Don't Miss!
- News
ಅನಧಿಕೃತ ಕಟ್ಟಡಗಳಿಗೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಗೆ ಹೈಕೋರ್ಟ್ ಸೂಚನೆ
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Sports
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್ ಬೌಲ್ಟ್! ಏಕೆ ಈ ನಿರ್ಧಾರ?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಲಕ್ಕಿ ಸ್ಟಾರ್ ರಮ್ಯಾ ಲವ್ ಸ್ಟೋರಿ ಬಿಚ್ಚಿಟ್ಟ ಹುಚ್ಚ ವೆಂಕಟ್.!
''ಮೋಹಕ ತಾರೆ ರಮ್ಯಾ ಅವರನ್ನು ನಾನು ಮದುವೆಯಾಗಿದ್ದೇನೆ. ಅವರನ್ನು ನಾನು ಬನಶಂಕರಿ ದೇವಸ್ಥಾನದಲ್ಲಿ ವರ್ಷದ ಹಿಂದೆ ವಿವಾಹವಾಗಿದ್ದೆ. ಮದುವೆಯಾದ ಮೇಲೆ ಅವರು ನಟಿಸುವುದು ನನಗೆ ಇಷ್ಟವಿರಲಿಲ್ಲ. ಇದೇ ವಿಚಾರವಾಗಿ ನಾವು ಬೇರೆ ಬೇರೆಯಾದೆವು.''
''ರಮ್ಯಾ ಅವರ ರಾಜಕೀಯ ಪ್ರವೇಶವನ್ನೂ ನಾನು ವಿರೋಧಿಸುತ್ತೇನೆ. ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡಬಾರದು. ಈ ಬಗ್ಗೆ ಸೋನಿಯಾ ಗಾಂಧಿ ಜೊತೆ ನಾನು ಮಾತನಾಡಿದ್ದೇನೆ'' [ಬಿಗ್ ಬಾಸ್-3 ಕುರಿತಾದ ತಾಜಾ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ]
ಹೀಗಂತ ಹೇಳಿ ಖುದ್ದು ಹುಚ್ಚ ವೆಂಕಟ್ ಕಳೆದ ವರ್ಷ ಬ್ರೇಕಿಂಗ್ ನ್ಯೂಸ್ ಮಾಡಿದ್ದರು. ಸುವರ್ಣ ನ್ಯೂಸ್ 24*7, ಟಿವಿ 9 ಮತ್ತು ಪಬ್ಲಿಕ್ ಟಿವಿಯ ಲೈವ್ ಪ್ರೋಗ್ರಾಂನಲ್ಲಿ ''ರಮ್ಯಾ ನನ್ನ ಹೆಂಡತಿ'' ಅಂತ ಬೊಬ್ಬೆ ಹೊಡೆದುಕೊಂಡ ಹುಚ್ಚ ವೆಂಕಟ್ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಅತಿಥಿಯಾಗಿದ್ದರು. ['ರಮ್ಯಾ ನನ್ನ ಪತ್ನಿ' ಎಂದ ಹುಚ್ಚ ವೆಂಕಟ ಬಂಧನ]
ಈಗ ಈ ಫ್ಲ್ಯಾಶ್ ಬ್ಯಾಕ್ ಕಥೆಯನ್ನ ನಾವು ನಿಮ್ಮ ಮುಂದೆ ಇಡುವುದಕ್ಕೆ ಕಾರಣ 'ಬಿಗ್ ಬಾಸ್-3' ಕಾರ್ಯಕ್ರಮ. ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಇದೇ ವಿಚಾರದ ಕುರಿತಾಗಿ ಹುಚ್ಚ ವೆಂಕಟ್ ಸ್ಪಷ್ಟಣೆ ನೀಡಿದ್ದಾರೆ. ಮುಂದೆ ಓದಿ.......

'ಬಿಗ್ ಬಾಸ್' ಮನೆ ಸದಸ್ಯರ ಜೊತೆ ಹುಚ್ಚ ವೆಂಕಟ್ ಮಾತು
ನಟಿ ಪೂಜಾ ಗಾಂಧಿ, ಭಾವನಾ ಬೆಳಗೆರೆ ಜೊತೆ ಹುಚ್ಚ ವೆಂಕಟ್ ಮಾತನಾಡುತ್ತಿರುವಾಗ 'ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ' ಟಾಪಿಕ್ ಕೂಡ ಬಂತು. ['ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಹೊಸ ಲವ್ ಸ್ಟೋರಿ.!]

ಎಲ್ಲವೂ ನಿಜ.!
''ರಮ್ಯಾ ಬಗ್ಗೆ ನಾನು ಹೇಳಿದ್ದೆಲ್ಲವೂ ನಿಜ. ನಾನು ಯಾಕೆ ಸುಳ್ಳು ಹೇಳ್ಬೇಕು'' - ಹುಚ್ಚ ವೆಂಕಟ್. [ನಾಯಕಿಯನ್ನೇ ಕಿಡ್ನಾಪ್ ಮಾಡ್ತವ್ನಂತೆ ಹುಚ್ಚ ವೆಂಕಟ!]

ರಮ್ಯಾಗಿಂತ ಸುಂದರ ಹುಡುಗೀರು ಇದ್ರು.!
''ರಮ್ಯಾಗಿಂತ ಎಷ್ಟೋ ಸ್ಟಾರ್ ಗಳು ನನಗೆ ಗೊತ್ತು. ಅವರಗಿಂತ ಸುಂದರ ಹುಡುಗೀರನ್ನ ನಾನು ನೋಡಿದ್ದೇನೆ'' - ಹುಚ್ಚ ವೆಂಕಟ್.

ರಮ್ಯಾನೇ ಹಿಂದೆ ಬಂದಿದ್ದು.!
''ರಮ್ಯಾಗಿಂತ ಸುಂದರ ಹುಡುಗೀರು ನನಗೆ ಗೊತ್ತು. ಹೀಗಿರುವಾಗ ನಾನು ಯಾಕೆ ಅವರ ಹಿಂದೆ ಹೋಗಲಿ. ಅವರೇ ನನ್ನ ಹಿಂದೆ ಬಂದಿದ್ದು. ನಾನು ಹೋಗಿಲ್ಲ.'' - ಹುಚ್ಚ ವೆಂಕಟ್.

ಪಬ್ಲಿಸಿಟಿಗಾಗಿ ಅಲ್ಲ.!
''ನನಗೆ ಪಬ್ಲಿಸಿಟಿ ಅವಶ್ಯಕತೆ ಇಲ್ಲ. ನಾನು ಹೇಳಿದ್ದೆಲ್ಲವೂ ನಿಜ. ಯಾವುದೂ ಪಬ್ಲಿಸಿಟಿಗಾಗಿ ಮಾಡ್ಲಿಲ್ಲ.'' - ಹುಚ್ಚ ವೆಂಕಟ್

ನನ್ನಿಂದ ಅವಳಿಗೆ ಹೆಸರು.!
''ಅವಳಿಂದ ನನಗೆ ಹೆಸರು ಅಲ್ಲ. ನನ್ನಿಂದ ಅವಳಿಗೆ ಹೆಸರು. Who is Ramya?'' ಅಂತ ಹುಚ್ಚ ವೆಂಕಟ್ ಪ್ರಶ್ನೆ ಮಾಡಿದರು.

ಸಿಟ್ಟಾದ ಪೂಜಾ ಗಾಂಧಿ
ಹುಚ್ಚ ವೆಂಕಟ್ ರವರ ಈ ಅಧಿಕಪ್ರಸಂಗದ ಮಾತುಗಳನ್ನು ಕೇಳಿ, ''ನಟಿ ರಮ್ಯಾ ನನ್ನ ಫ್ರೆಂಡ್. ಅವರ ಬಗ್ಗೆ ಮಾತನಾಡುವುದು ಸರಿಯಲ್ಲ'' ಅಂತ ಕೊಂಚ ಗರಂ ಆಗಿ ಪೂಜಾ ಗಾಂಧಿ ಎದ್ದು ಹೋದರು. [ವೆಂಕಟ್ ಹುಚ್ಚನ್ನು ಕೆರಳಿಸಿದ ಪೂಜಾಗಾಂಧಿ ಮಿನಿ ಸ್ಕರ್ಟ್!]

ಹುಚ್ಚ ವೆಂಕಟ್ ಹಿಂದೆ ಹುಡುಗೀರ ದಂಡು.!
''ನನ್ನ ಹಿಂದೆ ತುಂಬ ಜನ ಹುಡುಗೀರು ಬಿದ್ದಿದ್ದರು. ನನಗೆ ಭಯಂಕರ ಹುಡುಗೀರು ಫ್ಯಾನ್ಸ್. 18 ವರ್ಷ ಇರುವಾಗಲೇ ನಾನು ಪಾರ್ಟ್ ಟೈಮ್ ಕೆಲಸ ಶುರುಮಾಡಿದೆ. 300 ರೂಪಾಯಿ ಬರ್ತಿತ್ತು. ಅದರಲ್ಲಿ ನನ್ನ ತಾಯಿಗೆ 150 ರೂಪಾಯಿ ಕೊಡ್ತಿದ್ದೆ. ಉಳಿದಿದ್ದರಲ್ಲಿ ಹುಡುಗಿಯರಿಗಾಗಿ ಖರ್ಚು ಮಾಡ್ತಿದ್ದೆ.'' - ಹುಚ್ಚ ವೆಂಕಟ್

'ಬಿಗ್ ಬಾಸ್' ಜೊತೆ ಹುಚ್ಚ ವೆಂಕಟ್ ಮಾತು.!
''ಬಿಗ್ ಬಾಸ್' ಮನೆಯಲ್ಲಿ ನನ್ನ ಅನುಭವ ತುಂಬಾ ಚೆನ್ನಾಗಿದೆ. ಖುಷಿ ಇದೆ. ನಾನು ಕೋಪದಲ್ಲಿ ಎಷ್ಟೋ ಸಲಿ ಮಾತನಾಡಿದ್ದೀನಿ. I'm sorry. ಹೆಣ್ಮಕ್ಕಳಿಗೆ ತುಂಬಾ ಗೌರವ ಕೊಡುತ್ತೇನೆ. ಆ ವಿಷಯದಲ್ಲಿ ನಾನು ಬೆಂಕಿ.'' - ಹುಚ್ಚ ವೆಂಕಟ್

ಹೆಣ್ಮಕ್ಕಳು ಹುಡುಗರಾಗಬಾರದು.!
''ಹೆಣ್ಮಕ್ಕಳು ಹುಡುಗರಾಗಬಾರದು. ಸಿಗರೇಟ್, ಆಲ್ಕೋಹಾಲ್ ತಗೊಂಡ್ರೆ ಹೆಣ್ಮಕ್ಕಳು ಗರ್ಭಿಣಿ ಆಗಲ್ಲ. ಹೆಣ್ಮಕ್ಕಳು ಇಂತಹ ಕೆಟ್ಟ ಕೆಲಸ ಮಾಡುವುದು ತಪ್ಪು. ಅವರನ್ನ ತಿದ್ದಬೇಕು. ಸಂಸ್ಕೃತಿ ವಿರುದ್ಧ ಹೋಗುವುದಕ್ಕೆ ನನಗೆ ಇಷ್ಟವಿಲ್ಲ'' ಅಂತ 'ಬಿಗ್ ಬಾಸ್' ಜೊತೆ ಹುಚ್ಚ ವೆಂಕಟ್ ತಮ್ಮ ಮನದಾಳವನ್ನ ಹಂಚಿಕೊಂಡರು. [''ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ'' ಎಂದ ಹುಚ್ಚ ವೆಂಕಟ್.!]