»   » 'ಬಿಗ್ ಬಾಸ್' ಬದಲು 'ಡಿ'ಬಾಸ್ ಗೆ ಜೈ ಎಂದ ಫಿಲ್ಮಿಬೀಟ್ ಓದುಗರು

'ಬಿಗ್ ಬಾಸ್' ಬದಲು 'ಡಿ'ಬಾಸ್ ಗೆ ಜೈ ಎಂದ ಫಿಲ್ಮಿಬೀಟ್ ಓದುಗರು

Posted By:
Subscribe to Filmibeat Kannada

ವೀಕ್ಷಕರೆಲ್ಲರೂ ಕುತೂಹಲದಿಂದ ಕಾಯುತ್ತಿರುವ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-3' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಈ ವಾರಾಂತ್ಯದಲ್ಲಿ ನಡೆಯಲಿದೆ.

ಇನ್ನೂ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಈ ವಾರದ ಅತಿಥಿ ಚಾಲೆಂಜಿಂಗ್ ಸ್ಟಾರ್ ದರ್ಶನ್. ಎರಡೂ ಕಾರ್ಯಕ್ರಮಗಳು ರಾತ್ರಿ 9 ಗಂಟೆಗೆ ಪ್ರಸಾರವಾಗುವುದರಿಂದ ವೀಕ್ಷಕರ ಆಯ್ಕೆ ಯಾವುದು? [ಈ ವೀಕೆಂಡ್ ನಲ್ಲಿ ಸುದೀಪ್ V/S ದರ್ಶನ್! ನಿಮ್ಮ ಆಯ್ಕೆ ಯಾವುದು?]

ಈ ಕುತೂಹಲದಿಂದ ನಿನ್ನೆ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ಒಂದು ಸಣ್ಣ ಲೇಖನ ಬರೆದಿದ್ವಿ. ಅದಕ್ಕೆ ಓದುಗರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಲಭ್ಯವಾಗಿದೆ.

ಅಚ್ಚರಿ ಅಂದ್ರೆ, ಕಿಚ್ಚ ಸುದೀಪ್ ನಡೆಸಿಕೊಡುವ 'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆಗಿಂತ ಹೆಚ್ಚು 'ಫಿಲ್ಮಿಬೀಟ್ ಕನ್ನಡ' ಓದುಗರು ದರ್ಶನ್ ಜೀವನಚರಿತ್ರೆ ಬಿಚ್ಚಿಡುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ನೋಡಲು ಉತ್ಸುಕರಾಗಿದ್ದಾರೆ.

'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ಓದುಗರು ಮಾಡಿರುವ ಕಾಮೆಂಟ್ ಗಳನ್ನ ನಿಮ್ಮ ಮುಂದೆ ಇಡ್ತಾಯಿದ್ದೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

ದರ್ಶನ್...ದರ್ಶನ್...ದರ್ಶನ್!

'ಫಿಲ್ಮಿಬೀಟ್ ಕನ್ನಡ' ಓದುಗರ ಮೊದಲ ಆಯ್ಕೆ 'ವೀಕೆಂಡ್ ವಿತ್ ರಮೇಶ್' ದರ್ಶನ್ ಸ್ಪೆಷಲ್ ಕಾರ್ಯಕ್ರಮ ಅನ್ನೋದಕ್ಕೆ ಇಂತಹ ಸಾಲು ಸಾಲು ಕಾಮೆಂಟ್ಸ್ ಸಾಕ್ಷಿ.

'ಬಿಗ್ ಬಾಸ್' ಕೂಡ ನೋಡ್ತಾರೆ ಸ್ವಾಮಿ!

ಇದುವರೆಗೂ 'ಬಿಗ್ ಬಾಸ್-3' ಕಾರ್ಯಕ್ರಮವನ್ನ ಬಿಡದೆ ನೋಡಿರುವ ವೀಕ್ಷಕರು ಗ್ರ್ಯಾಂಡ್ ಫಿನಾಲೆ ಇರುವಾಗ ಮಿಸ್ ಮಾಡ್ತಾರಾ?

ಜಾಣ್ಮೆ ಅಂದ್ರೆ ಇದು!

ಎರಡನ್ನೂ ಮಿಸ್ ಮಾಡಿಕೊಳ್ಳದ ವೀಕ್ಷಕರು, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮವನ್ನು ನೋಡುತ್ತಾ ಮಧ್ಯದಲ್ಲಿ ಆಡ್ ಬಂದಾಗ 'ಬಿಗ್ ಬಾಸ್' ನೋಡುವ ಪ್ಲಾನ್ ಮಾಡಿದ್ದಾರೆ.

ಎರಡನ್ನೂ ನೋಡ್ತೀವಿ!

ಸುದೀಪ್ ಮತ್ತು ದರ್ಶನ್...ಇಬ್ಬರೂ ಆಪ್ತ ಗೆಳೆಯರು. ಹೀಗಾಗಿ ಎರಡನ್ನೂ ನೋಡ್ತೀವಿ ಅನ್ನೋದು ಕೆಲವರ ಸಮರ್ಥನೆ.

'ಬಿಗ್ ಬಾಸ್' ಫಿಕ್ಸಿಂಗ್ ಶೋ ಅಂತೆ!

'ಬಿಗ್ ಬಾಸ್' ಫಿಕ್ಸಿಂಗ್ ಶೋ. ಹೀಗಾಗಿ 'ವೀಕೆಂಡ್ ವಿತ್ ರಮೇಶ್' ನೋಡ್ತೀವಿ ಅಂತಾವ್ರೆ 'ಫಿಲ್ಮಿಬೀಟ್ ಕನ್ನಡ' ಓದುಗರು.

'ಬಿಗ್ ಬಾಸ್' ಬೋರಿಂಗ್ ಗುರು!

ಇತ್ತೀಚೆಗೆ 'ಬಿಗ್ ಬಾಸ್' ಕಾರ್ಯಕ್ರಮ ಬೋರ್ ಆಗ್ಬಿಟ್ಟಿದೆ. ಹೀಗಾಗಿ 'ಬಿಗ್ ಬಾಸ್' ಬದಲು 'ವೀಕೆಂಡ್ ವಿತ್ ರಮೇಶ್' ಕಡೆ ವೀಕ್ಷಕರು ಮುಖ ಮಾಡಿದ್ದಾರೆ.

ದರ್ಶನ್ ಜೀವನಚರಿತ್ರೆ

ದರ್ಶನ್ ಜೀವನಚರಿತ್ರೆ ನೋಡಲು ಕೆಲವರು ಆಸಕ್ತಿ ಹೊಂದಿದ್ದಾರೆ.

ಫೇಕ್ 'ಬಿಗ್ ಬಾಸ್'

ವೀಕ್ಷಕರ ನೆಚ್ಚಿನ ಸ್ಪರ್ಧಿ 'ಬಿಗ್ ಬಾಸ್' ಗೆಲ್ಲುವುದಿಲ್ಲ. ಹೀಗಾಗಿ ಅದರ ಬದಲು 'ವೀಕೆಂಡ್ ವಿತ್ ರಮೇಶ್' ನೋಡುವುದು ಒಳಿತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಮನಮಿಡಿಯುವ ಕಾರ್ಯಕ್ರಮ

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ನೋಡ್ತಾಯಿದ್ರೆ, ಎಂಥವರ ಕಣ್ಣಲ್ಲೂ ನೀರು ಬರುತ್ತೆ. ಹೀಗಾಗಿ 'ವೀಕೆಂಡ್ ವಿತ್ ರಮೇಶ್' ವೀಕ್ಷಕರ ಫಸ್ಟ್ ಚಾಯ್ಸ್.

ಟಿ.ಆರ್.ಪಿ ಯುದ್ಧದಲ್ಲಿ ಗೆಲ್ಲುವರು ಯಾರು?

'ವೀಕೆಂಡ್ ವಿತ್ ರಮೇಶ್' V/S 'ಬಿಗ್ ಬಾಸ್'....ಟಿ.ಆರ್.ಪಿ ಯುದ್ಧದಲ್ಲಿ ಗೆಲ್ಲೋರು ಯಾರು ಅಂತ ಕಾದು ನೋಡಬೇಕಷ್ಟೆ.

English summary
Majority of Filmibeat Readers are interested to watch 'Weekend with Ramesh Darshan special' over 'Bigg Boss Kannada 3' grand finale. Check out the readers reaction here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada