»   » 'ಬಿಗ್ ಬಾಸ್'ಗೆ 'ಹ್ಯಾಟ್ಸ್ ಆಫ್' ಎಂದ ಕನ್ನಡ ಕುಲಕೋಟಿ ವೀಕ್ಷಕರು.!

'ಬಿಗ್ ಬಾಸ್'ಗೆ 'ಹ್ಯಾಟ್ಸ್ ಆಫ್' ಎಂದ ಕನ್ನಡ ಕುಲಕೋಟಿ ವೀಕ್ಷಕರು.!

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'ಗೆ ವೀಕ್ಷಕರು ಹ್ಯಾಟ್ಸ್ ಆಫ್ ಎನ್ನುತ್ತಿದ್ದಾರೆ. ವೀಕ್ಷಕರ ಇಚ್ಛೆಯಂತೆ.. ಜನಾದೇಶದಂತೆ.. ಪ್ರಥಮ್ ಗೆ 'ಬಿಗ್ ಬಾಸ್ ಕನ್ನಡ-4' ಗೆಲುವಿನ ಕಿರೀಟ ತೊಡಿಸಿದ ಕಲರ್ಸ್ ಕನ್ನಡ ಮತ್ತು 'ಬಿಗ್ ಬಾಸ್' ತಂಡಕ್ಕೆ ಕನ್ನಡಿಗರು ಧನ್ಯವಾದ ಅರ್ಪಿಸುತ್ತಿದ್ದಾರೆ.

ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ 'ಬಿಗ್ ಬಾಸ್'ಗೆ ಥ್ಯಾಂಕ್ಸ್ ಹೇಳುತ್ತಿರುವ ವೀಕ್ಷಕರು ಒಂದಿಬ್ಬರಲ್ಲ. ಬೇಕಾದ್ರೆ, ನೀವೇ ನೋಡಿ....

ಕಲರ್ಸ್ ಕನ್ನಡ ಹಾಗೂ 'ಬಿಗ್ ಬಾಸ್'ಗೆ ಥ್ಯಾಂಕ್ಸ್.!

ಜನರ ಮತಗಳಿಗೆ ಮಾನ್ಯತೆ ಕೊಟ್ಟ ಕಲರ್ಸ್ ಕನ್ನಡ ಹಾಗೂ 'ಬಿಗ್ ಬಾಸ್' ತಂಡಕ್ಕೆ ವೀಕ್ಷಕರು ಥ್ಯಾಂಕ್ಸ್ ಹೇಳಿದ್ದಾರೆ.['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ವಂಡರ್ ಫುಲ್ ರಿಯಾಲಿಟಿ ಶೋ.!

'ಬಿಗ್ ಬಾಸ್ ಕನ್ನಡ-4' ಒಂದು ವಂಡರ್ ಫುಲ್ ರಿಯಾಲಿಟಿ ಶೋ ಅಂತ ವೀಕ್ಷಕರು ಫೇಸ್ ಬುಕ್ ನಲ್ಲಿ ಬಣ್ಣಿಸುತ್ತಿದ್ದಾರೆ.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

ಈಗಲಾದರೂ ನಿಮ್ಮ ಅಭಿಪ್ರಾಯ ಬದಲಾಯಿಸಿಕೊಳ್ಳಿ...

''ವಿರೋಧಿಗಳೇ.. ಈಗಲಾದರೂ ನಿಮ್ಮ ಅಭಿಪ್ರಾಯ ಬದಲಾಯಿಸಿಕೊಳ್ಳಿ, ಬಿಗ್ ಬಾಸ್ ಸ್ಕ್ರಿಪ್ಟೆಡ್ ಶೋ ಅಲ್ಲ'' ಅಂತ ವೀಕ್ಷಕರೇ ಕಾಮೆಂಟ್ ಮಾಡುತ್ತಿದ್ದಾರೆ.[ಟ್ವಿಟ್ಟರ್ ನಲ್ಲಿ ಸೂಪರ್ ಸ್ಟಾರ್ ಆದ 'ಬಿಗ್ ಬಾಸ್' ವಿನ್ನರ್ ಪ್ರಥಮ್]

ಪ್ರಥಮ್ ನ ಹುಚ್ಚ ಅಂದೋರು ಹುಚ್ಚರಷ್ಟೇ.!

''ಪ್ರಥಮ್ ನ ಹುಚ್ಚ ಅಂದೋರು ಹುಚ್ಚರಷ್ಟೇ. 'ಬಿಗ್ ಬಾಸ್' ಶೋ ಇಲ್ಲದೇ ಬೇಜಾರು ಆಗುತ್ತಿದೆ'' ಎಂಬುದು ವೀಕ್ಷಕರ ಅಭಿಪ್ರಾಯ.['ಲಾರ್ಡ್' ಪ್ರಥಮ್ ಸರ್ ಮಾಡಿರುವ ದಾಖಲೆ ಅಂತಿಂಥದ್ದಲ್ಲ.!]

ನಿರೀಕ್ಷೆ ಮಾಡಿದ್ದೇ ಆಯ್ತು.!

'ಬಿಗ್ ಬಾಸ್' ಕಾರ್ಯಕ್ರಮ ಈ ಬಾರಿ ವೀಕ್ಷಕರ ನಿರೀಕ್ಷೆಯಂತೆಯೇ ನಡೆದರಿಂದ ವೀಕ್ಷಕರು ಖುಷಿ ಆಗಿದ್ದಾರೆ.['ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!]

ಮೊಟ್ಟ ಮೊದಲ ಬಾರಿಗೆ...

''ನಾನು ಪ್ರಥಮ್ ಫ್ಯಾನ್ ಅಲ್ಲ. ಆದರೆ ಪ್ರಥಮ್ ಅವರು ಗೆದ್ದಿರೋ ಹಣವನ್ನು ಯೋಧರಿಗೆ ಕೊಡ್ತೀನಿ ಅಂದ್ರಲ್ಲ...! ಅದಕ್ಕೆ ಗೌರವ ಕೊಡ್ತೀನಿ. ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್' ಸ್ಕ್ರಿಪ್ಟೆಡ್ ಅಲ್ಲ ಅಂತ ಫೀಲ್ ಆಗುತ್ತಿದೆ'' ಅಂತಾವ್ರೆ ವೀಕ್ಷಕರು.

ಗ್ರೇಟ್ ಶೋ, ಗ್ರೇಟ್ ನಿರ್ಧಾರ...

''ಥ್ಯಾಂಕ್ಯು ಬಿಗ್ ಬಾಸ್... ಗ್ರೇಟ್ ಶೋ, ಗ್ರೇಟ್ ನಿರ್ಧಾರ'' ಅಂತ ಕೊಂಡಾಡುತ್ತಿದ್ದಾರೆ ವೀಕ್ಷಕರು.

'ಕಲರ್ಸ್ ಕನ್ನಡ'ಗೆ ವಂದನೆಗಳು

ಪ್ರಥಮ್ ರವರನ್ನ ಗುರುತಿಸಿದ್ದಕ್ಕೆ ಹಾಗೂ ಗೆಲ್ಲಿಸಿದ್ದಕ್ಕೆ ಕಲರ್ಸ್ ಕನ್ನಡ ವಾಹಿನಿಗೆ ವಂದನೆಗಳನ್ನ ಅರ್ಪಿಸಿದ್ದಾರೆ ಕನ್ನಡಿಗರು.

ಮುಂದಿನ ಸೀಸನ್ ಮಿಸ್ ಮಾಡಲ್ಲ.!

ಈ ಬಾರಿ ಜನ ಮೆಚ್ಚಿರುವ ಕೆಲಸ ಮಾಡಿರುವುದರಿಂದ ಮುಂದಿನ 'ಬಿಗ್ ಬಾಸ್' ಸೀಸನ್ ನ ಮಿಸ್ ಮಾಡಲ್ಲ ಅಂತ ವೀಕ್ಷಕರು ಅಭಯ ನೀಡಿದ್ದಾರೆ.

ಲವ್ ಯು 'ಬಿಗ್ ಬಾಸ್'

'ಬಿಗ್ ಬಾಸ್' ಮೇಲೆ ವೀಕ್ಷಕರ ಪ್ರೀತಿ ಉಕ್ಕಿ ಹರಿಯುತ್ತಿದೆ. ಅದಕ್ಕೆ ಈ ಕಾಮೆಂಟ್ ಸಾಕ್ಷಿ.

'ಬಿಗ್ ಬಾಸ್'ನ ಹೊಗಳುತ್ತಿರುವ ವೀಕ್ಷಕರು

'ಬಿಗ್ ಬಾಸ್' ತಂಡ ಹಾಗೂ ಕಲರ್ಸ್ ಕನ್ನಡ ವಾಹಿನಿಯನ್ನ ವೀಕ್ಷಕರು ಹೊಗಳಿ ಅಟ್ಟಕ್ಕೆ ಏರಿಸುತ್ತಿದ್ದಾರೆ.

ಗೆದ್ದ 'ಬಿಗ್ ಬಾಸ್'

ಕನ್ನಡದ ಕಂದ ಪ್ರಥಮ್ ಗೆದ್ದಿರೋದ್ರಿಂದ 'ಬಿಗ್ ಬಾಸ್' ಗೆದ್ದಿತು ಎಂಬ ಅಭಿಪ್ರಾಯ ಎನ್ನುವ ಕಾಮೆಂಟ್ ಗಳೇ ಹೆಚ್ಚು.

'ಬಿಗ್ ಬಾಸ್' ನೋಡಿದ್ದಕ್ಕೂ ಸಾರ್ಥಕ

ಪ್ರಥಮ್ ಗೆದ್ದಿರೋದ್ರಿಂದ 'ಬಿಗ್ ಬಾಸ್' ನೋಡಿದ್ದಕ್ಕೂ ಸಾರ್ಥಕ ಆಯ್ತು ಅಂತಿದ್ದಾರೆ ವೀಕ್ಷಕರು.

ಸಾಲು ಸಾಲು ಕಾಮೆಂಟ್ಸ್...

ಜನರ ವೋಟ್ ಗಳಿಗೆ ಬೆಲೆ ಕೊಟ್ಟ 'ಬಿಗ್ ಬಾಸ್' ಗೆ ವೀಕ್ಷಕರು ಜೈ ಕಾರ ಹಾಕುತ್ತಿದ್ದಾರೆ.

ಕೋಟಿ ಕೋಟಿ ಧನ್ಯವಾದಗಳು.!

'ಬಿಗ್ ಬಾಸ್' ಹಾಗೂ ಕಲರ್ಸ್ ವಾಹಿನಿ ಬಗ್ಗೆ ವೀಕ್ಷಕರ ಪ್ರೀತಿ ಎಷ್ಟಿದೆ ಎನ್ನುವುದಕ್ಕೆ ಈ ಕಾಮೆಂಟ್ ಗಿಂತ ಬೇರೆ ನಿದರ್ಶನ ಬೇಕಾ.?

ದುಸ್ರಾ ಮಾತೇ ಬೇಡ.!

'ಬಿಗ್ ಬಾಸ್' ತೆಗೆದುಕೊಂಡ ನಿರ್ಧಾರದ ಎಫೆಕ್ಟ್ ಇದು...

ಬಿಗ್ ಬಾಸ್ ನಿರಾಶೆ ಮಾಡಲಿಲ್ಲ.!

'ಬಿಗ್ ಬಾಸ್' ಈ ಬಾರಿ ನಿರಾಶೆ ಮಾಡಲಿಲ್ಲ ಅಂತ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ.

ಪ್ರಥಮ್ ಗೆಲುವಿಗೆ ಖುಷಿ

ಅರ್ಹ ವ್ಯಕ್ತಿ ಪ್ರಥಮ್ ಗೆದ್ದಿರುವುದು ವೀಕ್ಷಕರಿಗೆ ಸಂತಸ ತಂದಿದೆ.

ಕನ್ನಡಿಗರು ಪ್ರೀತಿಸುತ್ತಾರೆ

'ಕಲರ್ಸ್ ಕನ್ನಡ'ದ ಮುಂದಿನ ಕಾರ್ಯಕ್ರಮಗಳನ್ನೂ ಕನ್ನಡಿಗರು ಪ್ರೀತಿಸುತ್ತಾರೆ. ಹೀಗಂತ ನಾವು ಹೇಳ್ತೀಲ್ಲ. ವೀಕ್ಷಕರೇ ಹೇಳ್ತಿದ್ದಾರೆ.

ನಿಮ್ಮ ಅಭಿಪ್ರಾಯ ಏನು.?

'ಬಿಗ್ ಬಾಸ್ ಕನ್ನಡ-4' ವಿನ್ನರ್ ಪ್ರಥಮ್ ಬಗ್ಗೆ ನಿಮ್ಮ ಅಭಿಪ್ರಾಯ ಏನು.? ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ....

English summary
Bigg Boss Kannada 4 Viewers have taken 'Colors Kannada/Colors Super' Facebook page to thank Colors Channel for the wonderful show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada