»   » ಜಿದ್ದಿಗೆ ಬಿದ್ದು ಬರೋಬ್ಬರಿ 45 ಹಸಿ ಮೆಣಸಿನಕಾಯಿ ತಿಂದ ಪ್ರಥಮ್.!

ಜಿದ್ದಿಗೆ ಬಿದ್ದು ಬರೋಬ್ಬರಿ 45 ಹಸಿ ಮೆಣಸಿನಕಾಯಿ ತಿಂದ ಪ್ರಥಮ್.!

Posted By:
Subscribe to Filmibeat Kannada

''ಎಲ್ಲರೂ ಒಂದು ಗುಂಪು... ನಾನು ಮಾತ್ರ ಒಬ್ಬ'' ಅಂತ ಹೇಳುತ್ತಾ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಹದಿನೈದು ವಾರ ಸೇಫ್ ಆಗಿರುವ ಸ್ಪರ್ಧಿ 'ಒಳ್ಳೆ ಹುಡುಗ' ಪ್ರಥಮ್.

ಬರೀ ಮಾತಲ್ಲೇ 'ಮಹಡಿ ಮನೆ' ಕಟ್ಟುವ ಪ್ರಥಮ್, ವೀಕ್ಷಕರ ಕೃಪೆಯಿಂದ ಫಿನಾಲೆ ವಾರದ ವರೆಗೂ ಬಂದಿದ್ದಾರೆ. ಈ ಹಂತದಲ್ಲಿ ವಿರೋಧಿಸಿದವರ ಮುಂದೆ ಸೋಲಬಾರದು ಅಂತ ಪ್ರಥಮ್ ಪಣ ತೊಟ್ಟಿರುವಂತಿದೆ. ಅದು 'ಬಿಗ್ ಬಾಸ್' ನೀಡಿದ 'ಆನೆ ಪಟಾಕಿ' ಟಾಸ್ಕ್ ನಲ್ಲಿ ಸಾಬೀತಾಗಿದೆ.

ಬರೋಬ್ಬರಿ 45 ಮೆಣಸಿನಕಾಯಿ ತಿಂದ ಪ್ರಥಮ್.!

ಒಂದೆರಡು ಮೆಣಸಿನಕಾಯಿ ತಿಂದರೇ.. ಸುಧಾರಿಸಿಕೊಳ್ಳಲು ಸುಮಾರು ಹೊತ್ತು ಬೇಕು. ಅಂಥದ್ರಲ್ಲಿ ಪ್ರಥಮ್ ಜಿದ್ದಿಗೆ ಬಿದ್ದು ಬರೋಬ್ಬರಿ 45 ಹಸಿ ಮೆಣಸಿನಕಾಯಿ ತಿಂದಿದ್ದಾರೆ ಅಂದ್ರೆ ಸುಮ್ನೆನಾ?[ದುಡ್ಡಿಗಾಗಿ 'ಬಾಂಬ್' ಎಸೆಯುತ್ತಿರುವ 'ಬಿಗ್ ಬಾಸ್' ಸ್ಪರ್ಧಿಗಳು.!]

ಎಲ್ಲಾ 'ಆನೆ ಪಟಾಕಿ' ಟಾಸ್ಕ್ ಪ್ರಭಾವ.!

'ಬಿಗ್ ಬಾಸ್' ನೀಡಿದ್ದ 'ಆನೆ ಪಟಾಕಿ' ಟಾಸ್ಕ್ ನಲ್ಲಿ... ಮನೆಯಲ್ಲಿ ಇರುವ ಎಲ್ಲಾ ಮೆಣಸಿನಕಾಯಿಗಳನ್ನು ತಿನ್ನುವ ಚಾಲೆಂಜ್ ಪ್ರಥಮ್ ಪಾಲಾಗಿತ್ತು. ಈ ಸವಾಲನ್ನು ಸ್ವೀಕರಿಸಿದ ಪ್ರಥಮ್ 45 ಹಸಿ ಮೆಣಸಿನಕಾಯಿ ತಿಂದರು.[ಕೀರ್ತಿ ವಿರುದ್ಧ ರೊಚ್ಚಿಗೆದ್ದ ಪ್ರಥಮ್, ತುಟಿಕ್ ಪಿಟಿಕ್ ಎನ್ನದ ಸದಸ್ಯರು!]

ಬಾಂಬ್ ಎಸೆದಿದ್ದು ಶಾಲಿನಿ.!

ಅಸಲಿಗೆ ಪ್ರಥಮ್ ಗೆ 'ಮನೆಯಲ್ಲಿ ಇರುವ ಎಲ್ಲಾ ಮೆಣಸಿನಕಾಯಿ ತಿನ್ನುವ' ಸವಾಲನ್ನು ನೀಡಿದ್ದು ಶಾಲಿನಿ.[ಯಾರೂ ಹಾರ ಹಾಕಲಿಲ್ಲ ಅಂತ ದೇವರ ಹಾರ ಹಾಕೊಂಡ ಪ್ರಥಮ್.!]

ಜಿದ್ದಿಗೆ ಬಿದ್ದ ಪ್ರಥಮ್

ಮೊದಲೇ ಪ್ರಥಮ್ ಗೂ ಶಾಲಿನಿ, ಕೀರ್ತಿಗೂ ಅಷ್ಟಕಷ್ಟೆ. ಏನೇ ಆದರೂ ಇವರಿಬ್ಬರ ಮುಂದೆ ಸೋಲಬಾರದು ಅಂತ ಪಣ ತೊಟ್ಟ ಪ್ರಥಮ್, ಬಾಯಿಯಲ್ಲಿ ಹುಣ್ಣಾಗಿದ್ದನ್ನೂ ಲೆಕ್ಕಿಸದೇ ಹಸಿ ಮೆಣಸಿನಕಾಯಿ ತಿಂದರು.

'ಉರಿ'ಗೆ 'ಉರಿ' ಕೊಡುವ ಪ್ರಥಮ್

''ಮೆಣಸಿನಕಾಯಿ ಟಾಸ್ಕ್ ನ ಪ್ರಥಮ್ ಮುಗಿಸಲ್ಲ'' ಎಂಬ ಗ್ಯಾರೆಂಟಿ ಮೇಲೆ ಶಾಲಿನಿ 'ಬಾಂಬ್' ಎಸೆದರು. ಸಾಲದಕ್ಕೆ ''ನಿಮಗಿಂತ ಉರಿ ಇರಲ್ಲ ಅದು... ಉರಿಗೆ ಉರಿ ತರಿಸುವವನು ನೀನು'' ಎಂಬ ಮಾತುಗಳು ಮೋಹನ್ ಮತ್ತು ಕೀರ್ತಿ ಕಡೆಯಿಂದ ಉದುರಿದವು. ಇದನ್ನೆಲ್ಲ ಕೇಳಿದ್ಮೇಲೆ ಇಡೀ ಬೌಲ್ ನಲ್ಲಿದ್ದ ಹಸಿ ಮೆಣಸಿನಕಾಯಿಯನ್ನ ತಿನ್ನಲು ಪ್ರಥಮ್ ಡಿಸೈಡ್ ಮಾಡಿಬಿಟ್ಟರು.

ಎಲ್ಲರಿಗೂ ಶಾಕ್.!

ಹಸಿ ಮೆಣಸಿನಕಾಯಿ ತಿನ್ನುವ ಟಾಸ್ಕ್ ನಲ್ಲಿ ಪ್ರಥಮ್ ರವರ ಪರ್ಫಾಮೆನ್ಸ್ ನೋಡಿ ಎಲ್ಲರೂ ಶಾಕ್ ಆಗ್ಬಿಟ್ರು.

ಕೈ ಮುಗಿದ ಶಾಲಿನಿ

''ತಮಾಷೆ ಮಾಡಿ ನಿಲ್ಲಿಸ್ತೀಯಾ ಅಂತ ಕೊಟ್ಟೆ. ಹಠ ಮಾಡಬೇಡ. ದಯವಿಟ್ಟು ನಿಲ್ಲಿಸು'' ಅಂತ ಪ್ರಥಮ್ ಬಳಿ ಶಾಲಿನಿ ಕೈ ಮುಗಿದು ಕೇಳಿಕೊಂಡರು.

ಶಾಲಿನಿ ಮೇಲೆ ಸಿಟ್ಟು.?

ಮಾಳವಿಕಾ - ''ಶಾಲಿನಿ ಮೇಲಿನ ಸಿಟ್ಟಿಗೆ ಹೀಗೆ ಮಾಡ್ತಿದ್ದಾನಾ? ಏನೂ ಅಂತಾನೇ ಗೊತ್ತಾಗುತ್ತಿಲ್ಲ''

ಮೋಹನ್ - ''ಯಾರ ಮೇಲಿನ ಸಿಟ್ಟಿಗೆ ಏನು.? ಯಾರು ತಾನೆ ಅಷ್ಟು ತಿನ್ನೋಕೆ ಆಗುತ್ತೆ. ಅದೇನು ಹುಡುಗಾಟನಾ? ಒಳ್ಳೆ ಬೀನ್ಸ್ ತಿಂದ ಹಾಗೆ ತಿನ್ತಿದ್ದಾನೆ''

ಮೈಂಡ್ ನಲ್ಲಿ ಫಿಕ್ಸ್ ಆಗಿತ್ತು.!

''ಮಾಡಲೇಬೇಕು ಅಂತ ಡಿಸೈಡ್ ಮಾಡ್ಬಿಟ್ಟಿದ್ದೀನಿ. ಅದೊಂದು ಬೌಲ್ ತಿನ್ನಬೇಕು ಅಂತ ಫಿಕ್ಸ್ ಆಗಿದ್ದೇನೆ. ಈ ಹಂತದಲ್ಲಿ ಪ್ರತಿ ಮೂವ್ ಕೂಡ ಕೌಂಟ್ ಆಗುತ್ತೆ'' ಎಂಬ ಕಾರಣಕ್ಕೆ ಯಾರು ಏನೇ ಹೇಳಿದರೂ, ಟಾಸ್ಕ್ ನ ಪ್ರಥಮ್ ನಿಲ್ಲಿಸಲಿಲ್ಲ.

'ಬಿಗ್ ಬಾಸ್' ಮಧ್ಯ ಪ್ರವೇಶ

ಕಡೆಗೆ ''ವೈದ್ಯರ ಸಲಹೆ ಮೇರೆಗೆ ಮೆಣಸಿನಕಾಯಿ ತಿನ್ನುವುದನ್ನು ನಿಲ್ಲಿಸಬೇಕೆಂದು 'ಬಿಗ್ ಬಾಸ್' ಆದೇಶಿಸುತ್ತಾರೆ'' ಎಂಬ ಅಶರೀರವಾಣಿ ಕೇಳಿದ ಮೇಲೆ ಪ್ರಥಮ್ ಹಸಿ ಮೆಣಸಿನಕಾಯಿ ತಿನ್ನುವುದನ್ನು ನಿಲ್ಲಿಸಿದರು.

ಇದ್ಯಾವ ಲೆಕ್ಕ.?

''ಸೀರಿಯಸ್ ಆಗಿ ಗೇಮ್ ಆಡು ಅಂದ್ರೆ ಅದರಲ್ಲಿ ತಮಾಷೆ ಮಾಡ್ತಿರ್ತಾನೆ
ತಮಾಷೆಗೆ ಕೊಟ್ಟಿರುವ ಟಾಸ್ಕ್ ನ ಸೀರಿಯಸ್ ಆಗಿ ಮಾಡ್ತಾನೆ'' ಅಂತ ಮೋಹನ್ ಮತ್ತು ಕೀರ್ತಿ ಕಾಮೆಂಟ್ ಮಾಡಿದರು.

ಪಾಯಿಂಟ್ಸ್ ಬೇಡ.!

''ಟಾಸ್ಕ್ ನ ಪ್ರಥಮ್ ಫಿನಿಶ್ ಮಾಡದೇ ಇದ್ದರೂ ಅವನು ತುಂಬಾ ಶ್ರಮ ಪಟ್ಟಿದ್ದಾನೆ. ನನಗೆ ಸಿಗಬೇಕಾದ ಹತ್ತು ಸಾವಿರ ಪಾಯಿಂಟ್ ಗಳನ್ನು ಅವನಿಗೆ ಕೊಡಿ. ನನಗೆ ಬೇಡ'' ಅಂತ ಶಾಲಿನಿ 'ಬಿಗ್ ಬಾಸ್' ಬಳಿ ಕೇಳಿಕೊಂಡರು.

ಸೋಲಲು ಇಷ್ಟವಿಲ್ಲ.!

''ನಾನಂತು ಟಾಸ್ಕ್ ನ ಬಿಟ್ಟಿಲ್ಲ. ನಾನು ಅವರ ಮುಂದೆ ಸೋಲಬಾರದು ಅಂತ ಮನಸ್ಸಿಗೆ ಬಂದಿದೆ ಈ ಹಂತದಲ್ಲಿ. ಪ್ಲೀಸ್ ನೀವು ನನಗೆ ಹತ್ತು ಸಾವಿರ ಪಾಯಿಂಟ್ಸ್ ಕೊಡಿ'' ಅಂತ ಪ್ರಥಮ್ 'ಬಿಗ್ ಬಾಸ್' ಬಳಿ ಕೇಳಿಕೊಂಡರು.

English summary
Bigg Boss Kannada 4: Week 15, Day 101: Pratham ate 45 green chillies

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada