»   » 'ಬಿಗ್ ಬಾಸ್ ಕನ್ನಡ-4': ಈ ವಾರ ಯಾರು ಔಟ್ ಆಗ್ಬೇಕು.?

'ಬಿಗ್ ಬಾಸ್ ಕನ್ನಡ-4': ಈ ವಾರ ಯಾರು ಔಟ್ ಆಗ್ಬೇಕು.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ 11 ಸದಸ್ಯರ ಪೈಕಿ ಏಳು ಮಂದಿ ಈ ವಾರ ನಾಮಿನೇಟ್ ಆಗಿದ್ದಾರೆ. ಎಂದಿನಂತೆ ನಾಮಿನೇಷನ್ ಲಿಸ್ಟ್ ನಲ್ಲಿ ಪ್ರಥಮ್ ಹೆಸರು ಇದ್ದೇ ಇದೆ.

'ಒಳ್ಳೆ ಹುಡುಗ' ಪ್ರಥಮ್ ಜೊತೆ ನಟಿ ಮಾಳವಿಕಾ ಅವಿನಾಶ್ ಮತ್ತು ಮೋಹನ್ ಕೂಡ 'ಎಲಿಮಿನೇಷನ್ ಭೀತಿ' ಎದುರಿಸುವಂತಾಗಿದೆ. 'ಕಿರಿಕ್' ಕೀರ್ತಿ, ನಟಿ ಶಾಲಿನಿ, ಶೀತಲ್ ಶೆಟ್ಟಿ ಮತ್ತು ಭುವನ್ ಪೊನ್ನಣ್ಣ ಬಿಟ್ಟರೆ ಉಳಿದ ಎಲ್ಲರೂ ಡೇಂಜರ್ ಝೋನ್ ನಲ್ಲಿದ್ದಾರೆ.

43ನೇ ದಿನ 'ಬಿಗ್ ಬಾಸ್' ಮನೆಯಲ್ಲಿ ನಡೆದ ನಾಮಿನೇಷನ್ ಪ್ರಕ್ರಿಯೆ ಕುರಿತ ಸಂಪೂರ್ಣ ವರದಿ ಇಲ್ಲಿದೆ, ಓದಿರಿ....

ಕ್ಯಾಪ್ಟನ್ ಆದ ಭುವನ್ ಪೊನ್ನಣ್ಣ

'ಬಿಗ್ ಬಾಸ್' ನೀಡಿದ್ದ ಟಾಸ್ಕ್ ನಲ್ಲಿ ನಟ ಭುವನ್ ಪೊನ್ನಣ್ಣ ವಿಜೇತರಾದ ಪರಿಣಾಮ, ಭುವನ್ ಪೊನ್ನಣ್ಣ ಈ ವಾರ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆದರು. ಹೀಗಾಗಿ ನಾಮಿನೇಷನ್ ನಿಂದ ಅವರು ಸೇಫ್. [ಇವರೆಲ್ಲ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಬಂದಿರುವ ಉದ್ದೇಶ ಏನು ಗೊತ್ತೇ.?]

ಭುವನ್ ಟಾರ್ಗೆಟ್ ಮಾಳವಿಕಾ.!

ಕ್ಯಾಪ್ಟನ್ ಆಗಿರುವ ಭುವನ್, ನಟಿ ಮಾಳವಿಕಾ ಅವಿನಾಶ್ ಹೆಸರನ್ನ ಸೂಚಿಸಿದರು. ಆದ್ದರಿಂದ ಮಾಳವಿಕಾ ಅವಿನಾಶ್ ನೇರವಾಗಿ ನಾಮಿನೇಟ್ ಆದರು. [ಅವರಿಗೆ ಆಗಲ್ಲ, ಇವರು ಹೋಗಲ್ಲ.. ಈ ವಾರವೂ ಪ್ರಥಮ್ ಮಿಸ್ ಇಲ್ಲ.!]

ನಾಮಿನೇಷನ್ ನಲ್ಲೂ ಟ್ವಿಸ್ಟ್.!

ನಾಮಿನೇಷನ್ ಪ್ರಕ್ರಿಯೆ ಶುರು ಆಗುವ ಮುನ್ನ, ಮನೆಯಲ್ಲಿ 'ಬಿಗ್ ಬಾಸ್ ಜೋಡಿ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿತ್ತು. ಹೀಗಾಗಿ, ಜೋಡಿಗಳು ಒಮ್ಮತದಿಂದ ಇಬ್ಬರನ್ನು ನಾಮಿನೇಟ್ ಮಾಡಬೇಕಿತ್ತು.

ರೇಖಾ, ಓಂ ಪ್ರಕಾಶ್ ರಾವ್ ಆಯ್ಕೆ...

ಟಾಸ್ಕ್ ಸರಿಯಾಗಿ ಮಾಡಲ್ಲ ಎಂಬ ಕಾರಣಕ್ಕೆ ನಟಿ ಸಂಜನಾ ಹಾಗೂ ಅಹಂ ಇದೆ ಎಂಬ ಕಾರಣಕ್ಕೆ ನಿರಂಜನ್ ದೇಶಪಾಂಡೆ ರವರನ್ನ ರೇಖಾ ಮತ್ತು ಓಂ ಪ್ರಕಾಶ್ ನಾಮಿನೇಟ್ ಮಾಡಿದರು.

ಕೀರ್ತಿ ಹೇಳಿದ್ರು...ಸಂಜನಾ 'ಓಕೆ' ಅಂದ್ರು.!

ಕನ್ಫೆಶನ್ ರೂಮ್ ಒಳಗೆ ಹೋಗ್ತಿದ್ದ ಹಾಗೆ, ಪ್ರಥಮ್ ಮತ್ತು ಓಂ ಪ್ರಕಾಶ್ ರಾವ್ ರವರ ಹೆಸರನ್ನ 'ಕಿರಿಕ್' ಕೀರ್ತಿ ಹೇಳಿದರು. ಅದಕ್ಕೆ ಹಿಂದು ಮುಂದು ಯೋಚನೆ ಮಾಡದೆ ಸಂಜನಾ 'ಓಕೆ' ಎಂದುಬಿಟ್ಟರು.

ನಿರಂಜನ್, ಮಾಳವಿಕಾ ಆಯ್ಕೆ...

ಮೊದಲು ಪ್ರಥಮ್ ಹಾಗೂ ಸಂಜನಾ ಹೆಸರನ್ನು ನಿರಂಜನ್ ಸೂಚಿಸಿದರು. ಸಂಜನಾ ಬದಲು ರೇಖಾ ಹೆಸರನ್ನ ಮಾಳವಿಕಾ ಹೇಳಿದರು. ಕೊನೆಗೆ ಒಮ್ಮತದ ಮೇರೆಗೆ ನಿರಂಜನ್-ಮಾಳವಿಕಾ ಜೋಡಿ ಪ್ರಥಮ್ ಹಾಗೂ ರೇಖಾ ರವರನ್ನ ನಾಮಿನೇಟ್ ಮಾಡಿದರು.

ಪ್ರಥಮ್ ರನ್ನೇ ಟಾರ್ಗೆಟ್ ಮಾಡಿದ ಶಾಲಿನಿ.!

ಕನ್ಫೆಶನ್ ರೂಮ್ ಒಳಗೆ ಹೋಗ್ತಿದ್ದ ಹಾಗೆ ನಟಿ ಸಂಜನಾ ಹೆಸರನ್ನ ಶಾಲಿನಿ ಹೇಳಿದರು. ಇದಕ್ಕೆ ಪ್ರಥಮ್ ಕೂಡ ಒಪ್ಪಿಗೆ ಸೂಚಿಸಿದರು. ಬಳಿಕ ಪ್ರಥಮ್ ಹೆಸರನ್ನೂ ಶಾಲಿನಿ ಹೇಳಿದರು. ಅದಕ್ಕೆ ಪ್ರಥಮ್ ಧಿಕ್ಕರಿಸಲಿಲ್ಲ. ''ನಿಮ್ಮ ಆಯ್ಕೆ'' ಅಂತ ದೊಡ್ಡತನ ಮೆರೆದರು. ಕೊನೆಗೆ 'ತಮ್ಮ ಹೆಸರನ್ನ ತಾವೇ ಪರಿಗಣಿಸುವಂತಿಲ್ಲ' ಎಂಬ ನಿಯಮ ಇದ್ದ ಕಾರಣ ಮೋಹನ್ ರನ್ನ ಇಬ್ಬರೂ ನಾಮಿನೇಟ್ ಮಾಡಿದರು.

ಶೀತಲ್-ಮೋಹನ್ ನಾಮಿನೇಟ್ ಮಾಡಿದ್ದು ಯಾರನ್ನ...

ನಟಿ ಸಂಜನಾ ಹಾಗೂ ಪ್ರಥಮ್ ರನ್ನ ಶೀತಲ್ ಶೆಟ್ಟಿ ಹಾಗೂ ಮೋಹನ್ ನಾಮಿನೇಟ್ ಮಾಡಿದರು.

ನಾಮಿನೇಟ್ ಆದವರು ಯಾರ್ಯಾರು.?

ಪ್ರಥಮ್, ಸಂಜನಾ, ಓಂ ಪ್ರಕಾಶ್ ರಾವ್, ನಿರಂಜನ್ ದೇಶಪಾಂಡೆ, ರೇಖಾ, ಮಾಳವಿಕಾ ಮತ್ತು ಮೋಹನ್....ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

ನಿಮ್ಮ ಆಯ್ಕೆ....

ಪ್ರಥಮ್, ಸಂಜನಾ, ಓಂ ಪ್ರಕಾಶ್ ರಾವ್, ನಿರಂಜನ್ ದೇಶಪಾಂಡೆ, ರೇಖಾ, ಮಾಳವಿಕಾ ಮತ್ತು ಮೋಹನ್....ಈ ಏಳು ಜನರ ಪೈಕಿ ನಿಮ್ಮ ಪ್ರಕಾರ ಯಾರು ಉಳಿಯಬೇಕು, ಯಾರು ಔಟ್ ಆಗಬೇಕು.? ನಿಮ್ಮ ಆಯ್ಕೆ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

English summary
Bigg Boss Kannada 4, Week 7 : Director Pratham, Malavika Avinash, Mohan, Om Prakash Rao, Rekha, Sanjana and Niranjan Deshpande are nominated for this week's elimination.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada