»   » ಟಿವಿ9 ರೆಹಮಾನ್ ಗೆ 'ಬಿಗ್ ಬಾಸ್' ಕೊಟ್ಟ ಶಿಕ್ಷೆ ಏನು?

ಟಿವಿ9 ರೆಹಮಾನ್ ಗೆ 'ಬಿಗ್ ಬಾಸ್' ಕೊಟ್ಟ ಶಿಕ್ಷೆ ಏನು?

Posted By:
Subscribe to Filmibeat Kannada

ಮಕ್ಕಳ ಮುಂದೆ ಚಾಕಲೇಟ್ ಇಟ್ಟು, ಇದನ್ನ ತಿನ್ನಬಾರದು ಅಂದ್ರೆ ಸುಮ್ನೆ ಕೂರ್ತಾರಾ. ಡಯಾಬಿಟೀಸ್ ಪೇಷೆಂಟ್ ಮುಂದೆ ಸಿಹಿ ತಿನಿಸು ಇಟ್ಟು, ತಿನ್ನ ಕೂಡದು ಅಂತ ಆಜ್ಞೆ ಮಾಡಿದ್ರೆ ಹೇಗೆ.?

ನಾನ್ ವೆಜ್ ಪ್ರಿಯರಿಗೆ ಚಿಕನ್-ಮಟನ್ ಮಸಾಲೆ ವಾಸನೆ ಬರ್ತಿದ್ದ ಹಾಗೆ, ಬಾಯಲ್ಲಿ ನೀರೂರುತ್ತೆ. ಹೀಗಿರುವಾಗ, ಕೈಯಲ್ಲಿ ಚಿಕನ್ ಪೀಸ್ ಕೊಟ್ಟು ನೋಡುತ್ತಾ ಕೂತಿರಿ ಅಂದ್ರೆ ಯಾರ್ ತಾನೆ ಸುಮ್ನೆ ಇರ್ತಾರೆ?

ಯಾರ್ ಸುಮ್ನೆ ಇರ್ತಾರೋ, ಬಿಡ್ತಾರೋ. 'ಬಿಗ್ ಬಾಸ್' ಮಾಡಿರುವ ಆಜ್ಞೆ ಪ್ರಕಾರ ಕೈಯಲ್ಲಿ ಸದಾ ಚಿಕನ್ ಇಟ್ಕೊಂಡು ಖ್ಯಾತ ಸುದ್ದಿ ವಾಹಿನಿ ಟಿವಿ 9 ಆಂಕರ್ ರೆಹಮಾನ್ ಸುಮ್ನಿರಬೇಕು. ಕುಂತರೂ, ನಿಂತರೂ, ಬಾತ್ ರೂಮ್ ಗೆ ಹೋದರೂ ರೆಹಮಾನ್ ಅಕ್ಕ-ಪಕ್ಕ ಚಿಕನ್ ಇರಲೇಬೇಕು.

rahman

ಆದನ್ನ ಮೂಸಿ ನೋಡಬಹುದೇ ಹೊರತು ತಿನ್ನುವಹಾಗಿಲ್ಲ. ಅಪ್ಪಿ-ತಪ್ಪಿ ತಿಂದರೇ 'ಬಿಗ್ ಬಾಸ್' ರಿಂದ ಕಠಿಣ ಶಿಕ್ಷೆ ತಪ್ಪಿದ್ದಲ್ಲ. ಇಂತಹ ವಿಚಿತ್ರ ಶಿಕ್ಷೆ ಯಾಕಪ್ಪಾ ಅಂದ್ರೆ, ಮೊನ್ನೆ 'ಬಿಗ್ ಬಾಸ್' ನೀಡಿದ 'ಅಹಂಕಾರಿ' ಯಾರು ಟಾಸ್ಕ್ ನಲ್ಲಿ ಮನೆಯವರೆಲ್ಲರ ಮನವೊಲಿಸಿ ತಾವು ಅಹಂಕಾರಿ ಅಲ್ಲ ಅನ್ನೋದನ್ನ ನಟ ಚಂದನ್ ಪ್ರೂವ್ ಮಾಡಿದ್ದರು. ['ಬಿಗ್ ಬಾಸ್' ಮನೆಯಲ್ಲಿ ಅಹಂಕಾರಿ ಯಾರು ಗೊತ್ತಾ?]

ಅದರ ಪರಿಣಾಮ ಅವರಿಗೆ ಚಿಕನ್ ಬಿರಿಯಾನಿ ತಿನ್ನುವ ಭಾಗ್ಯ ಲಭಿಸಿತು. ಚಿಕನ್ ಬಿರಿಯಾನಿ ಅಂದ ಕೂಡಲೆ, ರೆಹಮಾನ್ ಬಾಯಲ್ಲಿ ನೀರೂರಿತು. ಚಿಕನ್ ಪೀಸ್ ತಿನ್ನದೇ ಇದ್ದರೂ ಪರ್ವಾಗಿಲ್ಲ, ವಾಸನೆ ಆದರೂ ನೋಡಿ ಖುಷಿ ಪಡೋಣ ಅಂತ ಚಂದನ್ ಕೈ ಮೂಸಿ ನೋಡುತ್ತಿದ್ದರು ರೆಹಮಾನ್. ಅದಕ್ಕೀಗ ರೆಹಮಾನ್ ಕೈಗೇ ಚಿಕನ್ ಪೀಸ್ ಇಟ್ಟು ವಾಸನೆ ಮಾತ್ರ ನೋಡಬೇಕು ಅಂತ 'ಬಿಗ್ ಬಾಸ್' ಆಜ್ಞೆ ಮಾಡಿದ್ದಾರೆ.

ಉಪವಾಸ ಇದ್ದು ಬಿಡಬಹುದು. ಆದ್ರೆ, ಅಡುಗೆ ಮಾಡಿ ಊಟ ಬಡಿಸಿದ ನಂತರ ತಿನ್ನುವ ಹಾಗಿಲ್ಲ ಅಂದ್ರೆ ಅದೊಂಥರಾ ಸಹಿಸಲಾರದ ಶಿಕ್ಷೆ ಅಲ್ಲವೇ..?! ರೆಹಮಾನ್ ಅದ್ಹೇಗೆ ಸಹಿಸಿಕೊಳ್ತಾರೋ ನೋಡೋಣ.

English summary
'Bigg Boss' has given a weird punishment for TV9 Anchor Rahman in Bigg Boss Kannada 3. Read the article to know about the punishment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada