»   » 12ನೇ ವಾರ 'ಬಿಗ್ ಬಾಸ್' ಮನೆಯಿಂದ ಗೇಟ್ ಪಾಸ್ ಯಾರಿಗೆ..?

12ನೇ ವಾರ 'ಬಿಗ್ ಬಾಸ್' ಮನೆಯಿಂದ ಗೇಟ್ ಪಾಸ್ ಯಾರಿಗೆ..?

Posted By:
Subscribe to Filmibeat Kannada

ಕಳೆದ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋದ ಸಂಜನಾ ಅವರಿಂದ ನೇರ ನಾಮಿನೇಟ್ ಆಗಿದ್ದ ಪ್ರಥಮ್ ಹಾಗೂ ಶೀತಲ್ ಪೈಕಿ, ಪ್ರಥಮ್ ಈ ವಾರ ಸೇಫ್ ಆಗಿದ್ದಾರೆ.

ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಪ್ ಆಗಿದ್ದ ಭುವನ್ ಪೊನ್ನಣ್ಣ, ಕೊನೆ ಕ್ಷಣದಲ್ಲಿ ನೇರ ನಾಮಿನೇಟ್ ಆಗಬೇಕಾಯಿತು. ಉಳಿದಂತೆ ಈ ವಾರ 'ಬಿಗ್ ಬಾಸ್' ಮನೆಯಲ್ಲಿ ಫೈನಲೀಸ್ಟ್ ಅಂತ ಬಿಂಬಿತವಾಗಿರುವ ಬಹುತೇಕರು ನಾಮಿನೇಟ್ ಆಗಿದ್ದಾರೆ.[ಪ್ರಥಮ್, ಶೀತಲ್ ಗೆ ಗುಂಡ್ ಪಿನ್ ಚುಚ್ಚಿ ಹೋದ ಸಂಜನಾ]

ಹಾಗಾದ್ರೆ, 78ನೇ ದಿನ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ನಡೆದ ನಾಮಿನೇಷನ್ ಪ್ರಕ್ರಿಯೆ ಕುರಿತ ಸಂಪೂರ್ಣ ವರದಿ ಇಲ್ಲಿದೆ. ಓದಿರಿ....

ಕ್ಯಾಪ್ಟನ್ ಆಗಿ ಸೇಫ್ ಆದ ಶಾಲಿನಿ

ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾದ ಹಿನ್ನೆಲ್ಲೆ ಶಾಲಿನಿಯವರು ಸೇಫ್ ಆದರು. ಸಹಜವಾಗಿ ಕ್ಯಾಪ್ಟನ್ ಆದವರಿಗೆ ಎಲಿಮಿನೇಷನ್ ನಿಂದ ಇಮ್ಯೂನಿಟಿ ಸಿಕ್ತು.

ಕ್ಯಾಪ್ಟನ್ ನಿಂದ ನೇರವಾಗಿ ನಾಮಿನೇಟ್ ಭುವನ್

'ಬಿಗ್ ಬಾಸ್' ಸೂಚನೆ ಮೆರೆಗೆ ನೇರವಾಗಿ ಒಬ್ಬರನ್ನ ಮನೆಯ ಕ್ಯಾಪ್ಟನ್ ನಾಮಿನೇಟ್ ಮಾಡಬೇಕಿತ್ತು. ಹೀಗಾಗಿ ಕ್ಯಾಪ್ಟನ್ ಶಾಲಿನಿ ಭುವನ್ ಅವರ ಹೆಸರನ್ನ ಸೂಚಿಸಿದರು.

ಟಾರ್ಗೆಟ್ ಆದ ಮಾಳವಿಕಾ!

ನಟಿ ಮಾಳವಿಕಾ ವಿರುದ್ಧ ಮೋಹನ್, ಶೀತಲ್, ರೇಖಾ, ಕೀರ್ತಿ ವೋಟ್ ಮಾಡಿದರು.

ಮೋಹನ್ ಗೆ ಮತ ಹಾಕಿದವರು!

ಮೋಹನ್ ಅವರ ವಿರುದ್ಧ ಕೀರ್ತಿ, ಶೀತಲ್, ರೇಖಾ ಅವರು ಮತ ಹಾಕಿದರು.

ಶೀತಲ್ ಮಿಸ್ ಆಗಲೇ ಇಲ್ಲ

ಕಳೆದ ವಾರ ಮನೆಯಿಂದ ಹೊರ ಹೋದ ಸಂಜನಾ ಅವರಿಂದ ಒಂದು ಮತ ಪಡೆದಿದ್ದ ಶೀತಲ್ ಅವರ ವಿರುದ್ಧ, ಮೋಹನ್, ಮಾಳವಿಕಾ, ಭುವನ್ ನಾಮಿನೇಟ್ ಮಾಡಿದರು

ಕೀರ್ತಿ ಕುಮಾರ್ ಹೆಸರು ಸೂಚಿಸಿದವರು

ಕೀರ್ತಿ ಕುಮಾರ್ ವಿರುದ್ಧ ಮೋಹನ್ ಹಾಗೂ ಪ್ರಥಮ್ ವೋಟ್ ಮಾಡಿದರು

ರೇಖಾ ವಿರುದ್ಧ ಮತ ಹಾಕಿದವರು

ನಟಿ ರೇಖಾ ಅವರು ಹೆಸರನ್ನ ಮಾಳವಿಕಾ ಮತ್ತು ಭುವನ್ ಸೂಚಿಸಿದರು.

ಈ ವಾರ ಸೇಫ್ ಆದವರು

ಕಡಿಮೆ ವೋಟ್ ಪಡೆದ ಪ್ರಥಮ್ ಹಾಗೂ ಕ್ಯಾಪ್ಟನ್ ಆದ ಶಾಲಿನಿ ಈ ವಾರದ ನಾಮಿನೇಷನಿಂದ ಸೇಫ್ ಆಗಿದ್ದಾರೆ.

ಆರು ಜನರಲ್ಲಿ ಯಾರು ಉಳಿಯಬೇಕು?

ಶೀತಲ್, ಮೋಹನ್, ಮಾಳವಿಕಾ, ಕೀರ್ತಿ, ರೇಖಾ, ಹಾಗೂ ಭುವನ್ ಆರು ಜನರಲ್ಲಿ ಯಾರು ಉಳಿಯಬೇಕು? ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 4, Week 12 : Actress Malavika, Mohan, Sheethal, Keerthi, Rekha, and Bhuvan, are nominated for this week's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada