»   » ಹುಚ್ಚ ವೆಂಕಟ್ ವಿರುದ್ಧ ಕಿಡಿಕಾರಿದ ನಟ ಚಂದನ್

ಹುಚ್ಚ ವೆಂಕಟ್ ವಿರುದ್ಧ ಕಿಡಿಕಾರಿದ ನಟ ಚಂದನ್

Posted By:
Subscribe to Filmibeat Kannada

ಗೊತ್ತಿದ್ದೂ ಮಾತನಾಡುತ್ತಾರೋ, ಗೊತ್ತಿಲ್ಲದೇ ಹಾಗೆ ಬಡಬಡಿಸುತ್ತಾರೋ ಗೊತ್ತಿಲ್ಲ. ಒಟ್ನಲ್ಲಿ ಹುಚ್ಚ ವೆಂಕಟ್ ಒಮ್ಮೊಮ್ಮೆ ಆಡುವ ಮಾತುಗಳು ಕೆಲವರಿಗೆ ಕಿರಿಕಿರಿ ತರುವುದಂತೂ ನಿಜ. ಹುಚ್ಚ ವೆಂಕಟ್ ಆಡಿದ ಮಾತುಗಳಿಂದ ನಟ ಚಂದನ್ ಕೂಡ 'ಬಿಗ್ ಬಾಸ್' ಮನೆಯಲ್ಲಿ ಗರಂ ಆಗ್ಬಿಟ್ಟರು.

'ಬಿಗ್ ಬಾಸ್' ಕೊಡುತ್ತಿರುವ ಟಾಸ್ಕ್ ನಲ್ಲಿ ಸರಿಯಾಗಿ ಭಾಗಿಯಾಗುತ್ತಿಲ್ಲ ಅಂತ ಮೊನ್ನೆ ಗಾಯಕ ರವಿ, ಹುಚ್ಚ ವೆಂಕಟ್ ಗೆ ಬೆಂಡೆತ್ತಿ ಬ್ರೇಕ್ ಹಾಕಿದ್ದರು. ಈಗ ನಟ ಚಂದನ್ ಸರದಿ. ['ಹುಚ್ಚ ವೆಂಕಟ್'ಗೆ ಬೆಂಡೆತ್ತಿ ಬ್ರೇಕ್ ಹಾಕಿದ ರವಿ ಮುರೂರು]

''ಕನ್ನಡ ಚಿತ್ರರಂಗದ ಹೀರೋಗಳು ಹೇಡಿಗಳು'' ಅಂತ ಹುಚ್ಚ ವೆಂಕಟ್ ಹೇಳಿದಕ್ಕೆ ಕಣ್ಣು ಕೆಂಪಗೆ ಮಾಡಿಕೊಂಡ ಚಂದನ್, ತಮ್ಮ ಮಾತಲ್ಲೇ ಹುಚ್ಚ ವೆಂಕಟ್ ಗೆ ಬಿಸಿ ಮುಟ್ಟಿಸಿದರು.

ಬರೀ ಚಂದನ್ ಮಾತ್ರ ಅಲ್ಲ, ಆರ್.ಜೆ.ನೇತ್ರ ಕೂಡ ಹುಚ್ಚ ವೆಂಕಟ್ ಜೊತೆ ವಾಗ್ವಾದಕ್ಕೆ ಇಳಿದರು. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ನಿನ್ನೆ ಆದ ಗದ್ದಲದ ಸಂಪೂರ್ಣ ವಿವರ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

'ಬಿಗ್ ಬಾಸ್' ನೀಡಿದ ಟಾಸ್ಕ್ ಏನು?

ಜೀವನದಲ್ಲಿ ತಾವು ತೆಗೆದುಕೊಂಡ ಆತುರದ ನಿರ್ಧಾರದ ಬಗ್ಗೆ ಪ್ರತಿಯೊಬ್ಬರೂ ಮನೆ ಸದಸ್ಯರ ಜೊತೆ ಹಂಚಿಕೊಳ್ಳುವ ಟಾಸ್ಕ್ ನೀಡಿದ್ದರು 'ಬಿಗ್ ಬಾಸ್'.

ಹುಚ್ಚ ವೆಂಕಟ್ ಹೇಳಿದ್ದೇನು?

''ಹುಚ್ಚ ವೆಂಕಟ್' ಸಿನಿಮಾ ರಿಲೀಸ್ ಆದಾಗ ನಾನು ಕನ್ನಡಿಗರಿಗೆ ಬೈದೆ. ಸಿನಿಮಾನ ಯಾರೂ ನೋಡ್ಲಿಲ್ಲ ಅಂತ ಬೇಜಾರಾಗಿ ಬೈದೆ. ಆಗ ಕನ್ನಡಿಗರು ನನಗೆ ಫೋನ್ ಮಾಡಿ ಮಾತನಾಡಿದರು. ನಾನು ರೋಡ್ ನಲ್ಲಿ ಹೋಗೋವಾಗ ಕೆಲವರು ಫೋಟೋ ಹಿಡಿಸಿಕೊಂಡರು. ಆತುರದಲ್ಲಿ ನಾನು ಬೈದೆ. ಹೀಗಾಗಿ ಕ್ಷಮೆ ಕೇಳುತ್ತೀನಿ'' ಅಂತ ಹುಚ್ಚ ವೆಂಕಟ್ ಹೇಳಿದರು.

ಇಷ್ಟೇ ಆಗಿದ್ರೆ ಪರ್ವಾಗಿಲ್ಲ.!

ಕನ್ನಡಿಗರಿಗೆ ಕ್ಷಮೆ ಕೇಳುವ ಭರದಲ್ಲಿ ಹುಚ್ಚ ವೆಂಕಟ್, ''ಬೇರೆ ಹೀರೋಗಳೆಲ್ಲಾ ಹೇಡಿಗಳು'' ಅಂತ ಹೇಳಿಬಿಟ್ಟರು. ಜೊತೆಗೆ ಅವಾಚ್ಯ ಶಬ್ದವನ್ನೂ ಉಪಯೋಗಿಸಿದರು. ಇದರಿಂದ ನಟ ಚಂದನ್ ಸಿಡಿಮಿಡಿ ಗೊಂಡರು.

ಹುಚ್ಚ ವೆಂಕಟ್ ಗೆ ಬೆಂಡೆತ್ತಿದ್ದ ಚಂದನ್

''ಕನ್ನಡ ಚಿತ್ರರಂಗದಲ್ಲಿ ಎಲ್ಲಾ ದೊಡ್ಡೋರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನೀವೊಬ್ಬರೇ ಇಲ್ಲ. ಎಲ್ಲರಿಗೂ ಮರ್ಯಾದೆ ಕೊಡೋದು ಕಲೀರಿ. ಹೇಡಿಗಳು ಮತ್ತು ಅವಾಚ್ಯ ಶಬ್ದಗಳನ್ನ ಉಪಯೋಗಿಸಬೇಡಿ'' ಅಂತ ಏರುದನಿಯಲ್ಲಿ ಚಂದನ್ ಹುಚ್ಚ ವೆಂಕಟ್ ಗೆ ಬಿಸಿ ಮುಟ್ಟಿಸಿದರು.

ಪುಟ್ಗೋಸಿ ಹೀರೋ ಯಾರು?

ಟಾಸ್ಕ್ ಮುಗಿದ ಬಳಿಕ ಹುಚ್ಚ ವೆಂಕಟ್ ಸುಮ್ನೆ ಕೂರ್ಲಿಲ್ಲ.! ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದಾಗ, ಕೆರಳಿದ ನಟ ಚಂದನ್, ''ನನಗೆ ಕನ್ನಡ ಮಾತನಾಡುವುದಕ್ಕೂ ಬರುತ್ತೆ. ಸಂಸ್ಕೃತನೂ ಬರುತ್ತೆ. ಯಾವಾಗ್ಲೂ ತಮಾಷೆ ಮಾಡಿಕೊಂಡು ಇರ್ತೀನಿ. ಜಗಳ ಮಾಡಿಕೊಳ್ಳುವ ಹಾಗೆ ಮಾಡ್ಬೇಡಿ. ನಾನು ನಿಮ್ಮ ಮೇಲೆ ಯಾವತ್ತೂ ಕೆಟ್ಟ ಪದ ಪ್ರಯೋಗ ಮಾಡಿಲ್ಲ. ಹಾಗೆ ಮಾಡೋ ಹಾಗೆ ಮಾಡ್ಬೇಡಿ.'' ಅಂದರು.

ನಟಿ ಶ್ರುತಿ ಬುದ್ಧಿ ಮಾತು.!

ಹುಚ್ಚ ವೆಂಕಟ್ ಮತ್ತು ಚಂದನ್ ನಡುವೆ ಗಲಾಟೆ ತಾರಕಕ್ಕೆ ಏರದ ಹಾಗೆ, ಮಧ್ಯೆ ಬಂದು ನಟಿ ಶ್ರುತಿ ಪರಿಸ್ಥಿತಿಯನ್ನ ತಿಳಿಗೊಳಿಸಿದರು. ಜೊತೆಗೆ ಹೀಗೆ ಗಲಾಟೆ ಮಾಡಿಕೊಳ್ಳುವುದು ಬೇಡ. ಜನರೇ ನಿರ್ಧಾರ ಮಾಡಲಿ ಅಂತ ನಟ ಚಂದನ್ ಗೆ ಬುದ್ಧಿ ಮಾತು ಹೇಳಿದರು.

ಊಟ ವಿಷಯಕ್ಕೆ ಹುಚ್ಚ ವೆಂಕಟ್ ರಗಳೆ

ಮೊನ್ನೆ ಗಾಯಕ ರವಿ ಜೊತೆ ಆದ ಗಲಾಟೆಯನ್ನೇ ಮತ್ತೆ ಎಳೆದು ಹುಚ್ಚ ವೆಂಕಟ್ ಆರ್.ಜೆ.ನೇತ್ರ ಜೊತೆ ಮಾತಿಗಿಳಿದರು. ''ಎಲ್ಲಾ ಅಡುಗೆ ಸಾಮಾನನ್ನು ಬಿಗ್ ಬಾಸ್ ಕಳುಹಿಸುತ್ತಾರೆ. ಕೊಡುವುದು ಯಾರೋ, ಅದನ್ನ ಬಡಿಸುವುದಕ್ಕೆ ಕನ್ಜ್ಯೂಸ್ ತನ ಯಾಕೆ'' ಅಂತ ಹುಚ್ಚ ವೆಂಕಟ್ ಕೇಳಿದರು.

ಶ್ರಮಕ್ಕೆ ಬೆಲೆನೇ ಇಲ್ಲ.!

''ಮಧ್ಯರಾತ್ರಿ ಟೀ ಕೇಳಿದಾಗಲೂ, ನಾವೆಲ್ಲಾ ಮಾಡಿಕೊಟ್ಟಿದ್ದೀವಿ. ಕನ್ಜ್ಯೂಸ್ ಅಂತ ಹೇಳುವುದು ಯಾಕೆ. ನಿಮಗಾಗಿ ನಾವು ತಿನ್ನದೆ ಚಪಾತಿಯನ್ನ ಎತ್ತಿ ಇಟ್ಟಿದ್ದೀವಿ. ಎಲ್ಲಾ ಸಾಮಾನನ್ನ ಬಿಗ್ ಬಾಸ್ ಕಳುಹಿಸುತ್ತಾರೆ ನಿಜ. ಆದ್ರೆ, ಅಡುಗೆ ಮಾಡುವುದಕ್ಕೆ ಶ್ರಮ ಬೇಡ್ವಾ? ಹೀಗೆಲ್ಲಾ ಮಾತಾಡಬೇಡಿ'' ಅಂತ ಆರ್.ಜೆ.ನೇತ್ರ ಕೂಡ ಹುಚ್ಚ ವೆಂಕಟ್ ವಿರುದ್ಧ ತಿರುಗಿ ಬಿದ್ದರು.

English summary
Kannada Actor Chandan had an argument with Huccha Venkat over using abusive language for Kannada Stars in Bigg Boss house. Read the article to know what all happened on Day 9 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada