»   » ಮಧ್ಯರಾತ್ರಿ 'ಬಿಗ್ ಬಾಸ್' ಮನೆಯಿಂದ ಕಾರುಣ್ಯ ಔಟ್: ನೆಕ್ಸ್ಟ್ ಯಾರು ಗೊತ್ತಾ?

ಮಧ್ಯರಾತ್ರಿ 'ಬಿಗ್ ಬಾಸ್' ಮನೆಯಿಂದ ಕಾರುಣ್ಯ ಔಟ್: ನೆಕ್ಸ್ಟ್ ಯಾರು ಗೊತ್ತಾ?

Posted By:
Subscribe to Filmibeat Kannada

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ 11 ನೇ ವಾರ ಅಚ್ಚರಿಯ ಬೆಳವಣಿಗೆವೊಂದು ನಡೆದಿದೆ. ಪ್ರತಿ ಶನಿವಾರ 'ವಾರದ ಕಥೆ ಕಿಚ್ಚನ ಜೊತೆ' ವಿಶೇಷ ಎಪಿಸೋಡ್ ನಲ್ಲಿ ಎಲಿಮಿನೇಷನ್ ಮಾಡುತ್ತಿದ್ದ 'ಬಿಗ್ ಬಾಸ್' ಈ ವಾರ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ.

ದಿನ, ಸಮಯ ನೋಡದೆನೇ ಮಧ್ಯರಾತ್ರಿಯೇ ಸ್ಪರ್ಧಿಯೊಬ್ಬರನ್ನ ಮನೆಯಿಂದ ಹೊರ ಕಳುಹಿಸಿದ್ದಾರೆ.[ಮುಲಾಜಿಲ್ಲ, ಈ ವಾರ 'ಬಿಗ್ ಬಾಸ್' ಸ್ಪರ್ಧಿಗಳೆಲ್ಲಾ ನಾಮಿನೇಟೆಡ್.! ]

ಈ ವಾರ ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದರಿಂದ ಯಾರು ಹೊರ ಹೋಗಲಿದ್ದಾರೆ ಎಂಬ ಕುತೂಹಲ ಸಹಜವಾಗಿತ್ತು. ಆದ್ರೆ, ವಾರಾಂತ್ಯವಾಗುವುದರ ಮುಂಚೆಯೇ ಎಲಿಮಿನೇಷನ್ ಮಾಡಿದ್ದು, ಮನೆಯ ಸದಸ್ಯರಿಗೆ ಭಯ ಆತಂಕ ತಂದಿದೆ. ನಟಿ ಕಾರುಣ್ಯ ರಾಮ್ ಈ ವಾರ ಎಲಿಮಿನೇಟ್ ಆಗಿದ್ದು, ಕಾರುಣ್ಯ ಬೆನ್ನಲ್ಲೆ ಮತ್ಯಾರು ಹೋಗುತ್ತಾರೆ ಎಂಬ ಕುತೂಹಲ ಕೂಡ ಈಗ ಹೆಚ್ಚಾಗಿದೆ.

ಮಧ್ಯರಾತ್ರಿ ಶಾಕ್ ಕೊಟ್ಟ 'ಬಿಗ್ ಬಾಸ್'

ಗುರುವಾರ ರಾತ್ರಿ 2 ಗಂಟೆ ಸುಮಾರಿಗೆ ಮನೆ ಸದಸ್ಯರಿಗೆ ‘ಬಿಗ್ ಬಾಸ್' ಸೂಚನೆ ನೀಡಿ, ಇನ್ನು 20 ನಿಮಿಷದಲ್ಲಿ ನಿಮ್ಮ ಲಗೇಜ್ ಸಿದ್ಧಪಡಿಸಿಕೊಳ್ಳಿ ಮನೆಯಿಂದ ಹೊರ ಹೋಗುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಬಿಗ್ ಬಾಸ್ ಶಾಕ್ ಕೊಟ್ಟರು.['ಬಿಗ್ ಬಾಸ್': ಈ ವಾರ ನಿರೀಕ್ಷೆ ಮಾಡದೇ ಇರೋದನ್ನ ನಿರೀಕ್ಷಿಸಿ.!]

ಎಲಿಮಿನೇಷನ್ ನಲ್ಲಿ ಸೇಫ್ ಆದ ಮೂವರು

ಲಗೇಜ್ ಸಿದ್ಧಪಡಿಸಿಕೊಂಡ ಬಳಿಕ ಬೆಡ್ ರೂಂನಲ್ಲಿ ರೇಖಾ, ಮಾಳವಿಕಾ, ಪ್ರಥಮ್ ಅವರು ಈ ವಾರ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆಗಿದ್ದಾರೆ. ಈ ಮೂವರನ್ನ ಬಿಟ್ಟು ಉಳಿದವರು ಲೀವಿಂಗ್ ಏರಿಯಾಗೆ ಬನ್ನಿ ಎಂದು ಮತ್ತೊಂದು ಶಾಕ್ ಕೊಟ್ಟರು.['ಬಿಗ್ ಬಾಸ್' ಮನೆಯಲ್ಲಿ ಪ್ರಥಮ್ ಮತ್ತೊಮ್ಮೆ ಅವಕಾಶ ವಂಚಿತ.! ]

ಮತ್ತೆ ಸೇಫ್ ಆದ ಮೂವರು

ಲಿವಿಂಗ್ ಏರಿಯಾದಲ್ಲಿ ಮೋಹನ್, ಕೀರ್ತಿ, ಶೀತಲ್ ಮೂವರು ಸೇಫ್ ಎಂದು 'ಬಿಗ್ ಬಾಸ್' ಘೋಷಿಸಿದರು. ಉಳಿದವರು ಗಾರ್ಡನ್ ಏರಿಯಾಗೆ ಬರಬೇಕು ಎಂದು ಸೂಚನೆ ಕೊಟ್ಟು ಕುತೂಹಲ ಹೆಚ್ಚಿಸಿದರು.

ಕೊನೆ ಮಾತು ಕೇಳಿದ 'ಬಿಗ್ ಬಾಸ್'

ಭುವನ್, ಶಾಲಿನಿ, ಸಂಜನಾ, ಕಾರುಣ್ಯ ಗಾರ್ಡನ್ ಏರಿಯಾಗೆ ಬಂದ ನಂತರ, ನಿಮ್ಮ ನಾಲ್ವರಲ್ಲಿ ಒಬ್ಬರಿಗೆ ಇವತ್ತು ಬಿಗ್ ಬಾಸ್ ಮನೆಯಲ್ಲಿ ಕೊನೆ ದಿನವಾಗಿರುತ್ತೆ. ಮನೆಯಿಂದ ಹೊರಹೋಗುವ ಮುನ್ನಾ ‘ಬಿಗ್ ಬಾಸ್' ಮನೆಯ ಅನುಭವ ಹೇಗಿತ್ತು ಎಂದು ಕೇಳಿದ್ದು, ಸದಸ್ಯರು ತಮ್ಮ ಅನಿಸಿಕೆ ಹೇಳಿಕೊಂಡರು.

ಮತ್ತೆ ಮೂವರು ಸೇಫ್ ಎಂದ 'ಬಿಗ್ ಬಾಸ್'

ಗಾರ್ಡನ್ ಏರಿಯಾದಲ್ಲಿದ್ದ ಭುವನ್, ಶಾಲಿನಿ, ಸಂಜನಾ ಅವರನ್ನ ಒಬ್ಬೊಬ್ಬರಾಗಿ ಸೇಫ್ ಎಂದು ಘೋಷಿಸಿದರು.

ಕಾರುಣ್ಯ ರಾಮ್ ಔಟ್

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಎರಡನೇ ಅವಕಾಶ ಪಡೆದಿದ್ದ ನಟಿ ಕಾರುಣ್ಯ ರಾಮ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಹೋಗುತ್ತಿದ್ದಾರೆ ಎಂದು ಬಿಗ್ ಬಾಸ್ ಸೂಚಿಸಿದರು.

ಮತ್ತೆ ಶನಿವಾರ ಎಲಿಮಿನೇಷನ್ !

ಗುರುವಾರ ರಾತ್ರಿಯೇ ಎಲಿಮಿನೇಷನ್ ಪ್ರಕ್ರಿಯೆ ನಡೆದುದರಿಂದ ಶನಿವಾರವೂ ಎಲಿಮಿನೇಷನ್ ಪ್ರಕ್ರಿಯೆ ಇರಲಿದ್ಯ ಎಂಬ ಕುತೂಹಲ ಈಗ ಶುರುವಾಗಿದೆ. ಒಂದು ಪಕ್ಷ ಶನಿವಾರವೂ ಎಲಿಮಿನೇಷನ್ ಪ್ರಕ್ರಿಯೆ ಇದ್ದರೇ ಈ ವಾರ ಮತ್ತೆ ಯಾರು ಹೋಗಬಹುದು ಎಂಬ ಪ್ರಶ್ನೆಯೂ ಉದ್ಬವಿಸಿದೆ.

ಹತ್ತು ಜನ ನಾಮಿನೇಟ್ ಆಗಿದ್ದರು!

'ಬಿಗ್ ಬಾಸ್' ಆದೇಶದ ಪ್ರಕಾರ ಈ ವಾರ ಪ್ರಥಮ್, ಕೀರ್ತಿ, ಕಾರುಣ್ಯ ರಾಮ್, ಮೋಹನ್, ಶೀತಲ್ ಶೆಟ್ಟಿ, ಮಾಳವಿಕಾ, ಸಂಜನಾ, ರೇಖಾ, ಶಾಲಿನಿ ಮತ್ತು ಭುವನ್ ಸೇರಿ ಹತ್ತು ಜನರು ನಾಮಿನೇಟ್ ಆಗಿದ್ದಾರೆ.

English summary
Bigg Boss Kannada 4, Week 11 : Actress Karunya Ram is eliminated from Bigg Boss Kannada 4 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada