»   » ನಟಿ ಶ್ರುತಿ ಬಗ್ಗೆ 'ಮಳೆ ಹುಡುಗಿ' ಪೂಜಾ ಗಾಂಧಿ ಹೇಳಿದ್ದೇನು?

ನಟಿ ಶ್ರುತಿ ಬಗ್ಗೆ 'ಮಳೆ ಹುಡುಗಿ' ಪೂಜಾ ಗಾಂಧಿ ಹೇಳಿದ್ದೇನು?

Posted By:
Subscribe to Filmibeat Kannada

ನಿಮಗೆ ನೆನಪಿದ್ಯಾ? 'ಬಿಗ್ ಬಾಸ್' ನೀಡಿದ 'KNOCK OFF' ಟಾಸ್ಕ್ ನಲ್ಲಿ 'ಮನೆಯಲ್ಲಿ ನೀವು ಇಷ್ಟ ಪಡುವ ಸದಸ್ಯ/ಸದಸ್ಯೆ ಯಾರು' ಎನ್ನುವ ಪ್ರಶ್ನೆಗೆ ನಟಿ ಶ್ರುತಿ, ಪೂಜಾ ಗಾಂಧಿ ಅಂತ ಉತ್ತರ ನೀಡಿ ಅವರಿಗೆ ಹೂವಿನ ಹಾರ ಹಾಕಿದ್ರು.

ಅಲ್ಲಿಗೆ, ಇಬ್ಬರು ನಟಿಮಣಿಯರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತಲೇ ವೀಕ್ಷಕರು ಭಾವಿಸಿದ್ದರು. ಆದ್ರೆ, 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಹೊರಬಂದ ಮೇಲೆ ಕಿಚ್ಚ ಸುದೀಪ್ ಮುಂದೆ ನಟಿ ಶ್ರುತಿ ಬಗ್ಗೆ ಪೂಜಾ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.

pooja-gandhi

''ಮೊದಲನೇ ವಾರದಿಂದ ನನಗೆ ಅವರ ಜೊತೆ Uncomfortable ಇತ್ತು. ಒಳಗಡೆ ಅವರಿಗೆ ನನ್ನ ಕಂಡ್ರೆ ಇಷ್ಟ ಇಲ್ಲ ಅಂತ ಮೆಸೇಜ್ ಬಂತು. ಆದ್ರೂ, ನನಗೆ ಅನಿಸಿತ್ತು that she is not genuine.'' ಅಂತ ನಟಿ ಶ್ರುತಿ ಬಗ್ಗೆ ಪೂಜಾ ಗಾಂಧಿ ಹೇಳಿದರು. [ಕಣ್ಣೀರು ಹಾಕಿಕೊಂಡು ಮನೆಯಿಂದ ಹೊರ ನಡೆದ ಮಳೆ ಹುಡುಗಿ]

ಹಾಗಾದ್ರೆ, ನಟಿ ಶ್ರುತಿ ಮುಖವಾಡ ಹಾಕೊಂಡು ಇದ್ದಾರೆ ಅಂತ ಅನಿಸುತ್ತಾ ಅಂತ ಸುದೀಪ್ ಕೇಳಿದಾಗ, ''ಹೌದು 100%'' ಎಂದರು ಪೂಜಾ ಗಾಂಧಿ.

''ನಟಿ ಶ್ರುತಿಯನ್ನ ಎಲ್ಲರೂ ನಂಬ್ತಾರೆ. ಅವರು ಎಲ್ಲರ ಎಮೋಷನ್ಸ್ ಜೊತೆ ಆಟಾಡ್ತಿದ್ದಾರೆ. ಅವರು ಹೇಗೆ ಆಡ್ತಿದ್ದಾರೆ, ಅದು ನಮ್ಮ ಕೈಯಲ್ಲಿ ಸಾಧ್ಯ ಇಲ್ಲ. It's not a neat game'' ಅಂತ ಹೇಳಿದ್ರು ನಟಿ ಪೂಜಾ ಗಾಂಧಿ. ['ಬಿಗ್ ಬಾಸ್' ಟ್ವಿಸ್ಟ್ ; ಸೀಕ್ರೆಟ್ ರೂಮ್ ನಲ್ಲಿ ನಟಿ ಪೂಜಾ ಗಾಂಧಿ.!]

ಯಾರು ನೀಟ್ ಗೇಮ್ ಆಡ್ತಿದ್ದಾರೆ ಅಂತ ಬಹುಶಃ ಪೂಜಾ ಗಾಂಧಿಗೆ ಈ ವಾರ ಅರ್ಥವಾಗ್ಬಹುದು. ಯಾಕಂದ್ರೆ, 'ಬಿಗ್ ಬಾಸ್' ಪೂಜಾ ಗಾಂಧಿಗೆ ಸೀಕ್ರೆಟ್ ರೂಮ್ ನಲ್ಲಿ ಇರುವ ಅವಕಾಶ ನೀಡಿದ್ದಾರೆ. ಕೆಲ ದಿನ 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರ ಚಲನವಲನ ಗಮಿನಿಸಿದ ಬಳಿಕ ಪೂಜಾ ಗಾಂಧಿ 'ಬಿಗ್ ಬಾಸ್' ಮನೆಗೆ ವಾಪಸ್ ತೆರಳಲಿದ್ದಾರೆ.

English summary
Kannada Actress Pooja Gandhi is not happy with Kannada Actress Shruthi. Read the article to know what Pooja Gandhi spoke about Shruthi with Kiccha Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada