For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ಕನ್ನಡ-4' ಶೋನ ಎಲ್ಲಾ ಸ್ಪರ್ಧಿಗಳ ಪರಿಚಯ

  By ಸುನೀತಾ ಗೌಡ
  |

  'ಕನ್ನಡ ಬಿಗ್ ಬಾಸ್', ಮೂರು ಕಲರ್ ಫುಲ್ ಸೀಸನ್ ಬಳಿಕ ಕೊನೆಗೂ 'ಬಿಗ್ ಬಾಸ್ ಕನ್ನಡ 4' ಅದ್ಧೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಇಷ್ಟು ದಿನಗಳ ಕಾಲ 'ಬಿಗ್ ಬಾಸ್' ಮನೆಗೆ ಯಾರು ಹೋಗ್ತಾರೆ-ಯಾರು ಹೋಗ್ತಾರೆ ಅಂತ ಎಲ್ಲರೂ ಕುತೂಹಲದಿಂದ ತುದಿಗಾಲಲ್ಲಿ ಕಾಯುತ್ತ ಕುಳಿತಿದ್ದರು.

  ಜೊತೆಗೆ ಅವರು ಹೋಗ್ತಾರಂತೆ-ಇವರು ಹೋಗ್ತಾರಂತೆ ಅಂತ ಸಾಕಷ್ಟು ಅಂತೆ-ಕಂತೆ ಸುದ್ದಿಗಳು ಎಲ್ಲಾ ಕಡೆ ಪ್ರಚಲಿತದಲ್ಲಿತ್ತು. ಇದೀಗ ಎಲ್ಲಾ ರೂಮರ್ಸ್ ಗಳಿಗೆ ತೆರೆ ಬಿದ್ದಿದ್ದು, ಅಂತಿಮ 15 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.[ಬಿಗ್ ಬಾಸ್ ಕನ್ನಡ 4 : ಇವರೇ ಕಣ್ರಿ 15 ಸ್ಪರ್ಧಿಗಳು]

  ನಿನ್ನೆ (ಅಕ್ಟೋಬರ್ 9) ಸಂಜೆ 6 ಗಂಟೆಗೆ ಕಲರ್ ಫುಲ್ ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್ ಅವರು ಎಲ್ಲಾ 15 ಸ್ಪರ್ಧಿಗಳನ್ನು ಸಂಭ್ರಮದಿಂದ ಸ್ವಾಗತಿಸಿ, 55 ಕ್ಯಾಮೆರಾಗಳಿರುವ ಬಿಗ್ ಬಾಸ್ ಅರಮನೆಯೊಳಗೆ ಕಳುಹಿಸಿಕೊಟ್ಟಿದ್ದಾರೆ.

  'ಕಂಡಿರೋ ಮುಖಗಳ ಕಾಣದೇ ಇರೋ ಮುಖ', ಇನ್ಮುಂದೆ ಪ್ರತೀ ದಿನ ರಾತ್ರಿ 9 ಗಂಟೆಗೆ, ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ 4' ಮೂಡಿಬರಲಿದೆ.

  ಇದೀಗ ಅಂತಿಮ 15 ಸ್ಪರ್ಧಿಗಳ ಸಂಪೂರ್ಣ ಪರಿಚಯ ಮಾಡಿಕೊಳ್ಳಲು, ಮುಂದೆ ಓದಿ.....

  ಮೊದಲ ಸ್ಪರ್ಧಿ ನಿರ್ದೇಶಕ ಪ್ರಥಮ

  ಮೊದಲ ಸ್ಪರ್ಧಿ ನಿರ್ದೇಶಕ ಪ್ರಥಮ

  ನಟ ಕಮ್ ನಿರೂಪಕ ಅಕುಲ್ ಬಾಲಾಜಿ ಅವರ 'ದೇವ್ರಾಣೆ ಬಿಡು ಗುರು' ಹಾಗೂ 'ಒಳ್ಳೆ ಹುಡುಗ' ಚಿತ್ರಕ್ಕೆ ನಿರ್ದೇಶನ ಮಾಡಿದ್ದ ನಿರ್ದೇಶಕ ಪ್ರಥಮ್ ಅವರು ಈ ಬಾರಿಯ 'ಬಿಗ್ ಬಾಸ್ ಕನ್ನಡ 4' ಗೆ ಮೊದಲ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಕಡಿಮೆ ಮೌನ ಜಾಸ್ತಿ ಮಾತಾಡುವ ಪ್ರಥಮ್ ಅವರು ಈಗಲೇ ಬಿಗ್ ಬಾಸ್ ಅರಮನೆಗೆ ತಮ್ಮನ್ನು ತಾವು ಯುವರಾಜ್ ಅಂತ ಅಂದುಕೊಂಡಿದ್ದಾರೆ. ಸಿನಿಮಾ ಸ್ಟಾರ್ ಗಳಿಗೆ ಮತ್ತು ರಾಜಕೀಯ ವ್ಯಕ್ತಿಗಳಿಗೆ ತುಂಬಾ ಹತ್ತಿರದವರಾದ ಪ್ರಥಮ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮತನವನ್ನು ಉಳಿಸಿಕೊಳ್ಳುತ್ತಾರಾ?, ಅನ್ನೋದನ್ನು ನೋಡಲು 'ಬಿಗ್ ಬಾಸ್ ಕನ್ನಡ 4'ನ್ನು ತಪ್ಪದೇ ನೋಡಿ. ['ಬಿಗ್ ಬಾಸ್ 3' ಎಲ್ಲಾ 15 ಸ್ಪರ್ಧಿಗಳ ಕಿರು ಪರಿಚಯ]

  ಎರಡನೇ ಸ್ಪರ್ಧಿ ನಿರೂಪಕಿ-ನಟಿ ಶೀತಲ್ ಶೆಟ್ಟಿ

  ಎರಡನೇ ಸ್ಪರ್ಧಿ ನಿರೂಪಕಿ-ನಟಿ ಶೀತಲ್ ಶೆಟ್ಟಿ

  'ಟಿವಿ 9'ನಲ್ಲಿ ಕ್ಷಣ-ಕ್ಷಣದ ಸುದ್ದಿ ಕೊಡುತ್ತಿದ್ದ ನಿರೂಪಕಿ ಶೀತಲ್ ಶೆಟ್ಟಿ ಅವರು ಈ ಬಾರಿಯ ಬಿಗ್ ಬಾಸ್ ಎಂಬ ಪಂಜರಕ್ಕೆ ಎರಡನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತಾಡುವ ಕುಡ್ಲದ ಪೋರಿ ಶೀತಲ್ ಶೆಟ್ಟಿ ಅವರು 'ಉಳಿದವರು ಕಂಡಂತೆ' ಎಂಬ ಚಿತ್ರದಲ್ಲಿ ನಟಿಸಿದ್ದರು. ಎಲ್ಲರಿಗೂ ನ್ಯೂಸ್ ಕೊಟ್ಟು ಬಡಿದೆಬ್ಬಿಸುತ್ತಿದ್ದ ಕರಾವಳಿ ಹುಡುಗಿ ಶೀತಲ್ ಶೆಟ್ಟಿ ಇದೀಗ ಬಿಗ್ ಬಾಸ್ ಅರಮನೆಯಲ್ಲಿ ಯಾವ ರೀತಿ ಕಮಾಲ್ ಮಾಡುತ್ತಾರೆ?, ಕ್ಷಣ-ಕ್ಷಣದ ಮಾಹಿತಿಗಾಗಿ ಬಿಗ್ ಬಾಸ್ ನೋಡ್ತಾ ಇರಿ.

  ಮೂರನೇ ಸ್ಪರ್ಧಿ 'ಪಾಪಾ ಪಾಂಡು' ಶಾಲಿನಿ

  ಮೂರನೇ ಸ್ಪರ್ಧಿ 'ಪಾಪಾ ಪಾಂಡು' ಶಾಲಿನಿ

  'ಪಾಪಾ ಪಾಂಡು' ಸೀರಿಯಲ್ ನಲ್ಲಿ ಪಾಂಡುಗೆ ಚೆನ್ನಾಗಿ ತದುಕಿ ಎಲ್ಲರನ್ನೂ ಬಿದ್ದು-ಬಿದ್ದು ನಗುವಂತೆ ಮಾಡುತ್ತಿದ್ದ ನಟಿ ಕಮ್ ನಿರೂಪಕಿ ಶಾಲಿನಿ ಅವರು ಈ ಬಾರಿ ಬಿಗ್ ಬಾಸ್ ಅಡ್ಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಚಿಣ್ಣರ ಚಿಲಿಪಿಲಿ'ಯಲ್ಲಿ ಮಕ್ಕಳನ್ನು ಮಾತಾಡಿಸಿ ನಗಿಸುತ್ತಾ, 'ನಾಟಿ ಮನೆ'ಯಲ್ಲಿ ಬೊಂಬಾಟ್ ಭೋಜನ ಸವಿಯುತ್ತಾ, 'ಡ್ಯಾನ್ಸಿಂಗ್ ಸ್ಟಾರ್' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಯಾರಿಗೇನು ಕಮ್ಮಿ ಇಲ್ಲ ಅಂತ ತೋರಿಸಿಕೊಟ್ಟಿದ್ದ ನಟಿ ಶಾಲಿನಿ ಅವರು 'ಬಿಗ್ ಬಾಸ್' ಮನೆಯಲ್ಲಿ ಯಾರನ್ನು ಗೋಳು ಹೊಯ್ಕೊಳ್ತಾರೋ ಅಂತ ಕಾದು ನೋಡಬೇಕಿದೆ.

  ನಾಲ್ಕನೇ ಸ್ಪರ್ಧಿ 'ಕಿರಿಕ್ ಕೀರ್ತಿ'

  ನಾಲ್ಕನೇ ಸ್ಪರ್ಧಿ 'ಕಿರಿಕ್ ಕೀರ್ತಿ'

  ಸದಾ ಒಂದಲ್ಲಾ ಒಂದು ವಿಷಯಕ್ಕೆ ಕಿರಿಕ್ ಮಾಡುತ್ತಿದ್ದ ಅಪ್ಪಟ ಕನ್ನಡ ಅಭಿಮಾನಿ ಕಮ್ ಫೇಸ್ ಬುಕ್ ಸ್ಟಾರ್ ಕಿರಿಕ್ ಕೀರ್ತಿ ಅವರ 'ಕಿರಿಕ್' ಇನ್ನುಮುಂದೆ ಬಿಗ್ ಬಾಸ್ ಮನೆಯಲ್ಲಿ. ಹವ್ಯಾಸಿ ಬರಹಗಾರ, ಪತ್ರಿಕೋದ್ಯಮಿ ಕಮ್ ವಿಶ್ಲೇಷಕ ಕಿರಿಕ್ ಕೀರ್ತಿ ಅವರು ಈ ಬಾರಿ 'ಬಿಗ್ ಬಾಸ್' ಮನೆಗೆ ಬಲಗಾಲಿಟ್ಟು ಒಳಬಂದಿದ್ದಾರೆ. ಫೇಸ್ ಬುಕ್, ಯೂಟ್ಯೂಬ್ ನಲ್ಲಿ ಇವರು ಸ್ಟಾರ್ ಪಟ್ಟ ಗಿಟ್ಟಸಿಕೊಂಡರೆ 'ಬಿಗ್ ಬಾಸ್' ಮನೆಯಲ್ಲಿ ಇವರ ಆಟ ನಡೆಯುತ್ತಾ ಕಾದು ನೋಡಬೇಕು.

  ಐದನೇ ಸ್ಪರ್ಧಿ ಮಾಳವಿಕಾ ಅವಿನಾಶ್

  ಐದನೇ ಸ್ಪರ್ಧಿ ಮಾಳವಿಕಾ ಅವಿನಾಶ್

  ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರದ ಜೊತೆ-ಜೊತೆಗೆ ರಾಜಕಾರಣಿಯಾಗಿ 'ಬಿಜೆಪಿ'ಯಲ್ಲಿ ಸಕ್ರೀಯರಾಗಿ, ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಾಳವಿಕಾ ಅವಿನಾಶ್ ಅವರು ಈ ಬಾರಿಯ 'ಬಿಗ್ ಬಾಸ್' ಮನೆಯ ಕದ ತಟ್ಟಿದ್ದಾರೆ. ಇವರು ಲಾ ಓದಿದ್ರೂ ಆಗಿದ್ದು ಮಾತ್ರ ನಟಿ. ತಮ್ಮ ಮುದ್ದು ಪತಿ ನಟ ಅವಿನಾಶ್ ಅವರ ಜೊತೆ ಸ್ವಚ್ಛಂದವಾಗಿ ಸುಖ ಸಂಸಾರ ಸಾಗಿಸುತ್ತಿದ್ದ ಮಾಳವಿಕಾ, ಇದೀಗ ಬಿಗ್ ಬಾಸ್ ಎಂಬ ಪಂಜರಕ್ಕೆ ಕಾಲಿಟ್ಟಿದ್ದಾರೆ. 'ಬದುಕು ಜಟಾಕಬಂಡಿ' ನಡೆಸಿಕೊಡುತ್ತಿದ್ದ ಇವರು ಬದುಕು ಬಿಗ್ ಬಾಸ್ ನಲ್ಲಿ ಹೇಗೆ ಸಾಗುತ್ತೆ ನೋಡಬೇಕಿದೆ. ಅಂದಹಾಗೆ ಇವರು ಮನೆಬಿಟ್ಟು ಅಬ್ಬಬ್ಬಾ ಅಂದ್ರೆ ನಾಲ್ಕು ದಿನ ಇರುತ್ತಿದ್ದರಂತೆ. ಆದ್ರೆ ಇದೀಗ 100 ದಿನಗಳ ಕಾಲ ಹೇಗಿರುತ್ತಾರೆ ಅಂತ ಕಾದು ನೋಡಬೇಕು.

  ಆರನೇ ಸ್ಪರ್ಧಿ ಕಾವ್ಯ ಶಾಸ್ತ್ರಿ

  ಆರನೇ ಸ್ಪರ್ಧಿ ಕಾವ್ಯ ಶಾಸ್ತ್ರಿ

  ಸಾಮಾನ್ಯವಾಗಿ ಎಲ್ಲಾ ಅದ್ಧೂರಿ ಕಾರ್ಯಕ್ರಮಗಳಾದ, ಆಡಿಯೋ ಲಾಂಚ್, ಪ್ರಶಸ್ತಿ ಸಮಾರಂಭ ಮುಂತಾದೆಡೆ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದ ಕಿರುತೆರೆ ನಟಿ ಕಮ್ ನಿರೂಪಕಿ ಕಾವ್ಯ ಶಾಸ್ತ್ರಿ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ನಿರೂಪಣೆಯ ಜೊತೆ-ಜೊತೆಗೆ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಕಾವ್ಯ ಶಾಸ್ತ್ರಿ ಅವರು ಸದ್ಯಕ್ಕೆ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಶುಭ ವಿವಾಹ'ದಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದರು. ಇದಕ್ಕಿಂತ ಮೊದಲು ತೆಲುಗು ಸೀರಿಯಲ್ ಒಂದರಲ್ಲಿ ಅಕುಲ್ ಬಾಲಾಜಿ ಅವರ ಪತ್ನಿ ಪಾತ್ರ ವಹಿಸಿದ್ದರು. ಪಟ-ಪಟಾಂತ ಮಾತಾಡೋ ಕಾವ್ಯ ಶಾಸ್ತ್ರೀ ಅವರು ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಕಮಾಲ್ ಮಾಡಲಿದ್ದಾರೆ ನೋಡಬೇಕಿದೆ.

  ಏಳನೇ ಸ್ಪರ್ಧಿ ಭುವನ್ ಪೊನ್ನಣ್ಣ

  ಏಳನೇ ಸ್ಪರ್ಧಿ ಭುವನ್ ಪೊನ್ನಣ್ಣ

  ಇವರು ಟಿವಿ ಮತ್ತು ಸಿನಿಮಾ ಎರಡ್ರಲ್ಲೂ ಫೇಮಸ್. ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ ಭುವನ್ ಪೊನ್ನಣ್ಣ ಅವರು ಈ ಸಲ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 'ಲವ್ ದರ್ಬಾರ್' ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಈ ಹ್ಯಾಂಡ್ಸಮ್ ಹುಡುಗ ಭುವನ್ ಪೊನ್ನಣ್ಣ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ದರ್ಬಾರ್ ಮಾಡ್ತಾರೆ ನೋಡೋಣ.

  ಗಾಯಕಿ ಚೈತ್ರಾ

  ಗಾಯಕಿ ಚೈತ್ರಾ

  ಸುಮಾರು 500ಕ್ಕೂ ಹೆಚ್ಚು ಹಾಡು ಹಾಡಿರುವ ಖ್ಯಾತ ಗಾಯಕಿ ಚೈತ್ರಾ ಅವರು ತಮ್ಮ ಸುಮಧುರ ಸ್ವರದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಇದೀಗ ಅದೇ ಚೈತ್ರಾ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವರು ಈ ಮನೆಯಲ್ಲಿ ಕೂಡ ಹಾಡುತ್ತಾ ಹಾಡುತ್ತಾ ಮೋಡಿ ಮಾಡುತ್ತಾರಾ, ನೋಡಲು ಬಿಗ್ ಬಾಸ್ ನೋಡಿ.

  ನಟಿ ಸಂಜನಾ ಚಿದಾನಂದ್

  ನಟಿ ಸಂಜನಾ ಚಿದಾನಂದ್

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಕುಲವಧು' ಧಾರಾವಾಹಿ ಖ್ಯಾತಿಯ ನಟಿ ವಚನಾ ಅಲಿಯಾಸ್ ಸಂಜನಾ ಚಿದಾನಂದ್ ಕಿಲ-ಕಿಲ ನಗುತ್ತಾ, ಒಂಭತ್ತನೇ ಸ್ಪರ್ಧಿಯಾಗಿ ಬಿಗ್ ಬಾಸ್ ಅರಮನೆ ಪ್ರವೇಶ ಮಾಡಿದ್ದಾರೆ. ಅಲ್ಲಿ ಧನ್ಯಾಳ ಬದುಕಿನಲ್ಲಿ ಆಟ ಆಡಿ ಸೇಡು ತೀರಿಸಿಕೊಂಡ ವಚನಾ ಇಲ್ಲಿ ಯಾರ ಜೊತೆ ಆಟ ಆಡುತ್ತಾರೆ ನೋಡಬೇಕು.

  ಹತ್ತನೇ ಸ್ಪರ್ಧಿ ಕ್ರಿಕೆಟರ್ ದೊಡ್ಡ ಗಣೇಶ್

  ಹತ್ತನೇ ಸ್ಪರ್ಧಿ ಕ್ರಿಕೆಟರ್ ದೊಡ್ಡ ಗಣೇಶ್

  ಕಳೆದ ಸೀಸನ್ ನಲ್ಲಿ ವೇಗದ ಬೌಲರ್ ಅಯ್ಯಪ್ಪ ಅವರು ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟ ಆಡಿದ್ದರು. ಅಂತೆಯೇ ಈ ಬಾರಿ ಎನ್ ಸಿ ಅಯ್ಯಪ್ಪ ಅವರ ಒಡನಾಡಿ ಮಾಜಿ ಕ್ರಿಕೆಟರ್ ದೊಡ್ಡ ಗಣೇಶ್ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಸಖತ್ ಆಗಿ ಬೌಲಿಂಗ್ ಮಾಡುತ್ತಿದ್ದ ದೊಡ್ಡ ಗಣೇಶ್ ಅವರು ಬಿಗ್ ಮನೆಯಲ್ಲಿ ತಮ್ಮ ಬೌನ್ಸರ್ ಮೂಲಕ ಯಾರನ್ನು ಬೌಲ್ಡ್ ಮಾಡ್ತಾರೆ ನೋಡಿಯೇ ಬಿಡೋಣ.

  ಸ್ಪರ್ಧಿ ನಂ 11: ಕಿರುತೆರೆ ನಟಿ ವಾಣಿಶ್ರೀ

  ಸ್ಪರ್ಧಿ ನಂ 11: ಕಿರುತೆರೆ ನಟಿ ವಾಣಿಶ್ರೀ

  ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತಮ್ಮ ನಟನಾ ಚಾತುರ್ಯ ತೋರಿರೋ ಕಿರುತೆರೆ ನಟಿ ವಾಣಿಶ್ರೀ ಅವರಿಗೆ, ಕಿರುತೆರೆ ಲೋಕದಲ್ಲಂತೂ ಹೆಚ್ಚಿನ ಆದ್ಯತೆ. ಕೆಲವೊಂದು ಧಾರಾವಾಹಿಗಳಲ್ಲಿ ಖಳನಟಿ, ಇನ್ನೂ ಕೆಲವಲ್ಲಿ ಒಳ್ಳೆ ಪಾತ್ರ ಮಾಡುತ್ತಾ ಮೆಚ್ಚುಗೆ ಗಳಿಸಿದ್ದ ವಾಣಿಶ್ರೀ ಅವರು 'ಬಿಗ್ ಬಾಸ್' ಮನೆಗೆ ಕಾಲಿಡಲು ಕಾರಣ ಅವರ ಮಗಳಂತೆ. ಅಂತೂ ದೊಡ್ಡಣ್ಣನ ಮನೆಯಲ್ಲಿ ಇವರಿಗೆ, ಇವರ ನಟನೆ ಸಾಥ್ ಕೊಡುತ್ತಾ ಅಥವಾ ಅನುಭವ ಕೈ ಕೊಡುತ್ತಾ ನೀವೇ ನೋಡಿ ಬಿಡಿ.

  ನಿರೂಪಕ ನಿರಂಜನ್ ದೇಶಪಾಂಡೆ

  ನಿರೂಪಕ ನಿರಂಜನ್ ದೇಶಪಾಂಡೆ

  ಬರೀ ಮಾತನ್ನೇ ಬಂಡವಾಳ ಮಾಡಿಕೊಂಡಿರುವ ನಿರೂಪಕ ನಿರಂಜನ್ ದೇಶಪಾಂಡೆ ಅವರು ಎಲ್ಲಾ ರಿಯಾಲಿಟಿ ಶೋಗಳಿಗೂ ನಿರೂಪಕರಾಗಿ ದುಡಿದಿದ್ದಾರೆ. 'ಮಿಲನ' ಧಾರಾವಾಹಿ ಸೇರಿದಂತೆ ಕೆಲವು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ಮಾತೇ ಬಂಡವಾಳ ಆಗಿರೋ ನಿರಂಜನ್ ದೇಶಪಾಂಡೆ ಅವರ ಮಾತಿಗೆ ಬಿಗ್ ಬಾಸ್ ಮನೆಯಲ್ಲಿರೋ ಇನ್ನುಳಿದ ಸ್ಪರ್ಧಿಗಳು ಮರುಳಾಗುತ್ತಾರೆ ನೋಡಬೇಕು.

  ನಟಿ ಕಾರುಣ್ಯ ರಾಮ್

  ನಟಿ ಕಾರುಣ್ಯ ರಾಮ್

  'ವಜ್ರಕಾಯ' ಚಿತ್ರದಲ್ಲಿ ಶಿವಣ್ಣನ ಜೊತೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಕಾರುಣ್ಯ ರಾಮ್ ಅವರು ಹೇಳಿಕೊಳ್ಳುವಂತಹ ಯಾವ ಸಿನಿಮಾ ಕೂಡ ಮಾಡಲಿಲ್ಲ. 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಸಣ್ಣ ಪಾತ್ರ ವಹಿಸಿದ್ದ ನಟಿ ಕಾರುಣ್ಯ ತದನಂತರ 'ಕಿಕ್' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು. ಇದೀಗ ಅಲ್ಲಿಂದ ನೇರವಾಗಿ ಬಿಗ್ ಬಾಸ್ ಮನೆಗೆ ಧುಮುಕಿದ್ದಾರೆ. ಇಲ್ಲಿ ಇವರ ಒನಪು-ವಯ್ಯಾರ ಕೆಲಸಕ್ಕೆ ಬರುತ್ತಾ ನೋಡಿ.

  ನಟ ಮೋಹನ್

  ನಟ ಮೋಹನ್

  ಹಿರಿಯ ನಟ-ನಿರ್ದೇಶಕ ಮೋಹನ್ ಅವರು ಈಗಲೂ ಎಲ್ಲರ ಫೇವರಿಟ್ ನಟ. ಕಾಮಿಡಿ ಮಾಡುತ್ತಾ ಸಖತ್ ಆಗಿ ನಗಿಸುತ್ತಿದ್ದ ಇವರು ರಮೇಶ್ ಅವರ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇನ್ನು ಇವರ ಕಾಮಿಡಿಗೆ ಬಿಗ್ ಬಾಸ್ ಮನೆಯಲ್ಲಿ ಇರೋ ಇನ್ನುಳಿದ ಸ್ಪರ್ಧಿಗಳು ಮಾರುಹೋಗುತ್ತಾರ ನೋಡಬೇಕಿದೆ. ನಿರೂಪಕರಾಗಿ ಸಿನಿ ಜರ್ನಿ ಶುರು ಮಾಡಿದ್ದ ಇವರು ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಹೊಗಬೇಕು ಅಂತ ಖುಷಿಯಿಂದ ಮನೆ ಒಳಗೆ ಎಂಟ್ರಿಯಾಗಿದ್ದಾರೆ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋ ಪಾಲಿಸಿ ಇರೋ ಇವರು ಬಿಗ್ ಬಾಸ್ ನಲ್ಲಿ ಗೆಲ್ಲುತ್ತಾರಾ ನೋಡೋಣ.

  'ಸ್ಪರ್ಶ' ನಟಿ ರೇಖಾ

  'ಸ್ಪರ್ಶ' ನಟಿ ರೇಖಾ

  'ಸ್ಪರ್ಶ' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಜೊತೆ 'ಚಂದಕ್ಕಿಂತ ಚಂದ ನೀನೇ ಸುಂದರ' ಅಂತ ಡ್ಯುಯೆಟ್ ಹಾಡಿದ್ದ ಹಿರಿಯ ನಟಿ ರೇಖಾ ಅವರು ಸುದೀಪ್ ಅವರ ಸಾರಥ್ಯದ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಹಲವಾರು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಕಮಾಲ್ ಮಾಡಿದ್ದ ರೇಖಾ ಅವರು ಬಿಗ್ ಬಾಸ್ ಮನೆಯಲ್ಲಿ ಅದೇನ್ ಮಾಡ್ತಾರೆ ನೋಡಬೇಕಿದೆ.

  English summary
  Bigg Boss is back on small screen again. 'Bigg Boss Kannada-4' reality show will be aired in Colors Kannada Channel from Yesterday (October 9th). Meet all the 15 Contestants of new season of Bigg Boss Kannada. Here is a detailed report on all the participants of #BBK4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X