»   » BBK4: ಯಾವ್ದು ಆಗ್ಬಾರ್ದು ಅಂದುಕೊಂಡ್ರೋ, ಈ ವಾರ ಅದೇ ಆಗ್ತಿದೆ.!

BBK4: ಯಾವ್ದು ಆಗ್ಬಾರ್ದು ಅಂದುಕೊಂಡ್ರೋ, ಈ ವಾರ ಅದೇ ಆಗ್ತಿದೆ.!

Posted By:
Subscribe to Filmibeat Kannada

ನಟಿ ಮಾಳವಿಕಾ ಅವಿನಾಶ್ ಕಂಡ್ರೆ 'ಬಿಗ್ ಬಾಸ್' ಮನೆಯ ಇತರೆ ಸದಸ್ಯರಿಗೆ ಅಷ್ಟಕಷ್ಟೆ. ನಟ ಮೋಹನ್ ಗಂತೂ ಮಾಳವಿಕಾ ಕಂಡ್ರೆ ಆಗಲ್ಲ. ಮಾಳವಿಕಾ ಮುಖಕ್ಕೆ ಹೊಡೆದ ಹಾಗೆ ಮಾತನಾಡುತ್ತಾರೆ ಅಂತ ಕಾವ್ಯಗೂ ಕೋಪ. ಇನ್ನೂ ಸಂಜನಾ, ಶೀತಲ್ ಶೆಟ್ಟಿ ಮತ್ತು ಶಾಲಿನಿ ಗಂತೂ ಕೇಳೋದೇ ಬೇಡ.

'ಮಮ್ಮಿ' ಅಂತ ಅಂದ್ಕೊಂಡು ಮಾಳವಿಕಾ ಹಿಂದೆ ಕೀರ್ತಿ ಮತ್ತು ನಿರಂಜನ್ ಓಡಾಡಿದ್ರೂ, ಅವರಿಬ್ಬರೇ ಕಳೆದ ವಾರ ಬಲೂನ್ ಒಡೆದು ಹಾಕಿ ಮಾಳವಿಕಾ 'ಕ್ಯಾಪ್ಟನ್' ಆಗುವುದನ್ನು ತಪ್ಪಿಸಿದ್ರು. [ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ & ಗ್ಯಾಂಗ್.!]

'ಬೇಸರ' ಆಗ್ಬಾರ್ದು ಅಂತ ಈ ವಾರ 'ಬಿಗ್ ಬಾಸ್' ಮನೆಯ ಬಹುತೇಕ ಸದಸ್ಯರು ನಟಿ ಮಾಳವಿಕಾ ರವರನ್ನ ಕ್ಯಾಪ್ಟನ್ ಮಾಡಿದ್ದಾರೆ. ಅಷ್ಟಾಗಿದ್ದರೆ ಪರ್ವಾಗಿಲ್ಲ, ಕ್ಯಾಪ್ಟನ್ ಆಗುವುದರ ಜೊತೆಗೆ 'ಬಿಗ್ ಬಾಸ್' ಮನೆಯ ಆಸ್ಥಾನಕ್ಕೆ ಮಾಳವಿಕಾ 'ಮಹಾರಾಣಿ' ಆಗಿದ್ದಾರೆ. ಸರ್ವಾಧಿಕಾರ ಸದ್ಯ ಮಾಳವಿಕಾ ಕೈಯಲ್ಲಿದೆ.! ಮುಂದೆ ಓದಿ....

ಆಗ್ಬಾರ್ದು ಅಂದುಕೊಂಡಿದ್ದು, ಆಗೇ ಹೋಯ್ತು.!

ನಟಿ ಮಾಳವಿಕಾ ಅವಿನಾಶ್ 'ಕ್ಯಾಪ್ಟನ್' ಆಗಬಾರದು ಅಂತ ನಟ ಮೋಹನ್, ಸಂಜನಾ ಮತ್ತು ಶೀತಲ್ ಶೆಟ್ಟಿ ಅಂದುಕೊಂಡಿದ್ದರು. 'ಆಗ್ಬಾರ್ದು ಅಂದುಕೊಂಡಿದ್ದು, ಈ ವಾರ ಆಗೇಹೋಯ್ತು'. ನಟಿ ಮಾಳವಿಕಾ ಅವಿನಾಶ್ ಕ್ಯಾಪ್ಟನ್ ಆಗ್ಬಿಟ್ಟರು. [ಮಾಳವಿಕಾರನ್ನ ಔಟ್ ಮಾಡಲು 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಪ್ಲಾನ್?]

ಯಾಕೆ ಕ್ಯಾಪ್ಟನ್ ಆಗ್ಬಾರ್ದು.?

ನಟಿ ಮಾಳವಿಕಾ ಎಲ್ಲರಿಗೂ ಆರ್ಡರ್ ಮಾಡುತ್ತಾರೆ ಎಂಬ ಕಾರಣಕ್ಕೆ 'ಬಿಗ್ ಬಾಸ್' ಮನೆಯ ಕೆಲ ಸದಸ್ಯರಿಗೆ ಅವರು ಕ್ಯಾಪ್ಟನ್ ಆಗುವುದು ಇಷ್ಟ ಇರ್ಲಿಲ್ಲ.

ಸರ್ವಾಧಿಕಾರ ಸಿಕ್ತಲ್ಲ.!

'ಬಿಗ್ ಬಾಸ್' ಮನೆಯ ಈ ವಾರದ ಕ್ಯಾಪ್ಟನ್ ಆಗುವುದರ ಜೊತೆಗೆ 'ರಾಣಿ ಮಹಾರಾಣಿ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ನಟಿ ಮಾಳವಿಕಾ 'ಮಹಾರಾಣಿ' ಆಗಿದ್ದಾರೆ. ಆ ಮೂಲಕ ಅವರಿಗೆ 'ಸರ್ವಾಧಿಕಾರ' ಕೂಡ ಸಿಕ್ಕಿದೆ.

ಟಾಸ್ಕ್ ಏನು?

ಪ್ರಜಾಪ್ರಭುತ್ವ ಚಾಲ್ತಿಯಲ್ಲಿರುವ ಈಗಿನ ಕಾಲದಲ್ಲಿ ರಾಜರ ಆಳ್ವಿಕೆ ಅನುಭವವನ್ನು ತಿಳಿಸುವ ಸಲುವಾಗಿ 'ಬಿಗ್ ಬಾಸ್' ಈ ವಾರ 'ರಾಣಿ-ಮಹಾರಾಣಿ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದ್ದಾರೆ. ಇದರ ಅನುಸಾರ 'ಬಿಗ್ ಬಾಸ್' ಮನೆಯೇ ಕಾಲ್ಪನಿಕ ಸಾಮ್ರಾಜ್ಯ. ಮಾಳವಿಕಾ ಅವಿನಾಶ್ ಸಾಮ್ರಾಜ್ಯದ ಮಹಾರಾಣಿ. ಸರ್ವಾಧಿಕಾರಿ ಆಗಿರುವ ಮಹಾರಾಣಿ ಮಾಳವಿಕಾ ಅವಿನಾಶ್ ತೆಗೆದುಕೊಳ್ಳುವ ನಿರ್ಣಯಗಳೇ ಅಂತಿಮ.

ರಾಜಕುಮಾರಿ ಆಗಿ ಸಂಜನಾ

ಮೊದಲೇ ಮಾಳವಿಕಾಗೂ ಸಂಜನಾಗೂ ಆಗ್ಬರಲ್ಲ. ಇದನ್ನ ತಿಳಿದೇ, 'ಬಿಗ್ ಬಾಸ್' ಮಹಾರಾಣಿ ಮಾಳವಿಕಾ ಮುದ್ದಿನ ಮಗಳಾಗಲು (ರಾಜಕುಮಾರಿ) ಸಂಜನಾ ರನ್ನ ಆಯ್ಕೆ ಮಾಡಿದ್ದಾರೆ.

ಸಂಜನಾಗೆ ಭೋದನೆ ಮಾಡಿದ ಭುವನ್

''ಟಾಸ್ಕ್ ನ ಸೀರಿಯಸ್ ಆಗಿ ಮಾಡು. ಇಲ್ಲಿಯವರೆಗೂ ನೀನು ಇದೀಯಾ ಅಂತ ತೋರಿಸಿಕೊಂಡಿಲ್ಲ. ಈಗ ಚಾನ್ಸ್ ಸಿಕ್ಕಿದೆ. ಮಿಸ್ ಮಾಡಿಕೊಳ್ಳಬೇಡ'' ಅಂತ 'ರಾಜಕುಮಾರಿ'ಯಾದ ಸಂಜನಾಗೆ ಭುವನ್ ಭೋದನೆ ಮಾಡುತ್ತಿದ್ದರು. ಅದಕ್ಕೆ, ''ಖಂಡಿತ. ಎಲ್ಲರೂ ಮೇಲೂ ಇರುವ ಸಿಟ್ಟನ್ನ ತೀರಿಸಿಕೊಳ್ಳುತ್ತೇನೆ'' ಅಂತ ಸಂಜನಾ ಹೇಳಿದರು.

ಮಂತ್ರಿ ಆದ ತೋತ್ಲ (ಮೋಹನ್)

ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಕೀಲಿ ಬಳಸಿ ಪೆಟ್ಟಿಗೆ ತೆರೆಯುವ ಸ್ಪರ್ಧೆಯಲ್ಲಿ ಜಯಶಾಲಿ ಆದ ಪರಿಣಾಮ ನಟ ಮೋಹನ್ 'ಮಾಳವಿ' ಸಾಮ್ರಾಜ್ಯದ 'ಮಂತ್ರಿ' ಆದರು.

'ಮಂತ್ರಿ' ತೋತ್ಲ ಕೆಲಸವೇನು?

ಮಹಾರಾಣಿ ರವರ ಎಲ್ಲ ಸಮಸ್ಯೆಗಳನ್ನು ಬುದ್ದಿವಂತಿಕೆಯಿಂದ ಪರಿಹಾರ ಮಾಡುವ ಜವಾಬ್ದಾರಿ ತೋತ್ಲ (ಮೋಹನ್)ರದ್ದು.

ಆಗ್ಬಾರದ್ದೇ ಆಯ್ತಲ್ಲ.!

ನಟಿ ಮಾಳವಿಕಾ ಕಂಡ್ರೆ ಸಿಡಿದೇಳುತ್ತಿದ್ದ ನಟ ಮೋಹನ್, ಈಗ 'ಮಂತ್ರಿ' ಆಗಿ 'ಮಹಾರಾಣಿ' ಮಾಳವಿಕಾ ಮುಂದೆ ತಲೆ ಬಗ್ಗಿಸಿ ನಿಲ್ಲಬೇಕಾಗಿದೆ. ಯಾವುದು ಆಗ್ಬಾರ್ದು ಅಂತ ಮೋಹನ್ ಅಂದುಕೊಂಡಿದ್ರೋ, ಅದು ಈ ವಾರ ನಡೆಯುತ್ತಿದೆ.

ಶೀತಲ್ ಶೆಟ್ಟಿ-ಕೀರ್ತಿಗೆ ಏನು ಕೆಲಸ?

ಕೀರ್ತಿ ಕುಮಾರ್ ಸೇನಾಧಿಪತಿ ಆದ್ರೆ, ಶೀತಲ್ ಶೆಟ್ಟಿ ಕಾವಲು ಭಟ್ಟರಾದರು. ಇಬ್ಬರಿಗೂ ಮಹಾರಾಣಿ ಮತ್ತು ರಾಜಕುಮಾರಿ ರವರನ್ನು ಕಾವಲು ಕಾಯುವ ಕೆಲಸ.

ಉಳಿದವರು?

ಉಳಿದವರೆಲ್ಲರೂ ಸಾಮಾನ್ಯ ಪ್ರಜೆಗಳು. ಮಹಾರಾಣಿ ರವರನ್ನ ಗೌರವಿಸುವುದು, ಅವರ ಆಜ್ಞೆ ಚಾಚೂ ತಪ್ಪದೇ ಪಾಲಿಸುವುದು ಪ್ರಜೆಗಳ ಕರ್ತವ್ಯ.

ಆರಂಭದಲ್ಲೇ ಪ್ರಥಮ್ ಗೆ ಶಿಕ್ಷೆ.!

ಮಾಳವಿಕಾ 'ಮಹಾರಾಣಿ' ಆದ ಕೂಡಲೆ ಯಾರೊಂದಿಗೂ ಮಾತಾಡಂತೆ ಪ್ರಥಮ್ ಗೆ ಆಜ್ಞೆ ಮಾಡಿದರು. ಆಜ್ಞೆ ಮೀರಿದ ಕಾರಣ ಪ್ರಥಮ್ ಗೆ ಶಿಕ್ಷೆ ವಿಧಿಸಲಾಯ್ತು.

ಈ ವಾರವೂ ಬೆಡ್ ರೂಂಗೆ ಎಂಟ್ರಿ ಇಲ್ಲ.!

ಕಳೆದ ವಾರದ ಟಾಸ್ಕ್ ನಲ್ಲಿ ಬೆಡ್ ರೂಂ ಏರಿಯಾ 'ಗಂಡಸರ' ಪಾಲಾಗಿತ್ತು. ಹೀಗಾಗಿ ಹೆಂಗಸರು 'ಸುಂಕ' ಕೊಟ್ಟು ಪ್ರವೇಶಿಸಲಿಲ್ಲ. ಈ ಬಾರಿ ಮಾಳವಿಕಾ 'ಮಹಾರಾಣಿ' ಆದ್ಮೇಲೆ ಬೆಡ್ ರೂಂ ಒಳಗೆ ''ಪ್ರಜೆಗಳಿಗೆ ಪ್ರವೇಶ ಇಲ್ಲ'' ಅಂತ ಆಜ್ಞೆ ಮಾಡಿದ್ದಾರೆ. ಹೀಗಾಗಿ, ಸತತವಾಗಿ ಎರಡನೇ ವಾರವೂ 'ಬಿಗ್ ಬಾಸ್' ಮನೆಯ ಅನೇಕ ಸದಸ್ಯರಿಗೆ ನೆಲವೇ ಗತಿ.

ಕಾರುಣ್ಯ ರಾಮ್ ಗೆ 'ರಾಜಕುಮಾರಿ' ಆಗುವ ಚಿಂತೆ.!

'ಸಾಮಾನ್ಯ ಪ್ರಜೆ' ಆಗಿರುವುದು ಕಾರುಣ್ಯ ರಾಮ್ ಗೆ ಇಷ್ಟವಿಲ್ಲ. ಅದಕ್ಕಿಂತ ಹೆಚ್ಚಾಗಿ ಕಾರುಣ್ಯ ರಾಮ್ ಗೆ 'ರಾಜಕುಮಾರಿ' ಆಗುವ ಬಯಕೆ. ಹೀಗಾಗಿ, ''ಅವಳೊಬ್ಬಳೇನಾ (ಸಂಜನಾ) ರಾಜಕುಮಾರಿ ಆಗುವುದು, ನಾನು ಆಗಬಾರದಾ? ನಾನು ಚೆನ್ನಾಗಿಲ್ವಾ?'' ಅಂತ ಭುವನ್ ಮತ್ತು ನಿರಂಜನ್ ಗೆ ಕಾರುಣ್ಯ ರಾಮ್ ಪ್ರಶ್ನೆ ಮಾಡುತ್ತಿದ್ದರು.

'ಉರಿ' ಹೊತ್ತಿಕೊಳ್ಳುವುದು ಯಾವಾಗ್ಲೋ?

ಮಾಳವಿಕಾ 'ಮಹಾರಾಣಿ' ಆಗಿರುವುದು, ಸಂಜನಾ 'ರಾಜಕುಮಾರಿ' ಆಗಿರುವುದು 'ಬಿಗ್ ಬಾಸ್' ಮನೆಯ ಅನೇಕ ಸದಸ್ಯರಿಗೆ ಇಷ್ಟವಿಲ್ಲ. ಬೂದಿ ಮುಚ್ಚಿದ ಕೆಂಡದಂತೆ ಇರುವ ಸದ್ಯದ ಪರಿಸ್ಥಿತಿ ಯಾವ ಮಿತಿ ಮೀರುತ್ತೋ, ನೋಡೋಣ.

English summary
Bigg Boss Kannada 4, Day 23 : Kannada Actress Malavika Avinash becomes 'Maharani' of 'Bigg Boss' House.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada