»   » ಕೊನೆಯ ಎರಡು ವಾರಗಳ 'ಬಿಗ್ ಬಾಸ್' ಕಲರ್ಸ್ ಸೂಪರ್ ನಲ್ಲಿ.!

ಕೊನೆಯ ಎರಡು ವಾರಗಳ 'ಬಿಗ್ ಬಾಸ್' ಕಲರ್ಸ್ ಸೂಪರ್ ನಲ್ಲಿ.!

Posted By:
Subscribe to Filmibeat Kannada

ಎಲ್ಲರಿಗೂ ಗೊತ್ತಿರುವ ಹಾಗೆ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಎರಡು ವಾರಗಳ ಕಾಲ ಎಕ್ಸ್ ಟೆಂಡ್ ಆಗಿದೆ. 14 ವಾರಗಳ ಬದಲು 16 ವಾರಗಳ ಕಾಲ ಈ ಬಾರಿಯ 'ಬಿಗ್ ಬಾಸ್' ನಡೆಯಲಿದೆ.

ಹಾಗಂದ ಮಾತ್ರಕ್ಕೆ, ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಇನ್ನೆರಡು ವಾರಗಳ ಕಾಲ 'ಬಿಗ್ ಬಾಸ್' ಕಾರ್ಯಕ್ರಮ ಪ್ರಸಾರವಾಗಲಿದೆ ಅಂತ ಅಂದುಕೊಳ್ಳಬೇಡಿ. ಯಾಕಂದ್ರೆ, ಬರುವ ಸೋಮವಾರದಿಂದ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ರಾತ್ರಿ 9 ಗಂಟೆಗೆ 'ಬಿಗ್ ಬಾಸ್' ಕಾರ್ಯಕ್ರಮ ಪ್ರಸಾರವಾಗಲಿದೆ.

'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಹೊಸ ಸೀರಿಯಲ್

ಬರುವ ಸೋಮವಾರ ಅಂದ್ರೆ ಜನವರಿ 16 ರಿಂದ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ರಾಧಾ ರಮಣ' ಧಾರಾವಾಹಿ ಪ್ರಸಾರವಾಗಲಿದೆ.['ಬಿಗ್ ಬಾಸ್' 2 ವಾರ ವಿಸ್ತರಣೆಯ ಹಿಂದಿನ ಮರ್ಮ ಬಿಚ್ಚಿಟ್ಟ ಪರಮೇಶ್ವರ್ ಗುಂಡ್ಕಲ್!]

'ಕಲರ್ಸ್ ಸೂಪರ್'ಗೆ ಶಿಫ್ಟ್ ಆದ 'ಬಿಗ್ ಬಾಸ್'

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಪ್ರಸಾರವಾಗುವುದರಿಂದ, ಕಲರ್ಸ್ ಸೂಪರ್ ಚಾನೆಲ್ ನಲ್ಲಿ ರಾತ್ರಿ 9 ಗಂಟೆಗೆ 'ಬಿಗ್ ಬಾಸ್' ಪ್ರಸಾರ ಆಗಲಿದೆ.

ಎರಡು ವಾರ ಎಕ್ಸ್ ಟೆಂಡ್ ಆಗಿದ್ದು ಯಾಕೆ.?

''13 ವಾರಗಳ ಕಾಲ ಉತ್ತಮ ಜನಪ್ರಿಯತೆ ಪಡೆದುಕೊಂಡು, ಜನರನ್ನ ಅತ್ಯುತ್ತಮವಾಗಿ ಈ ಕಾರ್ಯಕ್ರಮ ರಂಜಿಸಿದೆ. ಆದ್ದರಿಂದ ಜನರಿಗೂ ಒಳ್ಳೆಯ ಮನರಂಜನೆ ಸಿಗುತ್ತೆ ಹಾಗೂ ವಾಹಿನಿಗೂ ಉತ್ತಮ ವೀಕ್ಷಕರು ಸಿಗುತ್ತಾರೆ ಎಂಬ ಕಾರಣಕ್ಕೆ 'ಬಿಗ್ ಬಾಸ್' ಎಕ್ಸ್ ಟೆಂಡ್ ಮಾಡಲಾಯ್ತು'' ಎನ್ನುತ್ತಾರೆ 'ಬಿಗ್ ಬಾಸ್' ಡೈರೆಕ್ಟರ್ ಪರಮೇಶ್ವರ ಗುಂಡ್ಕಲ್.

ಎದುರಿಸಿದ ಸವಾಲು.?

''ಸುದೀಪ್ ಅವರ ಕಾಲ್ ಶೀಟ್ ತುಂಬಾ ಇಂಪಾರ್ಟೆಂಟ್ ಆಗಿತ್ತು. ಅವರ ಬ್ಯುಸಿ ಶೆಡ್ಯೂಲ್ ನಲ್ಲಿ ಮತ್ತೆ ಮೂರು ದಿನ ಕಾರ್ಯಕ್ರಮ ನಿರೂಪಣೆ ಮಾಡಬೇಕಿತ್ತು. ಆದ್ರೆ, ನಮಗಾಗಿ ಬಿಡುವು ಮಾಡಿಕೊಂಡು ಸಮ್ಮತಿಸಿದರು. ನಮಗೂ ಈ ನಿರ್ಧಾರ ಪ್ರಕಟ ಮಾಡುವಾಗ ಆತಂಕವಿತ್ತು. ಆದ್ರೆ, ಸುದೀಪ್ ಅವರು ಹೇಳಿದಾಗ ಮನೆಯಲ್ಲಿರುವ ಸದಸ್ಯರು ಚಪ್ಪಾಳೆ ಹೊಡೆದರು'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದಾರೆ.

English summary
Bigg Boss Kannada 4: Last two weeks of the Reality Show will be aired in Colors Super Channel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada