For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಗೆ ಆಪ್ತ ಗೆಳೆಯ ಯಾರು ಅಂತೀರಾ.?

  By Harshitha
  |
  Bigg Boss Kannada Season 5 : ದಿವಾಕರ್ ಆಪ್ತ ಗೆಳೆಯ ಚಂದನ್ ಶೆಟ್ಟಿ | Filmibeat Kannada

  ಬೀದಿ ಬೀದಿಗಳಲ್ಲಿ ಆಯುರ್ವೇದಿಕ್ ಪ್ರಾಡಕ್ಟ್ ಮಾರುತ್ತಾ ಕಾಲ ಕಳೆಯುತ್ತಿದ್ದ 'ಸೇಲ್ಸ್ ಮ್ಯಾನ್' ದಿವಾಕರ್ 'ಬಿಗ್ ಬಾಸ್' ಮನೆಗೆ ಬಂದ್ಮೇಲೆ ಇಡೀ ಕರ್ನಾಟಕದಲ್ಲಿ ಫೇಮಸ್ ಆಗಿದ್ದಾರೆ.

  ಹಿಂದು ಮುಂದೆ ಯೋಚನೆ ಮಾಡದೆ, ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೆ, ಅನಿಸಿದ್ದನ್ನ ನೇರವಾಗಿ ಮಾತನಾಡುವ ದಿವಾಕರ್ ಕಂಡ್ರೆ 'ಬಿಗ್ ಬಾಸ್' ಮನೆಯಲ್ಲಿ ಅಷ್ಟಕಷ್ಟೆ.

  'ಕಳಪೆ' ಜಗಳ: ಶ್ರುತಿ-ದಿವಾಕರ್ ಇಬ್ಬರಿಗೂ ಸಂಕಷ್ಟ ತಂದಿಟ್ಟ ಬಿಗ್ ಬಾಸ್ ಶಿಕ್ಷೆ.!

  ಹಾಗ್ನೋಡಿದ್ರೆ, ಮೊದಲೆರಡು ವಾರ ಜಗಳ, ಗದ್ದಲ, ಗಲಾಟೆಯಿಂದ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ಸದ್ದು ಮಾಡಿದವರು ಇದೇ ದಿವಾಕರ್. ಇಂತಿಪ್ಪ ದಿವಾಕರ್ ಗೆ 'ದೊಡ್ಮನೆ'ಯಲ್ಲಿ ಆತ್ಮೀಯ ಗೆಳೆಯ ಯಾರು ಗೊತ್ತಾ.? ಬೇರಾರೂ ಅಲ್ಲ, ಚಂದನ್ ಶೆಟ್ಟಿ.!

  ತಮ್ಮ ಮನಸ್ಸನ್ನು ಅರ್ಥ ಮಾಡಿಕೊಂಡಿರುವ ಚಂದನ್ ಶೆಟ್ಟಿ ಅಂದ್ರೆ ದಿವಾಕರ್ ಗೆ ಅಚ್ಚುಮೆಚ್ಚು. ಹೀಗಾಗಿ ತಮಗಿಂತ ಮುಂಚೆ ಚಂದನ್ ಶೆಟ್ಟಿ ಔಟ್ ಆದರೆ ಬೇಸರ ಆಗುತ್ತೆ ಅಂತ ದಿವಾಕರ್ ಹೇಳಿಕೊಂಡಿದ್ದಾರೆ.

  ''ನಾನು ಇರುವವರೆಗೂ ನೀನು ಹೋಗಬಾರದು ಅಷ್ಟೆ. ಯಾರಿಗೆ ಬೇಜಾರು ಆಗುತ್ತೋ, ಗೊತ್ತಿಲ್ಲ. ನನಗಂತೂ ನೀನು (ಚಂದನ್ ಶೆಟ್ಟಿ) ಹೋದರೆ ಬೇಜಾರು ಆಗುತ್ತೆ. ನಾನು ನಿನಗಿಂತ ಮುಂಚೆ ಹೋದರೆ ಪರ್ವಾಗಿಲ್ಲ. 'ಬಿಗ್ ಬಾಸ್' ಮನೆಗೆ ಬಂದು ನನಗೆ ಒಳ್ಳೆಯ ಸ್ನೇಹಿತ ಸಿಕ್ಕಿದ್ದಾನೆ. 'ಬಿಗ್ ಬಾಸ್'ನಲ್ಲಿ ಏನು ಗೆದ್ದೆ ಎಂದರೆ ಒಳ್ಳೆಯ ಸ್ನೇಹಿತ ಗೆದ್ದೆ ಎನ್ನುತ್ತೇನೆ'' ಎಂದು ಚಂದನ್ ಶೆಟ್ಟಿಗೆ ದಿವಾಕರ್ ಹೇಳಿದರು.

  ಶ್ರುತಿ ಪ್ರಕಾಶ್ ಕಂಡ್ರೆ ಚಂದನ್ ಶೆಟ್ಟಿಗೆ ಇಷ್ಟ.! ಆದ್ರೆ, ಶ್ರುತಿಗೆ ಯಾರಂದ್ರೆ ಇಷ್ಟ.?

  ದಿವಾಕರ್ ಮಾತುಗಳನ್ನು ಕೇಳಿ ಚಂದನ್ ಶೆಟ್ಟಿ ಖುಷಿ ಪಟ್ಟರು. ಇದೇ ವೇಳೆ ''ನಾವೆಲ್ಲ ಒಳ್ಳೆಯ ಫ್ರೆಂಡ್ಸ್. ನಾವು ಒಂದು ತಂಡ ಅಂತಿಲ್ಲ. ನಮ್ಮ ನಮ್ಮಲ್ಲಿ ಒಂದೊಳ್ಳೆ ಫ್ರೆಂಡ್ ಶಿಪ್ ಬೆಳೆದಿದೆ. ಒಳ್ಳೆಯ ಬಾಂಧವ್ಯ ಇದೆ. ಸದ್ಯ ಸಮೀರಾಚಾರ್ಯ ಹೋಗಲಿಲ್ಲ. ಅವರು ಹೋಗಿದ್ದರೆ, ನನಗೆ ತುಂಬಾ ಬೇಜಾರು ಆಗುತ್ತಿತ್ತು'' ಎಂದು ಚಂದನ್ ಶೆಟ್ಟಿ ಹೇಳಿದರು.

  English summary
  Bigg Boss Kannada 5: Week 5: Chandan Shetty is Diwakar's Best friend in #BBK5 house

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X