ್ ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಕೃತಿಕಾ-ಶ್ರುತಿ ನಡುವೆ ಮಾತಿನ ಸಮರ ನಡೆಯಿತು.

ಕಂಬಿ ಹಿಂದಿದ್ದ ಕೃತಿಕಾ

ಕೃತಿಕಾ ಅವರನ್ನ ಪೊಲೀಸರು ಬಂಧಿಸಿದರು. ಇದನ್ನ ವಿರೋಧಿಸಿದ ಕೃತಿಕಾ, ಕಳ್ಳತನ ಮಾಡಿರುವುದು ಶ್ರುತಿ ಅವರನ್ನ ಬಂಧಿಸಿ ಅಂತ ಪಟ್ಟುಹಿಡಿದರು. ಆಗಲೇ ಮಾತಿನ ಚಕಮಕಿ ಶುರುವಾಗಿದ್ದು.

ಕೃತಿಕಾ ಹೇಳಿದ್ದೇನು?

''ಶ್ರುತಿ ಅವರೆ ನೀವು ತಪ್ಪು ಒಪ್ಪಿಕೊಳ್ಳಿ. ಯಾರಿಗೂ ಇಲ್ಲ ಇಲ್ಲಿ ಊಟ. ತಪ್ಪು ಒಪ್ಪಿಕೊಳ್ಳೋದು ಕಲಿತುಕೊಳ್ಳಿ. ನೀವು ದೊಡ್ಡ ಮನುಷ್ಯರು'' - ಕೃತಿಕಾ [ನಟಿ ಶ್ರುತಿ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಅಪಶ್ರುತಿ.!]

ತಿರುಗೇಟು ಕೊಟ್ಟ ಶ್ರುತಿ

''ಸುಮ್ನೆ ಕೂತ್ಕೊಳಮ್ಮ ನೀನು. ಬಾಯ್ಬಡ್ಕಿ. ಯಾವ್ಯಾವ್ದೋ ಸೀರಿಯಲ್ ನಲ್ಲಿ ಕಥೆ ನೋಡ್ಕೊಂಡ್ ಬಂದು ಕಥೆ ಕಟ್ಟಬೇಡ'' - ಶ್ರುತಿ ['ಬಿಗ್ ಬಾಸ್-3' ಶೋ ಕ್ವಿಟ್ ಮಾಡ್ತಾರಾ ನಟಿ ಶ್ರುತಿ?]

ತಿರುಗಿಬಿದ್ದ ಕೃತಿಕಾ

''ಸೀರಿಯಲ್ ಸೀರಿಯಲ್ ಅಂತಿದ್ದೀರಲ್ಲ. ಏನ್ ಸೀರಿಯಲ್? ಡೈಲಾಗ್ ಚೇಂಜ್ ಮಾಡಿ ನಲವತ್ತು ವರ್ಷ ಅದೇ ಹೇಳೋದು ಅಲ್ಲ. ನೀವ್ ಕಳ್ಳಿ ನಾನಲ್ಲ'' - ಕೃತಿಕಾ

ಗುಡುಗಿದ ಶ್ರುತಿ

''ಮತ್ತೆ ನೀನೇನು ದೊಡ್ಡೋರು, ತಪ್ಪು ಒಪ್ಪಿಕೊಳ್ಳಿ ಅನ್ನೋದು. ಸುಮ್ನೆ ಕೂತ್ಕೋ ನೀನು ಕಳ್ಳಿ ಅನ್ನೋದಕ್ಕೆ ನಿನ್ನ ಒಳಗೆ ಹಾಕಿರೋದು'' - ಶ್ರುತಿ

ಅಂದರ್ ಆದ ಶ್ರುತಿ

ಮಾತಿನ ಚಕಮಕಿ ಬಳಿಕ ಕೃತಿಕಾ ರನ್ನ ರಿಲೀಸ್ ಮಾಡಿ, ಪೊಲೀಸರು ಶ್ರುತಿಯನ್ನ ಬಂಧಿಸಿದರು.

    English summary
    Kannada Actress Shruthi and Kruthika had an heated argument in 'Kalla-Police' Task given by Bigg Boss. Read the article to know what all happened on Day 44 in Bigg Boss Kannada 3.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada