»   » ಕಡೆಗೂ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ 'ಬುದ್ಧಿವಂತ' ಪ್ರಥಮ್.!

ಕಡೆಗೂ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ 'ಬುದ್ಧಿವಂತ' ಪ್ರಥಮ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸತತ ಎಂಟು ಬಾರಿ ನಾಮಿನೇಟ್ ಆಗಿ ಸೇಫ್ ಆಗಿರುವ 'ಒಳ್ಳೆ ಹುಡುಗ' ಪ್ರಥಮ್, ಹತ್ತನೇ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. [ಪ್ರಪ್ರಥಮ ಬಾರಿಗೆ ಪ್ರಥಮ್ ಸೇಫ್ ಝೋನ್ ನಲ್ಲಿ.!]

'ಬಿಗ್ ಬಾಸ್' ನೀಡಿದ್ದ ಟಾಸ್ಕ್ ನಲ್ಲಿ ಗೆದ್ದು ಕಡೆಗೂ ಕ್ಯಾಪ್ಟನ್ ಪಟ್ಟಕ್ಕೆ ಏರಿದ್ದಾರೆ 'ಪಿರಿಪಿರಿ' ಪ್ರಥಮ್. ಅಲ್ಲಿಗೆ ಈ ವಾರ ನಾಮಿನೇಷನ್ ನಿಂದ ಪ್ರಥಮ್ ಬಚಾವ್.

'ಬಿಗ್ ಬಾಸ್' ನೀಡಿದ್ದ ಕ್ಯಾಪ್ಟನ್ಸಿ ಟಾಸ್ಕ್ ಏನು.?

ಮನೆ ಸದಸ್ಯರ ಬುದ್ಧಿವಂತಿಕೆ ಟೆಸ್ಟ್ ಮಾಡಲು 'ಕ್ಯಾಪ್ಟನ್ಸಿ ಸಿ.ಇ.ಟಿ' ಪರೀಕ್ಷೆಯನ್ನ 'ಬಿಗ್ ಬಾಸ್' ನೀಡಿದರು. ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಸದಸ್ಯರು ಉತ್ತರಿಸಬೇಕಿತ್ತು. ಅತಿ ಹೆಚ್ಚು ಸರಿ ಉತ್ತರ ನೀಡಿದವರಿಗೆ ಮನೆಯ ಕ್ಯಾಪ್ಟನ್ ಆಗುವ ಅವಕಾಶ ಇತ್ತು. [ಪ್ರಥಮ್ ಸೇಫ್ ಆದ್ರು, ಶೀತಲ್-ಶಾಲಿನಿ ಎಲ್ರ ಕೆಂಗಣ್ಣಿಗೆ ಗುರಿಯಾದ್ರು.!]

ಇವರೆಲ್ಲ ಭಾಗವಹಿಸುವ ಹಾಗಿರಲಿಲ್ಲ.!

ಕಳೆದ ವಾರದ ಕ್ಯಾಪ್ಟನ್ ಆಗಿದ್ದ ಕೀರ್ತಿ ಕುಮಾರ್ ಈ ವಾರ 'ಕ್ಯಾಪ್ಟನ್ಸಿ ಟಾಸ್ಕ್' ನಲ್ಲಿ ಭಾಗವಹಿಸುವ ಬದಲು ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಬೇಕಿತ್ತು. ನೇರವಾಗಿ ನಾಮಿನೇಟ್ ಆಗಿರುವ ಶಾಲಿನಿ ಹಾಗೂ ಸುಕೃತಾ ಕೂಡ 'ಕ್ಯಾಪ್ಟನ್ಸಿ ಟಾಸ್ಕ್'ನಿಂದ ಹೊರಬಿದ್ದರು. ['ದಂಡನಾಯಕ' ಪ್ರಥಮ್ ವಿರುದ್ಧ ದಂಗೆ ಎದ್ದ ಕೀರ್ತಿ-ಮೋಹನ್ ಗ್ಯಾಂಗ್.!]

ಅತಿ ಹೆಚ್ಚು ಅಂಕ ಗಳಿಸಿದ ಪ್ರಥಮ್

'ಬಿಗ್ ಬಾಸ್' ನೀಡಿದ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಥಮ್, ಈ ವಾರ ಮನೆಯ ಕ್ಯಾಪ್ಟನ್ ಆದರು. [ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಯಾರ್ಯಾರಿಗೆ ಎಷ್ಟು ಅಂಕ.?

ರೇಖಾ - 8, ಕಾರುಣ್ಯ - 6, ಪ್ರಥಮ್ - 13, ಭುವನ್ - 5, ಮೋಹನ್ - 6, ಸಂಜನಾ - 9, ಮಾಳವಿಕಾ - 8, ಶೀತಲ್ ಶೆಟ್ಟಿ - 4.

ಅಂತೂ-ಇಂತೂ ಕ್ಯಾಪ್ಟನ್ ಆದ ಪ್ರಥಮ್

ಅಂತೂ-ಇಂತೂ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಹತ್ತನೇ ವಾರ ಪ್ರಥಮ್ ಕ್ಯಾಪ್ಟನ್ ಆಗಿದ್ದಾರೆ.

ಈ ವಾರ ಪ್ರಥಮ್ ಸೇಫ್

ಮನೆಯ ಕ್ಯಾಪ್ಟನ್ ಆಗಿರುವುದರಿಂದ, ಪ್ರಥಮ್ ಗೆ ಈ ವಾರ 'ಎಲಿಮಿನೇಷನ್ ಭಯ' ಇಲ್ಲ.

English summary
BBK4, Week 10: Director Pratham becomes captain of the house for the 1st time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada