»   » 15ನೇ ವಾರದ ನಾಮಿನೇಷನ್: ಕೀರ್ತಿ-ಶಾಲಿನಿಗೆ ಅಗ್ನಿ ಪರೀಕ್ಷೆ!

15ನೇ ವಾರದ ನಾಮಿನೇಷನ್: ಕೀರ್ತಿ-ಶಾಲಿನಿಗೆ ಅಗ್ನಿ ಪರೀಕ್ಷೆ!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4', ಕಾರ್ಯಕ್ರಮ ಕೊನೆಯ ವಾರ ತಲುಪುತ್ತಿದ್ದಂತೆ ನಾಮಿನೇಷನ್ ಪ್ರಕ್ರಿಯೆ ಸೀರಿಯಸ್ ಆಗ್ತಿದೆ. ಅದ್ರಲ್ಲೂ 15ನೇ ವಾರದ ನಾಮಿನೇಷನ್ ಅಂತೂ ಫಿನಾಲೆ ಹಾದಿಯನ್ನ ನಿರ್ಧರಿಸುವಂತಿತ್ತು.

ನಿರೀಕ್ಷೆಯಂತೆ ಈ ವಾರ ಪ್ರಥಮ್ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಪ್ರಥಮ್ ಜೊತೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿರುವ ಶಾಲಿನಿ ಹಾಗೂ ಕೀರ್ತಿ ಕೂಡ ನಾಮಿನೇಷನ್ ಲೀಸ್ಟ್ ನಲ್ಲಿದ್ದಾರೆ.[ಇವರೆಲ್ಲ ಫಿನಾಲೆ ವಾರಕ್ಕೆ ಹೋಗಬೇಕಂತೆ.! ಯಾಕಂತೆ.?]

ಹಾಗಾದ್ರೆ, 15ನೇ ವಾರ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ನಡೆದ ನಾಮಿನೇಷನ್ ಪ್ರಕ್ರಿಯೆ ಕುರಿತ ಸಂಪೂರ್ಣ ವರದಿ ಇಲ್ಲಿದೆ. ಓದಿರಿ....

ಮಾಳವಿಕಾ-ಮೋಹನ್ ಸೇಫ್!

'ಬಿಗ್ ಬಾಸ್' ಮನೆಯ ಈ ವಾರದ ಕ್ಯಾಪ್ಟನ್ ಆಗಿರುವ ಮಾಳವಿಕಾ ಹಾಗೂ ಈಗಾಗಲೇ ನೇರವಾಗಿ ಫಿನಾಲೆ ಹಂತಕ್ಕೆ ತಲುಪಿರುವ ಮೋಹನ್ ಅವರು ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆಗಿದ್ದರು.['ನಾಯಕತ್ವ'ಕ್ಕಾಗಿ ಮೋಹನ್-ಮಾಳವಿಕಾ ಫೈಟ್, ಕ್ಯಾಪ್ಟನ್ ಆದ ಮಾಳವಿಕಾ!]

'ಪ್ರಥಮ್' ಟಾರ್ಗೆಟ್!

ನಿರೀಕ್ಷೆಯಂತೆ ಈ ವಾರವೂ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಒಳ್ಳೆ ಹುಡುಗ ಪ್ರಥಮ್ ಅತಿ ಹೆಚ್ಚು ಮತ ಪಡೆದು ನಾಮಿನೇಟ್ ಆದರು.[ಬಿಗ್ ಬಾಸ್ 'ವಿನ್ನರ್-ರನ್ನರ್' ಯಾರು ಅಂತ ಭವಿಷ್ಯ ನುಡಿದ ಪ್ರಥಮ್! ]

ಪ್ರಥಮ್ ಗೆ ವೋಟ್ ಮಾಡಿದವರು

ಕೀರ್ತಿ, ಶಾಲಿನಿ, ರೇಖಾ, ಮೋಹನ್, ಅವರು ಪ್ರಥಮ್ ಅವರಿಗೆ 'ಥಮ್ಸ್ ಡೌನ್' ಕೊಟ್ಟು ಮತ ಚಲಾಯಿಸಿದರು.

ಶಾಲಿನಿ ಕೂಡ ನಾಮಿನೇಟ್!

ಶಾಲಿನಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಆಡುತ್ತಿದ್ದಾರೆ ಎಂಬ ಪ್ರಥಮ್ ಮಾಡಿದ ಆರೋಪ ಶಾಲಿನಿಗೆ ಕಂಟಕವಾಗಿದೆ. ಈ ವಿಚಾರವನ್ನ ಮುಂದಿಟ್ಟು ಶಾಲಿನಿಗೆ ಮತ ಹಾಕಿದ್ದಾರೆ. ಕೀರ್ತಿ, ಪ್ರಥಮ್, ಮತ್ತು ಮೋಹನ್ ಶಾಲಿನಿ ಅವರನ್ನ ನಾಮಿನೇಟ್ ಮಾಡಿದರು.

ಕೀರ್ತಿಗೆ ಮತ ಹಾಕಿದವರು

ಶಾಲಿನಿ ಅವರ ಜೊತೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆ ಪ್ರಥಮ್ ನಾಮಿನೇಟ್ ಮಾಡಿದ್ರೆ, ಬೇಡವಾದ ಕಡೆ ಅಗ್ರಿಸ್ಸೀವ್ ಆಗಿದ್ದಾರೆ ಎಂದು ರೇಖಾ, ಕೀರ್ತಿ ಅವರ ಹೆಸರನ್ನ ಸೂಚಿಸಿದರು.

ರೇಖಾ ಸೇಫ್!

ಕೇವಲ ಒಂದು ಮತ ಪಡೆದ ರೇಖಾ ಅವರು, ಈ ವಾರ ನಾಮಿನೇಷನ್ ನಿಂದ ಸೇಫ್ ಆದರು. ರೇಖಾ ಅವರಿಗೆ ಶಾಲಿನಿ ವೋಟ್ ಮಾಡಿದ್ದರು.['ಬಿಗ್ ಬಾಸ್' ಫೈನಲ್ ಪ್ರವೇಶಿಸಿದ ನಟ ಮೋಹನ್]

'ಕ್ಯಾಪ್ಸನ್'ಗೆ ವಿಶೇಷ ಅಧಿಕಾರ

ಈ ವಾರದ ಕ್ಯಾಪ್ಟನ್ ಆಗಿದ್ದ ಮಾಳವಿಕಾ ಅವರಿಗೆ 'ಬಿಗ್ ಬಾಸ್' ವಿಶೇಷ ಅಧಿಕಾರ ನೀಡಿದ್ದರು. ಇದರ ಅನ್ವಯ, ಪ್ರಥಮ್, ಶಾಲಿನಿ, ಕೀರ್ತಿ ಮೂವರಲ್ಲಿ ಯಾರಾದ್ರೂ ಒಬ್ಬರನ್ನ ಉಳಿಸಬಹುದು ಅಥವಾ ಉಳಿಸದೇ ಇರಬಹುದು. ಆದ್ರೆ, ಮಾಳವಿಕಾ ಅವರು, ಯಾರನ್ನ ಉಳಿಸದೆ, ಮೂವರನ್ನ ಜನರೇ ತೀರ್ಮಾನಿಸಲಿ ಎಂದು ತಟಸ್ಥವಾದರು.

ಈ ವಾರ ಎಲಿಮಿನೇಟ್ ಆಗ್ಬೇಕು?

ಹೀಗಾಗಿ, ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು, ಕೀರ್ತಿ, ಶಾಲಿನಿ, ಹಾಗೂ ಪ್ರಥಮ್ ಆಯ್ಕೆಯಾಗಿದ್ದಾರೆ. ಈ ಮೂವರಲ್ಲಿ ಈ ವಾರ ಯಾರು ಮನೆಯಿಂದ ಹೊರ ಹೋಗ್ಬೇಕು ಎಂದು ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.....

English summary
Bigg Boss Kannada 4, Week 15: Pratham, Shalini, and Keerthi Are Nominated for this Week's Elimination.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X