»   » ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ: 'ಬಾಂಬ್' ಸಿಡಿಸಿದ ಸುದೀಪ್.!

ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾಪಲ್ಟಾ: 'ಬಾಂಬ್' ಸಿಡಿಸಿದ ಸುದೀಪ್.!

Posted By:
Subscribe to Filmibeat Kannada

ಕಳೆದ ಮೂರು ಸೀಸನ್ ಗಳಲ್ಲಿ ನಡೆದಂತೆ ಆಗಿದ್ದರೆ... ಸ್ಪರ್ಧಿಗಳು ಅಂದುಕೊಂಡಂತೆ ನಡೆದಿದ್ದರೆ... ಈ ಶನಿವಾರ, ಅಂದ್ರೆ ಜನವರಿ 15 ರಂದು 'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ನಡೆಯಬೇಕಿತ್ತು. ಆದ್ರೆ, ಈ ವಾರ ಹಾಗೆ ಆಗುತ್ತಿಲ್ಲ. ಕಾರಣ, 'ಬಿಗ್ ಬಾಸ್' ಕೊಟ್ಟಿರುವ 'ಬಿಗ್ ಟ್ವಿಸ್ಟ್'.!

'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಎರಡು ವಾರಗಳ ಕಾಲ ಎಕ್ಸ್ ಟೆಂಡ್ ಆಗಿದೆ.!

ಕಿಚ್ಚ ಸುದೀಪ್ ಸಿಡಿಸಿದ ಬಾಂಬ್

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಎರಡು ವಾರಗಳ ಕಾಲ ಮುಂದಕ್ಕೆ ಹೋಗಿದೆ ಅಂತ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ 'ಬಾಂಬ್' ಸಿಡಿಸಿದರು.[ದೊಡ್ಮನೆಯಿಂದ ಹೊರಬಂದ ಮಾಳವಿಕಾ, ಪ್ರಥಮ್: 'ಬಿಗ್' ಟ್ವಿಸ್ಟ್ ನಿರೀಕ್ಷಿಸಿ]

ಸಂಕ್ರಾಂತಿ ಹಬ್ಬಕ್ಕೆ ಬೋನಸ್!

''ಸಂಕ್ರಾಂತಿ ಹಬ್ಬಕ್ಕೆ 'ಬಿಗ್ ಬಾಸ್' ಬೋನಸ್ ಕೊಡುತ್ತಿದ್ದಾರೆ. ಈ ವಾರ ಸ್ಪರ್ಧಿಗಳಿಗೆ ಮಾತ್ರ ಅಲ್ಲ, ವೀಕ್ಷಕರಿಗೂ ಒಂದು ಸಖತ್ತಾಗಿರೋ ಟ್ವಿಸ್ಟ್ ಇದೆ'' ಅಂತ ಹೇಳುತ್ತಾ 'ಬಿಗ್ ಟ್ವಿಸ್ಟ್' ಬಗ್ಗೆ ಸುದೀಪ್ ಮಾತನಾಡಲು ಆರಂಭಿಸಿದರು.

115 ದಿನಗಳ ಕಾಲ ನಡೆಯಲಿದೆ 'ಬಿಗ್ ಬಾಸ್ ಕನ್ನಡ-4'

''ಈ ಸೀಸನ್ ನೂರು ದಿನಗಳ ಬದಲು ನೂರಹದಿನೈದು ದಿನಗಳ ಕಾಲ (115) ನಡೆಯಲಿದೆ. 14 ವಾರಗಳ ಬದಲು 16 ವಾರಗಳ ಕಾಲ ಶೋ ಇರಲಿದೆ. 'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿ ಇದು ಮೊಟ್ಟ ಮೊದಲ ಸಲ'' ಅಂತ ಸುದೀಪ್ ಹೇಳಿದರು.

ಹಾಗಾದ್ರೆ, ಗ್ರ್ಯಾಂಡ್ ಫಿನಾಲೆ ಯಾವಾಗ.?

''ಜನವರಿ 15 ರ ಬದಲು ಜನವರಿ 29 ರಂದು ಸೀಸನ್ 4 ಫಿನಾಲೆ ನಡೆಯಲಿದೆ'' ಅಂತ ಸುದೀಪ್ ಸ್ಪಷ್ಟಪಡಿಸಿದರು.

ಸ್ಪರ್ಧಿಗಳಿಗೆ ಶಾಕ್.!

''ಇನ್ನೇನು ಫಿನಾಲೆ ಬಂತು ಅನ್ನೋಷ್ಟರ ಒಳಗೆ ಇನ್ನೂ ಎರಡು ಶನಿವಾರಗಳು ಪಂಚಾಯತಿ ನಡೆದು ಮೂರನೇ ವಾರದ ಕೊನೆಗೆ ಅಂದ್ರೆ ಜನವರಿ 29 ರಂದು ಫಿನಾಲೆ ನಡೆಯಲಿದೆ. ಈಗಾಗಲೇ ಫಿನಾಲೆ ವಾರಕ್ಕೆ ಕಾಲಿಟ್ಟೆ ಅಂತ ಅಂದುಕೊಂಡಿರುವ ಸ್ಪರ್ಧಿಗಳಿಗೆ ಇದು ಸಣ್ಣ ಶಾಕ್'' ಎಂದರು ಸುದೀಪ್.

ನಿಮ್ಮ ಅಭಿಪ್ರಾಯ ತಿಳಿಸಿ...

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಎರಡು ವಾರಗಳ ಕಾಲ ಎಕ್ಸ್ ಟೆಂಡ್ ಆಗಿರುವುದರ ಬಗ್ಗೆ ನೀವು ಏನಂತೀರಾ.? ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ....

English summary
For the first time in the History of 'Bigg Boss Kannada', 'BBK4' is extended for 2 weeks. Grand Finale of 'BBK4' will be held on January 29th instead of January 15th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada