»   » ಸುದೀಪ್ 'ಕೆಂಪೇಗೌಡ' ಲುಕ್ ನಲ್ಲಿ 'ಸೇಲ್ಸ್ ಮ್ಯಾನ್' ದಿವಾಕರ್.!

ಸುದೀಪ್ 'ಕೆಂಪೇಗೌಡ' ಲುಕ್ ನಲ್ಲಿ 'ಸೇಲ್ಸ್ ಮ್ಯಾನ್' ದಿವಾಕರ್.!

Posted By:
Subscribe to Filmibeat Kannada

''ಸಿಂಹನ ಫೋಟೋದಲ್ಲಿ ನೋಡಿರ್ತೀಯಾ... ಸಿನಿಮಾದಲ್ಲಿ ನೋಡಿರ್ತೀಯಾ... ಟಿವಿಯಲ್ಲಿ ನೋಡಿರ್ತೀಯಾ... ಅಷ್ಟೆ ಯಾಕೆ ಝೂನಲ್ಲಿ ನೋಡಿರ್ತೀಯಾ... ರಾಜ ಗಾಂಭೀರ್ಯದಿಂದ ಯಾವತ್ತಾದರೂ ಕಾಡಲ್ಲಿ ಓಡಾಡುವುದನ್ನ ನೋಡಿದ್ಯಾ.? ಒಂಟಿಯಾಗಿ ರೋಷದಿಂದ ಯಾವತ್ತಾದರೂ ಬೇಟೆ ಆಡುವುದನ್ನ ನೋಡಿದ್ಯಾ.? ಇದುವರೆಗೂ ನೀನು ಬರೀ ಖಾಕಿ ಹಾಕೊಂಡಿರೋರನ್ನ ಮಾತ್ರ ನೋಡಿದ್ಯಾ... ಖಾಕಿ ಹಾಕೊಂಡಿರೋ ತುಪಾಕಿನ ನೋಡಿಲ್ಲ.! ತೊಂದರೆಯಲ್ಲಿ ಇರೋರಿಗೆ ಆ ದೇವರು ಕೈ ಬಿಡಲ್ಲ. ತೊಂದರೆ ಕೊಡೋರಿಗೆ ಈ ಕೆಂಪೇಗೌಡ ಬಿಡಲ್ಲ.!'' ಅಂತ ರೋಷದಿಂದ ಹುರಿಗಟ್ಟಿದ ಮೀಸೆಯನ್ನ ಸವರುತ್ತಾ ಕಿಚ್ಚ ಸುದೀಪ್ ಡೈಲಾಗ್ ಹೊಡೆಯುತ್ತಿದ್ದರೆ, ಅಭಿಮಾನಿಗಳಿಂದ ಶಿಳ್ಳೆ-ಚಪ್ಪಾಳೆಗಳ ಸುರಿಮಳೆ.

2012 ರಲ್ಲಿ ಬಿಡುಗಡೆ ಆದ 'ಕೆಂಪೇಗೌಡ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಸುದೀಪ್ ಖಾಕಿ ಖದರ್ ಹಾಗೂ ಅವರ ಮೀಸೆ ಅಭಿಮಾನಿಗಳನ್ನ ಸೆಳೆದಿತ್ತು. 'ಕೆಂಪೇಗೌಡ' ಸ್ಟೈಲ್ ನಲ್ಲೇ ಹಲವರು ಮೀಸೆ ಕೂಡ ಬಿಟ್ಟಿದ್ದರು.

Bigg Boss Kannada 5: Diwakar in Sudeep's Kempegowda style

'ಕಳಪೆ' ಎಂದ ಕ್ಯಾಪ್ಟನ್ ಶ್ರುತಿ ಪ್ರಕಾಶ್ ವಿರುದ್ಧ ತಿರುಗಿ ಬಿದ್ದ ದಿವಾಕರ್.!

'ಕೆಂಪೇಗೌಡ' ಹಾಗೂ ಸುದೀಪ್ ಮೀಸೆ ಬಗ್ಗೆ ಈಗ ನಾವು ಇಷ್ಟೊಂದು ಮಾತನಾಡಲು ಕಾರಣ 'ಬಿಗ್ ಬಾಸ್' ಸ್ಪರ್ಧಿ ದಿವಾಕರ್.

ಮೊದಲ ದಿನವೇ ನಾಮಿನೇಟ್ ಆದ 'ಸೇಲ್ಸ್ ಮ್ಯಾನ್' ದಿವಾಕರ್ ಬದುಕಿನ ಕಥೆ-ವ್ಯಥೆ

ಥೇಟ್ 'ಕೆಂಪೇಗೌಡ' ಸ್ಟೈಲ್ ನಲ್ಲಿ ಮೀಸೆ ಬಿಟ್ಟಿದ್ದಾರೆ ದಿವಾಕರ್. 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಗೆ ಸರ್ ಪ್ರೈಸ್ ನೀಡಲು ದಿವಾಕರ್ 'ಕೆಂಪೇಗೌಡ' ಚಿತ್ರದಲ್ಲಿನ ಸುದೀಪ್ ಸ್ಟೈಲ್ ಫಾಲೋ ಮಾಡಿದ್ದಾರೆ.

ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ದಿವಾಕರ್ ರವರ ಮೀಸೆ ನೋಡಿ, ''ಅದ್ಭುತವಾಗಿ ಕಾಣುತ್ತಿದೆ ನಿಮ್ಮ ಮೀಸೆ'' ಅಂತ ಸುದೀಪ್ ಹೊಗಳಿದರು. ಅದಕ್ಕೆ, ''ಕೆಂಪೇಗೌಡ' ಸಿನಿಮಾದಲ್ಲಿ ನೀವು ಬಿಟ್ಟಿದ್ರಲ್ಲ, ಅದೇ ತರಹ ನಾನು ಬಿಡಿಸಿಕೊಂಡೆ'' ಅಂತ ದಿವಾಕರ್ ಹೇಳಿದರು. ''ನಾನು ಅದನ್ನ ಬಿಟ್ಟಾಯ್ತು. ಕ್ಯಾರೆಕ್ಟರ್ ಕೂಡ ಬಿಟ್ಟಾಯ್ತು'' ಅಂತ ಸುದೀಪ್ ಕಾಮೆಂಟ್ ಮಾಡಿದರು.

English summary
Bigg Boss Kannada 5: Week 4: Diwakar in Sudeep's Kempegowda style

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X