»   » ಬಿಗ್ ಬಾಸ್ ಕನ್ನಡ 4 : ಇವರೇ ಕಣ್ರಿ 15 ಸ್ಪರ್ಧಿಗಳು

ಬಿಗ್ ಬಾಸ್ ಕನ್ನಡ 4 : ಇವರೇ ಕಣ್ರಿ 15 ಸ್ಪರ್ಧಿಗಳು

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 4 ಅಕ್ಟೋಬರ್ 9 ರಿಂದ ಆರಂಭವಾಗಲಿದೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಈ ಶೋನಲ್ಲಿ ಯಾರು ಯಾರು ಸ್ಪರ್ಧಿಗಳಾಗಿ ರೆಡ್ ಕಾರ್ಪೆಟ್ ತುಳಿದು ಮನೆ ಪ್ರವೇಶಿಸುತ್ತಾರೆ ಎಂಬ ಮಾಹಿತಿ ಬಿಟಿವಿ ವಾಹಿನಿಯಿಂದ ಸೋರಿಕೆಯಾಗಿದೆ. ಆದರೆ, ಅಧಿಕೃತ ಪ್ರಕಟನೆ ಇನ್ನೂ ಹೊರ ಬಂದಿಲ್ಲ, ಭಾನುವಾರ ಸಂಜೆ ಕಲರ್ಸ್ ವಾಹಿನಿಯಲ್ಲಿ ನೋಡಿ ಕುತೂಹಲ ತಣಿಸಿಕೊಳ್ಳಿ.

ಫಿಲ್ಮಿಬೀಟ್ ನಲ್ಲಿ ಈ ಮೊದಲೇ 5 ಮಂದಿ ಸ್ಪರ್ಧಿಗಳ ಹೆಸರು ಬಹಿರಂಗಪಡಿಸಿದ್ವಿ ಈ ಪೈಕಿ ನವೀನ್ ಕೃಷ್ಣ ಹೆಸರು ಮಾತ್ರ ಬದಲಾಗಿದೆ. ಮಿಕ್ಕಂತೆ 15 ಸ್ಪರ್ಧಿಗಳ ಪಟ್ಟಿ ಮುಂದಿದೆ. [ಬಿಗ್ ಬಾಸ್ ಕನ್ನಡ 4: 5 ಮಂದಿ ಸ್ಪರ್ಧಿಗಳ ಹೆಸರು ಬಹಿರಂಗ!]

ನಟ ಕಿಚ್ಚ ಸುದೀಪ ನಿರೂಪಣೆಯ ಈ ಜನಪ್ರಿಯ ಶೋನಲ್ಲಿ ಈ ಬಾರಿ ಒಟ್ಟು 15 ಮಂದಿ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಅಕ್ಟೋಬರ್ 9 ರಂದು ಸಂಜೆ 6 ಗಂಟೆಗೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಓಪನ್ನಿಂಗ್ ಶುರು ಆಗಲಿದೆ. ಅಕ್ಟೋಬರ್ 10 ರಿಂದ ಸ್ಪರ್ಧಿಗಳು ಮನೆಯಲ್ಲಿ ಏನೇನು ಮಾಡಲಿದೆ ಎಂಬುದನ್ನು ವೀಕ್ಷಕರು ನೋಡಿ ಆನಂದಿಸಬಹುದು.

ಹೋಗಲ್ಲ ಎಂದವರು: ರಕ್ಷಿತಾ ಪ್ರೇಮ್, ಅನುಪ್ರಭಾಕರ್, ಯೋಗೀಶ್, ತರುಣ್ ಸೇರಿದಂತೆ ಕೆಲ ತಾರೆಯರ ಹೆಸರುಗಳು 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಲಿಸ್ಟ್ ನಲ್ಲಿ ಇದೆ ಎನ್ನಲಾಗಿತ್ತು. ಆದರೆ, ಅಂತಿಮ ಹೆಸರುಗಳು ಇಲ್ಲಿವೆ. ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಅಂತ ನಟಿ ಸುಧಾರಾಣಿ, ತಾರಾ ಮತ್ತು ನಟ ಕೋಮಲ್ ಸ್ಪಷ್ಟಪಡಿಸಿದ್ದಾರೆ.

ಯಾವ ಕ್ಷೇತ್ರಗಳಿಂದ ಅಯ್ಕೆ: ಚಲನಚಿತ್ರ ನಟ, ನಟಿ, ಪೋಷಕ ಪಾತ್ರಧಾರಿ, ಹಳೆ ನಟ/ನಟಿ, ನಿರ್ದೇಶಕ, ನಿರೂಪಕ, ಆಧಾತ್ಮ ಚಿಂತಕ, ಕಿರುತೆರೆ ಸ್ಟಾರ್, ಪತ್ರಕರ್ತ, ರೇಡಿಯೋ ಜಾಕಿ, ಕ್ರಿಕೆಟರ್, ಕಲಾವಿದ, ರೂಪದರ್ಶಿ, ವಿವಾದಿತ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ.

(ಫಿಲ್ಮಿಬೀಟ್ ಕನ್ನಡ)

ನಟಿ-ರಾಜಕಾರಣಿ ಮಾಳವಿಕಾ

ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರ ವಹಿಸುವ ಜೊತೆ-ಜೊತೆಗೆ ರಾಜಕೀಯ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ, ನಟಿ ಕಮ್ ಬಿಜೆಪಿ ರಾಜಕಾರಣಿ ಮಾಳವಿಕಾ ಅವಿನಾಶ್ ಅವರು ಈ ಬಾರಿ ಬಿಗ್ ಬಾಸ್ ಮನೆಯ ಕದ ತಟ್ಟಿದ್ದಾರೆ.

ನಟಿ ಕಾರುಣ್ಯ ರಾಮ್

'ವಜ್ರಕಾಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಕಾರುಣ್ಯ ರಾಮ್ ಅವರಿಗೆ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡುವ ಅವಕಾಶ ದೊರೆತಿದೆ. ಸದ್ಯಕ್ಕೆ 'ಕಿಕ್' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ 'ಹುಬ್ಬಳ್ಳಿ' ತಂಡದ ಮೆಂಟರ್ ಆಗಿರುವ ಕಾರುಣ್ಯ ಬಿಗ್ ಬಾಸ್ ಮನೆಗೆ ಬರುವ ಮನಸ್ಸು ಮಾಡಿದ್ದಾರೆ.

ನಟ ಮೋಹನ್

ಕನ್ನಡ ಚಿತ್ರರಂಗದ ಹಾಸ್ಯ ನಟ ಮೋಹನ್ ಅಲಿಯಾಸ್ ಮೋಹನ್ ಶಂಕರ್ ಅವರು ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.

ಗಾಯಕಿ ಚೈತ್ರಾ

ಕನ್ನಡ ಚಿತ್ರರಂಗದ ಹಿನ್ನಲೆ ಗಾಯಕಿ ಚೈತ್ರಾ ಅವರು ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಬಲಗಾಲಿಟ್ಟು ಒಳ ಬರುತ್ತಾರೆ ಎನ್ನಲಾಗುತ್ತಿದೆ.

ನಟಿ ಕಮ್ ನಿರೂಪಕಿ ಶೀತಲ್ ಶೆಟ್ಟಿ

ಖ್ಯಾತ ಚಾನೆಲ್ ಟಿವಿ9 ಮೂಲಕ ನಿರೂಪಕಿಯಾಗಿ ಖ್ಯಾತಿ ಪಡೆದಿರುವ ಶೀತಲ್ ಶೆಟ್ಟಿ ಅವರು ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗೋದು ಪಕ್ಕಾ. ಇವರು 'ಉಳಿದವರು ಕಂಡಂತೆ' 'ಕೆಂಡಸಂಪಿಗೆ' ಮುಂತಾದ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

ಸ್ಪರ್ಶ ನಟಿ ರೇಖಾ

'ಸ್ಪರ್ಶ' ಚಿತ್ರದಲ್ಲಿ ಸುದೀಪ್ ಅವರ ಜೊತೆ ನಟಿಸಿದ್ದ ನಟಿ ರೇಖಾ ಅವರು ಸುದೀಪ್ ಸಾರಥ್ಯದ 'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಡಲಿದ್ದಾರೆ. ಕನ್ನಡ ಚಿತ್ರರಂಗದಿಂದ ಸದ್ದಿಲ್ಲದೆ ಹಿಂದೆ ಸರಿದಿದ್ದ ನಟಿ ಇನ್ನುಮುಂದೆ ಬಿಗ್ ಬಾಸ್ ಮೂಲಕ ಅಭಿಮಾನಿಗಳಿಗೆ ರಂಜಿಸಲಿದ್ದಾರೆ.

ನಿರ್ದೇಶಕ ಪ್ರಥಮ

ಕನ್ನಡ ಚಿತ್ರ 'ದೇವ್ರಾಣೆ ಬಿಡು ಗುರು' ಖ್ಯಾತಿಯ ನಿರ್ದೇಶಕ ಪ್ರಥಮ್ ಎಂಬುವವರು ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.

ನಿರೂಪಕ ನಿರಂಜನ್ ದೇಶಪಾಂಡೆ

ನಟ ಕಮ್ ನಿರೂಪಕ ನಿರಂಜನ್ ದೇಶಪಾಂಡೆ ಅವರು ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಡೋದು ಪಕ್ಕಾ.

ಫೇಸ್ ಬುಕ್ ಸ್ಟಾರ್ ಕಿರಿಕ್ ಕೀರ್ತಿ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸಕ್ರೀಯರಾಗಿರುವ, ಹವ್ಯಾಸಿ ಬರಹಗಾರ ಕಿರಿಕ್ ಕೀರ್ತಿ ಅವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಚಾತುರ್ಯತೆ ತೋರಲಿದ್ದಾರೆ.

ಸಂಜನಾ

ಕನ್ನಡ ಕಿರುತೆರೆ ನಟಿ ಸಂಜನಾ ಎಂಬುವವರು ಕೂಡ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಕಿರುತೆರೆ ನಟಿ ವಾಣಿಶ್ರೀ

ಕನ್ನಡ ಕಿರುತೆರೆ ಲೋಕದ ತಾರೆ ವಾಣಿಶ್ರೀ ಅವರು 'ಬಿಗ್ ಬಾಸ್ ಕನ್ನಡ 4' ಗೆ ಎಂಟ್ರಿ ಕೊಡುತ್ತಿದ್ದಾರೆ.

ಕಾವ್ಯ ಶಾಸ್ತ್ರಿ

ಕಾವ್ಯ ಶಾಸ್ತ್ರಿ ಅವರು ಈ ಬಾರಿಯ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ.

ಭುವನ್ ಪೊನ್ನಣ್ಣ

ರಿಯಾಲಿಟಿ ಶೋ ಸ್ಟಾರ್ ಕಮ್ ನಟ ಭುವನ್ ಪೊನ್ನಣ್ಣ ಅವರು ಈ ಬಾರಿಯ ಬಿಗ್ ಬಾಸ್ ಮನೆಯ ಬಾಗಿಲು ತಟ್ಟಿದ್ದಾರೆ.

ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್

ಮಾಜಿ ಕ್ರಿಕೆಟಿಗ ಜೊತೆಗೆ ಜೆಡಿಎಸ್ ಸದಸ್ಯ ಆಗಿರುವ ದೊಡ್ಡ ಗಣೇಶ ಅವರು ಬಿಗ್ ಬಾಸ್ 4ರ ಸದಸ್ಯ ಆಗಿದ್ದಾರೆ.

ಕಿರುತೆರೆ ನಟಿ ಶಾಲಿನಿ

'ಪಾಪಾ ಪಾಂಡು' ಸೀರಿಯಲ್ ನಲ್ಲಿ ನಕ್ಕು ನಲಿಸುತ್ತಿದ್ದ ಹಾಸ್ಯ ನಟಿ ಶಾಲಿನಿ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ.

English summary
Enjoy Kannada. "Bigboss 4" Everynight from October 9, 2016. onwards Colors Kannada Channel. Here is the list of 15 contestants leaked. The popular reality show hosted by actor Kichcha Sudeepa. But, Official announcement is yet to be released

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada