»   » 'ಬಿಗ್' ಮನೆಯಿಂದ ಹೊರಬಂದ ದಯಾಳ್: ವೀಕ್ಷಕರ ಹರ್ಷೋದ್ಗಾರ.!

'ಬಿಗ್' ಮನೆಯಿಂದ ಹೊರಬಂದ ದಯಾಳ್: ವೀಕ್ಷಕರ ಹರ್ಷೋದ್ಗಾರ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : 'ಬಿಗ್' ಮನೆಯಿಂದ ಹೊರಬಂದ ದಯಾಳ್: ವೀಕ್ಷಕರ ಹರ್ಷೋದ್ಗಾರ | Filmibeat Kannada

ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಕಳೆದ ವಾರವೇ ನಿರ್ದೇಶಕ ದಯಾಳ್ ಪದ್ಮನಾಭನ್ ಹೊರಗೆ ಬರಬೇಕಿತ್ತು ಎಂಬುದು ವೀಕ್ಷಕರ ಆಶಯವಾಗಿತ್ತು. ಆದ್ರೆ, ಕೊಡಗಿನ ಕುವರಿ ಮೇಘ ಎಲಿಮಿನೇಟ್ ಆಗ್ಬಿಟ್ಟರು.

ಸತತ ಎರಡು ವಾರ 'ಜನಸಾಮಾನ್ಯ' ಸ್ಪರ್ಧಿಗಳನ್ನೇ ಹೊರಗೆ ಕಳುಹಿಸಿದ 'ಬಿಗ್ ಬಾಸ್' ವಿರುದ್ಧ ವೀಕ್ಷಕರು ಮುನಿಸಿಕೊಂಡಿದ್ದರು. ಈಗ ಅದೇ ವೀಕ್ಷಕರು 'ಬಿಗ್ ಬಾಸ್'ನ ಕೊಂಡಾಡುತ್ತಿದ್ದಾರೆ.

ಅಚ್ಚರಿ.! 'ಬಿಗ್ ಬಾಸ್' ಮನೆಯಿಂದ ಮೊದಲ ಸೆಲೆಬ್ರಿಟಿ ಔಟ್.!

ವೀಕ್ಷಕರ ಇಚ್ಛೆ, ಅಭಿಪ್ರಾಯ ಹಾಗೂ ಮತಕ್ಕೆ ಬೆಲೆ ಕೊಟ್ಟು ನಿರ್ದೇಶಕ ದಯಾಳ್ ಪದ್ಮನಾಭನ್ ರವರನ್ನ ಹೊರ ಹಾಕಿದ 'ಬಿಗ್ ಬಾಸ್'ಗೆ ವೀಕ್ಷಕರು ಜೈಕಾರ ಕೂಗುತ್ತಿದ್ದಾರೆ. ದಯಾಳ್ ಔಟ್ ಆಗಿದ್ದಕ್ಕೆ, ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿಯೇ ವೀಕ್ಷಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿರಿ....

ಇಡೀ ಕರ್ನಾಟಕಕ್ಕೆ ಖುಷಿ ಆಗಿದೆ

'ಬಿಗ್ ಬಾಸ್' ಕಾರ್ಯಕ್ರಮದಿಂದ ನಿರ್ದೇಶಕ ದಯಾಳ್ ಔಟ್ ಆಗಿದ್ದಕ್ಕೆ ಇಡೀ ಕರ್ನಾಟಕ ಫುಲ್ ಹ್ಯಾಪಿ ಆಗಿದ್ಯಂತೆ.

ರಿಯಾಝ್ ಹೇಳಿದ ಹಾಗೆ ದಯಾಳ್ 'ಅಹಂ' ಬಿಡಲಿಲ್ಲ: ಕ್ಷಮೆ ಕೇಳಲೇ ಇಲ್ಲ.!

ಲೇವಡಿ ಮಾಡುತ್ತಿರುವ ವೀಕ್ಷಕರು

ನಿರ್ದೇಶಕ ದಯಾಳ್ ರನ್ನ ಪ್ರಾಣಿಗಳಿಗೆ ಹೋಲಿಸಿ ವೀಕ್ಷಕರು ಲೇವಡಿ ಮಾಡುತ್ತಿದ್ದಾರೆ.

'ಥೂ' ಎಂದು ಕರೆದ ದಯಾಳ್ ವಿರುದ್ಧ ವೀಕ್ಷಕರು ಕೆಂಡಾಮಂಡಲ.!

ಉಗಿತಕ್ಕೆ ಸಿಕ್ಕ ಫಲ

ಎಲ್ಲ ವೀಕ್ಷಕರು ಉಗಿದ ಕಾರಣಕ್ಕೆ ಸಿಕ್ಕಿರುವ ಫಲವೇ ದಯಾಳ್ ಎಲಿಮಿನೇಷನ್.!

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಯಾಳ್ ಪದ್ಮನಾಭನ್ ಕಿರು ಪರಿಚಯ

ಇದು ಒಳ್ಳೆಯ ಪಾಠ

''ಬಿಗ್ ಬಾಸ್' ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ. ಸೆಲೆಬ್ರಿಟಿ ಅಂತ ಬೀಗುವವರಿಗೆ ಇದು ತಕ್ಕ ಪಾಠ'' ಅಂತ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಸಮೀರಾಚಾರ್ಯಗೆ ಸೂಪರ್ ಅಧಿಕಾರ ಕೊಟ್ಟ ದಯಾಳ್: ಏನ್ ಆಶ್ಚರ್ಯ.!

ಬಿಗ್ ಬಾಸ್' ಮೇಲೆ ನಂಬಿಕೆ ಬಂದಿದೆ

ದಯಾಳ್ ರನ್ನ ಎಲಿಮಿನೇಟ್ ಮಾಡಿದ್ಮೇಲೆ, ವೀಕ್ಷಕರಿಗೆ 'ಬಿಗ್ ಬಾಸ್' ಮೇಲೆ ನಂಬಿಕೆ ಬಂದಿದ್ಯಂತೆ.

ಯಾವ ಸೀಮೆ ಸೆಲೆಬ್ರಿಟಿಗಳು.?

ಮಾನವೀಯತೆ ಇಲ್ಲದವರು ಯಾವ ಸೀಮೆಯ ಸೆಲೆಬ್ರಿಟಿಗಳು.? ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಇದು ಕನ್ನಡಿಗರ ಗೆಲುವು

ದಯಾಳ್ ಹೊರಗೆ ಹೋಗಿದ್ದು ಕನ್ನಡಿಗರಿಗೆ ಸಿಕ್ಕ ಗೆಲುವಂತೆ.!

ಗ್ರೂಪ್ ಎಲಿಮಿನೇಷನ್ ಮಾಡಿ

ಗ್ರೂಪ್ ಎಲಿಮಿನೇಷನ್ ಅಂತ ಕಾನ್ಸೆಪ್ಟ್ ಮಾಡಿ ಅನುಪಮಾ ಗೌಡ, ಜಗನ್, ಆಶಿತಾ, ಜೆಕೆ ರನ್ನ ಔಟ್ ಮಾಡಬೇಕಂತೆ.

ಸೀಕ್ರೆಟ್ ರೂಮ್ ಗೆ ಕಳುಹಿಸಬೇಡಿ

ಯಾವುದೇ ಕಾರಣಕ್ಕೂ ದಯಾಳ್ ರನ್ನ ಸೀಕ್ರೆಟ್ ರೂಮ್ ಗೆ ಕಳುಹಿಸಬೇಡಿ ಎಂದು ವೀಕ್ಷಕರು ಸುದೀಪ್ ಹಾಗೂ 'ಬಿಗ್ ಬಾಸ್'ರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮುಂದೆ ಯಾರು ಔಟ್ ಆಗಬೇಕು.?

ಮುಂದಿನ ವಾರಗಳಲ್ಲಿ ಜಗನ್, ಆಶಿತಾ, ಅನುಪಮಾ ಔಟ್ ಆಗಬೇಕು ಅನ್ನೋದು ವೀಕ್ಷಕರ ಅಭಿಪ್ರಾಯ.

ನಿಮ್ಮ ಅಭಿಪ್ರಾಯ ಏನು.?

'ಬಿಗ್ ಬಾಸ್' ಮನೆಯಿಂದ ದಯಾಳ್ ಔಟ್ ಆಗಿದ್ದಕ್ಕೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 5: Week 3: Viewers have taken Colors Super Official Facebook page to express their happiness about Dayal Padmanabhan's elimination. 'ಬಿಗ್' ಮನೆಯಿಂದ ಹೊರಬಂದ ದಯಾಳ್: ವೀಕ್ಷಕರ ಹರ್ಷೋದ್ಗಾರ.!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X