»   » ವೆಂಕಟ್ ಬಾಸ್ ಗೆ ಸುಸು ಮಾಡ್ಕೊಂಡ್ರಿ ಎಂದ ಕಿಟ್ಟಿ ಹೊರಗಟ್ಟಿ

ವೆಂಕಟ್ ಬಾಸ್ ಗೆ ಸುಸು ಮಾಡ್ಕೊಂಡ್ರಿ ಎಂದ ಕಿಟ್ಟಿ ಹೊರಗಟ್ಟಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಿಗ್ ಬಾಸ್ ಕನ್ನಡ 3ನೇ ಆವೃತ್ತಿ ಭರ್ಜರಿಯಾಗಿ ಆರಂಭ ಪಡೆದುಕೊಂಡಿದೆ. ಮೊದಲ ದಿನದಿಂದಲೇ ಹುಚ್ಚ ವೆಂಕಟ್ ಆರ್ಭಟ ಜೋರಾಗಿದೆ. ಈ ನಡುವೆ ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಸರಿಯಾಗಿ ತಿಳಿಯದ ಸ್ಪರ್ಧಿ ಮನಬದಂತೆ ನಾಮಿನೇಟ್ ಮಾಡಿದ್ದಾರೆ.

ಮೊದಲ ವಾರದ ಕ್ಯಾಪ್ಟನ್ ಆಗಿರುವ ನಟಿ ಶೃತಿ ಮಾತ್ರ ನಾಮಿನೇಷನ್ ನಿಂದ ಹೊರಗುಳಿದಿದ್ದಾರೆ. ಯಾರು ಉಳಿಯುತ್ತಾರೋ ಯಾರು ಇರುತ್ತಾರೋ ನಿರ್ಧಾರ ಕೈಗೊಳ್ಳುವ ಆಯ್ಕೆ ಈಗ ಪ್ರೇಕ್ಷಕರ ಕೈಯಲ್ಲಿದೆ. ನೆಚ್ಚಿನ ಸ್ಪರ್ಧಿಯನ್ನು ಎಸ್ಎಂಎಸ್ ಮಾಡಿ ಉಳಿಸಬಹುದಾಗಿದೆ. [ಪೂಜಾ ಗಾಂಧಿಯಿಂದ ರೊಚ್ಚಿಗೆದ್ದ ಹುಚ್ಚ ವೆಂಕಟ್.!]

ನಾಮಿನೇಟ್ ಪ್ರಕ್ರಿಯೆ ಮುಗಿದು ಹೆಚ್ಚು ನಾಮಿನೇಟ್ ಆದ ನಾಲ್ವರು ಸ್ಪರ್ಧಿಗಳ ಹೆಸರು ಸುನಾಮಿ ಕಿಟ್ಟಿ, ರವಿ ಮುರೂರು, ಕೃತಿಕಾ ಮತ್ತು ಮಾಧುರಿ ಇಟಗಿ ಹೊರ ಬೀಳುತ್ತಿದ್ದಂತೆ ಕಲರ್ಸ್ ವಾಹಿನಿಯ ಫೇಸ್ ಬುಕ್ ಪುಟ, ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಈ ವಾರ ಯಾರು ಹೊರ ಹೋಗಬೇಕು ಎಂಬುದರ ಬಗ್ಗೆ ಭಾರಿ ಚರ್ಚೆ ಆರಂಭವಾಗಿದೆ. [ಕಿಚ್ಚ ಕೂಡಾ ಸೈಲಂಟ್, ವೆಂಕಟ್ ಟ್ರೆಂಡಿಂಗ್]

ನಮ್ಮ ಬಾಸ್ ಹುಚ್ಚ ವೆಂಕಟ್ ಅವರ ಮೇಲೆ ಕೆಟ್ಟ ಜೋಕ್ ಮಾಡಿದ ಸುನಾಮಿ ಕಿಟ್ಟಿಯನ್ನು ಮೊದಲು ಹೊರಗಟ್ಟಿ ಎಂದು ಬಹುಜನರು ಆಗ್ರಹಿಸಿದ್ದಾರೆ. ಇನ್ನು ಕೆಲವರು ಪಾಪ ಅವರು ಬಡವ, ಗಡಿನಾಡಿನ ಕೂಸು ಅವನನ್ನು ಸೇವ್ ಮಾಡಿ ಎನ್ನುತ್ತಿದ್ದಾರೆ.

ಸುನಾಮಿ ಕಿಟ್ಟಿ ಟಾರ್ಗೆಟ್ ಮಾಡಿದ್ದು ಯಾರನ್ನು?

ಸುನಾಮಿ ಕಿಟ್ಟಿ, ರವಿ ಮುರೂರು, ಕೃತಿಕಾ ಮತ್ತು ಮಾಧುರಿ ಇಟಗಿ ಪೈಕಿ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ಅವರ ಪರ ಎಸ್.ಎಂ.ಎಸ್ ಮಾಡಿ ಮನೆಯಲ್ಲಿ ಉಳಿಸಬಹುದು. ಸುನಾಮಿ ಕಿಟ್ಟಿ ನಾಮಿನೇಟ್ ಮಾಡಿದ್ದು ಮಾಧುರಿ ಇಟಗಿ ಮತ್ತು ಅಯ್ಯಪ್ಪ ರವರನ್ನ. ಸುನಾಮಿ ಕಿಟ್ಟಿ ಮತ್ತು ಜಯಶ್ರೀ ರವರನ್ನ ನಟಿ ಶೃತಿ ನಾಮಿನೇಟ್ ಮಾಡಿದರು.

ಸುನಾಮಿ ಕಿಟ್ಟಿ ಜನರ ಟಾರ್ಗೆಟ್ ಆಗಿದ್ದು ಏಕೆ?

ಮೊದಲ ದಿನದಂದು ಡೈನಿಂಗ್ ಟೇಬಲ್ ಬಳಿಗೆ ಬಂದು ಕುಳಿತ ಹುಚ್ಚ ವೆಂಕಟ್ ಅವರ ಬಳಿ ಸುನಾಮಿ ಕಿಟ್ಟಿ ಕೆಟ್ಟ ಜೋಕ್ ಮಾಡುತ್ತಾರೆ. ಏನಣ್ಣ ಎಲ್ಲಾ ಒದ್ದೆಯಾಗಿದೆ, ಸುಸು ಮಾಡಿಕೊಂಡಿದ್ರಾ ಎಂದು ನಗಾಡುತ್ತಾರೆ. ಅದರೆ, ಹುಚ್ಚನ ಕೋಪದ ಬಗ್ಗೆ ನಿರೀಕ್ಷಿಸಿದ ಸುನಾಮಿ, ನಂತರ ನಾನಲ್ಲ ಎಂದು ಗಗನಸಖಿ ನೇಹಾ ಮೇಲೆ ಹೇಳುತ್ತಾರೆ. ನೇಹಾ ನಾನು ಹಾಗೆಲ್ಲ ಹೇಳಿಲ್ಲ ಸಾರ್ ಎನ್ನುತ್ತಾರೆ. ಈ ರೀತಿ ಚೀಪ್ ಜೋಕ್ ಮಾಡುತ್ತಿರುವ ಕಿಟ್ಟಿಯನ್ನು ಹೊರಗಟ್ಟಿ ಎಂದು ಅಭಿಯಾನ ಶುರುವಾಗಿದೆ.

ಎಲ್ಲೆಡೆ ಹುಚ್ಚ ವೆಂಕಟ್ ನದ್ದೇ ಮಾತುಕತೆ

ಮೊದಲು ಚಂದ್ರಿಕಾ ನಂತರ ಬ್ರಹ್ಮಾಂಡ ಗುರೂಜಿ ಈಗ ಹುಚ್ಚ ವೆಂಕಟ್ ಹೀಗೆ ವಿವಾದಿತ ವ್ಯಕ್ತಿಗಳನ್ನು ಕರೆಸುವುದೇ ಬಿಗ್ ಬಾಸ್ ಉದ್ದೇಶವೆ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ಅಲ್ಲದೇ ಹುಚ್ಚ ವೆಂಕಟ್ ಅವರ ನೈತಿಕ ಪೊಲೀಸ್ ಗಿರಿ ಬಗ್ಗೆ ಹೆಚ್ಚಿನ ಚರ್ಚೆಯಾಗುತ್ತಿದೆ. ಅಕ್ಕ ತಂಗಿ ಎಂದು ಕರೆಯುವುದು ಓಕೆ ಅದರೆ, ವಸ್ತ್ರ ಸಂಹಿತೆ ವಿಧಿಸಲು ಏನು ಹಕ್ಕಿದೆ ಎಂದು ಪ್ರಶ್ನಿಸುತ್ತಿದ್ದಾರೆ.

ಹುಚ್ಚ ವೆಂಕಟ್ ಕುರಿತಂತೆ ಮೀಮ್ಸ್ ಜೋರಾಗಿದೆ

ಹುಚ್ಚ ವೆಂಕಟ್ ಕುರಿತಂತೆ ಮೀಮ್ಸ್ ಜೋರಾಗಿದೆ, ಮೊದಲ ದಿನದಿಂದಲೇ Troll Haiklu ಸೇರಿದಂತೆ ವೆಂಕಟ್ ಸೇನೆ ಸದಸ್ಯರು ಸಕತ್ ಟ್ರೆಂಡಿಂಗ್ ಮಾಡುತ್ತಿದ್ದಾರೆ.

ಕೆಂಪೇಗೌಡ ಚಿತ್ರದ ಆರ್ಮುಗಂ ಸ್ಟೈಲ್

ಕೆಂಪೇಗೌಡ ಚಿತ್ರದ ಆರ್ಮುಗಂ ಸ್ಟೈಲ್ ನಲ್ಲಿ ಹುಚ್ಚ ವೆಂಕಟ್ ಡೈಲಾಗ್ ಹೇಳಿದ್ರೆ ಈ ರೀತಿ ಇರುತ್ತೆ.

English summary
Bigg Boss Kannada 3 : Public demand eliminate Tsunami Kitty. Tsunami Kitty, Singer Ravi Muroor, Kruthika and Actress Madhuri Itagi are nominated for the first week elimination. Here are the reaction from fans on social networking sites.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada