»   » ಎಂಟನೇ ಅದ್ಭುತ: ಯಾರ ಬಾಯಲ್ಲೂ ಪ್ರಥಮ್ ಹೆಸರು ಬರಲೇ ಇಲ್ಲ.!

ಎಂಟನೇ ಅದ್ಭುತ: ಯಾರ ಬಾಯಲ್ಲೂ ಪ್ರಥಮ್ ಹೆಸರು ಬರಲೇ ಇಲ್ಲ.!

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಜನಪ್ರಿಯ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಹನ್ನೊಂದು ವಾರಗಳು ಕಳೆದಿವೆ. ಅದರಲ್ಲಿ ಒಂದು ಬಾರಿ ಕ್ಯಾಪ್ಟನ್ ಆದಾಗ, ಮತ್ತೊಂದು ಬಾರಿ ಇಮ್ಯೂನಿಟಿ ಸಿಕ್ಕಾಗ ಮಾತ್ರ ನಾಮಿನೇಷನ್ ಪ್ರಕ್ರಿಯೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಸೇಫ್ ಆಗಿದ್ರು.

ಮಿಕ್ಕ ಒಂಬತ್ತು ವಾರಗಳೂ ಒಂದಲ್ಲ ಒಂದು ಕಾರಣಕ್ಕೆ 'ಬಿಗ್ ಬಾಸ್' ಮನೆಯ ಇತರೆ ಸದಸ್ಯರಿಂದ ಪ್ರಥಮ್ ಟಾರ್ಗೆಟ್ ಆಗಿದ್ದರು. ಪ್ರತಿ ವಾರದಂತೆ ಈ ವಾರ ಕೂಡ ಪ್ರಥಮ್ ನಾಮಿನೇಟ್ ಆಗುತ್ತಾರೆ ಅಂತಲೇ ಎಲ್ಲರೂ ಭಾವಿಸಿದ್ದರು. ಆದ್ರೆ, ಅಂದುಕೊಂಡಂತೆ ಎಲ್ಲವೂ ಆಗಲಿಲ್ಲ. ಪ್ರಥಮ್ ಹೆಸರು ಯಾರ ಬಾಯಲ್ಲೂ ಬರಲಿಲ್ಲ.!

ಪ್ರಥಮ್ ವಿರುದ್ಧ ವೋಟ್ ಗಳು ಬರಲಿಲ್ಲ

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಅಚ್ಚರಿ ಅಂದ್ರೆ ಇದೇ. ಹನ್ನೆರಡನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರಹೋಗಲು ಪ್ರಥಮ್ ನಾಮಿನೇಟ್ ಆಗಲಿಲ್ಲ. 'ಬಿಗ್ ಬಾಸ್' ಮನೆಯ ಇತರೆ ಸ್ಪರ್ಧಿಗಳ ಬಾಯಲ್ಲಿ ಪ್ರಥಮ್ ಹೆಸರು ಬರಲೇ ಇಲ್ಲ.

ಒಂದು ವೋಟ್ ಮಾತ್ರ ಇತ್ತು.!

'ಬಿಗ್ ಬಾಸ್' ಮನೆಯಿಂದ ಹೊರ ಹೋಗುವ ಮುನ್ನ ನಟಿ ಸಂಜನಾ ಮಾತ್ರ ಪ್ರಥಮ್ ಹೆಸರನ್ನ ಹೇಳಿದ್ದರು. ಹೀಗಾಗಿ ಪ್ರಥಮ್ ಅಕೌಂಟ್ ನಲ್ಲಿ ಕೇವಲ ಒಂದು ವೋಟ್ ಇತ್ತು. ಸಂಜನಾ ಬಿಟ್ಟರೆ ಈಗ ಮನೆಯಲ್ಲಿ ಇರುವವರು ಯಾರೂ ಪ್ರಥಮ್ ನ ನಾಮಿನೇಟ್ ಮಾಡಲಿಲ್ಲ.

ಶಾಲಿನಿ ಕೊಟ್ಟ ಸರ್ ಪ್ರೈಸ್

ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿರುವ ಶಾಲಿನಿ, ಪ್ರಥಮ್ ರವರನ್ನ ನೇರವಾಗಿ ನಾಮಿನೇಟ್ ಮಾಡಬಹುದಿತ್ತು. ಆದ್ರೆ, ಆ ಕೆಲಸವನ್ನ ಶಾಲಿನಿ ಕೂಡ ಮಾಡಲಿಲ್ಲ.

ಸ್ವತಃ ಪ್ರಥಮ್ ಗೆ ಆಶ್ಚರ್ಯ.!

ನಾಮಿನೇಷನ್ ಪ್ರಕ್ರಿಯೆಯಲ್ಲಿ ತಮ್ಮ ಹೆಸರು ಬಾರದೇ ಇದ್ದಾಗ, ''ಅದ್ಹೆಂಗೆ ಗುರು ಹಿಂಗೆ... ಪ್ರತಿ ಸಲ ನಾನೇ ಎ1 ಆಗ್ತಿದ್ದೋನು. ಈ ಸಲ ಇಲ್ಲ. ನನಗೆ ಆಶ್ಚರ್ಯ ಆಗ್ತಿದೆ'' ಎಂದರು ಪ್ರಥಮ್.

ಪ್ರಥಮ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗ್ತಿದೆ

ಪ್ರಥಮ್ ಅಂದ್ರೆ ಉರಿದು ಬೀಳುತ್ತಿದ್ದ 'ಬಿಗ್ ಬಾಸ್' ಸ್ಪರ್ಧಿಗಳು, ಈಗ ಅದೇ ಪ್ರಥಮ್ ನ ಕೊಂಡಾಡುತ್ತಿದ್ದಾರೆ.

ಫೈನಲ್ ಗೆ ಮೂರೇ ವಾರ ಬಾಕಿ

ಹೇಗಿದ್ದರೂ ಈ ವಾರ ಪ್ರಥಮ್ ಸೇಫ್ ಆಗಿದ್ದಾರೆ. ಇನ್ನೊಂದು ವಾರ ಬಚಾವ್ ಆಗ್ಬಿಟ್ಟರೆ, ಪ್ರಥಮ್ ಗ್ರ್ಯಾಂಡ್ ಫಿನಾಲೆಗೆ ಲಗ್ಗೆ ಇಡುವುದು ಖಚಿತ.

English summary
BBK4, Week 12: For the first time, 'Bigg Boss' Contestants did not Nominate Kannada Director Pratham for Eviction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada