»   » ದಿವಾಕರ್ ಗೆದ್ದರೆ ಚಂದನ್ ಶೆಟ್ಟಿಗೆ ತಾನು ಗೆದ್ದಷ್ಟೇ ಖುಷಿ.!

ದಿವಾಕರ್ ಗೆದ್ದರೆ ಚಂದನ್ ಶೆಟ್ಟಿಗೆ ತಾನು ಗೆದ್ದಷ್ಟೇ ಖುಷಿ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ಕೆಲವು ವಾರಗಳು ಬಾಕಿ ಇದೆ. ಫಿನಾಲೆಗೆ ಯಾರ್ಯಾರು ತಲುಪುತ್ತಾರೋ, ಈಗಲೇ ಹೇಳುವುದು ಕಷ್ಟ. ಆದ್ರೆ, ಚಂದನ್ ಶೆಟ್ಟಿಗೆ ಮಾತ್ರ ದಿವಾಕರ್ ಫಿನಾಲೆಗೆ ತಲುಪಬೇಕು, 'ಬಿಗ್ ಬಾಸ್' ವಿಜೇತರಾಗಬೇಕು ಎಂಬ ಆಸೆ ಇದೆ.

ಹೇಳಿ ಕೇಳಿ ಚಂದನ್ ಶೆಟ್ಟಿ ಹಾಗೂ ದಿವಾಕರ್ ಕುಚ್ಚಿಕ್ಕು ಗೆಳೆಯರು. ಹೀಗಾಗಿ ದಿವಾಕರ್ ಗೆಲ್ಲಬೇಕು ಎಂಬ ಬಯಕೆ ಚಂದನ್ ಶೆಟ್ಟಿಗೆ ಇದೆ. ಇದನ್ನೇ ದಿವಾಕರ್ ಮುಂದೆ ಚಂದನ್ ಶೆಟ್ಟಿ ಹೇಳಿದ್ದಾರೆ.

Bigg Boss Kannada 5: Diwakar should win Bigg Boss says Chandan Shetty

'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಗೆ ಆಪ್ತ ಗೆಳೆಯ ಯಾರು ಅಂತೀರಾ.?

''ಫೈನಲ್ ನಲ್ಲಿ ನೀನು ನನ್ನ ಜೊತೆ ಇರಲೇಬೇಕು. ನಾನು ಇರ್ತೀನೋ, ಇಲ್ವೋ ಗೊತ್ತಿಲ್ಲ. ನೀನಂತೂ ಇರಲೇಬೇಕು. ನನ್ನ ಮಗನೇ ಗೆಲ್ಲಲೇಬೇಕು ಕಣೋ ನೀನು... ಜನ ಗೆಲ್ಲಿಸುತ್ತಾರೆ, ನೀನು ಆಟ ಆಡೋ... ನೀನು ಗೆದ್ದರೆ ನಾನು ಗೆದ್ದಷ್ಟೇ ಖುಷಿ ಪಡುತ್ತೇನೆ. ಇಡೀ ಕರ್ನಾಟಕ ಖುಷಿ ಪಡುತ್ತದೆ'' ಎಂದು ದಿವಾಕರ್ ಬಳಿ ತಮ್ಮ ಆಸೆ ಹೇಳಿಕೊಂಡಿದ್ದಾರೆ ಚಂದನ್ ಶೆಟ್ಟಿ.

ಚಂದನ್ ಶೆಟ್ಟಿ ಆಸೆಯಂತೆ ದಿವಾಕರ್ ಫೈನಲ್ ತಲುಪುವುದು... ಬಿಡುವುದು... ದಿವಾಕರ್ 'ಬಿಗ್ ಬಾಸ್' ವಿಜೇತರಾಗುವುದು... ಬಿಡುವುದು ನಿಮ್ಮ ಕೈಯಲ್ಲಿ ಇದೆ.

ಚಂದನ್ ಶೆಟ್ಟಿ ತಾಳ್ಮೆಗೆ ಹ್ಯಾಟ್ಸ್ ಆಫ್ ಎಂದ ಸುದೀಪ್.!

ದಿವಾಕರ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನ ನಮಗೆ ತಿಳಿಸಿ... ನಿಮ್ಮ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ....

English summary
Bigg Boss Kannada 5: Week 10: Diwakar should win Bigg Boss says Chandan Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X