»   » 'ಜೋಡಿ ನಂ.1' ಆದ ಅಯ್ಯಪ್ಪ-ಪೂಜಾ; ಕಿಟ್ಟಿಗೆ ಕಿರಿಕಿರಿ, ಗೌತಮಿಗೆ ಪಿರಿಪಿರಿ!

'ಜೋಡಿ ನಂ.1' ಆದ ಅಯ್ಯಪ್ಪ-ಪೂಜಾ; ಕಿಟ್ಟಿಗೆ ಕಿರಿಕಿರಿ, ಗೌತಮಿಗೆ ಪಿರಿಪಿರಿ!

Posted By:
Subscribe to Filmibeat Kannada

''ಏನಿಲ್ಲಾ...ಏನಿಲ್ಲಾ...ನಮ್ಮಿಬ್ಬರ ನಡುವೆ ಏನಿಲ್ಲಾ'' ಅಂತ ಆಗಾಗ 'ಬಿಗ್ ಬಾಸ್' ಮನೆ ಸದಸ್ಯರಿಗೆ ಒತ್ತಿ ಒತ್ತಿ ಹೇಳಿದರೂ ಅಯ್ಯಪ್ಪ ಮತ್ತು ಪೂಜಾ ಗಾಂಧಿ ನಡುವೆ ಫ್ಲರ್ಟಿಂಗ್ ಮಾತ್ರ ಕಮ್ಮಿ ಆಗಿಲ್ಲ.

ನಿನ್ನೆ 'ಬಿಗ್ ಬಾಸ್' ನೀಡಿದ್ದ ಮೇಜಿನ ಮೇಲೆ ನಿಲ್ಲುವ ಟಾಸ್ಕ್ ನಲ್ಲಿ ಜೋಡಿಯಾಗಿ ಪರ್ಫಾಮ್ ಮಾಡಿದ್ದ ಅಯ್ಯಪ್ಪ ಮತ್ತು ಪೂಜಾ ಗಾಂಧಿ ಜೋಡಿ ರಾತ್ರಿ ಇಡೀ ಮಾತನಾಡಿಕೊಂಡೇ ಕಾಲ ಕಳೆದರು.

ಮಾನಸಿಕ ಹಾಗು ದೈಹಿಕ ಸಾಮರ್ಥ್ಯ ಪರೀಕ್ಷಿಸುವ ಸಲುವಾಗಿ ಬೆಳಗ್ಗೆ ಮೇಜಿನ ಮೇಲೆ ಮೊಣಕಾಲಿನ ಮೇಲೆ ನಿಲ್ಲುವ ಟಾಸ್ಕ್ ನೀಡಲಾಯ್ತು. ಅದರಲ್ಲಿ ಜಯಗಳಿಸಿ ಪೂಜಾ ಗಾಂಧಿ ಮತ್ತು ಅಯ್ಯಪ್ಪ 'ಜೋಡಿ ನಂಬರ್ 1' ಪಟ್ಟ ಪಡೆದರು. ['ಬಿಗ್ ಬಾಸ್'ಗೆ ಸುನಾಮಿ ಕಿಟ್ಟಿ ಇಟ್ಟ ಬೇಡಿಕೆ ಏನು?]

ಇಡೀ ರಾತ್ರಿ ಸುನಾಮಿ ಕಿಟ್ಟಿ ಮತ್ತು ಚಂದನ್ ಕೂಡ ಇದೇ ಟಾಸ್ಕ್ ನಲ್ಲಿ ಗೆಲುವು ಸಾಧಿಸಲು ಬೆವರಿಳಿಸಿದ್ದರು. ಆದರೆ, ಮೊಣಕಾಲಿನ ಮೇಲೆ ನಿಲ್ಲುವ ಟಾಸ್ಕ್ ಬಂದಾಗ ಚಂದನ್ ಕಾಲ್ಕಿತ್ತಿದ್ದಕ್ಕೆ ಸುನಾಮಿ ಕಿಟ್ಟಿ ಬೇಸರ ವ್ಯಕ್ತಪಡಿಸಿದರು.

ಇನ್ನೂ ಇಡೀ ರಾತ್ರಿ ಪೂಜಾ ಗಾಂಧಿ ಮತ್ತು ಅಯ್ಯಪ್ಪ ಅಂಟಿಕೊಂಡು ನಿಂತಿದ್ದಕ್ಕೆ ಗೌತಮಿ ಉರ್ಕೊಂಡಿದ್ದರು. 'ಬಿಗ್ ಬಾಸ್' ಮನೆಯಲ್ಲಿ 79ನೇ ದಿನ ಏನೇನೆಲ್ಲಾ ಆಯ್ತು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.......

'ಜೋಡಿ ನಂಬರ್ 1' ಆದ ಅಯ್ಯಪ್ಪ-ಪೂಜಾ ಗಾಂಧಿ

ಮೇಜಿನ ಮೇಲೆ ನಿಲ್ಲುವ ಟಾಸ್ಕ್ ನಲ್ಲಿ ಅತಿ ಹೆಚ್ಚು ಕಾಲ ನಿಂತಿದ್ದ ಅಯ್ಯಪ್ಪ ಮತ್ತು ಪೂಜಾ ಗಾಂಧಿ 'ಜೋಡಿ ನಂಬರ್ 1' ಪಟ್ಟ ಪಡೆದರು.

ಕಿಟ್ಟಿ ಪ್ರತಿಕ್ರಿಯೆ ಹೇಗಿತ್ತು?

ಮೊಣಕಾಲಿನ ಮೇಲೆ ನಿಲ್ಲಲು ಕಷ್ಟವಾದಾಗ ಚಂದನ್ ಸೋಲೊಪ್ಪಿಕೊಂಡಿದ್ದಕ್ಕೆ ಕಿಟ್ಟಿ ಬೇಸರ ವ್ಯಕ್ತಪಡಿಸಿದರು. ''ಹೋಗೋಲೇ....ಹೋಗಿ ಮಣ್ಣು ತಿನ್ನು. ಯಾವ ಎಫರ್ಟ್ ನಿಂದು. ಕಿತ್ತೋಗಿರೋ ಎಫರ್ಟ್. ಒಂದು ಹುಡುಗಿ ಹಾಕಿರುವ ಎಫರ್ಟ್ ನ ಹಾಕೋಕೆ ಆಗಲ್ವಾ. ಪೂಜಾ ಅಷ್ಟು? ಹುಡುಗ ಆಗಿ'' ಅಂತ ಕಿಟ್ಟಿ ಚಂದನ್ ವಿರುದ್ಧ ಸಿಡಿಮಿಡಿಗೊಂಡರು.

ಚಂದನ್ ಹೇಳಿದ್ದೇನು?

''ಹಾಕಿರುವ ಎಫರ್ಟ್ ಗೆ ಒಂದು ಬೆಲೆ ಬೇಡ್ವಾ? ಈ ತರಹ ಮಾತನಾಡಬೇಡ ಕಿಟ್ಟಿ'' - ಚಂದನ್

ಫುಲ್ ಖುಷ್ ಆದ ಅಯ್ಯಪ್ಪ

''I did it. Pooja we did it. You are amazing. You are a warrior. This is my first victory in Bigg Boss 2016'' - ಅಯ್ಯಪ್ಪ

ಪೂಜಾ ಗಾಂಧಿ ರಿಯಾಕ್ಷನ್

''ನಿಮ್ಮಿಂದ ಇದು ಸಾಧ್ಯ ಆಗಿದ್ದು. ಇಲ್ಲಾಂದ್ರೆ ಆಗ್ತಿರ್ಲಿಲ್ಲ'' ಅಂತ ಎಲ್ಲಾ ಕ್ರೆಡಿಟ್ ನ ಅಯ್ಯಪ್ಪಗೆ ಸಲ್ಲಿಸಿದರು ಪೂಜಾ ಗಾಂಧಿ.

ಬೆಸ್ಟ್ ಜೋಡಿಗೆ ವಿಶೇಷ ಬಹುಮಾನ

ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ ಪೂಜಾ ಗಾಂಧಿ ಮತ್ತು ಅಯ್ಯಪ್ಪಗೆ 'ಬಿಗ್ ಬಾಸ್' 500 ಪ್ರತ್ಯೇಕ luxury ಪಾಯಿಂಟ್ಸ್ ನೀಡಿದರು.

ಕಿಟ್ಟಿಗೆ ಕಿರಿಕಿರಿ!

''ಅವರಿಗೆಲ್ಲಾ ಕಂಪೇರ್ ಮಾಡಿದ್ರೆ ಏನು ಎಫರ್ಟ್ ಹಾಕಿಲ್ಲ. ನನ್ನ ಕತ್ತೆಲ್ಲಾ ನೋವಾಗಿತ್ತು. ಹೀಗಿದ್ದರೂ, ನನ್ನನ್ನೇ ಹಿಡ್ಕೊಳ್ಳೋ ಅಂತ ಎಷ್ಟು ಹೇಳಿದ್ರೂ ಕೇಳ್ಲಿಲ್ಲ. ಬಿಟ್ಬಿಟ್ಟ ಚಂದನ್. ಟ್ರೈ ಮಾಡ್ಬೇಕು ಅಲ್ವಾ. ನಾನಿನ್ನೂ ನಿನ್ನ ಬಗ್ಗೆ ಎಕ್ಸ್ ಪೆಕ್ಟ್ ಮಾಡಿದ್ದೆ'' - ಕಿಟ್ಟಿ

ಕ್ಷಮೆ ಕೇಳಿದ ಚಂದನ್

''ಬಿಡಪ್ಪಾ ಹೋಗಲಿ, ತಪ್ಪಾಯ್ತು. ಮ್ಯಾಕ್ಸಿಮಂ ರೀಚ್ ಆಗಿದ್ದೆ. ಪೇನ್ ಜಾಸ್ತಿ ಆಯ್ತು. ಸಾರಿ ಚಿನ್ನ'' - ಚಂದನ್

ದಡ್ಡ ಯಾರು?

''ಸಾರಿ ಯಾಕೆ ಕೇಳ್ತೀಯಾ. ನಾನು ಹೇಳ್ತಾಯಿರೋದು ಅಷ್ಟೆ. ಎಲ್ಲರಿಗೂ ಬುದ್ದಿವಾದ ಹೇಳ್ತೀಯಾ. ನೀನೇ ದಡ್ಡ ತರಹ ಮಾಡಿಕೊಳ್ತೀಯಾ'' - ಕಿಟ್ಟಿ

ಪೂಜಾ ಗಾಂಧಿಗೆ ಇದ್ದ ಕಿಚ್ಚು!

''ಅವನು ಒಂದು ಮಾತು ಹೇಳಿದ್ದ ನನ್ನ ಬಗ್ಗೆ. ಪೂಜಾ ಗಾಂಧಿ ಈ ಶೋನಲ್ಲಿ ಅಯ್ಯಪ್ಪ ಇಲ್ಲದೆ ಏನೂ ಮಾಡೋಕೆ ಆಗಲ್ಲ ಅಂತ. ಇವತ್ತು ನಾನು ಅಯ್ಯಪ್ಪ ಜೊತೆ ನಿಂತುಕೊಂಡು ಪ್ರೂವ್ ಮಾಡಿದ್ದೀನಿ. ನೋ ಪ್ರಾಬ್ಲಂ'' - ಪೂಜಾ ಗಾಂಧಿ

ಚಂದನ್ ಮಾಡಿದ ಕಾಮೆಂಟ್ ಏನು?

''ಅವನು ಮತ್ತೆ ಕಾಮೆಂಟ್ ಮಾಡ್ದ. ನಾನು ಕಮ್ಫರ್ಟ್ ಝೋನ್ ನಲ್ಲಿ ಇದ್ದೀನಿ ಅಂತ. ಅದಕ್ಕೆ ತೋರಿಸ್ತೀನಿ ಅಂತ ಏನೇ ಆದರೂ ಬಿಡಲಿಲ್ಲ. ತುಂಬಾ ಸರಿ ಕಾಮೆಂಟ್ ಮಾಡ್ದ. ಅದಕ್ಕೆ ನಾನು ಕಿರುಚಿದ್ದು. ಏನೇ ಆದರೂ ಬಿಡಬಾರದು ಅಂತ'' - ಪೂಜಾ ಗಾಂಧಿ

ಅಯ್ಯಪ್ಪ ಏನ್ ಹೇಳ್ತಾರೆ ಗೊತ್ತಾ?

''ಮಾತಾಡಬಾರದು. ಕೊಡಬೇಕು ಹೀಗೆ. ಅವನಿಗೆ ಮಾತಾಡೋಕೆ ಮುಖ ಇಲ್ಲ ಇಲ್ಲಿ'' - ಅಯ್ಯಪ್ಪ

ಗೌತಮಿಗೆ ಪಿರಿಪಿರಿ!

ಅಯ್ಯಪ್ಪ ಮತ್ತು ಪೂಜಾ ಗಾಂಧಿ ರಾತ್ರಿ ಇಡೀ ಅಂಟಿಕೊಂಡು ನಿಂತಿದ್ದಕ್ಕೆ ಗೌತಮಿ ಉರ್ಕೊಂಡಿದ್ರು. ಈ ಬಗ್ಗೆ ಅಯ್ಯಪ್ಪ ಮತ್ತು ಗೌತಮಿ ಗುಸುಗುಸು ಅಂತ ಚರ್ಚೆ ಮಾಡುತ್ತಿದ್ದರು.

10,000 luxury budget

'ಕೀಲಿ ಯಾರ ಕೈಲಿ' ಟಾಸ್ಕ್ ಕಂಪ್ಲೀಟ್ ಮಾಡಿದ 'ಬಿಗ್ ಬಾಸ್' ಮನೆ ಸದಸ್ಯರಿಗೆ 10,000 luxury budget ಪಾಯಿಂಟ್ಸ್ ಲಭಿಸ್ತು.

English summary
Kannada Actress Pooja Gandhi and Aiyappa won 'Jodi No.1' task. Read the article to know what all happened on Day 79 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada