»   » 'ದೊಡ್ಮನೆ'ಯಲ್ಲಿ ಪ್ರಥಮ್, ಮಾಳವಿಕಾ 'ಗುಂಪಿಗೆ' ಸೇರದ ಪದ! ಯಾಕೆ?

'ದೊಡ್ಮನೆ'ಯಲ್ಲಿ ಪ್ರಥಮ್, ಮಾಳವಿಕಾ 'ಗುಂಪಿಗೆ' ಸೇರದ ಪದ! ಯಾಕೆ?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಶುರು ಆದ ಮೊದಲ ವಾರದಿಂದಲೂ ನಟಿ ಮಾಳವಿಕಾ ಅವಿನಾಶ್ ಹಾಗೂ 'ಒಳ್ಳೆ ಹುಡುಗ' ಪ್ರಥಮ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಾಮಿನೇಷನ್ ಪ್ರಕ್ರಿಯೆ ಶುರು ಆದರೆ ಇವರಿಬ್ಬರ ಹೆಸರು ಅರ್ಧಕರ್ಧ ಮನೆ ಸದಸ್ಯರ ಬಾಯಲ್ಲಿ ಬಂದೇ ಬರುವುದು ಕನ್ಫರ್ಮ್.! ಅಸಲಿಗೆ, ಮಾಳವಿಕಾ ಹಾಗೂ ಪ್ರಥಮ್ ಪದೇ ಪದೇ ನಾಮಿನೇಟ್ ಆಗುವುದಾದರೂ ಯಾಕೆ.? ಮನೆಯ ಸದಸ್ಯರಿಗೆ ಇವರಿಬ್ಬರ ಮೇಲೆ ಏನ್ ಪ್ರಾಬ್ಲಂ.?

ಈ ಪ್ರಶ್ನೆ ಸ್ವತಃ ಕಿಚ್ಚ ಸುದೀಪ್ ರವರಿಗೂ ಹೊಳೆದಿದೆ. ಹೀಗಾಗಿ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಈ ಟಾಪಿಕ್ ತೆಗೆದರು. ಆಗ ಯಾರ್ಯಾರು, ಏನೆಲ್ಲ ಹೇಳಿದರು ಎಂಬುದನ್ನು ತಿಳಿಯಲು ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಮಾಳವಿಕಾ, ಪ್ರಥಮ್ ಬಗ್ಗೆ ಕಿಚ್ಚ ಸುದೀಪ್ ಪ್ರಶ್ನೆ...

''ಬಿಗ್ ಬಾಸ್' ಗೆ ಬರೋಕೆ ಮುಂಚೆ ಮಾಳವಿಕಾ... ಸಿನಿಮಾ, ಟಿವಿ, ರಾಜಕೀಯ... ಎಲ್ಲದರಲ್ಲೂ ಕೆಲಸ ಮಾಡಿದ್ದಾರೆ. ಆದ್ರೆ ಅವರು ಪದೇ ಪದೇ ಮನೆಯಲ್ಲಿ ನಾಮಿನೇಟ್ ಆಗುತ್ತಾರೆ. ಬೇರೆ ಆಗಿ ನಿಲ್ಲುತ್ತಾರೆ. ಇನ್ನೊಬ್ಬರು ಪ್ರಥಮ್, ಮನೆಗೆ ಬರುವ ಮುನ್ನ ಕಮ್ಮಿ ಪರಿಚಯ. ಅವರೂ ಕೂಡ ಪದೇ ಪದೇ ನಾಮಿನೇಟ್ ಆಗುತ್ತಾರೆ. ಮಾಳವಿಕಾ ಹಾಗೂ ಪ್ರಥಮ್.... ಬಿಗ್ ಬಾಸ್ ಮನೆಯಲ್ಲಿ ಗುಂಪಿಗೆ ಸೇರದ ಪದ'' - ಕಿಚ್ಚ ಸುದೀಪ್ [ನಟಿ ಮಾಳವಿಕಾ ಮಾನ-ಮರ್ಯಾದೆ ಕಳೆದ ಶೀತಲ್ ಶೆಟ್ಟಿ ಗ್ಯಾಂಗ್.!]

'ಬಿಗ್ ಬಾಸ್' ಇತಿಹಾಸದಲ್ಲಿಯೇ ಇಲ್ಲ

''ಮನೆಯ ಉಳಿದವರಿಗೆ ಇವರಿಬ್ಬರ ಮೇಲೆ ಏನೋ ತಳಮಳ ಇದೆ ಅನ್ನೋದು ಎಲ್ಲರ ನಂಬಿಕೆ. ಪ್ರಥಮ್ ಹನ್ನೊಂದು ಬಾರಿ ನಾಮಿನೇಟ್ ಆಗಿದ್ದಾರೆ. ಮಾಳವಿಕಾ ಹತ್ತು ಬಾರಿ ನಾಮಿನೇಟ್ ಆಗಿದ್ದಾರೆ. ಇದು 'ಬಿಗ್ ಬಾಸ್' ಇತಿಹಾಸದಲ್ಲೇ ಇಲ್ಲ. ಹದಿನೈದು ಜನಕ್ಕೂ ಇದು ಸಮಸ್ಯೆ ಇತ್ತು ಅನ್ನೋದು ಬಹಳ ದೊಡ್ಡ ಪ್ರಶ್ನೆ'' ಅಂತ 'ಬಿಗ್ ಬಾಸ್' ಮನೆಯ ಸದಸ್ಯರಿಗೆ ಕಿಚ್ಚ ಸುದೀಪ್ ಪ್ರಶ್ನೆ ಕೇಳಿದರು. [ಮುಖಕ್ಕೆ ಮಸಿ ಬಳಿದು ಅವಮಾನ: ಭಾವುಕರಾದ ಪ್ರಥಮ್]

ಶಾಲಿನಿ ಕೊಟ್ಟ ಉತ್ತರ

''ಇವತ್ತಿಗೂ ಪ್ರಥಮ್ ರವರ ಎಷ್ಟೋ ಸ್ವಭಾವ ನನಗೆ ಅರ್ಥ ಆಗಲ್ಲ. ಅವನು ಸಂಗ ಜೀವಿ ಆಗುವುದಕ್ಕೆ ಪ್ರಯತ್ನ ಪಡಲ್ಲ. ಮಾಳವಿಕಾ ರವರ ಕೆಲವು ವಿಚಾರಗಳಲ್ಲಿ ನಾನು ಬಿಟ್ಟುಬಿಡುತ್ತೇನೆ'' ಎಂದರು ನಟಿ ಶಾಲಿನಿ. [ದೊಡ್ಮನೆಯಿಂದ ಹೊರಬಂದ ಮಾಳವಿಕಾ, ಪ್ರಥಮ್: 'ಬಿಗ್' ಟ್ವಿಸ್ಟ್ ನಿರೀಕ್ಷಿಸಿ]

ಕೀರ್ತಿ ಕೊಟ್ಟ ಸಬೂಬು

''ಮಾಳವಿಕಾ ಬಗ್ಗೆ ಬೇಸರ ಇದೆ. ತಾನು ಸರಿ ಎಂಬ ಭಾವ ಪ್ರಥಮ್ ನಲ್ಲಿ ಇದೆ. ವಾದ-ವಿತಂಡ ವಾದ ಗಳಿಂದ ಹೀಗಾಗಿದೆ'' - ಕೀರ್ತಿ

ಭುವನ್ ಏನಂದರು.?

''ಶುರು ಆದಾಗಿನಿಂದ ಪ್ರಥಮ್ ಬಗ್ಗೆ ನನಗೆ ಯಾವುದೇ ಪ್ರಾಬ್ಲಂ ಇರಲಿಲ್ಲ. ಆದ್ರೆ, ಕೆಲವು ಘಟನೆಗಳಲ್ಲಿ ಕೆಟ್ಟದಾಗಿ ಮಾತನಾಡಿದ್ದು ಇಷ್ಟ ಆಗಲಿಲ್ಲ. ಮಾಳವಿಕಾ ಬಗ್ಗೆ ವೈಯುಕ್ತಿಕವಾಗಿ ಯಾವುದೇ ಪ್ರಾಬ್ಲಂ ಇಲ್ಲ'' - ಭುವನ್

ಮೋಹನ್ ಹೇಳಿದಿಷ್ಟು...

''25 ಜನರನ್ನ ಕಳುಹಿಸಿದರೂ, ಪ್ರತಿಯೊಬ್ಬರ ಸಹನೆ ಪರೀಕ್ಷಿಸುವ ವ್ಯಕ್ತಿ ಪ್ರಥಮ್. ಅವನ ಜೊತೆ ಚೆನ್ನಾಗಿರುವ ಪ್ರಯತ್ನ ಪಟ್ಟೆ. ಆದ್ರೆ, ಮೊಂಡು ವ್ಯಕ್ತಿತ್ವ. ನನ್ನ ಅನುಭವದಲ್ಲಿ ಈ ತರಹದ ವ್ಯಕ್ತಿಯನ್ನು ನಾನು ನೋಡಿಲ್ಲ. ಮಾಳವಿಕಾ ಬಗ್ಗೆ ಭಿನ್ನಾಭಿಪ್ರಾಯ ಇಲ್ಲ. ಆದ್ರೆ, ಸ್ಟ್ರಾಂಗ್ ಕಂಟೆಂಡರ್ ಅಂತ ಅನ್ಸುತ್ತೆ'' - ಮೋಹನ್

ರೇಖಾ ಹೇಳಿದ್ದೇನು.?

''ನನ್ನ ಪ್ರಕಾರ, ಪ್ರಥಮ್ ಕ್ಲಾಸ್ ರೂಮ್ ನಲ್ಲಿ ರೂಲರ್ ಇದ್ದ ಹಾಗೆ. ಎಲ್ಲರೂ ಹೆದರಿಕೊಳ್ತೀವಿ, ಏಟು ಬೀಳುತ್ತೆ ಅವನಿಂದ ಅಂತ. ಕೆಲವು ವಿಷಯಗಳಲ್ಲಿ ಅವನು ಕರೆಕ್ಟ್ ಇದ್ರೂ, ತುಂಬಾ ರಾ. ಅವನ್ನದೇ ರೀತಿಯಲ್ಲಿ ಅವನು ಮಾಡುವುದರಿಂದ ಎಲ್ಲರಿಗೂ ಕಿರಿಕಿರಿ ಆಗುತ್ತೆ. ಅವನ ಸ್ವಭಾವ ಸ್ವಲ್ಪ ತಿದ್ದುಕೊಂಡರೆ ಒಳ್ಳೆಯದ್ದು. ಮಾಳವಿಕಾ ಬಗ್ಗೆ ಮೊದಲ ದಿನದಿಂದಲೂ ಕನ್ ಫ್ಯೂಶನ್ ಇತ್ತು. ಗೇಮ್ ದೃಷ್ಟಿಯಲ್ಲಿ ಅವರು ಒಳ್ಳೆಯ ಪ್ರತಿಸ್ಪರ್ಧಿ. ನಾನು ಆಟ ಆಡ್ತಿದ್ದೇನೆ'' - ರೇಖಾ

ಮಾಳವಿಕಾ ಪ್ರತಿಕ್ರಿಯೆ....

''ನಾನು ಪ್ರಾರಂಭದಲ್ಲಿ ಹೊಂದಿಕೊಳ್ಳಲು ಕಷ್ಟ ಪಟ್ಟೆ. ನಾನು ಬಂದ ವಾತಾವರಣ ಬೇರೆ. ಅದರಿಂದ ಹೀಗೆ ಆಗದೆ ಅಂತ ಕಾಣುತ್ತೆ'' - ಮಾಳವಿಕಾ ಅವಿನಾಶ್

ಯಾರನ್ನೂ ಮೆಚ್ಚಿಸುವ ಅಗತ್ಯ ಇಲ್ಲ

''ಎಲ್ಲರೂ ಹೇಳಿದ್ದು ನಿಜ. ಸೆಲ್ಫ್ ಸೆಂಟರ್ಡ್ ಪ್ರಥಮ್. ಯಾಕಂದ್ರೆ ಇಲ್ಲಿ ನಾನು Individual ಆಗಿ ಆಡಲು ಬಂದಿದ್ದೇನೆ. ಇಲ್ಲಿ ಗುಂಪು/ಕ್ಲೋಸ್ ಸರ್ಕಲ್ ಅಂತ ಏನಿದೆ, ಅದರ ಪರ ಮಿಂಗಲ್ ಆಗಲು ನನಗೆ ಇಷ್ಟ ಇಲ್ಲ. ನಾನು ನನ್ನ ಆಟ ಆಡಲು ಇಷ್ಟ ಪಡುತ್ತೇನೆ. ನಾನು ನನ್ನ ಆಟದ ಪ್ರಕಾರ, ಜನರನ್ನ ಮೆಚ್ಚಿಸಲು ಇಷ್ಟಪಡುತ್ತೇನೆ. ಯಾವುದೇ ಕಾರಣಕ್ಕೂ ಯಾರನ್ನೂ ಮೆಚ್ಚಿಸಬೇಕಾದ ಅಗತ್ಯ ಇಲ್ಲ'' - ಪ್ರಥಮ್

English summary
Bigg Boss Kannada 4: Week 13, Why Malavika and Pratham are cornered? Kiccha Sudeep quiz BBK4 Contestants.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X