»   » ಇವರೆಲ್ಲರಿಗೂ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ಮುಖ್ಯ! ಯಾಕೆ ಗೊತ್ತಾ?

ಇವರೆಲ್ಲರಿಗೂ 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ಮುಖ್ಯ! ಯಾಕೆ ಗೊತ್ತಾ?

Posted By:
Subscribe to Filmibeat Kannada

ಬಂಧು-ಬಾಂಧವರಿಂದ ದೂರ ಉಳಿದು, ಜನರ ಸಂಪರ್ಕವೇ ಇಲ್ಲದೆ, ಫೋನ್, ಇಂಟರ್ ನೆಟ್ ನಿಂದ ಕಟ್ ಆಗಿ, 'ಬಿಗ್ ಬಾಸ್' ಮನೆಯಲ್ಲಿ ನಟಿ ಶ್ರುತಿ, ನಟಿ ಪೂಜಾ ಗಾಂಧಿ, ನಟ ಚಂದನ್, ರೆಹಮಾನ್ ಮತ್ತು ಮಾಸ್ಟರ್ ಆನಂದ್ ಲಾಕ್ ಆಗಿ ಬರೋಬ್ಬರಿ 92 ದಿನಗಳು ಕಳೆದಿವೆ.

'ಬಿಗ್ ಬಾಸ್' ಮನೆಯೊಳಗೆ ಕೇಳಿ ಬರುವ ಅಶರೀರವಾಣಿ ಆದೇಶ ಪಾಲಿಸುತ್ತಾ ಒಂದೊಂದು ಟಾಸ್ಕ್ ನಲ್ಲೂ ಒಂದೊಂದು ಮಾನವೀಯ ಮೌಲ್ಯ ಅರಿತುಕೊಂಡಿರುವ ಈ ಸದಸ್ಯರೆಲ್ಲರಿಗೂ ಗೆಲ್ಲುವ ಛಲ ಇದೆ. ['ಬಿಗ್ ಬಾಸ್-3' ಫೈನಲ್ ಗೆ ಎಂಟ್ರಿ ಪಡೆದ ಪೂಜಾ ಗಾಂಧಿ, ಆನಂದ್!]

ಇವರೆಲ್ಲರಿಗೂ 'ಬಿಗ್ ಬಾಸ್-3' ಕಾರ್ಯಕ್ರಮದ ವೇದಿಕೆ ಯಾಕೆ ಮುಖ್ಯ? ಈ ಪ್ರಶ್ನೆಯನ್ನಿಟ್ಟುಕೊಂಡು ಮೊನ್ನೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಪಂಚಾಯತಿ ನಡೆಸಿದರು. ಎಲ್ಲರಿಂದ ಬಂದ ಉತ್ತರಗಳನ್ನ ಅವರ ಮಾತುಗಳಲ್ಲೇ ಓದಿ...ಕೆಳಗಿರುವ ಸ್ಲೈಡ್ ಗಳಲ್ಲಿ....

ಮಾಸ್ಟರ್ ಆನಂದ್

''ಕಲಾವಿದನಾಗಿ ನಾನು ಮಿಸ್ ಮಾಡಿಕೊಂಡಿರುವ ವೇದಿಕೆ ತುಂಬಾ ಇದೆ. 'ಬಿಗ್ ಬಾಸ್' ಫೈನಲ್ ವೇದಿಕೆ ಶಾರದಾಂಬೆಯ ಮಡಿಲು ಇದ್ದ ಹಾಗೆ. ಅದನ್ನು ತಲುಪುವುದು ಅಷ್ಟು ಸುಲಭ ಅಲ್ಲ. ತುಂಬಾ ವಿಷಯಗಳು ಬೇಕು ಅಲ್ಲಿಗೆ ಹೋಗುವುದಕ್ಕೆ. ಆ ತಾಯಿ ಮಡಿಲು ಸೇರುವ ಯೋಗ ಇದ್ದರೆ ಇರ್ತೀನಿ'' - ಮಾಸ್ಟರ್ ಆನಂದ್ [ನಟಿ ಶ್ರುತಿ 'ಬಿಗ್ ಬಾಸ್' ಮನೆಗೆ ಬಂದಿರುವುದು ಯಾಕೆ ಗೊತ್ತಾ?]

ಶ್ರುತಿ

''ನಾನು ಜೀವನದಲ್ಲಿ ಕಲಾವಿದೆ ಆಗ್ತೀನಿ ಅಂತ ಅಂದುಕೊಳ್ಳದೆ ಕಲಾವಿದೆ ಆದವಳು. ಕಲಾವಿದೆ ಆದ್ಮೇಲೆ ಸಿಗುವ ಸಣ್ಣ ಸಣ್ಣ ಅವಾರ್ಡ್ ಗಳು, ಅದಾದ ಮೇಲೆ ಫಿಲ್ಮ್ ಫೇರ್, ನ್ಯಾಷನಲ್ ಅವಾರ್ಡ್ ತಗೋಬೇಕು ಅಂತ ಆಸೆ ಹುಟ್ಟಿದ್ದು. 'ಬಿಗ್ ಬಾಸ್' ಕೂಡ ಹಾಗೆ, ಬರೋವಾಗ ಆಸೆ ಇರ್ಲಿಲ್ಲ. ಬಂದಮೇಲೆ ಆಟಗಳು ಶುರುವಾದ್ಮೇಲೆ, ನನ್ನ ಹೊಗಳೋಕೆ, ತೆಗಳುವುದಕ್ಕೆ ಶುರು ಮಾಡಿದ್ಮೇಲೆ ಫೈನಲ್ ತಲುಪಬೇಕು ಎನ್ನುವ ಆಸೆ ಹುಟ್ತು'' - ಶ್ರುತಿ

ರೆಹಮಾನ್

''ಇಷ್ಟು ದಿನ ಇರ್ತೀನಿ ಅಂತ ನಂಬಿಕೆ ಇರ್ಲಿಲ್ಲ. ಜನ ಉಳಿಸುತ್ತಾ ಬಂದಾಗ ಕಾನ್ಫಿಡೆನ್ಸ್ ಖಂಡಿತ ಹೆಚ್ಚಾಗ್ತಾ ಬಂತು. ಫಿನಾಲೆ ಗೆಲ್ಲಬೇಕು ಅಂತ ಆಸೆ ಖಂಡಿತ ಇದೆ. ಜನವರಿ 31 ನನ್ನ ಮಗಳು ಬರ್ತಡೆ. ಅವಳಿಗೆ ಈ ಶೋ ಗೆಲ್ಲುವ ಮೂಲಕ ಒಂದು ಗಿಫ್ಟ್ ಕೊಡಬೇಕು ಅನ್ನೋದು ನನ್ನ ಆಸೆ'' - ರೆಹಮಾನ್

ಚಂದನ್

''ಕೊನೆವರೆಗೂ ಇರ್ತೀನಿ ಅನ್ನುವ ಭರವಸೆ ಇದೆ'' - ಚಂದನ್

ಪೂಜಾ ಗಾಂಧಿ

''ಗೆಲ್ಲಬೇಕು ಎನ್ನುವ ಛಲ ನನ್ನಲಿ ಇದೆ'' - ಪೂಜಾ ಗಾಂಧಿ

ಅಯ್ಯಪ್ಪ

''ಕಾನ್ಸಿಡೆನ್ಸ್ ಅಂತೂ ಇದೆ. ನಾನು ತುಂಬಾ ಕಲಿತಿದ್ದೀನಿ. ಎಲ್ಲಾ ವಿಷಯದಲ್ಲೂ ಡೇ ಬೈ ಡೇ ತುಂಬಾ ಇಂಪ್ರೂವ್ ಆಗಿದ್ದೀನಿ. ಅಷ್ಟೇ ಎಫರ್ಟ್ ಕೂಡ ಹಾಕಿದ್ದೀನಿ. ಸೋ, ಫೈನಲ್ ವರೆಗೂ ಹೋಗುವುದು ನನ್ನ ಆಸೆ'' - ಅಯ್ಯಪ್ಪ

English summary
Kannada Actress Shruthi, Pooja Gandhi, Actor Chandan, Rehman and Master Anand expressed their desire to enter Bigg Boss Kannada season 3 Grand Finale during their interaction with Sudeep in 'Vaarada Kathe Kicchana Jothe' show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada