»   » ಸುದೀಪ್ ಎದುರಿಗೆ ಅನುಪಮಾ ತಾಯಿ-ಕಿರಿಕ್ ಕೀರ್ತಿ ವಾಗ್ಯುದ್ಧ.!

ಸುದೀಪ್ ಎದುರಿಗೆ ಅನುಪಮಾ ತಾಯಿ-ಕಿರಿಕ್ ಕೀರ್ತಿ ವಾಗ್ಯುದ್ಧ.!

Posted By:
Subscribe to Filmibeat Kannada
ಬಿಬಿಕೆ ಸೀಸನ್ 5 ಪೇರೆಂಟ್ಸ್ ಟೀಚರ್ ಮೀಟಿಂಗ್ ನಲ್ಲಿ ಕಿರಿಕ್ ಕೀರ್ತಿ ಅನುಪಮಾ ತಾಯಿ ವಾಗ್ಯುದ್ಧ |Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಳೆದ ವಾರ 'ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್' ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಸ್ಪರ್ಧಿಗಳೆಲ್ಲ ಮಕ್ಕಳಾಗಿದ್ದರೆ, ಕಳೆದ ಸೀಸನ್ ನ ನಾಲ್ವರು ಸ್ಪರ್ಧಿಗಳು (ಶಾಲಿನಿ, ಕಿರಿಕ್ ಕೀರ್ತಿ, ಶೀತಲ್ ಶೆಟ್ಟಿ ಹಾಗೂ ನಿರಂಜನ್ ದೇಶಪಾಂಡೆ) ಶಿಕ್ಷಕರಾಗಿ ಪಾಠ ಹೇಳಿಕೊಟ್ಟಿದ್ದರು. ಜೊತೆಗೆ 'ಬಿಗ್ ಬಾಸ್' ಮನೆಯಲ್ಲಿ ಒಂದು ಹಗಲು-ರಾತ್ರಿ ಕಳೆದರು.

ಲಕ್ಷುರಿ ಬಜೆಟ್ ಟಾಸ್ಕ್ ಸಮಾಪ್ತಿ ಆದ ಮೇಲೆ, 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ 'ಪೇರೆಂಟ್-ಟೀಚರ್ ಮೀಟಿಂಗ್' ನಡೆಯಿತು.

'ಪೇರೆಂಟ್-ಟೀಚರ್ ಮೀಟಿಂಗ್'ನಲ್ಲಿ ಕಿರಿಕ್ ಕೀರ್ತಿ, ಶಾಲಿನಿ, ಶೀತಲ್ ಶೆಟ್ಟಿ ಹಾಗೂ ನಿರಂಜನ್ ದೇಶಪಾಂಡೆ ಹಾಗೂ ಸ್ಪರ್ಧಿಗಳ ಮನೆಯವರು ಭಾಗವಹಿಸಿದರು.

ಇದೇ ವೇಳೆ ಕಿರಿಕ್ ಕೀರ್ತಿ ಹಾಗೂ ಅನುಪಮಾ ಗೌಡ ಅವರ ತಾಯಿ ನಡುವೆ ವಾಗ್ಯುದ್ಧ ನಡೆಯಿತು. ಸಂಪೂರ್ಣ ಮಾಹಿತಿ ಇಲ್ಲಿದೆ...

ಪೇರೆಂಟ್-ಟೀಚರ್ ಮೀಟಿಂಗ್

'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ 'ಪೇರೆಂಟ್-ಟೀಚರ್ ಮೀಟಿಂಗ್'ಗೆ ಚಾಲನೆ ಕೊಟ್ಟ ಸುದೀಪ್, ಅನುಪಮಾ ಗೌಡ ಅವರ ತಾಯಿ ಬಳಿ ''ಅನುಪಮಾ ಮನೆಯಲ್ಲಿ ಇದ್ದ ಹಾಗೆ 'ಬಿಗ್ ಬಾಸ್'ನಲ್ಲಿ ಇದ್ದಾರಾ ಅಥವಾ ವಿಭಿನ್ನವಾಗಿ ಇದ್ದಾರಾ.?'' ಕೇಳಿದರು.

ಗುಟ್ಟಾಗಿ ಮದುವೆ ಆಗಿದ್ದಾರಂತೆ ನಟಿ ಅನುಪಮಾ ಗೌಡ.! ಹೌದಾ.?

ಅನುಪಮಾ ತಾಯಿ ಕೊಟ್ಟ ಉತ್ತರ ಏನು.?

''ವಿಭಿನ್ನವಾಗಿ ಆಡಿದರೆ ತಾನೆ ಅಲ್ಲಿ ಇರಲು ಸಾಧ್ಯ.? ಮನೆಯಲ್ಲಿ ಇದ್ದ ಹಾಗೆ ಇದ್ದು ಬಿಟ್ಟರೆ ಆಗುತ್ತಾ.? ಎರಡು ತರಹವೂ ಆಡಬೇಕು. ಚೆನ್ನಾಗಿ ಆಡುತ್ತಿದ್ದಾಳೆ'' ಎಂದು ಸುದೀಪ್ ಕೇಳಿದ ಪ್ರಶ್ನೆಗೆ ಅನುಪಮಾ ಗೌಡ ತಾಯಿ ಉತ್ತರಿಸಿದರು.

ರಿಯಾಝ್ ಮಾಡಿದ್ದು ತಪ್ಪು.! ಆದ್ರೆ, ಅನುಪಮಾ ಮಾಡಿದ್ದು ಸರಿಯೇ.? ನೀವೇ ಹೇಳಿ...

'ಕಿರಿಕ್' ಕೀರ್ತಿ ಹೇಳಿದ್ದೇನು.?

ಇನ್ನೂ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು 'ಕಿರಿಕ್' ಕೀರ್ತಿ ವ್ಯಕ್ತಪಡಿಸುತ್ತಿದ್ದಾಗ, ''ತುಂಬಾ ಇತಿಹಾಸ ಕೆದಕುತ್ತಿದ್ದಾರೆ ಅಂತ ಅನಿಸ್ತು ಒಳಗಡೆ. ಅದನ್ನ ಕೆದಕದೆ ಆಡಿದರೆ ನನ್ನ ಪ್ರಕಾರ ನಿಮಗೆ ಇನ್ನಷ್ಟು ಖುಷಿ ಆಗುತ್ತಿತ್ತೇನೋ.. ಅವರು ಮಾಡಿರುವ ತಪ್ಪನ್ನು ತಿದ್ದುಕೊಂಡು ಹೋಗುತ್ತಾರೆ ಹಂತ ಹಂತವಾಗಿ, ನೀವು ತಲೆಕೆಡಿಸಿಕೊಳ್ಳಬೇಡಿ'' ಎಂದು ಅನುಪಮಾ ತಾಯಿಗೆ ಕೀರ್ತಿ ಹೇಳಿದರು.

ಹೊಟ್ಟೆ ಉರ್ಕೊಳ್ಳುವ 'ಡವ್ ರಾಣಿ' ಅನುಪಮಾಗೆ ಬೆಂಡೆತ್ತಿದ ನೆಟ್ಟಿಗರು.!

ಅನುಪಮಾ ಗೌಡ ತಾಯಿ ಹೇಳಿದ್ದೇನು.?

''ನೀವು ಒಳಗಡೆ ಹೋದ್ರಿ, ಟಾಸ್ಕ್ ನಲ್ಲಿ ಹೇಳಿಕೊಡುವುದೆಲ್ಲ ಕರೆಕ್ಟ್ ಆಗಿ ಮಾಡಿದ್ರಿ. ಹೊರಗಡೆ ಟ್ರೋಲ್ ಆಗುತ್ತಿರುವುದನ್ನ ನಾನು ನೋಡುತ್ತಿದ್ದೇನೆ. ನನಗೂ ತುಂಬಾ ಟೆನ್ಷನ್ ಇದೆ'' ಎನ್ನುತ್ತಾ 'ಕಿರಿಕ್' ಕೀರ್ತಿ ಬಳಿಕ ಅನುಪಮಾ ಗೌಡ ತಾಯಿ ಮಾತು ಆರಂಭಿಸಿದರು.

ಬ್ರೇಕಪ್ ವಿಚಾರವನ್ನ ಕ್ಯಾಮರಾ ಮುಂದೆ ಹೇಳಿದ ಅನುಪಮಾಗೆ ಜಗನ್ ಕ್ಲಾಸ್.!

ಕೋಪ ಮಾಡಿಕೊಂಡ್ರಾ ಅನುಪಮಾ ಗೌಡ ತಾಯಿ.?

''ಅಲ್ಲಿ ಅವಳನ್ನ ಕೆದಕಲು ಕಾರಣ ಇನ್ನೊಬ್ಬರು. ಅದನ್ನ ಬಿಟ್ಟುಬಿಡಿ. ಅಲ್ಲಿ ನೀವು ಅನುಪಮಾಗೆ ಏನೂ ಬುದ್ಧಿ ಹೇಳಲಿಲ್ಲ. ಹೊರಗಡೆ ಬಂದು ಫೇಸ್ ಬುಕ್ ನಲ್ಲಿ ಏನನ್ನ ಹೇಳಿದ್ದೀರಾ ಅಂತ ನೆನಪು ಮಾಡಿಕೊಳ್ಳಿ. ನಿಮ್ಮ ಹತ್ತಿರ ನಾನು ನಿನ್ನೆಯೇ ಮಾತನಾಡಬೇಕು ಅಂದುಕೊಂಡೆ. ಆದ್ರೆ ಮಾತನಾಡಲಿಲ್ಲ'' ಎಂದು ಕೀರ್ತಿಗೆ ಅನುಪಮಾ ಗೌಡ ತಾಯಿ ಹೇಳಿದರು.

ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!

ಶುರುವಾಯ್ತು ವಾಗ್ಯುದ್ಧ

''ನೀವು ನೋಡುವುದು ಒಂದುವರೆ ಗಂಟೆ, ಒಳಗಡೆ ನಡೆಯುವುದು 24 ಗಂಟೆ'' ಎಂದು ಕೀರ್ತಿ ಹೇಳಿದಾಗ, ''ನಾನು ನೋಡಿರುವುದೇ ಒಂದುವರೆ ಗಂಟೆ. ನೀವು ಫೇಸ್ ಬುಕ್ ನಲ್ಲಿ ಎಲ್ಲರನ್ನೂ ಹೊಗಳಿದ್ರಿ. ಆದ್ರೆ, ಅದರಲ್ಲಿ ನಾಲ್ಕು ಜನರ ಹೆಸರೇ ಬರಲಿಲ್ಲ ಯಾಕೆ.?'' ಎಂದು ಅನುಪಮಾ ಗೌಡ ತಾಯಿ ಪ್ರಶ್ನಿಸಿದರು. ಅದಕ್ಕೆ, ''ನಾನು ಇಷ್ಟ ಪಡುವವರು ಯಾರು ಅನ್ನೋದು ನನಗೆ ಗೊತ್ತಿದೆ. ಒಳಗಡೆ ಹೋಗಿ ಕೂಡ ನಾನು ನೋಡಿಕೊಂಡು ಬಂದಿದ್ದೇನೆ'' ಎಂದು 'ಕಿರಿಕ್' ಕೀರ್ತಿ ಸಮರ್ಥಿಸಿಕೊಂಡರು.

ಮಧ್ಯ ಪ್ರವೇಶಿಸಿದ ಸುದೀಪ್

ಇಷ್ಟೆಲ್ಲ ವಾದ-ವಿವಾದ ನಡೆಯುತ್ತಿರುವಾಗಲೇ, ''ಒಂದು ನಿಮಿಷ. ಯಾವುದೋ ಒಂದು ಶೋ ನೆನಪಿಗೆ ಬರುತ್ತಿದೆ. ವೇದಿಕೆ ಮೇಲೆ ನಿಂತುಕೊಂಡು ದಂಪತಿಗಳು ಜಗಳ ಮಾಡುವುದು. ನನ್ನ ವೇದಿಕೆ ಮೇಲೆ ನಿಂತು ವಾದ-ವಿವಾದ ಮಾಡುವ ಹಾಗಿದ್ದರೆ, ಇದು ವೇದಿಕೆಯೇ ಅಲ್ಲ'' ಎಂದು ಸುದೀಪ್ ಮಧ್ಯ ಪ್ರವೇಶಿಸಿದರು.

ಅವಮಾನ ಮಾಡಲು ಕರೆಸಿಲ್ಲ.!

''ಇದು ಬಿಗ್ ಬಾಸ್ ವೇದಿಕೆ. ನನ್ನ ವೇದಿಕೆ. ಇಲ್ಲಿ ಅವರವರ ಅಭಿಪ್ರಾಯ ಹೇಳುವ ಅಧಿಕಾರ ಇದೆ. ಯಾರನ್ನೂ ಅಪಮಾನ ಮಾಡಲು ನಾನು ಇಲ್ಲಿಗೆ ಕರೆದಿಲ್ಲ. ಎಲ್ಲರೂ ಗೌರವಪೂರ್ವಕವಾಗಿ ಮಾತನಾಡಿ ಮನೆಗೆ ತಲುಪಬಹುದು'' ಎಂದು ಸುದೀಪ್ ಹೇಳಿದರು.

ಬೇಕಾ ನಿಮಗೆ.?

''ಫೇಸ್ ಬುಕ್ ನಲ್ಲಿ ಏನನ್ನೂ ಹಾಕಲು ಹೋಗಬೇಡಿ.. ಬೇಕಾ ನಿಮಗೆ.?'' ಎಂದು ಕೀರ್ತಿ ಗೆ ಸುದೀಪ್ ಪ್ರಶ್ನಿಸಿದಾಗ, ''ನನ್ನ ಅಭಿಪ್ರಾಯ ನಾನು ಹೇಳಿದೆ'' ಎಂದರು ಕೀರ್ತಿ.

ಫೇಸ್ ಬುಕ್ ಫಾಲೋ ಮಾಡ್ತಿದ್ದಾರೆ ಅನುಪಮಾ ತಾಯಿ

''ನನಗೆ ಆಶ್ಚರ್ಯ ಏನು ಅಂದ್ರೆ, ನೀವು ಫೇಸ್ ಬುಕ್ ಫಾಲೋ ಮಾಡ್ತೀರಾ.? ಇವರದ್ದನ್ನ.?'' ಎಂದು ಅಚ್ಚರಿಯಿಂದ ಸುದೀಪ್ ಅನುಪಮಾ ತಾಯಿಗೆ ಕೇಳಿದರು. ಆಗ, ''ಮಾಡಲೇಬೇಕಲ್ವಾ ಸರ್'' ಎಂದರು ಅನುಪಮಾ ತಾಯಿ

English summary
Bigg Boss Kannada 5: Week 7: Anupama Gowda's mom versus Kirik Keerthi

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada