ಸದಾ ಕೆಂಡಕಾರುವ ಜಗನ್ನಾಥ್ ಗೆ ಸರಿಯಾಗಿ ಬೆಂಡೆತ್ತಿದ ಮೈಸೂರಿನ ಕಾಲರ್.!
ಮಾತಾಡಿದ್ರೆ ಕಣ್ಣು ಕೆಂಪಗೆ ಮಾಡಿಕೊಳ್ಳುವ, ವಯಸ್ಸಿನಲ್ಲಿ ದೊಡ್ಡವರು ಎಂಬ ಪ್ರಜ್ಞೆ ಇಲ್ಲದೆ ದೊಡ್ಡದಾಗಿ ಕಣ್ಣು ಬಿಡುವ, ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದೆ ಕೂಗಾಡುವ ಜಗನ್ನಾಥ್ ಕಂಡ್ರೆ ಮೊದಲ ದಿನದಿಂದಲೂ ವೀಕ್ಷಕರಿಗೆ ಬೇಸರ ಇದ್ದೇ ಇದೆ.
ವೀಕ್ಷಕರಿಗೆ ಇದ್ದ ಬೇಸರ ಇದೀಗ 'ಕಾಲರ್ ಆಫ್ ದಿ ವೀಕ್' ಮುಖಾಂತರ ಜಗನ್ನಾಥ್ ಚಂದ್ರಶೇಖರ್ ಕಿವಿಗೆ ಬಿದ್ದಿದೆ.
''ಐ ಡೋಂಟ್ ಲೈಕ್ ಎನಿಬಡಿ ಶೌಟಿಂಗ್ ಅಟ್ ಮಿ (ನನ್ನ ಮೇಲೆ ಯಾರೂ ಸಹ ಕೂಗಾಡುವುದು ನನಗೆ ಇಷ್ಟ ಆಗಲ್ಲ)'' ಅಂತ ಏರುದನಿಯಲ್ಲಿ ಹೇಳುವ ಜಗನ್ನಾಥ್ ವರ್ತನೆ ಬಗ್ಗೆ ಬೇಸರಗೊಂಡು ಮೈಸೂರಿನ ಅಮೃತಾ ಎಂಬುವರು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಜಗನ್ ಗೆ ಪ್ರಶ್ನೆ ಮಾಡಿದರು. ಮುಂದೆ ಓದಿರಿ....

'ಕಾಲರ್ ಆಫ್ ದಿ ವೀಕ್' ಕೇಳಿದ ಪ್ರಶ್ನೆ ಏನು.?
''ಕಬ್ಬಿನ ಜ್ಯೂಸ್ ಟಾಸ್ಕ್ ನಡೆಯುವ ಸಂದರ್ಭದಲ್ಲಿ ವಾದ, ವಿವಾದ ಆಯ್ತು. ಪರಿಸ್ಥಿತಿಯನ್ನ ನಿಯಂತ್ರಿಸಲು ಸಿಹಿ ಕಹಿ ಚಂದ್ರು ಬಂದರು. ಆಗ ನೀವು ಅವರಿಗೆ, ''ಐ ಡೋಂಟ್ ಲೈಕ್ ಎನಿಬಡಿ ಶೌಟಿಂಗ್ ಅಟ್ ಮಿ'' ಅಂತ ಹೇಳಿದ್ರಿ. ಆದರೆ ನೀವೇ ಕೆಲವೊಂದು ಸನ್ನಿವೇಶಗಳಲ್ಲಿ ಬೇಗ ಆವೇಶಕ್ಕೆ ಒಳಗಾಗಿ ಇತರೆ ಸ್ಪರ್ಧಿಗಳ ಮೇಲೆ ಕೂಗಾಡುತ್ತೀರಾ. ಆಗ ಬೇರೆಯವರಿಗೂ ಹಾಗೆ ಅನ್ಸಲ್ವಾ.?'' ಅಂತ ಮೈಸೂರಿನ ಅಮೃತ ಎಂಬುವರು ಜಗನ್ ಗೆ ಪ್ರಶ್ನೆ ಮಾಡಿದರು.

ತಪ್ಪು ಸಂದೇಶ ನೀಡ್ತಿಲ್ವಾ.?
''ನಿಮ್ಮನ್ನ ಫಾಲೋ ಮಾಡುವ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನೆ ಮಾಡಿದ ಹಾಗೆ ಆಗ್ತಿಲ್ವಾ.? ನಿಮ್ಮ ಈ ವರ್ತನೆ ಇಂದ ನೀವು ಎಲ್ಲರಿಗೂ ನಿರಾಸೆ ಮಾಡಿದ ಹಾಗೆ ಆಗ್ತಿಲ್ವಾ.?'' ಅಂತ ನಯವಾಗಿಯೇ ಮೈಸೂರಿನ ಅಮೃತಾ ಜಗನ್ ಗೆ ಬೆಂಡೆತ್ತಿದರು.

ಕ್ಷಮೆ ಕೇಳಿದ ಜಗನ್
''ಮೊದಲನೇಯದಾಗಿ, ನಾನು ಹಾಗೆ ಹೇಳಿದಕ್ಕೆ ಒಂದು ಕಾರಣ ಇದೆ. ಕಾರಣ ಏನೇ ಇದ್ದರೂ, ನಿಮಗೆ ನಿರಾಸೆ ಆಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಖಂಡಿತವಾಗಲೂ ಇದನ್ನ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿ ಇವತ್ತಿಂದ ನಿಂತಿರುತ್ತೇನೆ'' ಅಂತ ಅಮೃತ ಅವರಿಗೆ ಜಗನ್ ಹೇಳಿದರು.

ಬದಲಾಗುವ ಪ್ರಯತ್ನ ಮಾಡ್ತಾರಂತೆ.!
''ಹೊರಗಡೆ ಬರುವ ಹೊತ್ತಿಗೆ ನನ್ನ ಟೆಂಪರ್ ಹಾಗೂ ಮಾತಿನ ವೇಗ ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿ ಇರ್ತೀನಿ. ಐ ವಿಲ್ ಡೂ ಮೈ ಬೆಸ್ಟ್'' ಅಂತ ಜಗನ್ ಹೇಳಿದರು.

ಬದಲಾಗುತ್ತಾರಾ ಜಗನ್.?
ಜಗನ್ ರವರ ಉಗ್ರ ಪ್ರತಾಪ ವೀಕ್ಷಕರಿಗೆ ಇಷ್ಟ ಆಗ್ತಿಲ್ಲ ಅಂತ 'ಕಾಲರ್ ಆಫ್ ದಿ ವೀಕ್' ಮೂಲಕ ಜಗನ್ ಗೆ ತಿಳಿದಿದೆ. ಇನ್ನೂ ಸುದೀಪ್ ಕೂಡ ಜಗನ್ ರನ್ನ ಎಚ್ಚರಿಸಿದ್ದಾರೆ. ತಪ್ಪನ್ನ ತಿದ್ದಿಕೊಂಡು 'ಬಿಗ್ ಬಾಸ್' ಮನೆಯಲ್ಲಿ ಜಗನ್ ಬದಲಾಗುತ್ತಾರಾ, ನೋಡೋಣ.


Click it and Unblock the Notifications











