»   » ಕೀರ್ತಿ ವಿರುದ್ಧ ರೊಚ್ಚಿಗೆದ್ದ ಪ್ರಥಮ್, ತುಟಿಕ್ ಪಿಟಿಕ್ ಎನ್ನದ ಸದಸ್ಯರು!

ಕೀರ್ತಿ ವಿರುದ್ಧ ರೊಚ್ಚಿಗೆದ್ದ ಪ್ರಥಮ್, ತುಟಿಕ್ ಪಿಟಿಕ್ ಎನ್ನದ ಸದಸ್ಯರು!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4', 14ನೇ ವಾರದ ನಾಮಿನೇಷನ್ ಪ್ರಕ್ರಿಯೆ ಸುಗಮವಾಗಿ ನಡೆಯಿತು. ಆದ್ರೆ, ಕ್ಯಾಪ್ಟನ್ ಕೀರ್ತಿ ಅವರು ಹೇಳಿದ ಒಂದು ಪದ, ಪ್ರಥಮ್ ಅವರನ್ನ ಕೆಂಡಾಮಂಡಲರನ್ನಾಗಿ ಮಾಡಿತು.

ಇದರಿಂದ ರೊಚ್ಚಿಗೆದ್ದ ಪ್ರಥಮ್, ಕೀರ್ತಿ ವಿರುದ್ಧ ಸಿಕ್ಕಾಪಟ್ಟೆ ಗರಂ ಆದರು. ಇಡೀ ಮನೆಯಲ್ಲೆಲ್ಲ ಕೂಗಿ ಕಿರುಚಾಡಿ ದೊಡ್ಡ ಯುದ್ಧವೇ ನಡೆದು ಹೋಯಿತು ಎಂಬ ಮಟ್ಟಕ್ಕೆ ಸಿದ್ದವಾಗಿಬಿಟ್ಟಿದ್ದರು.[ಈ ವಾರ ಸರ್ಪ್ರೈಸ್ ನಾಮಿನೇಷನ್! ಸೇಫ್ ಆದ ರೇಖಾ ಮತ್ತೆ ನಾಮಿನೇಟ್ ಆಗಿದ್ದೇಕೆ?]

ಆದ್ರೆ, ಪ್ರಥಮ್ ರೇಗಾಟಕ್ಕೆ ತಲೆಕೆಡಿಸಿಕೊಳ್ಳದ ಕೀರ್ತಿ ಹಾಗೂ ಮನೆಯ ಸದಸ್ಯರು ತುಟಿಕ್ ಪಿಟಿಕ್ ಎನ್ನದೇ ಸೈಲಾಂಟ್ ಆಗ್ಬಿಟ್ಟರು. ಅಷ್ಟಕ್ಕೂ, ಕ್ಯಾಪ್ಟನ್ ಕೀರ್ತಿ ಹೇಳಿದ ಆ ಒಂದು ಮಾತಾದರೂ ಏನೂ ಅಂತ ಮುಂದೆ ಓದಿ....

ನಾಮಿನೇಷನ್ ಪ್ರಕ್ರಿಯೆಯಲ್ಲಿ ಆದ ಘಟನೆ!

14ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರೇಖಾ, ಶಾಲಿನಿ, ಮೋಹನ್ ಅವರನ್ನ ಮನೆಯಲ್ಲಿ ಉಳಿಸಿಕೊಳ್ಳುವ ನಿರ್ಧಾರವಾಯಿತು. ಆದ್ರೆ, ಕ್ಯಾಪ್ಟನ್ ಕೀರ್ತಿ ಅವರ ನೇರ ನಾಮಿನೇಟ್ ಮೂಲಕ ಸೇಫ್ ಆಗಿದ್ದ ರೇಖಾ, ಮತ್ತೆ ನಾಮಿನೇಟ್ ಆಗಬೇಕಾಯಿತು. ಈ ವೇಳೆ ನಾಮಿನೇಟ್ ಮಾಡಿದ್ದಕ್ಕೆ ಕೀರ್ತಿ ಅವರು, ರೇಖಾ ಅವರ ಬಳಿ ಕ್ಷಮೆ ಕೇಳಿದರು.[ಸದ್ದಿಲ್ಲದೇ ರೀ ಎಂಟ್ರಿ ಕೊಟ್ಟ ಪ್ರಥಮ್: ಅಸಲಿ ಆಟ ಈಗ ಶುರು.!]

ಕ್ಷಮೆ ಕೇಳಿದ್ದೇ ತಪ್ಪಾಯಿತು!

ನಾಮಿನೇಷನ್ ಮಾಡಿದ ನಂತರ ಕ್ಷಮೆ ಕೇಳಿದ ಕೀರ್ತಿ ವಿರುದ್ಧ ಪ್ರಥಮ್ ರೊಚ್ಚಿಗೆದ್ದರು. ನಾಮಿನೇಷನ್ ಮಾಡಿದ ಮೇಲೆ 'ಸಾರಿ' ಕೇಳಿ ಒಳ್ಳೆಯವರಾಗೋದು ಬೇಡ. ಅದು ಬೇಜಾವಬ್ದಾರಿ ಆಟ, 3ರ್ಡ್ ಕ್ಲಾಸ್ ಆಟ...ಹಾಗೆ, ಹೀಗೆ ಅಂತ ಶುರು ಮಾಡಿದರು.[ಪ್ರಥಮ್ 'ಮನುಷ್ಯತ್ವ'ದ ಬಗ್ಗೆ ಪ್ರಶ್ನೆ: 'ಕಿರಿಕ್' ಕೀರ್ತಿಗೆ ಮುಖಭಂಗ.!]

'3ರ್ಡ್ ಕ್ಲಾಸ್ ಆಟ' ಎಂದು ಪ್ರಥಮ್!

ನಾಮಿನೇಷನ್ ಪ್ರಕ್ರಿಯೆ ಮುಗಿದ ಮೇಲೆ, ಮಾತು ಶುರು ಮಾಡಿದ ಪ್ರಥಮ್, ಒಪನ್ ಹಾಲ್ ನಲ್ಲಿ ಕಟುವಾಗಿ ಟೀಕೆಗಳನ್ನ ಮಾಡಿದರು. ಪದೇ ಪದೇ ಇದು '3ರ್ಡ್ ಕ್ಲಾಸ್ ಆಟ' ವೆಂದು ಕೂಗಾಡಿದರು. ನಾನೂ ಮೂರನೇ ವಾರದಿಂದ ಹೇಳ್ಕೊಂಡು ಬರ್ತಿದ್ದೇನೆ. ನಾಮಿನೇಷನ್ ಮಾಡಿ ಸಾರಿ ಕೇಳ್ಬೇಡಿ. ಅವರನ್ನ ಜನ ಉಳಿಸುತ್ತಾರೆ'' ಎಂದು ರಂಪಾಟ ಮಾಡಿದರು.

'ಬೇಜವಾಬ್ದಾರಿ ಈಡಿಯೇಟ್ಸ್'! ಎಂದ ಪ್ರಥಮ್

ಈ ತರ ಮೋಸದಾಟವನ್ನ ಆಡಿದ್ರೆ ಗ್ರಹಚಾರ ಬಿಡಿಸಿಬಿಡುತ್ತೇನೆ. 'ಬೇಜವಾಬ್ದಾರಿ ಈಡಿಯೇಟ್ಸ್' ಗಳ...ನಾಚಿಕೆ ಆಗ್ಬೇಕು ಇಂತಹ ಆಟವಾಡೋಕೆ. ನಿಮ್ದು ಒಂದು ಜನ್ಮ..ಫಿಕ್ಸ್ ಮಾಡ್ಕೊಂಡು ಆಡ್ತೀರಾ ಅಂತ ಇದೇ ಕಾರಣಕ್ಕೆ ಆರೋಪ ಮಾಡಿದ್ದು ನಾನು...ಆಟವನ್ನ ನ್ಯಾಯವಾಗಿ ಆಡಿ. ಆಡೋಕೆ ಆಗಲ್ವಾ ಎದ್ದು ಹೋಗಿ...ಕಚಡಾಗಳ..ಶನಿವಾರ ಮಾಡ್ತೀನಿ ಬನ್ನಿ...ಗ್ರಹಚಾರ ಬಿಡಿಸಿಬಿಡ್ತೀನಿ'' ಅಂತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.[ಪಿರಿ ಪಿರಿ ಪ್ರಥಮ್ ಗೆ ಭೇಷ್ ಎಂದ ಕಿಚ್ಚ ಸುದೀಪ್.!]

ಸಮಾಧಾನ ಮಾಡಿದ ರಿಷಿಕಾ ಸಿಂಗ್!

ಈ ವೇಳೆ ಹಳೆ ಆವೃತ್ತಿಯ ಸದಸ್ಯೆ ರಿಷಿಕಾ ಸಿಂಗ್ ಅವರು, ಪ್ರಥಮ್ ಅವರನ್ನ ಸಮಾಧಾನ ಮಾಡಿದರು.[ಪ್ರಥಮ್ ಮುಖಕ್ಕೆ ಮಸಿ: ಶಾಲಿನಿ, ಕೀರ್ತಿ, ಮಾಳವಿಕಾ ವಿರುದ್ಧ ವೀಕ್ಷಕರು ಸಿಡಿಮಿಡಿ]

ಕೀರ್ತಿ ಹೇಳಿಕೊಂಡಿದ್ದು ಹೀಗೆ...!

''ಕೂಲ್....ತಪ್ಪಾಗಿದ್ದರೇ 'ಬಿಗ್ ಬಾಸ್' ಹೇಳ್ತಾರೆ. ನೀವು ಸುಮ್ಮನೀರಿ. ನಾನು ಬಹಳ ಹಲ್ಲು ಕಚ್ಚಿಕೊಂಡು ಇದ್ದೀನಿ. ಇನ್ನೆರೆಡು ವಾರ ಯಾಕೆ ಇದೆಲ್ಲಾ ಅಂತ....''

English summary
Bigg Boss Kannada 4, Week 14: Pratham Fight With Captain Keerthi in the time of Nomination Process.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada