For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಯಲ್ಲಿ ವೆಂಕಟ್ ದಬ್ಬಾಳಿಕೆ, ಕಣ್ಣೀರಿಟ್ಟ ರೆಹಮಾನ್!

  By Suneetha
  |

  ಕನ್ನಡದ ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರಿಗೆ ಬಿಗ್ ಬಾಸ್ ಲಕ್ಸುರಿ ಟಾಸ್ಕ್ ನೀಡಿದ್ದರು. ಆದರೆ ವಿಪರ್ಯಾಸ ಏನಪ್ಪಾ ಅಂದರೆ ಈ ಟಾಸ್ಕ್ ನಿಂದ ಮನೆಯ ಸದಸ್ಯರು ಖುಷಿ ಪಡೋ ಬದಲು ಕೆಲವರು ಕಣ್ಣೀರು ಹಾಕಿದ್ದೇ ಹೆಚ್ಚು.

  ಆಳು - ಅರಸ ಅನ್ನೋ ಲಕ್ಸುರಿ ಟಾಸ್ಕ್ ನಲ್ಲಿ ಜಮೀನ್ದಾರರು-ಗುಲಾಮರು ಅಂತ ವಿಭಿನ್ನವಾಗಿ ವಿಂಗಡನೆ ಮಾಡಲಾಗಿತ್ತು. ಆದರೆ ಇಲ್ಲಿ ಯಜಮಾನರ ದಬ್ಬಾಳಿಕೆ ಜೋರಾಗಿಯೇ ನಡೆದಿದ್ದು, ಇವರ ದಬ್ಬಾಳಿಕೆ ತಡೆಯಲು ಆಗದೆ, ಮರು ಮಾತಾಡಲಾಗದೆ ಕಣ್ಣೀರಿಟ್ಟರು.['ಬಿಗ್ ಬಾಸ್' ವೇದಿಕೆಯಲ್ಲಿ ದಿಗಂತ್-ಐಂದ್ರಿತಾ 'ಶಾರ್ಪ್ ಶೂಟರ್']

  ಕ್ಯಾಪ್ಟನ್ ಆನಂದ್ ಅವರು ಬಹಳ ಕಷ್ಟಕರವಾದ ಟಾಸ್ಕ್ ಗಳನ್ನು ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ನೀಡಿದ್ದು, ಇದರಿಂದ ಮಾಸ್ಟರ್ ಆನಂದ್ ಅವರು ನಟ ಚಂದನ್ ಅವರ ಕೆಂಗಣ್ಣಿಗೆ ಗುರಿಯಾದರು.

  ಚೆನ್ನಪ್ಪ-ಮಲ್ಲಪ್ಪ ಆಗಿ ನಟ ಚಂದನ್ ಹಾಗೂ ಕೃತಿಕಾ ಸುನಾಮಿ ಕಿಟ್ಟಿಯ ಗುಲಾಮರಾಗಿದ್ದು, ಕಿಟ್ಟಿ ಹೇಳಿದಂತೆ ಅವರ ಸೇವೆ ಮಾಡಿದರು. ಕೃತಿಕಾ ಅವರಿಂದ ಡ್ಯಾನ್ಸ್ ಮಾಡಿಸಿದರು. ಜೊತೆಗೆ ತಲೆಗೆ ಮಸಾಜ್ ಮಾಡಿಸಿಕೊಂಡರು. ಅಲ್ಲದೇ ಅರಸ ಸುನಾಮಿ ಕಿಟ್ಟಿ ಹೇಳಿದಂತೆ ಕೃತಿಕಾ ಅವರು ಚಂದನ್ ಅವರಿಗೆ ಹುಡುಗಿಯರಂತೆ ಹಣೆಗೆ ಬೊಟ್ಟು ಇಟ್ಟು, ತುಟಿಗೆ ಲಿಪ್ ಸ್ಟಿಕ್ ಹಚ್ಚಿದರು. ಜೊತೆಗೆ ಚಂದನ್ ಅವರನ್ನು ಕಿಟ್ಟಿ ಮಗುವಿನಂತೆ ಅಂಬೆಗಾಲಿಕ್ಕಿ ನಡೆಸಿದರು.[ಟಿವಿ9 ರೆಹಮಾನ್ ಗೆ, ಕಿಚ್ಚ ಸುದೀಪ್ ಕೇಳಿದ್ದೇನು?]

  ಇನ್ನು ಸುನಾಮಿ ಕಿಟ್ಟಿಯ ದರ್ಬಾರ್ ತಾಳಲಾರದೇ ನಟ ಚಂದನ್ ಅವರು ರೊಚ್ಚಿಗೆದ್ದು. ಕ್ಯಾಪ್ಟನ್ ಮಾಸ್ಟರ್ ಆನಂದ್ ಅವರನ್ನು ತರಾಟೆಗೆ ತೆಗೆದುಕೊಂಡರು. 'ನಾನಿಲ್ಲಿ ಕಾಮಿಡಿ ಪೀಸ್ ಆಗಲು ಬಂದಿಲ್ಲ'. ಎಂದು ಅದೇ ವಿಷಯವನ್ನು ದೊಡ್ಡದಾಗಿಸಿ ಅಡುಗೆ ಮನೆಯಲ್ಲಿ, 'ನನ್ನನ್ನೇ ಟಾರ್ಗೆಟ್ ಮಾಡ್ತಾರೆ' ಎಂದು ಕಿಟ್ಟಿ ಅವರನ್ನು ದೂರಿದರು. ಇದಕ್ಕೆ ಮಾಸ್ಟರ್ ಆನಂದ್ ಅವರು ಸಮಾಧಾನ ಮಾಡಿ ಇದು ಟಾಸ್ಕ್ ನೀವು ಮಾಡಲೇಬೇಕು ಎಂದು ಮಧ್ಯ ಬಂದು ಸುಮ್ಮನಾಗಿಸಿದರು.[ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಜಯಶ್ರೀ: ಫೇಸ್ ಬುಕ್ಕಿನಲ್ಲಿ ಮಿಶ್ರ ರಂಗು!]

  ಅದಕ್ಕೆ ಚಂದನ್ ಅವರು ಮತ್ತೆ ಚುಚ್ಚಿಕೊಂಡು ಸಾಯಿ ಎಂದರೂ ನಾವು ಸಾಯಬೇಕಾ ಎಂದು ಮತ್ತೆ ಪ್ರಶ್ನೆ ಮಾಡಿದರು. ಈ ನಡುವೆ ನಟಿ ಶ್ರುತಿ ಹಾಗೂ ಕೃತಿಕಾ ಅವರು ಮಧ್ಯದಲ್ಲಿ ಎಂಟ್ರಿ ಪಡೆದು ಚಂದನ್ ಅವರನ್ನು ಸಮಾಧಾನ ಮಾಡಿದರು.

  ಇನ್ನೊಂದೆಡೆ ಡೈಲಾಗ್ ರಾಜ ಹುಚ್ಚ ವೆಂಕಟ್ ಅವರ ಕೈಕೆಳಗೆ ಗುಲಾಮರಾಗಿದ್ದ ಅಯ್ಯಪ್ಪ ಮತ್ತು ರೆಹಮಾನ್ ಪಾಡು ಘೋರವಾಗಿತ್ತು. ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..

  ಹೇಳ್ದಂಗೆ ಮಾಡ್ಬೇಕ್ ಅಂದ ಹುಚ್ಚ ವೆಂಕಟ್!

  ಹೇಳ್ದಂಗೆ ಮಾಡ್ಬೇಕ್ ಅಂದ ಹುಚ್ಚ ವೆಂಕಟ್!

  ಅರಸನಾದ ಹುಚ್ಚ ವೆಂಕಟ್ ಕೈಕೆಳಗೆ ಗುಲಾಮರಾಗಿದ್ದ ಅಯ್ಯಪ್ಪ ಅವರಿಗೆ 10 ಬಸ್ಕಿ ಹಾಗೂ ರೆಹಮಾನ್ ಗೆ 20 ಬಸ್ಕಿ ಹೊಡೆಸಿದರು. ನೀವು ಗುಲಾಮರು ಸೇವೆ ಮಾಡ್ಬೇಕ್, ನಾನು ಹೇಳಿದ್ದನ್ನ ನೀವು ಕೇಳ್ಬೇಕ್, ನೀವೇನು ನನಗೆ ಸಲಹೆ ಕೋಡೋದು. ಕೋಪ ಬಂದರೆ ನಾನು ರಾಕ್ಷಸನೇ, ಅಂತ ಅಯ್ಯಪ್ಪ ಹಾಗೂ ರೆಹಮಾನ್ ಮೇಲೆ ದಬ್ಬಾಳಿಕೆ ನಡೆಸಿದರು. ನನ್ನ ಎಕ್ಕಡ ಸೈಜ್ ಎಷ್ಟು ಅಂತ ಹೇಳು ಎಂದಾಗ ರೆಹಮಾನ್ ಒಂದು ಎಂದರು. ಜೊತೆಗೆ ಮೋದಿ ಬಗ್ಗೆ ಗೊತ್ತಿಲ್ಲ ಅಂದ ರೆಹಮಾನ್ ಅವರನ್ನು ಮಳೆಯಲ್ಲೂ ನೆನೆಸಿದರು. ಅಯ್ಯಪ್ಪ ಅವರನ್ನು ಒಂಟಿ ಕಾಲಿನಲ್ಲಿ ನಿಲ್ಲಿಸಿದರು. ಒಟ್ನಲ್ಲಿ ಹುಚ್ಚ ವೆಂಕಟ್ ನ ಹುಚ್ಚು ದರ್ಬಾರ್ ನೋಡಿ ಟಿವಿ9 ರೆಹಮಾನ್ ಗೋಳೋ ಎಂದು ಅತ್ತರು.

  ಶ್ರುತಿಗೆ ಆಲೂಗೆಡ್ಡೆ ಪಲ್ಯ ಮಾಡುವುದನ್ನು ಹೇಳಿಕೊಟ್ಟ ಹುಚ್ಚ ವೆಂಕಟ್

  ಶ್ರುತಿಗೆ ಆಲೂಗೆಡ್ಡೆ ಪಲ್ಯ ಮಾಡುವುದನ್ನು ಹೇಳಿಕೊಟ್ಟ ಹುಚ್ಚ ವೆಂಕಟ್

  ಸೇವಕಿಯಾಗಿದ್ದ ನಟಿ ಶ್ರುತಿ ಅವರಿಗೆ ಅರಸನಾದ ಹುಚ್ಚ ವೆಂಕಟ್ ಅವರು ಆಲೂಗೆಡ್ಡೆ ಪಲ್ಯ ಹೇಗೆ ಮಾಡೋದು ಅಂತ ತಿಳಿಸಿದರು. ಒಟ್ನಲ್ಲಿ ಈ ವಿಭಿನ್ನ ಟಾಸ್ಕ್ ಮೂಲಕ ಹುಚ್ಚ ವೆಂಕಟ್ ಸೇಡು ತೀರಿಸಿಕೊಂಡ್ರಾ, ಅಂತ ವೀಕ್ಷಕರಿಗೆ ಅನುಮಾನ ಕಾಡುತ್ತದೆ.

  ಪೂಜಾ ಗಾಂಧಿ ಸೇವೆ ಮಾಡಿದ ಶ್ರುತಿ

  ಪೂಜಾ ಗಾಂಧಿ ಸೇವೆ ಮಾಡಿದ ಶ್ರುತಿ

  ನಟಿ ಪೂಜಾ ಗಾಂಧಿಯ ಸೇವೆ ಮಾಡಿದ ನಟಿ ಶ್ರುತಿ ಅವರು ಪೂಜಾ ಅವರ ಚಪ್ಪಲಿಯನ್ನು ಕ್ಲೀನ್ ಮಾಡಿದರು. ಜೊತೆಗೆ ಪೂಜ ಅವರು ಶ್ರುತಿ ಅವರ ಕೈಯಿಂದ ಅಲಂಕಾರ ಮಾಡಿಸಿಕೊಂಡರು.

  ಪೂಜಾ ಗಾಂಧಿ ಸೇವಕಿಯಾದ ನೇಹಾ ಗೌಡ

  ಪೂಜಾ ಗಾಂಧಿ ಸೇವಕಿಯಾದ ನೇಹಾ ಗೌಡ

  ರವಿ ಮುರೂರು ಹಾಗೂ ನೇಹಾ ಗೌಡ ಅವರು ರಾಣಿ ಪೂಜಾ ಗಾಂಧಿ ಹಾಗೂ ಆರ್ ಜೆ ನೇತ್ರಾ ಅವರ ಸೇವೆ ಮಾಡಿದರು. ಆದರೆ ಹುಚ್ಚ ವೆಂಕಟ್ ಹಾಗೂ ಸುನಾಮಿ ಕಿಟ್ಟಿ ಮಾಡಿದ ದಬ್ಬಾಳಿಕೆಯ ತರ ಪೂಜಾ ಗಾಂಧಿ ಹಾಗೂ ಆರ್ ಜೆ ನೇತ್ರಾ ಅವರು ಮಾಡಲಿಲ್ಲ ಅನ್ನೋದು ಖುಷಿಯ ವಿಚಾರ.

  ಪರ್ಸನಲ್ ವಾರ್ ಗೆ ವೇದಿಕೆಯಾದ ಬಿಗ್ ಬಾಸ್ ಮನೆ

  ಪರ್ಸನಲ್ ವಾರ್ ಗೆ ವೇದಿಕೆಯಾದ ಬಿಗ್ ಬಾಸ್ ಮನೆ

  ಒಟ್ನಲ್ಲಿ ಡಿಫರೆಂಟ್ ಕಾನ್ಚೆಪ್ಟ್ ನಿಂದ ಮನೆಯಲ್ಲಿ ಉರಿಯುತ್ತಿರುವ ಜ್ವಾಲೆಗೆ ಚಂದನ್ ಕಿರಿಕ್ ಮಾಡಿ ತುಪ್ಪ ಸುರಿದರೇ, ಮನೆಯ ಉಸಿರುಗಟ್ಟಿಸುವ ವಾತಾವರಣದಿಂದ ಬೇಸತ್ತ ರೆಹಮಾನ್ ಅತ್ತು ಕಣ್ಣೀರು ಹಾಕಿದರು. ಜೊತೆಗೆ ಹುಚ್ಚ ವೆಂಕಟ್ ಡೈಲಾಗ್, ರೌಡಿಸಂ ಹಾಡು ಹಾಡಿದ ರವಿ ಮುರೂರು, ಲಾಂಗು ಮಚ್ಚು ಹಾಡು ಹೇಳಿಕೊಟ್ಟ ಹುಚ್ಚ ವೆಂಕಟ್. ಕೃತಿಕಾ ಕಾಲಿಗೆ ಕಾಲುಂಗುರ ಹಾಕಿ ಪ್ರಪೋಸ್ ಮಾಡಿದ ಚಂದನ್, ಭಾರತೀಯ ಸಂಪ್ರದಾಯ ಮೆರೆದರು. ಕೊನೆಗೆ ಕೋಲ್ಡ್ ವಾರ್ ಬೇಡ ಎಂದು ರೆಹಮಾನ್ ಅವರು ಎಲ್ಲದಕ್ಕೂ ಇತಿಶ್ರೀ ಹಾಡಿದರು. ಮುಂದೇನಾಗುತ್ತದೆ, ಇಂದಿನ ಸಂಚಿಕೆಯಲ್ಲಿ ಕಾದು ನೋಡಿ .

  English summary
  Bigg Boss Kannada 3 King and Slave Task. Huccha Venkat, Tsunami Kitty, RJ Netra and Pooja Gandhi are King of the task. And Chandan, Kruthika, Rehman, Shruthi, Neha Gowda, Ravi are the Slave's. The task made suffer and contestents cry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X