»   » ಈ ವಾರ ಸರ್ಪ್ರೈಸ್ ನಾಮಿನೇಷನ್! ಸೇಫ್ ಆದ ರೇಖಾ ಮತ್ತೆ ನಾಮಿನೇಟ್ ಆಗಿದ್ದೇಕೆ?

ಈ ವಾರ ಸರ್ಪ್ರೈಸ್ ನಾಮಿನೇಷನ್! ಸೇಫ್ ಆದ ರೇಖಾ ಮತ್ತೆ ನಾಮಿನೇಟ್ ಆಗಿದ್ದೇಕೆ?

Posted By:
Subscribe to Filmibeat Kannada

'ಬಿಗ್ ಬಾಸ್' ಎರಡು ವಾರ ವಿಸ್ತರಣೆಯಾಗಿದ್ದರಿಂದ, ಬಹುಶಃ ಈ ವಾರ ಎಲಿಮಿನೇಷನ್ ಇರಲ್ಲ ಅಂದುಕೊಂಡವರೇ ಹೆಚ್ಚು. ಅದಕ್ಕೆ ಪುಷ್ಠಿ ನೀಡುವಂತೆ 14 ನೇ ವಾರದಲ್ಲಿ 4 ದಿನ ಕಳೆದರು ನಾಮಿನೇಷನ್ ಪ್ರಕ್ರಿಯೆ ಆಗಿರಲಿಲ್ಲ.['ಬಿಗ್ ಬಾಸ್' ಮನೆಯಲ್ಲಿ ಈ ವಾರ ಎಲಿಮಿನೇಷನ್ ಇಲ್ಲ.?]

ಆದ್ರೆ, 'ಬಿಗ್ ಬಾಸ್' ವೀಕ್ಷಕರ ಜೊತೆ ಮನೆಯ ಸದಸ್ಯರಿಗೂ ಗುರುವಾರದ (ಜನವರಿ 12) ಎಪಿಸೋಡ್ ನಲ್ಲಿ ಸರ್ಪ್ರೈಸ್ ಕಾದಿತ್ತು. 'ವಾರದ ಕಥೆ ಕಿಚ್ಚನ ಜೊತೆ'ಗೆ ಎರಡು ದಿನ ಬಾಕಿಯಿರುವಾಗಲೇ ನಾಮಿನೇಷನ್ ಪ್ರಕ್ರಿಯೆ ನಡೆದುಹೋಯಿತು. 14 ನೇ ವಾರದ ನಾಮಿನೇಷನ್ ಕುರಿತು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ...

ವಾರದ 4ನೇ ದಿನ ನಾಮಿನೇಷನ್ ಪ್ರಕ್ರಿಯೆ!

ಪ್ರತಿವಾರವೂ ವಾರದ ಮೊದಲ ದಿನ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿತ್ತು. ಆದ್ರೆ, 14ನೇ ವಾರದಂದು ನಾಲ್ಕನೇ ದಿನ (ಗುರುವಾರ, ಜನವರಿ 12) ನಾಮಿನೇಷನ್ ನಡೆಯಿತು.[ಮತ್ತೆ ಬಂದ ಮಾಳವಿಕಾ; ಮೋಹನ್ ಮೂಕ ಪ್ರೇಕ್ಷಕ, ಶಾಲಿನಿ ಸ್ತಬ್ಧ.!]

ಡಿಫ್ರೆಂಟ್ ಆಗಿತ್ತು ನಾಮಿನೇಷನ್!

ಪ್ರತಿ ಬಾರಿಯೂ ಮನೆಯಿಂದ ಹೊರಹೋಗವ ಅಭ್ಯರ್ಥಿ ಹೆಸರನ್ನ ಸೂಚಿಸಬೇಕಾಗಿತ್ತು. ಆದ್ರೆ, ಈ ವಾರ ಮನೆಯಲ್ಲಿ ಉಳಿಸಲು ಇಚ್ಛಿಸುವ ಇಬ್ಬರು ಅಭ್ಯರ್ಥಿಯ ಹೆಸರನ್ನ ಸೂಚಿಸಿಬೇಕಿತ್ತು.[ಸದ್ದಿಲ್ಲದೇ ರೀ ಎಂಟ್ರಿ ಕೊಟ್ಟ ಪ್ರಥಮ್: ಅಸಲಿ ಆಟ ಈಗ ಶುರು.!]

ವೋಟಿಂಗ್ ನಲ್ಲಿ ಕೀರ್ತಿಯನ್ನ ಸೂಚಿಸುವಂತಿಲ್ಲ!

ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿರುವ ಕಾರಣ ಕೀರ್ತಿಕುಮಾರ್ ಅವರನ್ನ ಹೆಸರನ್ನ ನಾಮಿನೇಷನ್ ನಲ್ಲಿ ಬಳಸುವಂತಿಲ್ಲ.

ಹಳೆ ಸ್ವರ್ಧಿಗಳಿಗೂ ವೋಟ್ ಮಾಡುವ ಅಧಿಕಾರ!

ಕಳೆದ ಆವೃತ್ತಿಯ ಅಭ್ಯರ್ಥಿಗಳು ಈ ವಾರ 'ಬಿಗ್ ಬಾಸ್' ಮನೆಗೆ ಅತಿಥಿಗಳಾಗಿ ಹೋಗಿರುವುದ್ರಿಂದ ವೋಟ್ ಮಾಡುವ ಅಧಿಕಾರವನ್ನ ಅವರಿಗೂ ನೀಡಲಾಯಿತು.['ಬಿಗ್ ಬಾಸ್' ಮನೆಯಲ್ಲಿ 'ಜೂನಿಯರ್ಸ್'ನ ಬಗ್ಗು ಬಡಿದ ಸೀನಿಯರ್ಸ್.!]

ರೇಖಾಗೆ ಅತಿ ಹೆಚ್ಚು ಮತ!

ಮನೆಯಲ್ಲಿ ಯಾರು ಉಳಿಯಬೇಕು ಎಂಬ ನಾಮಿನೇಷನ್ ನಲ್ಲಿ ರೇಖಾ ಅವರಿಗೆ ಅತಿ ಹೆಚ್ಚು ಮತಗಳ ಬಂದವು. ಒಟ್ಟು 6 ಮತಗಳು ರೇಖಾ ಅವರಿಗೆ ಸಿಕ್ಕಿತ್ತು. ರೇಖಾ ಅವರಿಗೆ ಮತ ಹಾಕಿದವರು ಶಾಲಿನಿ, ಮೋಹನ್, ಮಾಳವಿಕಾ, ಪ್ರಥಮ್, ನೀತೂ ಹಾಗೂ ಅಯ್ಯಪ್ಪ.

ಮೋಹನ್, ಶಾಲಿನಿಗೆ 4 ಮತ!

ಮೋಹನ್ ಹಾಗೂ ಶಾಲಿನಿ ಅವರಿಗೆ ತಲಾ 4 ಮತಗಳು ಸಿಕ್ಕಿವೆ. ಮೋಹನ್ ಅವರಿಗೆ ಶಾಲಿನಿ, ಭುವನ್, ನೀತೂ, ಸುನಾಮಿ ಕಿಟ್ಟಿ ಮತ ಹಾಕಿದರು. ಇನ್ನೂ ಶಾಲಿನಿ ಅವರಿಗೆ ರೇಖಾ, ಶೃತಿ, ರಿಷಿಕಾ, ಅಯ್ಯಪ್ಪ ಮತ ಹಾಕಿದರು.

ಹೆಚ್ಚು ಮತ ಪಡೆದ ಮೂವರು ಸೇಫ್!

ಮನೆಯಲ್ಲಿ ಉಳಿಯಲು ಹೆಚ್ಚು ಮತ ಪಡೆದ ರೇಖಾ, ಶಾಲಿನಿ, ಹಾಗೂ ಮೋಹನ್ ಎಂದು 'ಬಿಗ್ ಬಾಸ್' ಸೂಚಿಸಿದರು.

ರೇಖಾರನ್ನ ಟಾರ್ಗೆಟ್ ಮಾಡಿದ ಕೀರ್ತಿ!

ಈ ವಾರ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಪಡೆದುಕೊಂಡ ಶಾಲಿನಿ, ರೇಖಾ, ಹಾಗೂ ಮೋಹನ್ ಅವರ ಪೈಕಿ ಒಬ್ಬರನ್ನ ಮನೆಯಿಂದ ಹೊರ ಹೋಗಲು ನಾಮಿನೇಟ್ ಮಾಡಬೇಕು ಎಂದು 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಕೀರ್ತಿ ಅವರಿಗೆ ಸೂಚಿಸಿತು. ಈ ಹಿನ್ನೆಯಲ್ಲಿ ಕೀರ್ತಿ ಅವರು ರೇಖಾ ಅವರ ಹೆಸರನ್ನ ಸೂಚಿಸಿದರು.

ಈ ವಾರ ನಾಮಿನೇಟ್ ಆದವರು!

ಈ ಮೂಲಕ ಪ್ರಥಮ್, ಮಾಳವಿಕಾ, ಭುವನ್ ಅವರ ಜೊತೆಗೆ ರೇಖಾ ಅವರು ಕೂಡ ಈ ವಾರ ನಾಮಿನೇಟ್ ಆಗಿದ್ದಾರೆ.

ಈ ವಾರ ಹೊರಹೋಗೋದು ಯಾರು?

ಪ್ರಥಮ್, ಮಾಳವಿಕಾ, ಭುವನ್, ರೇಖಾ ಅವರಲ್ಲಿ ಈ ವಾರ ಯಾರು ಹೊರ ಹೋಗ್ಬೇಕು ಎಂಬುದನ್ನ ಕೆಳಗಿರುವ ಕಾಮೆಂಟ್ಸ್ ಮಾಡಿ ತಿಳಿಸಿ.

English summary
Bigg Boss Kannada 4, Week 14 : Malavika Avinash, Pratham and Bhuvan and Rekha are nominated for this week's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada