»   » ಪೂಜಾ ಗಾಂಧಿ ಮತ್ತು ಅಯ್ಯಪ್ಪ ನಡುವೆ ಸಂಥಿಂಗ್ ಸಂಥಿಂಗ್?

ಪೂಜಾ ಗಾಂಧಿ ಮತ್ತು ಅಯ್ಯಪ್ಪ ನಡುವೆ ಸಂಥಿಂಗ್ ಸಂಥಿಂಗ್?

Posted By:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ವಿವಾದಕ್ಕೆ ಅಷ್ಟೇ ಅಲ್ಲ. ಪ್ರೀತಿ ಪ್ರೇಮಕ್ಕೂ ಜಾಗವಿದೆ. ಕ್ರಿಕೆಟರ್ ಎನ್.ಸಿ.ಅಯ್ಯಪ್ಪ ಮತ್ತು ಮಳೆ ಹುಡುಗಿ ಪೂಜಾ ಗಾಂಧಿ ನಡುವೆ ಸಂಥಿಂಗ್ ಸಂಥಿಂಗ್ ಶುರುವಾಗಿದೆ.

'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಎಂಟ್ರಿಕೊಡುವುದಕ್ಕೂ ಮುನ್ನವೇ ಪೂಜಾ ಗಾಂಧಿ ಮತ್ತು ಅಯ್ಯಪ್ಪ ಪರಿಚಿತರು. ಪೂಜಾ ಗಾಂಧಿ ಜೊತೆ ಚಾಟಿಂಗ್ ಮಾಡಿ ನಂತರ ಗ್ಯಾಪ್ ಮೇನ್ಟೇನ್ ಮಾಡಿದ್ದ ಅಯ್ಯಪ್ಪ ಇದೀಗ ಮತ್ತೆ 'ಅಭಿನೇತ್ರಿ'ಗೆ ಹತ್ತಿರವಾಗಿದ್ದಾರೆ. [ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು, ಪ್ರೀತಿ-ಪ್ರೇಮ!]

ಅಯ್ಯಪ್ಪ ಮೇಲೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿರುವ ಪೂಜಾ ಗಾಂಧಿ, ''ನೀನು ಜಿತೇಂದ್ರ-ನಾನು ಶ್ರೀದೇವಿ'' ಅಂತ ಅಯ್ಯಪ್ಪ ಜೊತೆ ಡ್ಯುಯೆಟ್ ಹಾಡಿದ್ದೇ ಹಾಡಿದ್ದು. ಮುಂದೆ ಓದಿ.....

ಚಂದನ್ ಜೊತೆ ಗುಟ್ಟು ಬಿಟ್ಟುಕೊಟ್ಟ ಅಯ್ಯಪ್ಪ

ಗಾರ್ಡನ್ ಏರಿಯಾದಲ್ಲಿ ರಾತ್ರೋ ರಾತ್ರಿ ಚಂದನ್ ಜೊತೆ ತಮ್ಮ ಚಾಟಿಂಗ್ ಸ್ಟೋರಿಯನ್ನ ಅಯ್ಯಪ್ಪ ಬಿಚ್ಚಿಟ್ರು. ಮೊದಲ ಬಾರಿಗೆ ಏರ್ ಪೋರ್ಟ್ ನಲ್ಲಿ ಭೇಟಿಯಾದ ಅಯ್ಯಪ್ಪ-ಪೂಜಾ ಗಾಂಧಿ ಫೇಸ್ ಬುಕ್ ನಲ್ಲಿ ಚಾಟಿಂಗ್ ಶುರುಮಾಡಿದ್ರಂತೆ. ನಂತರ ಫೋನ್ ನಂಬರ್ ಎಕ್ಸ್ ಚೇಂಜ್ ಮಾಡಿಕೊಂಡು ಚಾಟ್ ಮಾಡ್ತಿದ್ರಂತೆ. ಆಮೇಲೆ ಪೂಜಾಗೆ ಏನ್ ಅನಿಸ್ತೋ ಏನೋ, ಚಾಟಿಂಗ್ ನಿಲ್ಲಿಸಿಬಿಟ್ಟರು. ಪೂಜಾ ಯಾಕ್ ಹೀಗ್ಮಾಡಿದ್ರು? ಅನ್ನುವ ಪ್ರಶ್ನೆ ಅಯ್ಯಪ್ಪಗೆ ಕಾಡ್ತಿತ್ತಂತೆ.

ಇಬ್ಬರನ್ನು ಒಂದಾಗಿಸಿದ 'ಬಿಗ್ ಬಾಸ್'

''ನಾನೇನು ಅವಳ ಜೊತೆ ಫ್ಲರ್ಟ್ ಮಾಡೋಕೆ ಹೋಗಿರ್ಲಿಲ್ಲ. ಆವಾಗ ನನ್ನ ಮೈಂಡ್ ಸೆಟ್ ಬೇರೆ ಇತ್ತು. ಮೊನ್ನೆ ಇಲ್ಲಿ ಬಂದಾಗ ಯು ಆರ್ ಎ ನೈಸ್ ಗೈ ಎಂದಳು'' ಅಂತ ಅಯ್ಯಪ್ಪ ಚಂದನ್ ಗೆ ಹೇಳಿದ್ರು.

ಮೊದಲ ವಾರ ಮಾತೇ ಆಡದ ಜೋಡಿ

ಪರಸ್ಪರ ಪರಿಚಯ ಇದ್ದರೂ, ಮೊದಲ ವಾರ ಪೂಜಾ ಗಾಂಧಿ ಮತ್ತು ಅಯ್ಯಪ್ಪ ಮಾತನಾಡಿಕೊಳ್ಳಲೇ ಇಲ್ಲ.

ಅದಕ್ಕೆ ಪೂಜಾ ಗಾಂಧಿ ಕೊಟ್ಟ ಸಬೂಬು

''ಮೊದಲ ವಾರ ನನಗೆ ಅವರು ವಿಲನ್ ತರಹ ಕಾಣಿಸಿಕೊಂಡರು. ಎರಡನೇ ವಾರದ ನಂತರ ಅವರ ಮೇಲೆ ನನಗೆ ಒಪೀನಿಯನ್ ಚೇಂಜ್ ಆಯ್ತು. He is a nice guy'' ಅಂತ ಪೂಜಾ ಗಾಂಧಿ ಹೇಳಿದ್ರು.

ಫ್ರೆಂಡ್ ಇರಬಹುದು ಆದ್ರೆ ಅಣ್ಣ ಅಲ್ಲವೇ ಅಲ್ಲ.!

ಅಯ್ಯಪ್ಪ ಮತ್ತು ಪೂಜಾ ಗಾಂಧಿ ನಡುವೆ ಉತ್ತಮ ಫ್ರೆಂಡ್ ಶಿಪ್ ಖಂಡಿತ ಇದೆ. ಆದ್ರೆ, ಪೂಜಾ ಗಾಂಧಿಗೆ ಅಯ್ಯಪ್ಪ ಅಣ್ಣ ಇದ್ಹಾಗೆ ಅಲ್ಲವೇ ಅಲ್ಲ ಅಂತ 'ಬಿಗ್ ಬಾಸ್' ಮನೆ ಸದಸ್ಯರು ಹೇಳಿದ್ರು. ಅದನ್ನ ಪೂಜಾ ಗಾಂಧಿ ಮತ್ತು ಅಯ್ಯಪ್ಪ ಒಪ್ಪಿಕೊಂಡ್ರು.

ಪೂಜಾ ಹೇಳಿದ್ದಕ್ಕೆ ಪ್ಯಾಂಟ್ ತೊಟ್ಟ ಅಯ್ಯಪ್ಪ

ಪೂಜಾ ಗಾಂಧಿ ಹೇಳಿದರು ಅಂದ ಮಾತ್ರಕ್ಕೆ ಅಯ್ಯಪ್ಪ ಜೀನ್ಸ್ ಪ್ಯಾಂಟ್ ತೊಟ್ಟಿದ್ದರು.!

ಅಯ್ಯಪ್ಪ-ಪೂಜಾ ಕಥೆ ಏನು?

ರೆಹಮಾನ್ ಮತ್ತು ನೇಹಾ ಗೌಡ ಬಗ್ಗೆ ಮಾತನಾಡಿದ್ದು ಮುಗಿದ ಮೇಲೆ ಪೂಜಾ ಗಾಂಧಿಗೆ ಅಯ್ಯಪ್ಪ - ''ಸರಿ, ಈಗ ನಮ್ಮ ಕಥೆ ಏನು'' ಅಂತ ಕೇಳಿದ್ರು.

ಪೂಜಾ ಕೊಟ್ಟ ಉತ್ತರ

''ಹೊರಗಡೆ ಹೋಗಿ ಮಾತಾಡೋಣ. ಇಲ್ಲಿ ಬೇಡ'' ಅಂದರು.

ಡ್ಯುಯೆಟ್ ಹಾಡಿಸಿದ ಸುದೀಪ್

''ನಾನು ಜಿತೇಂದ್ರ-ನೀನು ಶ್ರೀದೇವಿ'' ಹಾಡು ಪ್ಲೇ ಮಾಡಿಸಿ ಅಯ್ಯಪ್ಪ ಮತ್ತು ಪೂಜಾ ಗಾಂಧಿ ಕುಣಿಯುವಂತೆ ಮಾಡಿದರು ಸುದೀಪ್.

English summary
Is Kannada Actress Pooja Gandhi and Cricketer Aiyappa in Love? Read the article to know more on what's cooking between Pooja Gandhi and Aiyappa in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada