»   » 'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರಿಟ್ಟ 'ಒಳ್ಳೆ ಹುಡುಗ' ಪ್ರಥಮ್

'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರಿಟ್ಟ 'ಒಳ್ಳೆ ಹುಡುಗ' ಪ್ರಥಮ್

Posted By:
Subscribe to Filmibeat Kannada

'ಇರಿಟೇಷನ್ ಎನ್ನುವ ಪದಕ್ಕೆ ಇರಿಟೇಷನ್ ಹುಟ್ಟಿಸುತ್ತೇನೆ' ಅಂತ ಜಂಭದಿಂದ ಹೇಳಿಕೊಳ್ಳುವ ಪ್ರಥಮ್, ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಕಣ್ಣೀರಿಟ್ಟಿದ್ದಾರೆ.

ಸೀಕ್ರೆಟ್ ರೂಮ್ ನಲ್ಲಿರುವಾಗ 'ಬಿಗ್ ಬಾಸ್' ಮನೆಯ ಎಲ್ಲಾ ಸ್ಪರ್ಧಿಗಳ ಮಾತುಗಳನ್ನ ಕೇಳಿಸಿಕೊಂಡ ಬಳಿಕ, ''ತುಂಬಾ ಹಿಂಸೆ ಆಗ್ತಿದೆ. ಹೊರಗಡೆ ಲೈಫ್ ನಲ್ಲಿ ಹೀಗೇ ಇರಬೇಕು ಅಂತ ತುಂಬ ಕನಸುಗಳನ್ನ ಕಟ್ಟಿಕೊಂಡಿದ್ದೇನೆ. ಇವರೆಲ್ಲ ಬದುಕೋಕೆ ಬಿಡ್ತಾಯಿಲ್ಲ'' ಅಂತ ಸುನಾಮಿ ಕಿಟ್ಟಿ ಬಳಿ ಹೇಳಿಕೊಳ್ಳುತ್ತಾ ಪ್ರಥಮ್ ನೊಂದುಕೊಂಡರು.[ಸದ್ದಿಲ್ಲದೇ ರೀ ಎಂಟ್ರಿ ಕೊಟ್ಟ ಪ್ರಥಮ್: ಅಸಲಿ ಆಟ ಈಗ ಶುರು.!]

Bigg Boss Kannada 4: Pratham becomes emotional

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಯಾವುದೇ ಗುಂಪಿಗೆ ಸೇರದೇ, ಬರೋಬ್ಬರಿ ಹನ್ನೊಂದು ಬಾರಿ ನಾಮಿನೇಟ್ ಆಗಿ ಇನ್ನೂ ಆಟದಲ್ಲಿ ಇರುವ ಸ್ಪರ್ಧಿ ಪ್ರಥಮ್.[ಪ್ರಥಮ್ 'ಮನುಷ್ಯತ್ವ'ದ ಬಗ್ಗೆ ಪ್ರಶ್ನೆ: 'ಕಿರಿಕ್' ಕೀರ್ತಿಗೆ ಮುಖಭಂಗ.!]

ಅಂದ್ಹಾಗೆ, ಪ್ರಥಮ್ ಈ ವಾರ ಕೂಡ ಡೇಂಜರ್ ಝೋನ್ ನಲ್ಲಿ ಇದ್ದಾರೆ. 'ಒಳ್ಳೆ ಹುಡುಗ' ಪ್ರಥಮ್ ಸೇಫ್ ಆಗುವುದು, ಬಿಡುವುದು ನಿಮ್ಮ ಕೈಯಲ್ಲೇ ಇದೆ.

ಪ್ರಥಮ್ ಜೊತೆ ನಟಿ ಮಾಳವಿಕಾ ಅವಿನಾಶ್, ರೇಖಾ ಮತ್ತು ಭುವನ್ ಕೂಡ ಈ ವಾರ ಎಲಿಮಿನೇಷನ್ ಬಿಸಿ ಎದುರಿಸಲಿದ್ದಾರೆ. ಈ ನಾಲ್ವರ ಪೈಕಿ ಯಾರು ಹೊರ ಹೋಗಬೇಕು ಎಂಬ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 4: Week 14, Pratham becomes emotional

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada