»   »  ಫೈಟ್ ಮಾಡಿ ಕ್ಯಾಪ್ಟನ್ ಪಟ್ಟ ಗಿಟ್ಟಿಸಿಕೊಂಡ ಮಾಳವಿಕಾ!

ಫೈಟ್ ಮಾಡಿ ಕ್ಯಾಪ್ಟನ್ ಪಟ್ಟ ಗಿಟ್ಟಿಸಿಕೊಂಡ ಮಾಳವಿಕಾ!

Posted By:
Subscribe to Filmibeat Kannada

'ಬಿಗ್ ಬಾಸ್' ನಾಲ್ಕನೇ ಆವೃತ್ತಿಯಲ್ಲಿ ಈಗಾಗಲೇ ಕ್ಯಾಪ್ಟನ್ ಆಗಿದ್ದ ಮಾಳವಿಕಾ, 15ನೇ ವಾರವೂ ಮತ್ತೊಮ್ಮೆ ಟಾಸ್ಕ್ ನಲ್ಲಿ ಗೆದ್ದು ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ.

ಆದ್ರೆ, ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ ಇದ್ದಿದ್ದು ಮನೆಯ ಎಲ್ಲ ಸದಸ್ಯರ ನಡುವೆಯಲ್ಲ, ಕೇವಲ ಇಬ್ಬರ ಮಧ್ಯೆ ಮಾತ್ರ.['ಬಿಗ್ ಬಾಸ್' ಫೈನಲ್ ಪ್ರವೇಶಿಸಿದ ನಟ ಮೋಹನ್]

ಮಾಳವಿಕಾ ಹಾಗೂ ಮೋಹನ್ ನಡುವೆ ಕ್ಯಾಪ್ಟನ್ ಪಟ್ಟಕ್ಕಾಗಿ ಟಾಸ್ಕ್ ನೀಡಲಾಗಿತ್ತು. ಅಂತಿಮವಾಗಿ ಮಾಳವಿಕಾ ಅವರು, ಮೋಹನ್ ಅವರನ್ನ ಸೋಲಿಸಿ ನಾಯಕರಾದರು.

ಕ್ಯಾಪ್ಟನ್ಸಿ ಟಾಸ್ಕ್ ಏನಿತ್ತು?

ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಲು 'ಬಿಗ್ ಬಾಸ್' ಎರಡು ಹಂತದಲ್ಲಿ ಟಾಸ್ಕ್ ನೀಡಿದ್ದರು. ಇದರ ಅನುಸಾರ ಎರಡು ಹಂತದಲ್ಲಿ ಟಾಸ್ಕ್ ನಡೆಯಿತು.['ಬಿಗ್ ಬಾಸ್' ಮನೆಯಿಂದ ಭುವನ್ ಔಟ್, 99 ದಿನಗಳ ಆಟ ಅಂತ್ಯ]

ಮೊದಲ ಹಂತದಲ್ಲಿ ಇಬ್ಬರನ್ನ ಆಯ್ಕೆ ಮಾಡಬೇಕಿತ್ತು?

ಮನೆಯ ಕ್ಯಾಪ್ಟನ್ ಆಗಲು ಇಬ್ಬರನ್ನ ಹೆಸರನ್ನ, ಮನೆಯ ಎಲ್ಲ ಸದಸ್ಯರು ಸೇರಿ ಒಮ್ಮತದಿಂದ ನಿರ್ಧರಿಸಿಬೇಕಾಗಿತ್ತು. ಇದಕ್ಕೆ ಒಂದು ಗಂಟೆ ಕಾಲಾವಕಾಶ ನೀಡಲಾಗಿತ್ತು.

ಮೋಹನ್, ಮಾಳವಿಕಾ ಆಯ್ಕೆ!

'ಬಿಗ್ ಬಾಸ್' ನೀಡಿದ ಸೂಚನೆ ಅನ್ವಯ ಮನೆಯ ಎಲ್ಲ ಸದಸ್ಯರು ಸೇರಿ ಮೋಹನ್ ಮತ್ತು ಮಾಳವಿಕಾ ಅವರನ್ನ ಕ್ಯಾಪ್ಟನ್ ಆಗಲು ನಾಮಿನೇಟ್ ಮಾಡಿದರು.[ಮತ್ತೆ ಬಂದ ಮಾಳವಿಕಾ; ಮೋಹನ್ ಮೂಕ ಪ್ರೇಕ್ಷಕ, ಶಾಲಿನಿ ಸ್ತಬ್ಧ.!]

ಎರಡನೇ ಹಂತದ ಟಾಸ್ಕ್ ಏನಿತ್ತು?

ಮನೆ ಸದಸ್ಯರ ಆಯ್ಕೆ ಪ್ರಕಾರ ಮಾಳವಿಕಾ, ಮೋಹನ್ ಅವರಿಗೆ ಆಟವೊಂದನ್ನ ನೀಡಲಾಯಿತು. ವೈನ್ ಗ್ಲಾಸ್ ಗಳನ್ನ ಗೋಪುರದ ಆಕೃತಿಯಲ್ಲಿ ಜೋಡಿಸಬೇಕಿತ್ತು. 'ಬಿಗ್ ಬಾಸ್' ನೀಡಿದ 50 ವೈನ್ ಗ್ಲಾಸ್ ಗಳಲ್ಲಿ, 24, 15, 8, ಹಾಗೂ 3 ಗ್ಲಾಸ್ ಗಳು ಇರುವಂತೆ ನಾಲ್ಕು ಅಂತಸ್ತಿನ ಗೋಪುರವನ್ನ ಎಲ್ಲರಿಗಿಂತ ಮೊದಲು ಜೋಡಿಸಬೇಕಿತ್ತು.

ಗೆದ್ದು ಕ್ಯಾಪ್ಟನ್ ಆದ ಮಾಳವಿಕಾ!

'ಬಿಗ್ ಬಾಸ್' ನೀಡಿದ ಟಾಸ್ಕ್ ನಲ್ಲಿ ನಟಿ ಮಾಳವಿಕಾ ವೇಗವಾಗಿ ಗೋಪುರವನ್ನ ಜೋಡಿಸಿ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದರು.

English summary
BBK4, Week 15: Kannada Actress Malavika Becomes Captain of the house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada