»   » ಇವರೆಲ್ಲ ಫಿನಾಲೆ ವಾರಕ್ಕೆ ಹೋಗಬೇಕಂತೆ.! ಯಾಕಂತೆ.?

ಇವರೆಲ್ಲ ಫಿನಾಲೆ ವಾರಕ್ಕೆ ಹೋಗಬೇಕಂತೆ.! ಯಾಕಂತೆ.?

Posted By:
Subscribe to Filmibeat Kannada

ಮುಂದಿನ ವಾರ... ಅಂದ್ರೆ ಜನವರಿ 14/15 ರ ಹೊತ್ತಿಗೆ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. 13 ವಾರ 'ಬಿಗ್ ಬಾಸ್' ಮನೆಯಲ್ಲಿ ಸೆಣಸಾಡಿರುವ ಸ್ಪರ್ಧಿಗಳು, ಹೇಗಾದರೂ ಮಾಡಿ ಫಿನಾಲೆ ವಾರ ತಲುಪಬೇಕು ಅಂತ ತುದಿಗಾಲಿನಲ್ಲಿ ನಿಂತಿದ್ದಾರೆ.

ಇದನ್ನೇ ಒಂದು ಚಟುವಟಿಕೆಯಾಗಿ ನೀಡಿದ 'ಬಿಗ್ ಬಾಸ್', 'ಮನೆಯ ಸದಸ್ಯರು ತಾವು ಯಾವ ಕಾರಣಕ್ಕೆ ಫಿನಾಲೆ ವಾರಕ್ಕೆ ಹೋಗಬೇಕು.?' ಎಂಬುದನ್ನು ವಿವರಿಸಲು ಆದೇಶಿಸಿದರು. ಆಗ ಸ್ಪರ್ಧಿಗಳ ಬಾಯಿಂದ ಬಂದ ನುಡಿಮುತ್ತುಗಳಿವು...

'ಕಿರಿಕ್' ಕೀರ್ತಿ ಕೊಟ್ಟ ವಿವರಣೆ ಇದು

''ಕೀರ್ತಿ ಕುಮಾರ್ ಒಬ್ಬ ವ್ಯಕ್ತಿಯಾಗಿ, ವ್ಯಕ್ತಿತ್ವವನ್ನ ತೋರಿಸಿಕೊಂಡು ಹಂತ ಹಂತವಾಗಿ 13 ವಾರದ ವರೆಗೂ ಬಂದಿದ್ದೇನೆ. ಎಲ್ಲರ ಹತ್ತಿರ ಒಳ್ಳೆಯ ರೀತಿಯಲ್ಲಿ ಒಳ್ಳೆಯ ಸಂಬಂಧದಲ್ಲಿಯೇ ಇದ್ದೇನೆ. ಸಾಕಷ್ಟು ಬಾರಿ ನಗಿಸುವ ಪ್ರಯತ್ನ ಮಾಡಿದ್ದೇನೆ. ಅಲ್ಲಲ್ಲಿ ಕೋಪ, ಸಿಟ್ಟು ತೋರಿಸಿದ್ದೇನೆ. ಅದು ಮಾನವನ ಸಹಜ ಲಕ್ಷಣ. ಮೊದಲನೇ ವಾರದ ಕೀರ್ತಿಗೂ, ಈ ವಾರದ ಕೀರ್ತಿಗೂ ಅಜಗಜಾಂತರ ವ್ಯತ್ಯಾಸ ಇದೆ, ಕೋಪದ ವಿಚಾರದಲ್ಲಿ. ಇದೆಲ್ಲವನ್ನ ನೋಡಿದಾಗ ನನಗೆ ಫಿನಾಲೆಗೆ ಹೋಗುವ ಯೋಗ್ಯತೆ ಇದೆ ಅಂತ ನನಗೆ ಅನ್ಸುತ್ತೆ'' - ಕೀರ್ತಿ ['ಬಿಗ್ ಬಾಸ್ ಕನ್ನಡ-4': ಯಾರು ಉತ್ತಮರು ಈ ನಾಲ್ವರಲ್ಲಿ.?]

'ನಾನು ಅರ್ಹ' ಎಂದ ಶಾಲಿನಿ

''ನನ್ನ ಯುಕ್ತಿ, ಶಕ್ತಿ, ಮಿತಿ, ಆಕಾರ, ಆರೋಗ್ಯ... ಎಲ್ಲವನ್ನೂ ಮೀರಿ ನಾನು ಇಲ್ಲಿ ಪ್ರತಿಯೊಂದು ಕೆಲವನ್ನು ಮಾಡಿದ್ದೇನೆ. ಸೀಕ್ರೆಟ್ ರೂಮ್ ನಲ್ಲಿ ಎಲ್ಲರೂ ನನ್ನ ಬಗ್ಗೆ ಮಾತನಾಡಿದ್ದರೂ, ಒಳಗಡೆ ಬಂದ ಮೇಲೆ ನಾನು ಅದನ್ನ ಕೆದಕಲಿಲ್ಲ. 'ಬಿಗ್ ಬಾಸ್' ಮನೆಯಲ್ಲಿ ನಾನು ಹದಿಮೂರು ವಾರ ಇದ್ದೇನೆ ಅಂದ್ರೆ ಅದೇ ನನಗೆ ದೊಡ್ಡ ಸಾಧನೆ. ಹದಿನಾಲ್ಕನೇ ವಾರ ನಾನು ಕಾಲಿಟ್ಟರೆ, ಅದಕ್ಕಿಂತ ನನಗೆ ಬೇರೇನೂ ಬೇಡ. ಆ ಅವಕಾಶವನ್ನ ದಯವಿಟ್ಟು ಕೊಡಿ. ನಾನು ಅರ್ಹಳು'' - ಶಾಲಿನಿ ['ಬಿಗ್ ಬಾಸ್' ಮನೆ ಸ್ಪರ್ಧಿಗಳಿಗೆ ಇಂದು ಸಿಗಲಿದೆ ಎಲಿಮಿನೇಷನ್ ಶಾಕ್.?]

ಪಾಸಿಟಿವ್ ರೇಖಾ

''ಗೇಮ್ ಅಂದ್ಮೇಲೆ ಸೋಲು, ಗೆಲುವು ಇದ್ದೇ ಇರುತ್ತೆ. ಅದನ್ನ ನಾವು ಹೇಗೆ ತೆಗೆದುಕೊಳ್ತೀವಿ ಅನ್ನೋದೇ ಜೀವನ. ಎಲ್ಲವನ್ನೂ ಪಾಸಿಟೀವ್ ಆಗಿ ತೆಗೆದುಕೊಳ್ಳುತ್ತೇನೆ. ಅದಕ್ಕೆ ನಾನು ಫಿನಾಲೆಯಲ್ಲಿ ಇರಬೇಕು ಅಂತ ಕೇಳಿಕೊಳ್ಳುತ್ತೇವೆ'' - ರೇಖಾ

ಗೆಲ್ಲುವ ಆಸೆ ಇದೆ ಎಂದ ಮಾಳವಿಕಾ

''ಈ ಆಟವನ್ನ 85 ದಿನ ಆಡಿಕೊಂಡು ಬಂದಿದ್ದೇನೆ ಅಂದ್ರೆ ಮುಂದೆ ಕೂಡ ಆಡಲು ಸಮರ್ಥವಾಗಿ ಇದ್ದೇನೆ. ಆಡುವ ಛಲ ಇದೆ, ಗೆಲ್ಲಬೇಕು ಎನ್ನುವ ಆಸೆ ಕೂಡ ಇದೆ. ಮಿಕ್ಕಿದನ್ನೆಲ್ಲ ಜನರ ಮೇಲೆ ಭಾರ ಹಾಕಿದ್ದೇನೆ'' - ಮಾಳವಿಕಾ ಅವಿನಾಶ್

ಆತ್ಮವಿಶ್ವಾಸ ಪ್ರದರ್ಶಿಸಿದ ಭುವನ್

''ಈ ಕ್ಷಣದ ವರೆಗೂ ನಾನು ನಾನಾಗೇ ಇದ್ದೇನೆ. ಎಲ್ಲರಿಗಿಂತ ವಯಸ್ಸಿನಲ್ಲಿ ಚಿಕ್ಕವನು... ಆದ್ರೆ, ಎಲ್ಲರಿಂದ ಗೌರವ ಗಳಿಸಿದ್ದೇನೆ ಅಂತ ಭಾವಿಸುತ್ತೇನೆ. ಹೀಗಾಗಿ ಜನ ನನ್ನನ್ನ ಫಿನಾಲೆಗೆ ಕಳುಹಿಸುತ್ತಾರೆ ಅಂತ ಅನ್ಸುತ್ತೆ'' - ಭುವನ್ ಪೊನ್ನಣ್ಣ

ನಾನು ಪ್ರಾಮಾಣಿಕ ಎಂದ ಪ್ರಥಮ್

''ಹತ್ತು ಸಲ ಜನ ನನ್ನನ್ನ ಸೇಫ್ ಮಾಡಿರೋದು ನನ್ನ ಬಲವರ್ಧನೆಗೆ ಕಾರಣವಾಗಿದೆ. ಪ್ರತಿ ಟಾಸ್ಕ್ ನಲ್ಲೂ ನಾನು ಗೆಲ್ಲುವುದಕ್ಕೆ ಆಡುತ್ತಿರಲಿಲ್ಲ. ನನ್ನ ಕೈಯಲ್ಲಿ ಏನು ಸಾಧ್ಯ, ಅದನ್ನ ಪ್ರಾಮಾಣಿಕವಾಗಿ ಆಡಿದ್ದೇನೆ. ನಾನು ಕನ್ನಿಂಗ್ ಅನ್ನೋದನ್ನ ನಾನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದೇನೆ'' - ಪ್ರಥಮ್

English summary
Bigg Boss Kannada 4, Week 13 : Contestants explained as to why they deserve to go to Grand Finale week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada