»   » 'ಬಿಗ್ ಬಾಸ್' ಹೀಗ್ಮಾಡಿದ್ರೆ, ಮೋಸ ಆಗಲ್ವಾ.? ಕ್ಲಾರಿಟಿ ಕೊಡಿ..

'ಬಿಗ್ ಬಾಸ್' ಹೀಗ್ಮಾಡಿದ್ರೆ, ಮೋಸ ಆಗಲ್ವಾ.? ಕ್ಲಾರಿಟಿ ಕೊಡಿ..

Posted By:
Subscribe to Filmibeat Kannada

ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯಬೇಕು. ಸ್ಪರ್ಧಿಗಳಿಗೆ ಜನ ವೋಟ್ ಮಾಡಬೇಕು. ಅತಿ ಕಡಿಮೆ ಎಸ್.ಎಂ.ಎಸ್ ಪಡೆದವರು ಎಲಿಮಿನೇಟ್ ಆಗಬೇಕು. ಇದು 'ಬಿಗ್ ಬಾಸ್' ಕಾರ್ಯಕ್ರಮದ ನಿಯಮ.

ಸಾಮಾನ್ಯವಾಗಿ ನಾಮಿನೇಷನ್ ಪ್ರಕ್ರಿಯೆ ಭಾನುವಾರ ನಡೆದರೂ, ಆ ಭಾಗ ಪ್ರಸಾರವಾಗುವುದು ಪ್ರತಿ ಸೋಮವಾರ ರಾತ್ರಿ. ಸೋಮವಾರದಿಂದ ಬುಧವಾರ ಅಥವಾ ಗುರುವಾರ ರಾತ್ರಿವರೆಗೂ ವೋಟ್ ಮಾಡಲು ಜನರಿಗೆ ವೋಟಿಂಗ್ ಲೈನ್ಸ್ ಓಪನ್ ಇರುತ್ತದೆ. ಆ ಸಮಯದಲ್ಲಿ ನಾಮಿನೇಟ್ ಆಗಿರುವ ಸ್ಪರ್ಧಿಗಳ ಸ್ಥಿತಿ-ಗತಿ, ವ್ಯಕ್ತಿತ್ವ, ನಡವಳಿಕೆ, ನಡೆ... ಇವೆಲ್ಲವನ್ನ ತಾಳೆ ಹಾಕಿ ಜನ ವೋಟ್ ಮಾಡುತ್ತಾರೆ.['ಬಿಗ್ ಬಾಸ್' ಮನೆ ಸ್ಪರ್ಧಿಗಳಿಗೆ ಇಂದು ಸಿಗಲಿದೆ ಎಲಿಮಿನೇಷನ್ ಶಾಕ್.?]

ಜನಾದೇಶ ಬಂದ ಮೇಲೆ ಶುಕ್ರವಾರ ಅಥವಾ ಶನಿವಾರ ಬೆಳಗ್ಗೆ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಇದು ಕಳೆದ ಮೂರು ಸೀಸನ್ ಗಳಿಂದ ನಡೆದುಕೊಂಡು ಬಂದಿರುವ ವಾಡಿಕೆ. ಆದ್ರೆ, ಈ ವಾರ ಹೀಗೆ ನಡೆಯುತ್ತಿಲ್ಲ. ನಾಮಿನೇಷನ್ ಪ್ರಕ್ರಿಯೆ ನಡೆದರೂ, ಇಷ್ಟದ ಸ್ಪರ್ಧಿಗಳನ್ನ ಸೇಫ್ ಮಾಡುವ ಸಮಯಾವಕಾಶವನ್ನ ಜನರಿಗೆ 'ಬಿಗ್ ಬಾಸ್' ನೀಡಿಲ್ಲ. ಹೀಗ್ಮಾಡಿದ್ರೆ, ಮೋಸ ಆಗಲ್ವಾ.? ಎಂಬುದು ವೀಕ್ಷಕರ ಪ್ರಶ್ನೆ.

ಈ ವಾರ ನಾಮಿನೇಟ್ ಆಗಿರುವ ಸ್ಪರ್ಧಿಗಳು ಯಾರ್ಯಾರು.?

ಪ್ರಥಮ್, ಮಾಳವಿಕಾ ಅವಿನಾಶ್, ಕೀರ್ತಿ ಮತ್ತು ಭುವನ್... ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.['ಬಿಗ್ ಬಾಸ್ ಕನ್ನಡ-4': ಯಾರು ಉತ್ತಮರು ಈ ನಾಲ್ವರಲ್ಲಿ.?]

ಎರಡು ಗಂಟೆ ಮಾತ್ರ ವೋಟಿಂಗ್ ಲೈನ್ಸ್ ಓಪನ್

ಪ್ರಥಮ್, ಮಾಳವಿಕಾ ಅವಿನಾಶ್, ಕೀರ್ತಿ ಮತ್ತು ಭುವನ್... ಪೈಕಿ ತಮ್ಮ ಇಷ್ಟದ ಸ್ಪರ್ಧಿಗಳನ್ನು ಸೇಫ್ ಮಾಡಲು ಜನರಿಗೆ ಈ ವಾರ (ಹದಿಮೂರನೇ ವಾರ) ಕೇವಲ ಎರಡು ಗಂಟೆ ಮಾತ್ರ ಸಮಯಾವಕಾಶ ನೀಡಿದ್ದರು 'ಬಿಗ್ ಬಾಸ್'.

ಸೋಮವಾರ ಮಾತ್ರ ತೆರೆದಿತ್ತು ವೋಟಿಂಗ್ ಲೈನ್ಸ್.!

ಈ ವಾರದ ನಾಮಿನೇಷನ್ ಪ್ರಕ್ರಿಯೆಯ ಸಂಚಿಕೆ ಸೋಮವಾರ ರಾತ್ರಿ 9ಕ್ಕೆ ಪ್ರಸಾರ ಆಯ್ತು. ಅದೇ ಸಂಚಿಕೆಯಲ್ಲಿ ''ವೋಟಿಂಗ್ ಲೈನ್ಸ್ ಇಂದು (ಜನವರಿ 2) ರಾತ್ರಿ 12 ಗಂಟೆವರೆಗೆ ತೆರೆದಿರುತ್ತವೆ'' ಎಂಬ ಸೂಚನೆ ವೀಕ್ಷಕರಿಗೆ ನೀಡಲಾಗಿತ್ತು. ಅಲ್ಲಿಗೆ, 10 ಗಂಟೆವರೆಗೂ ಕಾರ್ಯಕ್ರಮ ನೋಡಿದ ವೀಕ್ಷಕರಿಗೆ 12 ಗಂಟೆವರೆಗೂ ಮಾತ್ರ ಎಸ್.ಎಂ.ಎಸ್ ಕಳುಹಿಸುವ ಅವಕಾಶ ಇತ್ತು.

ಮಂಗಳವಾರದಿಂದ ವೋಟಿಂಗ್ ಲೈನ್ ಬಂದ್

ಮಂಗಳಾರದಿಂದ ವೋಟಿಂಗ್ ಲೈನ್ ಬಂದ್ ಆಗಿದೆ. ''ಇಂದು ಯಾವುದೇ ವೋಟಿಂಗ್ ಲೈನ್ ಗಳು ತೆರೆದಿರುವುದಿಲ್ಲ'' ಎಂಬ ಸೂಚನೆ ಕೂಡ ವೀಕ್ಷಕರಿಗೆ ನೀಡಲಾಗಿದೆ.

ಎಲಿಮಿನೇಷನ್ ನಡೆಯಬೇಕಿತ್ತು.!

ವೋಟಿಂಗ್ ಲೈನ್ಸ್ ಕ್ಲೋಸ್ ಮಾಡಿದ್ಮೇಲೆ ಎಲಿಮಿನೇಷನ್ ಪ್ರಕ್ರಿಯೆ ನಡೆಯಬೇಕಿತ್ತು. ಆದ್ರೆ ಆದೂ ಕೂಡ ಆಗಿಲ್ಲ. ಯಾಕೆ.? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ.

ಕಳೆದ ಬಾರಿ ಕಾರುಣ್ಯ ರಾಮ್ ಔಟ್ ಆಗಿದ್ದರು.!

ವೋಟಿಂಗ್ ಲೈನ್ ಗಳನ್ನು ಬುಧವಾರ ರಾತ್ರಿ ಕ್ಲೋಸ್ ಮಾಡಿದ್ಮೇಲೆ ಸರ್ ಪ್ರೈಸ್ ಎಲಿಮಿನೇಷನ್ ಮೂಲಕ ನಟಿ ಕಾರುಣ್ಯ ರಾಮ್ ರವರನ್ನ ಎಲಿಮಿನೇಟ್ ಮಾಡಲಾಗಿತ್ತು. ಆದ್ರೆ, ಈ ವಾರ ಅಂತಹ ಯಾವುದೇ ನಡೆ 'ಬಿಗ್ ಬಾಸ್' ನಿಂದ ಆಗಿಲ್ಲ. ಇದಕ್ಕೆ ಕಾರಣ ಕೊಡಿ ಅಂತ 'ಬಿಗ್ ಬಾಸ್'ನ ವೀಕ್ಷಕರು ಕೇಳುತ್ತಿದ್ದಾರೆ.

ಇದು ಮೋಸ ಮಾಡಿದ ಹಾಗೆ ಆಗಲ್ವಾ.?

ನಾಮಿನೇಷನ್ ಪ್ರಕ್ರಿಯೆ ಆದ್ಮೇಲೆ ಕೇವಲ ಎರಡು ಗಂಟೆ ಮಾತ್ರ ವೋಟಿಂಗ್ ಅವಕಾಶ ಕೊಟ್ಟು, ಎಲಿಮಿನೇಷನ್ ಮಾಡದೆ, ವೋಟಿಂಗ್ ಲೈನ್ ಗಳನ್ನ ಬಂದ್ ಮಾಡಿ, ವಾರ ಪೂರ್ತಿ ಮನೆಯಲ್ಲಿ ಸ್ಪರ್ಧಿಗಳನ್ನು ಇಟ್ಟುಕೊಂಡು, ಕಡೆಗೆ ಔಟ್ ಮಾಡಿದರೆ ಸ್ಪರ್ಧಿಗಳಿಗೆ ಮೋಸ ಮಾಡಿದ ಹಾಗೆ ಆಗಲ್ವಾ.? ಎಂಬುದು 'ಬಿಗ್ ಬಾಸ್' ವೀಕ್ಷಕರ ಪ್ರಶ್ನೆ

ಇತರರಿಗೆ ಹೋಲಿಸಿದರೆ ಇದು ಮೋಸ ಅಲ್ಲವೇ.?

ಬೇರೆ ಎಲ್ಲ ಸ್ಪರ್ಧಿಗಳನ್ನು ಎಲಿಮಿನೇಷನ್ ಮಾಡುವಾಗ, ಜನ ಸಾಮಾನ್ಯರಿಗೆ ಮಿನಿಮಂ ಮೂರು ದಿನಗಳ ಕಾಲ ವೋಟ್ ಮಾಡಲು ಅವಕಾಶ ಇತ್ತು. ಅಷ್ಟು ದಿನಗಳಲ್ಲಿ ಕಮ್ಮಿ ಎಸ್.ಎಂ.ಎಸ್ ಪಡೆದ ಸ್ಪರ್ಧಿಗಳು ಔಟ್ ಆಗ್ತಿದ್ರು. ಆದ್ರೆ, ಈ ಬಾರಿ ವೀಕ್ಷಕರಿಗೆ ಕಮ್ಮಿ ಸಮಯಾವಕಾಶ ಕೊಟ್ಟು, ಅದರಲ್ಲಿ ಕಮ್ಮಿ ಎಸ್.ಎಂ.ಎಸ್ ತಾಳೆ ಹಾಕಿದರೆ ಈ ವಾರ ಔಟ್ ಆಗುವ ಸ್ಪರ್ಧಿಗೆ ಮೋಸ ಆಗಲ್ವಾ.?

ವೀಕ್ಷಕರ ಪಾಲಿಗೂ ಅದು ಮೋಸವೇ.?!

ಇಷ್ಟದ ಸ್ಪರ್ಧಿಗಳನ್ನು ಉಳಿಸಲು ಟೈಮ್ ಕೊಡದೇ ಇದ್ದಾಗ ವೀಕ್ಷಕರಿಗೂ ಇದು ಮೋಸ ಅಂತ ಅನಿಸುವುದು ಸಹಜ ಅಲ್ಲವೇ. ಹೀಗಾಗಿ ವೋಟಿಂಗ್ ಲೈನ್ಸ್ ಬಂದ್ ಆಗಿರುವುದು ಯಾಕೆ ಎಂಬುದರ ಕುರಿತು 'ಬಿಗ್ ಬಾಸ್' ಉತ್ತರ ನೀಡಲಿ ಎಂಬುದು ವೀಕ್ಷಕರ ಆಗ್ರಹ.

ವೋಟಿಂಗ್ ಬಗ್ಗೆ ಪಾರದರ್ಶಕತೆ ಇರಲಿ

ಇದೇ ಕಾರಣಕ್ಕೆ ಹಲವು ವೀಕ್ಷಕರು ವೋಟಿಂಗ್ ಬಗ್ಗೆ ಪಾರದರ್ಶಕತೆ ಇರಲಿ ಅಂತ ಪ್ರತಿವಾದಿಸುತ್ತಾರೆ. ಆದ್ರೆ, ಇಲ್ಲಿಯವರೆಗೂ ಯಾವ ಸ್ಪರ್ಧಿಗೆ ಎಷ್ಟು ವೋಟ್ ಬಿದ್ದಿದೆ ಅಂತ ಕಲರ್ಸ್ ವಾಹಿನಿ ಮತ್ತು 'ಬಿಗ್‌ ಬಾಸ್' ಆಯೋಜಕರು ಬಹಿರಂಗ ಪಡಿಸಿಲ್ಲ. ಈ ಬಗ್ಗೆ ವೀಕ್ಷಕರಿಗೆ ಅಸಮಾಧಾನ ಇದ್ದೇ ಇದೆ.

ವೀಕ್ಷಕರ ಎಸ್.ಎಂ.ಎಸ್ ಯಾಕೆ ಬೇಕು.?

ತಮ್ಮದೇ ಪ್ಲಾನ್ ಮೂಲಕ ಶೋ ನಡೆಸುವುದಾದರೆ, ನೆಚ್ಚಿನ ಸ್ಪರ್ಧಿಗಳನ್ನು ಸೇಫ್ ಮಾಡಿ ಎಂಬ ಸೂಚನಾಫಲಕವನ್ನಾದರೂ ಯಾಕೆ ಹಾಕಬೇಕು ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಇದಕ್ಕೆ ಉತ್ತರ ಬೇಕೇ ಬೇಕು ಎಂಬುದು ವೀಕ್ಷಕರ ಒತ್ತಾಯ.

ಈಗಲಾದರೂ ವೋಟಿಂಗ್ ಬಗ್ಗೆ ಕ್ಲಾರಿಟಿ ಕೊಡಲಿ...

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿವಾದದ ಕೇಂದ್ರ ಬಿಂದು ಆಗಿರುವ 'ಬಿಗ್ ಬಾಸ್' ವೋಟಿಂಗ್ ಬಗ್ಗೆ ಕಲರ್ಸ್ ವಾಹಿನಿ ಮತ್ತು 'ಬಿಗ್ ಬಾಸ್' ಆಯೋಜಕರು ಇನ್ನಾದರೂ ಕ್ಲಾರಿಟಿ ಕೊಟ್ಟರೆ, ವೀಕ್ಷಕರಿಗೆ ಗೌರವ ಕೊಟ್ಟಂತೆ.

English summary
Bigg Boss Kannada 4, Week 13 : Why Voting lines are closed since Monday midnight.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada