»   » 'ಬಿಗ್ ಬಾಸ್' ಟ್ವಿಸ್ಟ್ ; ಸೀಕ್ರೆಟ್ ರೂಮ್ ನಲ್ಲಿ ನಟಿ ಪೂಜಾ ಗಾಂಧಿ.!

'ಬಿಗ್ ಬಾಸ್' ಟ್ವಿಸ್ಟ್ ; ಸೀಕ್ರೆಟ್ ರೂಮ್ ನಲ್ಲಿ ನಟಿ ಪೂಜಾ ಗಾಂಧಿ.!

Posted By:
Subscribe to Filmibeat Kannada

'ಬಿಗ್ ಬಾಸ್' ಪ್ರಿಯರು ನಿರೀಕ್ಷಿಸದ ಎಲಿಮಿನೇಷನ್ ಮೊನ್ನೆ ನಡೆಯಿತು. ಸ್ಯಾಂಡಲ್ ವುಡ್ ನಲ್ಲಿ 'ಮಳೆ ಹುಡುಗಿ' ಅಂತಲೇ ಖ್ಯಾತಿ ಗಳಿಸಿದ ನಟಿ ಪೂಜಾ ಗಾಂಧಿ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಿದ್ದರು.

ಟಾಸ್ಕ್ ನಲ್ಲಿ ಉತ್ತಮ ಪರ್ಫಾಮೆನ್ಸ್ ಜೊತೆಗೆ ವೀಕ್ಷಕರಿಗೆ ಸಖತ್ ಮನರಂಜನೆ ನೀಡುವುದರಲ್ಲಿ ಕುನ್ಫು ಪಾಂಡಾ ಅಲಿಯಾಸ್ ಪೂಜಾ ಗಾಂಧಿ ಎಂದೂ ಹಿಂದೆ ಬಿದ್ದಿರಲಿಲ್ಲ. ಆದರೂ, ಕೆಲವರ ಗೇಮ್ ಪ್ಲಾನ್ ನಿಂದಾಗಿ ಪೂಜಾ ಗಾಂಧಿ ಮೊದಲ ಬಾರಿ ಎಲಿಮಿನೇಷನ್ ಗೆ ನಾಮಿನೇಟ್ ಆದರು.

Bigg Boss Kannada 3 ; Pooja Gandhi in secret room - Not eliminated

ಗಾಂಧಿನಗರದಲ್ಲಿ 'ಮುಂಗಾರು ಮಳೆ' ಚಿತ್ರದ ಮೂಲಕ ಬಹು ಬೇಡಿಕೆ ಸೃಷ್ಟಿಸಿಕೊಂಡ ನಟಿ ಪೂಜಾ ಗಾಂಧಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಅವರು ಸೇಫ್ ಆಗುವುದು ಕನ್ಫರ್ಮ್ ಅಂತ ಎಲ್ಲರೂ ಅಂದುಕೊಂಡಿರುವಾಗಲೇ, ನಟಿ ಪೂಜಾ ಗಾಂಧಿಗೆ 'ಬಿಗ್' ಶಾಕ್ ಸಿಕ್ತು. [ಕಣ್ಣೀರು ಹಾಕಿಕೊಂಡು ಮನೆಯಿಂದ ಹೊರ ನಡೆದ ಮಳೆ ಹುಡುಗಿ]

ಎಲಿಮಿನೇಟ್ ಆಗಿ ಇನ್ನೇನು ಮನೆಗೆ ವಾಪಸ್ ತೆರಳಬೇಕು ಅಂತ ಪೂಜಾ ಗಾಂಧಿ ರೆಡಿಯಾಗುತ್ತಿರುವಾಗಲೇ, 'ಬಿಗ್ ಬಾಸ್' ಹೊಸ ಟ್ವಿಸ್ಟ್ ನೀಡಿದ್ದಾರೆ. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಪೂಜಾ ಗಾಂಧಿ ಜರ್ನಿ ಇನ್ನೂ ಮುಗಿದಿಲ್ಲ.

ಅವರನ್ನ 'ಸೀಕ್ರೆಟ್ ರೂಮ್'ನಲ್ಲಿ ಇರಿಸಲಾಗಿದೆ. 'ಬಿಗ್ ಬಾಸ್' ಮನೆಯಲ್ಲಿ ಯಾರೆಲ್ಲಾ ಏನೇನು ಮಾಡುತ್ತಾರೆ ಅಂತ ಎಲ್ಲಾ ಕ್ಯಾಮರಾಗಳ ಮುಖಾಂತರ ಪೂಜಾ ಗಾಂಧಿ ನೋಡಬಹುದು. ಇಂತಹ ಸದಾವಕಾಶವನ್ನ ಪೂಜಾ ಗಾಂಧಿಗೆ 'ಬಿಗ್ ಬಾಸ್' ಕಲ್ಪಿಸಿದ್ದಾರೆ.

ಅಯ್ಯಪ್ಪನ ಹಿಂದೆ-ಮುಂದೆ ತಿಳಿದುಕೊಳ್ಳಬಹುದು.!
ಇದ್ದ ಐದು ವಾರಗಳಲ್ಲಿ ಅಯ್ಯಪ್ಪ ಮೇಲೆ ನಟಿ ಪೂಜಾ ಗಾಂಧಿಗೆ ಸಿಕ್ಕಾಪಟ್ಟೆ ಪ್ಯಾರ್ ಆಗ್ಬುಟ್ಟಿದೆ. 'ಅಯ್ಯಪ್ಪ ರನ್ನ ಮದುವೆ ಆಗುವುದಕ್ಕೆ ಸಿದ್ಧ' ಅಂತ ಹೇಳಿರುವ ಪೂಜಾ ಗಾಂಧಿಗೆ ಕ್ರಿಕೆಟರ್ ಅಯ್ಯಪ್ಪ ಹೇಗೆ ಅಂತ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಹೀಗಾಗಿ ಸೀಕ್ರೆಟ್ ರೂಮ್ ನಿಂದ ಅವರಿಗೆ ಉಪಯೋಗವಾಗಬಹುದೇನೋ..!

English summary
Kannada Actress Pooja Gandhi is not eliminated from Bigg Boss Kannada 3. She has got a chance to stay in the secret room. Pooja Gandhi might enter Bigg Boss house again by the end of this week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada