»   » ಸೀಕ್ರೆಟ್ ರೂಮ್ ಗೆ ಶೀತಲ್ ಶೆಟ್ಟಿ, ಶಾಲಿನಿ: ಮುಂದಿದೆ 'ಮಾರಿ ಹಬ್ಬ'

ಸೀಕ್ರೆಟ್ ರೂಮ್ ಗೆ ಶೀತಲ್ ಶೆಟ್ಟಿ, ಶಾಲಿನಿ: ಮುಂದಿದೆ 'ಮಾರಿ ಹಬ್ಬ'

Posted By:
Subscribe to Filmibeat Kannada

'ಬಿಗ್ ಬಾಸ್' ಅಂದ್ರೇನೇ ಹಾಗೆ, ಯಾರು ಏನೇ ಅಂದುಕೊಂಡರೂ ಏನೂ ನಡೆಯಲ್ಲ. ಕಾರ್ಯಕ್ರಮವನ್ನ ನೋಡುವ ಜನರು ಗೆಸ್ ಮಾಡುವ ಹಾಗೆ ಏನೂ ಆಗಲ್ಲ. ನಾವು ಊಹೆ ಮಾಡುವುದೇ ಒಂದು, ಅಲ್ಲಿ ಆಗುವುದೇ ಮತ್ತೊಂದು.

'ಬಿಗ್ ಬಾಸ್' ಸ್ವರ್ಧಿಗಳು ಯಾವುದೇ ಲೆಕ್ಕಾಚಾರ ಮಾಡಿದರೂ, ಅವರಿಗೆ ಶಾಕ್ ನೀಡುವಂತಹ ನಿರ್ಣಯಗಳು 'ಬಿಗ್ ಬಾಸ್' ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ನಾಲ್ಕನೇ ವಾರ ಆದ ಎಲಿಮಿನೇಷನ್ ಪ್ರಕ್ರಿಯೆ.[ಡಬಲ್ ಶಾಕ್: 'ಬಿಗ್ ಬಾಸ್' ಮನೆಯಿಂದ ಶಾಲಿನಿ, ಶೀತಲ್ ಔಟ್.!]

ಹೌದು, ಶನಿವಾರದ 'ಕಿಚ್ಚನ ಪಂಚಾಯತಿ'ಯಲ್ಲಿ ಪ್ರತಿವಾರದಂತೆ ಈ ವಾರವೂ ಒಬ್ಬರನ್ನ ಮನೆಯಿಂದ ಹೊರಗೆ ಕಳುಹಿಸಬೇಕಿತ್ತು. ಆದ್ರೆ, ಒಂದು ಎಲಿಮಿನೇಷನ್ ಬದಲಾಗಿ, ಡಬಲ್ ಎಲಿಮಿನೇಶನ್ ಆಗೋಯ್ತು. ಆದರೆ, ಭಾನುವಾರ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಈ ಎಲ್ಲ ಶಾಕ್ ಗಳನ್ನ ಮೀರಿಸುವಂತಹ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ ಸುದೀಪ್. ಮುಂದೇ ಓದಿ.....

ಶನಿವಾರ 'ಡಬಲ್ ಶಾಕ್'

ನಾಲ್ಕನೇ ವಾರದ ಎಲಿಮಿನೇಶನ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಡಬಲ್ ಎಲಿಮಿನೇಶನ್ ಅಂತ ಶಾಕ್ ಕೊಟ್ಟು, ಸುದ್ದಿ ನಿರೂಪಕಿ ಶೀತಲ್ ಶೆಟ್ಟಿ ಹಾಗೂ ಶಾಲಿನಿ ಅವರನ್ನ ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಿದ್ದರು.['ಬಿಗ್ ಬಾಸ್ ಕನ್ನಡ-4' : ಈ ವಾರ ಗೇಟ್ ಪಾಸ್ ಯಾರಿಗೆ?]

ಭಾನುವಾರ ಟ್ವಿಸ್ಟ್

ಶನಿವಾರ ಮನೆಯಿಂದ ಹೊರ ಬಿದ್ದ ಶೀತಲ್ ಶೆಟ್ಟಿ ಹಾಗೂ ಶಾಲಿನಿ, ಭಾನುವಾರ 'ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್' ಕಾರ್ಯಕ್ರಮದ ವೇದಿಕೆಗೆ ಬರಬೇಕಿತ್ತು. ಬಟ್, ಇವರಿಬ್ಬರಲ್ಲಿ ಒಬ್ಬರು ಬಂದರು, ಮತ್ತೊಬ್ಬರು ಬರಲಿಲ್ಲ.

ಸೀಕ್ರೆಟ್ ರೂಮ್ ಗೆ ಶಾಲಿನಿ

'ಬಿಗ್ ಬಾಸ್' ವೇದಿಕೆಗೆ ಬರಬೇಕಿದ್ದ ಶೀತಲ್ ಶೆಟ್ಟಿ ಹಾಗೂ ಶಾಲಿನಿ ಪೈಕಿ, ಶೀತಲ್ ಮಾತ್ರ ಸುದೀಪ್ ಎದುರು ಪ್ರತ್ಯಕ್ಷವಾದರು. ಆದ್ರೆ, ವೇದಿಕೆಗೆ ಬರಬೇಕಿದ್ದ ಶಾಲಿನಿ ನೇರವಾಗಿ ಸೀಕ್ರೆಟ್ ರೂಮ್ ಗೆ ಹೋದರು.

ಶಾಲಿನಿ ಸೇಫ್

ಹೀಗೆ, ಡಬಲ್ ಶಾಕ್ ಕೊಟ್ಟಿದ್ದ ಸುದೀಪ್, ಶಾಲಿನಿ ಅವರನ್ನ ಸೀಕ್ರೆಟ್ ರೂಮ್ ಗೆ ಕಳುಹಿಸಿ ಸರ್ ಪ್ರೈಸ್ ನೀಡಿದರು. ಅಲ್ಲಿಗೆ, ಶಾಲಿನಿ ಎಲಿಮಿನೇಟ್ ಆಗಿಲ್ಲ ಅಂತರ್ಥ.

ಹಾಗಾದ್ರೆ, ಶೀತಲ್ ಶೆಟ್ಟಿ ಔಟ್?!

ಶಾಲಿನಿ ಜೊತೆ ಎಲಿಮಿನೇಟ್ ಆಗಿದ್ದ ಶೀತಲ್, ಬಿಗ್ ಬಾಸ್ ವೇದಿಕೆ ಮೇಲೆ ಬಂದು, ಪ್ರತಿವಾರದಂತೆ ನಡೆಯುವ 'ಪಂಚಿಂಗ್' ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಜೊತೆಗೆ ತಮ್ಮ ಜರ್ನಿ ವಿಡಿಯೋವನ್ನೂ ಶೀತಲ್ ಶೆಟ್ಟಿ ವೀಕ್ಷಿಸಿದರು.

ಗುಟ್ಟು ರಟ್ಟು ಮಾಡಿದ ಶೀತಲ್

ಎಲಿಮಿನೇಟ್ ಆಗಿದ್ದ ಶೀತಲ್ ಶೆಟ್ಟಿ, ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಹೇಗೆ ಗೇಮ್ ಪ್ಲಾನ್ ಮಾಡಿದ್ದಾರೆ. ಯಾರು ಹೇಗೆ ಆಟವಾಡುತ್ತಿದ್ದಾರೆ. ಯಾರ ಮುಖವಾಡ ಕಳಚಿದೆ. ಏನೆಲ್ಲಾ ಸ್ಟ್ರಾಟೆಜಿ ಮಾಡ್ತಿದ್ದಾರೆ ಎಂಬ ಹಲವು ರಹಸ್ಯಗಳನ್ನ ಬಿಚ್ಚಿಟ್ಟರು.

ಹೊಸ ಟ್ವಿಸ್ಟ್ ಕೊಟ್ಟ ಸುದೀಪ್

ಡಬಲ್ ಎಲಿಮಿನೇಶನ್, ಸೀಕ್ರೆಟ್ ರೂಮ್ ಅಂತ ಎರಡೆರಡು ಬಾರಿ ಟ್ವಿಸ್ಟ್ ಕೊಟ್ಟ ಸುದೀಪ್ ಮತ್ತೆ ಹೊಸ ಟ್ವಿಸ್ಟ್ ಕೊಟ್ಟರು.

ಶೀತಲ್ ಶೆಟ್ಟಿನೂ ಸೇಫ್!

ಇನ್ನೇನೂ ಕಾರ್ಯಕ್ರಮ ಮುಗೀತು ಎನ್ನುವಷ್ಟರಲ್ಲಿ ಕಿಚ್ಚ ಸುದೀಪ್ ಮತ್ತೊಂದು ಶಾಕ್ ಕೊಟ್ಟರು. ಎಲಿಮಿನೇಟ್ ಆಗಿದ್ದ ಶೀತಲ್ ಶೆಟ್ಟಿಯನ್ನ ಮತ್ತೆ ಬಿಗ್ ಬಾಸ್ ಮನೆಗೆ ಕಳುಹಿಸುವ ಮೂಲಕ ಸೆಕೆಂಡ್ ಚಾನ್ಸ್ ಕೊಟ್ಟರು. ಹೀಗಾಗಿ, ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದ ಶಾಲಿನಿ ಹಾಗೂ ಶೀತಲ್ ಇಬ್ಬರಿಗೂ ಸೆಕೆಂಡ್ ಚಾನ್ಸ್ ಸಿಕ್ಕಂತಾಗಿದೆ.

ಮುಂದಿದೆ 'ಮಾರಿ ಹಬ್ಬ'

ಮನೆಯಿಂದ ಹೊರಬಂದ ನಂತರ, ಮನೆಯಲ್ಲಿದ್ದ ಸ್ವರ್ಧಿಗಳು ಇವರಿಬ್ಬರ ಬಗ್ಗೆ ಪಾಸಿಟೀವ್ ಹಾಗೂ ನೆಗಿಟೀವ್ ಕಾಮೆಂಟ್ ಗಳನ್ನ ಮಾಡಿದ್ದಾರೆ. ಇದನ್ನೆಲ್ಲಾ ಸುದೀಪ್ ತೋರಿಸಿದ ವಿಡಿಯೋ ತುಣುಕಿನಲ್ಲಿ ಶೀತಲ್ ಶೆಟ್ಟಿ ಹಾಗೂ ಶಾಲಿನಿ ನೋಡಿದ್ದಾರೆ. ಸೋ, ಈಗ ಮತ್ತೆ ಶೀತಲ್ ಹಾಗೂ ಶಾಲಿನಿ ಮನೆಗೆ ಕಾಲಿಡುತ್ತಿರುವುದರಿಂದ ಬಿಗ್ ಬಾಸ್ ಮನೆಯಲ್ಲಿ ಮುಂದೆ ಮಾರಿ ಹಬ್ಬನೇ ನಡೆಯುತ್ತೆ ಎಂಬ ಲೆಕ್ಕಾಚಾರ ಶುರುವಾಗಿದೆ.

English summary
Bigg Boss Kannada 4, Week 4 : Actress Shalini and Sheetal Shetty gets second chance to stay in Bigg boss house. At present both are in Secret Room of Bigg Boss house. Earlier This week, both were eliminated from Bigg Boss Kannada 4 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada