For Quick Alerts
  ALLOW NOTIFICATIONS  
  For Daily Alerts

  ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!

  By Harshitha
  |
  ಬಿಗ್ ಬಾಸ್ ಕನ್ನಡ ಸೀಸನ್ 5 : ಅಡುಗೆಮನೆಯ ವಿಷ್ಯಕ್ಕೆ ಇರಿಟೇಟ್ ಆದ ಅನುಪಮಾ ಗೌಡ | Filmibeat Kannada

  ಹಾಲನ್ನ ಮುಚ್ಚಿಡುವಾಗ (ಎತ್ತಿಡುವಾಗ.!?)... ಇದು ಸರಿಯೋ, ತಪ್ಪೋ.. ಎಂಬ ಕನಿಷ್ಟ ಪ್ರಜ್ಞೆ ಕೂಡ ಇಲ್ಲದೆ, ಮಾಡುವ ಕೆಲಸವನ್ನ ಮಾಡಿ, ನಂತರ ಅದಕ್ಕೆ ಸಮರ್ಥನೆ ಕೊಟ್ಟ ಅನುಪಮಾ ಗೌಡ ಈಗ ಉರ್ಕೊಳ್ತಿದ್ದಾರೆ.

  ಅಡುಗೆ ಸಾಮಾನು, ತರಕಾರಿ, ಹಣ್ಣು, ರೇಷನ್, ಹಾಲು... ಹೀಗೆ, ಎಲ್ಲದರ ಮೇಲೆ ಕ್ಯಾಪ್ಟನ್ ಹಾಗೂ ಅಡುಗೆ ಮನೆಯ ಡಿಪಾರ್ಟ್ಮೆಂಟ್ ನವರು ನಿಗಾ ಇಡುತ್ತಿದ್ದರೆ, ಅನುಪಮಾಗೆ ಸಹಿಸಿಕೊಳ್ಳಲು ಆಗದೆ ಇರುವಷ್ಟು ಹಿಂಸೆ ಆಗುತ್ತಿದೆ.

  ಅಡುಗೆ ಮನೆಯಲ್ಲಿ ತಮಗೆ ಆಗುತ್ತಿರುವ 'ಹಿಂಸೆ'ಯನ್ನ ತಮ್ಮ ಸೆಲೆಬ್ರಿಟಿ 'ಗುಂಪಿನ' ಮುಂದೆ ಅನುಪಮಾ ಗೌಡ ಹೇಳಿಕೊಂಡಿದ್ದು ಹೀಗೆ....

  ದೋಸೆ ಹಿಟ್ಟನ್ನ ಸರಿಯಾಗಿ ರುಬ್ಬಿಲ್ಲ.!

  ದೋಸೆ ಹಿಟ್ಟನ್ನ ಸರಿಯಾಗಿ ರುಬ್ಬಿಲ್ಲ.!

  ''ದೋಸೆ ಹಾಕಿ ಕೊಟ್ಟಾಗ, ಇನ್ನೂ ಚೆನ್ನಾಗಿ ರುಬ್ಬಬೇಕಿತ್ತು ಅಂತಾನೆ ಚಂದನ್ ಶೆಟ್ಟಿ. ನಿಂತುಕೊಂಡು ರುಬ್ಬಿದ್ರೆ, ಗೊತ್ತಾಗುತ್ತಿತ್ತು. ಒಂದು ಪ್ಯಾಕೆಟ್ ಹಾಲಿನಲ್ಲಿ ನಾವು ಇಡೀ ದಿನ ಮ್ಯಾನೇಜ್ ಮಾಡುತ್ತಿದ್ವಿ. ಆದ್ರೀಗ ಒಂದು ಹೊತ್ತಿಗೆ ಒಂದು ಪ್ಯಾಕೆಟ್ ಹಾಲು ಬೇಕಾಗಿದೆ'' ಎಂದಿದ್ದಾರೆ ಅನುಪಮಾ ಗೌಡ.

  'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

  ಇಲ್ಲಿಯವರೆಗೂ ಯಾರೂ ಲೆಕ್ಕ ಹಾಕಿಲ್ಲ

  ಇಲ್ಲಿಯವರೆಗೂ ಯಾರೂ ಲೆಕ್ಕ ಹಾಕಿಲ್ಲ

  ''ಇಲ್ಲಿಯವರೆಗೂ ಯಾವ ಕ್ಯಾಪ್ಟನ್ ಕೂಡ ರೇಷನ್ ಎಷ್ಟಿದೆ ಅಂತ ಹೋಗಿ ಲೆಕ್ಕ ಮಾಡಿಲ್ಲ. ಹಾಲನ್ನ ಎತ್ತಿಟ್ವಿ ನಿಜ, ಹಾಗಂತ ನಾವು ಅದರಿಂದ ಏನನ್ನೂ ಮಾಡಿಕೊಂಡು ತಿಂದಿಲ್ಲ. ಪ್ರತಿಯೊಂದನ್ನೂ ಲೆಕ್ಕ ಹಾಕುವುದು ಇದ್ಯಲ್ಲಾ... ಅದು ನನಗೆ ಇಷ್ಟ ಆಗಲಿಲ್ಲ'' - ಅನುಪಮಾ ಗೌಡ

  ಅನುಪಮಾ, ಶ್ರುತಿ, ಸಮೀರಾಚಾರ್ಯ: ಮೂವರಲ್ಲಿ ಉತ್ತಮ ಯಾರು.? ಕಳಪೆ ಯಾರು.?

  ಸ್ಟಾಕ್ ಚೆಕ್ಕಿಂಗ್ ಮಾಡಿದರೆ ಉರಿಯುತ್ತೆ.!

  ಸ್ಟಾಕ್ ಚೆಕ್ಕಿಂಗ್ ಮಾಡಿದರೆ ಉರಿಯುತ್ತೆ.!

  ''ನಾನು ಅಡುಗೆ ಡಿಪಾರ್ಟ್ಮೆಂಟ್ ಬಿಡೋಣ ಅಂತ ಇದ್ದೀನಿ. ಒಂದು ಟೀ ಮಾಡುವಾಗ ನಾಲ್ಕು ಜನ ಎದುರಿಗೆ ನಿಂತುಕೊಳ್ಳುತ್ತಾರೆ. ಏನಕ್ಕೆ.? ಅವರ ಮನೆಯಿಂದ ಏನಾದರೂ ತಂದು ನಾನು ಮಾಡ್ತಿದ್ದೀನಾ ಲೆಕ್ಕ ನೋಡೋಕೆ ಅವರು. ನನಗೆ ಈ ಸ್ಟಾಕ್ ಚೆಕ್ಕಿಂಗ್ ಎಲ್ಲ ಉರಿಯುತ್ತಿದೆ. ಹಾಲು ಎತ್ತಿಟ್ಟು ನಾವ್ಯಾರೂ ಏನೂ ಮಾಡಿಕೊಂಡಿಲ್ಲ.?'' - ಅನುಪಮಾ ಗೌಡ

  'ಅಕ್ಕ' ಅನುಪಮಾ ಮೇಲೆ ರಿಯಾಝ್ ಗೆ ಕೆಂಡದಷ್ಟು ಕೋಪ.! ಯಾಕೆ.?

  ಒಂದು ಪ್ಯಾಕೆಟ್ ಹಾಲು ಇಡೀ ದಿನಕ್ಕೆ ಬೇಕು.!

  ಒಂದು ಪ್ಯಾಕೆಟ್ ಹಾಲು ಇಡೀ ದಿನಕ್ಕೆ ಬೇಕು.!

  ''ಒಂದು ಪ್ಯಾಕೆಟ್ ಹಾಲು ಇಡೀ ದಿನಕ್ಕೆ ಬರಬೇಕು. ಟೀ-ಕಾಫಿ ಮಾಡುವವರು ಅದನ್ನ ಗಮನದಲ್ಲಿ ಇಟ್ಟುಕೊಂಡು ಮಾಡಿದರೆ ಒಳ್ಳೆಯದ್ದು'' ಅಂತ ಅಡುಗೆ ಮನೆಯಲ್ಲಿ ನಿಂತುಕೊಂಡು ಎಲ್ಲರ ಮುಂದೆ ಹೇಳಿದ ಅನುಪಮಾಗೆ, ಫ್ರಿಡ್ಜ್ ನಲ್ಲಿ ಹಾಲಿರುವುದು ಗೊತ್ತೇ ಇರಲಿಲ್ಲ.

  ಆರೋಪ ಮಾಡಿದ ಅನುಪಮಾ

  ಆರೋಪ ಮಾಡಿದ ಅನುಪಮಾ

  ''ಫ್ರಿಡ್ಜ್ ನಲ್ಲಿ ಹಾಲು ಇತ್ತು. ಬೇರೆ ಪ್ಯಾಕೆಟ್ ನ ನೀವು ಯಾಕೆ ಓಪನ್ ಮಾಡಿದ್ರಿ'' ಅಂತ ಚಂದನ್ ಶೆಟ್ಟಿ ಕೇಳಿದಾಗ, ''ನನಗೆ ಗೊತ್ತಿಲ್ಲ ಅದು ಇದದ್ದು. ಬೆಳಗ್ಗೆ ನಾನು ಟೀ-ಕಾಫಿ ಮಾಡಿಲ್ಲ'' ಅಂತ ಅನುಪಮಾ ಹೇಳ್ತಾರೆ. ಬೆಳಗ್ಗೆ ಕಾಫಿ-ಟೀ ಮಾಡದೆ, ಫ್ರಿಡ್ಜ್ ನಲ್ಲಿ ಹಾಲು ಇದ್ಯೋ, ಇಲ್ವೋ ಅಂತ ತಿಳಿದುಕೊಳ್ಳದೆ, ಒಂದು ಹೊತ್ತಿಗೆ ಒಂದು ಪ್ಯಾಕೆಟ್ ಹಾಲು ಬಳಸುತ್ತಿದ್ದಾರೆ ಅಂತ ಆರೋಪ ಮಾಡುತ್ತಾರೆ ಅನುಪಮಾ ಗೌಡ.

  ಇವರಿಗೆಲ್ಲ ಸಿಟ್ಟು ಬರುತ್ತಿದೆ.!

  ಇವರಿಗೆಲ್ಲ ಸಿಟ್ಟು ಬರುತ್ತಿದೆ.!

  ''ನಾವೇನು ಮಾಡಿಕೊಳ್ಳುತ್ತೇವೋ, ಏನೋ ಅಂತಲೇ ಗೊತ್ತಿಲ್ಲ. ಒಟ್ನಿಲ್ಲಿ ಗ್ಯಾಸ್ ನ ತುಂಬಾ ಪ್ರೊಟೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಹಾಲಿಗೆ ನೀರು ಹಾಕಬೇಕಾದ್ರೆ, ನೀರು ಬೇಡ ಹಾಲು ಜಾಸ್ತಿ ಹಾಕಿ ಅಂತ ಹೇಳ್ತಾರೆ'' ಎಂದು ಕೃಷಿ ಹೇಳಿದರೆ, ''ಪಾತ್ರೆ ತೊಳೆದಿಟ್ಟೆ, ಅನ್ನಕ್ಕೆ ಇಟ್ಟೆ... ಬಂದೆ. ನನಗೆ ತುಂಬಾ ಸಿಟ್ಟು ಬಂತು'' ಅಂತಾರೆ ತೇಜಸ್ವಿನಿ. ಇನ್ನೂ ಆಶಿತಾ, ''ಬೇಕು ಅಂತ ಅವರವರಿಗೆ ಅಡುಗೆ ಡಿಪಾರ್ಟ್ಮೆಂಟ್ ಕೊಟ್ಟುಕೊಂಡಿದ್ದಾರೆ'' ಎನ್ನುತ್ತಾರೆ.

  ಹಿಂಸೆ ಆಗುತ್ತಿದೆ

  ಹಿಂಸೆ ಆಗುತ್ತಿದೆ

  ''ಪ್ರತಿ ಬಾರಿ ಏನೇ ಮಾಡಲೂ ಹೋದರೂ, ಮೂರು ಜನ ಮುಂದೆ ಬಂದು ನಿಂತುಕೊಳ್ಳೋದು ಸರಿಯಲ್ಲ. ನನಗೆ ನಿಜವಾಗಲೂ ಹಿಂಸೆ ಆಗುತ್ತಿದೆ'' - ಅನುಪಮಾ ಗೌಡ.

  ಜಗನ್ ಹೇಳಿದ ಮಾತಿದು.!

  ಜಗನ್ ಹೇಳಿದ ಮಾತಿದು.!

  ''ಕಳೆದ ವಾರ ಒಂದು ಸೀನ್ ಆಯ್ತು. ಅದನ್ನ (ಹಾಲು ಮುಚ್ಚಿಟ್ಟಿದ್ದು) ಅವರೇ ಮಾಡಿದಿದ್ರೂ, ನಾವು ಹೀಗೆ ಆಡ್ತೀವಿ'' ಅಂತ ಜಗನ್ ಹೇಳಿದರೆ, ಅದನ್ನ ಒಪ್ಪಿಕೊಳ್ಳಲು ಅನುಪಮಾ ಗೌಡ, ಆಶಿತಾ, ಕೃಷಿ ರೆಡಿ ಇರಲಿಲ್ಲ.

  ಮಾಡಿದ ಅಡುಗೆ ಚೆಲ್ಲಿದ ಅನುಪಮಾ ಗೌಡ

  ಮಾಡಿದ ಅಡುಗೆ ಚೆಲ್ಲಿದ ಅನುಪಮಾ ಗೌಡ

  ಸದ್ಯಕ್ಕೆ ಅಡುಗೆ ಡಿಪಾರ್ಟ್ಮೆಂಟ್ ನಲ್ಲಿ ಇರುವವರು ಚೆನ್ನಾಗಿ ಅಡುಗೆ ಮಾಡುವುದಿಲ್ಲ. ಗಲೀಜಾಗಿ ಅಡುಗೆ ಮಾಡುತ್ತಾರೆ. ಕ್ಲೀನ್ ಆಗಿ ಅಡುಗೆ ಮಾಡಲ್ಲ ಎಂಬ ಆರೋಪವನ್ನ ಸೆಲೆಬ್ರಿಟಿ ಸ್ಪರ್ಧಿಗಳು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ, ಮಾಡಿದ ಅಡುಗೆಯಲ್ಲಿ ಉಳಿದ ಭಾಗವನ್ನ ಅನುಪಮಾ ಗೌಡ ಚೆಲ್ಲಿದ್ದಾರಂತೆ.

  ಅಸಡ್ಡೆ ಉತ್ತರ ಯಾಕೆ ಕೊಡಬೇಕು.?

  ಅಸಡ್ಡೆ ಉತ್ತರ ಯಾಕೆ ಕೊಡಬೇಕು.?

  ಇನ್ನೂ ''ಅಡುಗೆ ಮಾಡುವ ಬಗ್ಗೆ ಯಾವುದೇ ಸಜೆಷನ್ ಕೊಡುವುದಿಲ್ಲ. ಕೇಳಿದರೆ ಅಸಡ್ಡೆ ಉತ್ತರ ಕೊಡುತ್ತಾರೆ. ನಮ್ಮ ಕೈಲಾದಷ್ಟು ಅಡುಗೆ ಮಾಡ್ತೀವಿ. ನಾವೇನು ಶೆಫ್ ಅಲ್ಲ'' ಅಂತ ಚಂದನ್ ಶೆಟ್ಟಿ ಹೇಳಿದ್ದಾರೆ. ಒಟ್ನಲ್ಲಿ, ಅಡುಗೆ ಮನೆ ವಿಷಯದಲ್ಲಿ 'ಬಿಗ್ ಬಾಸ್' ಮನೆ ಹೊತ್ತಿ ಉರಿಯುತ್ತಿರುವುದಂತೂ ಸತ್ಯ.

  English summary
  Bigg Boss Kannada 5: Week 4: Anupama Gowda is not happy with Kitchen Department.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X